Allu Arjun: ಅಲ್ಲು ಅರ್ಜುನ್‌ಗೆ 14 ದಿನಗಳ ಜೈಲೂಟ ಫಿಕ್ಸ್, ಪುಷ್ಪ-2 ಅಭಿಮಾನಿ ಬಳಗಕ್ಕೆ ತೀವ್ರ ಆಘಾತ....
ಅಲ್ಲು ಅರ್ಜುನ್ ವಿರುದ್ಧ ಇದೀಗ ದೊಡ್ಡ ಷಡ್ಯಂತ್ರ ಮಾಡಿ, ಬೇಕು ಅಂತಲೇ ಜೈಲಿಗೆ ಕೂಡ ಕಳುಹಿಸಿರುವ ಆರೋಪ ಕೇಳಿ ಬಂದಿದೆ. 'ಪುಷ್ಪ-2' ಸಿನಿಮಾ ₹1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಹೀಗಿದ್ದಾಗಲೇ ಇಂದು ಪೊಲೀಸ್ ಪಡೆ ನೇರವಾಗಿ ಅಲ್ಲು ಅರ್ಜುನ್ ಮನೆಗೆ ನುಗ್ಗಿ, ಅಲ್ಲು ಅರ್ಜುನ್ ಅರೆಸ್ಟ್ ಮಾಡಿಕೊಂಡು ಈ ರೀತಿ ಕರೆದುಕೊಂಡು ಬಂದಿರುವ ಆರೋಪ ಕೂಡ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಅಲ್ಲು ಅರ್ಜುನ್‌ಗೆ 14 ದಿನಗಳ ಜೈಲೂಟ ಫಿಕ್ಸ್, ಪುಷ್ಪ-2 ಅಭಿಮಾನಿ ಬಳಗಕ್ಕೆ ತೀವ್ರ ಆಘಾತ.....
ಭಾರತ ಮಾತ್ರವಲ್ಲದೆ ಬೇರೆ, ಬೇರೆ ದೇಶಗಳಲ್ಲೂ ಸದ್ದು ಮಾಡಿದ್ದ 'ಪುಷ್ಪ-2' ಸಿನಿಮಾದ ರಿಲೀಸ್ ದಿನ ಘೋರ ದುರಂತಗಳು ಸಂಭವಿಸಿದ್ದವು. ಅದರಲ್ಲಿಯೂ, 'ಪುಷ್ಪ-2' ಸಿನಿಮಾ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತ ಸಂಬಂಧವೇ ಇಂದು ಅಲ್ಲು ಅರ್ಜುನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಹೀಗಿದ್ದಾಗ, ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ಕೂಡ ವಿಧಿಸಲಾಗಿತ್ತು!

ಮಧ್ಯಂತರ ಜಾಮೀನು ಪಡೆದ ಅಲ್ಲು!
ಅಲ್ಲು ಅರ್ಜುನ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಂತರ ಈ ಸ್ಟಾರ್ ನಟನಿಗೆ ಜೈಲೂಟ ಫಿಕ್ಸ್ ಅಂತಾ ಹೇಳಲಾಗಿತ್ತು. ಅದರಲ್ಲೂ 'ಪುಷ್ಪ-2' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಅಲ್ಲು ಅರ್ಜುನ್ ಅವರ ಬಾಳಲ್ಲಿ ಬಿರುಗಾಳಿ ಎದ್ದಿತ್ತು. ಹೀಗಿದ್ದಾಗಲೇ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್‌ಗೆ ಒಂದಷ್ಟು ರಿಲೀಫ್ ನೀಡಿತ್ತು. ಅದು ಏನಂದ್ರೆ ಮಧ್ಯಂತರ ಜಾಮೀನಿಗೆ ಮನವಿ ಮಾಡಿದ್ದ ಅಲ್ಲು ಅರ್ಜುನ್‌ಗೆ ಹೈಕೋರ್ಟ್ ತೀರ್ಪು ನೆಮ್ಮದಿ ನೀಡಿತ್ತು.
ಬಂಧನದ ಭೀತಿಯಿಂದ ಅಲ್ಲು ಬಚಾವ್!
ಹೀಗೆ ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು ನೀಡಿದ ಹಿನ್ನೆಲೆ ಸದ್ಯಕ್ಕೆ ರಿಲೀಫ್ ಸಿಕ್ಕಿದೆ. 14 ದಿನಗಳ ನ್ಯಾಯಾಂಗ ಬಂಧನದ ಭೀತಿಯಿಂದ ಅಲ್ಲು ಅರ್ಜುನ್ ಈಗ ಬಚಾವ್ ಆಗಿದ್ದಾರೆ. ಇಂತಹ ಸಮಯದಲ್ಲೇ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಈ ಸುದ್ದಿ ಸಖತ್ ಖುಷಿ ನೀಡಿದೆ. ಆದರೆ ಮತ್ತೊಂದು ಕಡೆ ಅಲ್ಲು ಅರ್ಜುನ್ ಅವರ ಸಿನಿಮಾ ಜೀವನದಲ್ಲಿ ಈ ಘಟನೆ ಸಾಕಷ್ಟು ನೋವು ನೀಡುತ್ತಿದೆ.
ಒಟ್ನಲ್ಲಿ ತಗ್ಗೋದೆ ಇಲ್ಲ ಅಂತಾ ಹೇಳುತ್ತಿದ್ದ 'ಪುಷ್ಪ-2' ನಟನಿಗೆ ದೊಡ್ಡ ಅಪಾಯ ಈಗ ಎದುರಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ ಇದೆಲ್ಲವೂ ಮುಂದೆ ಏನಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಅಲ್ಲು ಅರ್ಜುನ್ ವಿಚಾರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವುದು ಗಮನ ಸೆಳೆದಿದೆ.












Click it and Unblock the Notifications