KGF-3 ಸಿನಿಮಾದಲ್ಲಿ ನಟ ಅಜಿತ್-ಯಶ್, AK65 ಸರಣಿಗಳಿಗೆ ಕೆಜಿಎಫ್ ಲಿಂಕ್?: ಇದು ಪ್ರಶಾಂತ್ ನೀಲ್ ಯುನಿವರ್ಸ್?
ಚೆನ್ನೈ, ಜುಲೈ 24: ಭಾರತೀಯ ಸಿನಿಮಾ ರಂಗದಲ್ಲಿ ತನ್ನದೇ ಆದ ಸಿನಿಮಾ ಶೈಲಿಯಲ್ಲಿ ಧೂಳೆಬ್ಬಿಸುತ್ತಿರುವ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಮಿಳು ನಟ ಅಜಿತ್ ಅವರ ಅಭಿಮಾನಿಗಳಿಗೆ ಭರ್ಜರಿ ಖುಷಿ ಸುದ್ದಿಯೊಂದು ಹೊರ ಬಿದ್ದಿದೆ. ಪ್ರಶಾಂತ್ ನೀಲ್ ಮುಂದಿನ ಸಿನಿ ಪ್ರಾಜೆಕ್ಟ್‌ಗಳು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ವಿಶೇಷವೆಂದರೆ ನಟ ಅಜಿತ್ ಜೊತೆಗಿನ ನೀಲ್ ಸಿನಿಮಾ ಕನ್ನಡ ಸಿನಿಮಾದೊಂದಿಗೆ ನಂಟು ಹೊಂದಿರಲಿದೆ..!
ಕನ್ನಡದ 'KGF' ಸರಣಿ ಮತ್ತು 'ಸಲಾರ್' ಸಿನಿಮಾಗಳ ಮೂಲಕ ದೇಶಾದ್ಯಂತ ಸದ್ದು ಮಾಡುತ್ತಿರುವ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ಅವರು ದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು 'ಡಿಟಿ ನೆಕ್ಸ್ಟ್' ವರದಿ ಮಾಡಿದೆ.

ನಿರ್ದೇಶಕ ಪ್ರಶಾಂತ್ ನೀಲ್ ಅವರು ಸದ್ಯ ಸಲಾರ್ ಸೀಕ್ವೆಲ್, ಜ್ಯೂನಿಯರ್ ಎನ್‌ಟಿಆರ್ ಜೊತೆಗಿನ ಸಿನಿಮಾ ಪ್ರಾಜೆಕ್ಟ್ ನಲ್ಲಿ ಬ್ಯೂಸಿ ಇದ್ದಾರೆ. ಆದಷ್ಟು ಶೀಘ್ರವೇ KGF-3 ತೆರೆಗೆ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಪ್ರಶಾಂತ್ ನೀಲ್ ಅವರು ನಟ ಅಜಿತ್ ಅವರೊಂದಿಗೆ ಸರಣಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಅಜಿತ್ ಅವರ ಬಳಿ 03 ವರ್ಷ ಕಾಲ್‌ಶೀಟ್ ಕೇಳಿದ್ದಾರೆ ಎನ್ನಲಾಗಿದೆ.
ಕನ್ನಡದ ನಟ ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ತೆಲುಗಿನ ಪ್ರಭಾಸ್ ನಟನೆ ಸಲಾರ್ ಸಿನಿಮಾ ಲಿಂಕ್ ಇದೆ. ಇವೆಲ್ಲ 'ಸಿನಿಮ್ಯಾಟಿಕ್ ಯುನಿವರ್ಸ್' ಕಾನ್ಸೆಪ್ಟ್ ಚಿತ್ರಗಳು ಎಂದು ಅಭಿಮಾನಿಗಳು ಈ ಮೊದಲು ನಿರೀಕ್ಷಿಸಿದ್ದರು. ಆದರೆ ಅದೆಲ್ಲವು ಸುಳ್ಳಾಯಿತು. ಇದೀಗ ಕೆಜಿಎಫ್ ಸಾಮ್ರಾಜ್ಯ ನಿರ್ಮಿಸಿದ್ದ ಪ್ರಶಾಂತ್ ನೀಲ್ ಅವರು ಯಶ್ ಸಿನಿಮಾಗೂ ಹಾಗೂ ಮುಂದೆ ನಿರ್ದೇಶಿಸಲಿರುವ ನಟ ಅಜಿತ್ ಎರಡು ಸಿನಿಮಾಗಳಿಗೂ ಲಿಂಕ್ ಇರಲಿವೆ.
ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಅವರು, 'ನೀಲ್ ಸಿನಿಮ್ಯಾಟಿಕ್ ಯುನಿವರ್ಸ್' ಅನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಅಲ್ಲಿ ಅವರ ನಿರ್ದೇಶನದ್ದೆ ಸ್ಟಾರ್ ನಟರ ಸಿನಿಮಾಗಳು ಪರಸ್ಪರ ಲಿಂಕ್ ಇರಲಿವೆ ಎಂದು ಹೇಳಲಾಗುತ್ತಿದೆ.

ನಟ ಅಜಿತ್‌ಗೆ ನೀಲ್ ಸರಣಿ ಸಿನಿಮಾ ಪ್ಲಾನ್
ಪ್ರಭಾಸ್ ನಟನೆಯ ಸಲಾರ್ 2 ಚಿತ್ರೀರಣ ಮುಗಿಯುತ್ತಿದ್ದಂತೆ ಪ್ರಶಾಂತ್ ಅಜಿತ್‌ಗಾಗಿ ಸತತ ಎರಡು ಚಿತ್ರಗಳನ್ನು ನಿರ್ದೇಶಿಸಲು ಕತೆ ಹೆಣೆದಿದ್ದಾರಂತೆ. ಈ ಸಿನಿಮಾಗಳಿಗೆ 'AK 64' ಮತ್ತು 'AK 65' ಎಂದು ಅಥವಾ 'AK 65' ಮತ್ತು 'AK 66' ಶಿರ್ಷಿಕೆ ಇಡಲಾಗುತ್ತದೆ ಎಂದು ವರದಿ ಆಗಿದೆ.
ಡಿಟಿ ನೆಕ್ಸ್ಟ್ ವರದಿ ಪ್ರಕಾರ, ಕಳೆದ ತಿಂಗಳು ನಟ ಅಜಿತ್ ಮತ್ತು ನಿರ್ದೇಶಕ ಪ್ರಶಾಂತ್ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ತಮಗೆ ಸಿನಿಮಾ ಕಥೆ ಮಾಡಿಕೊಂಡಿದ್ದು, ಮೂರು ವರ್ಷ ಕಾಲ್ ಶೀಟ್ ಅನ್ನು ಪ್ರಶಾಂತ್ ನೀಲ್ ಕೇಳಿದ್ದಾರೆ. ಪ್ರಭಾಸ್ ಸಿನಿಮಾ ಬಳಿಕ ಅಜಿತ್ ಸಿನಿಮಾದಲ್ಲಿ ನೀಲ್ ಬ್ಯೂಸಿ ಆಗಲಿದ್ದಾರೆ. ಇದರಲ್ಲಿ ಒಂದು ಸಿನಿಮಾ 2025 ಅಂತ್ಯಕ್ಕೆ ಮಹೂರ್ತ ಕಂಡು 2026 ರ ಹೊತ್ತಿಗೆ ಬಿಡುಗಡೆ ಆಗಬಹುದು ಎಂದು ಅಂದಾಜಿಸಲಾಗಿದೆ.
ಈ ಮಧ್ಯೆ ಜ್ಯೂ.ಎನ್‌ಟಿಆರ್ ಹಾಗೂ ಕೆಜಿಎಫ್ 3 ಸಿನಿಮಾದ ಅಭಿಮಾನಿಗಳು ತಮಗೆ ನಿರೀಕ್ಷೆ ಆಗಲಿದೆಯೇ? ನಿರೀಕ್ಷಿತ ವರ್ಷ ತಮ್ಮ ನೆಚ್ಚಿನ ನಟರ ಸಿನಿಮಾ ತೆರೆಗೆ ಬರುವುದಿಲ್ಲವೇ?, ಇಷ್ಟದ ಸಿನಿಮಾಗಳಿಗೆ ಒಂದು ದಶಕ ಕಾಯಬೇಕು ಎಂದೆಲ್ಲ ಕಳ್ಳವಳ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ 3 ಜೊತೆಗೆ ಅಜಿತ್ ಸಿನಿಮಾ ಲಿಂಕ್
ನಟ ಅಜಿತ್ ಜೊತೆಗೆ ಎಕೆ 65 ಅಥವಾ 66 ಸಿನಿಮಾ ಮಾಡುವ ಮೂಲಕ ಪ್ರಶಾತ್ ನೀಲ್ ಅವರು ತಮ್ಮದೇ ಆದ 'ಸಿನಿಮೀಯ ವಿಶ್ವ'ವನ್ನು (ಸಿನಿಮ್ಯಾಟಿಕ್ ಯುನಿವರ್ಸ್) ನಿರ್ಮಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಕೆಜಿಎಫ್ 2 ಸಿನಿಮಾವು ಕೆಜಿಎಫ್ 3ಗೆ ಲಿಂಕ್ ಕೊಡಲಾಗಿದೆ.
ಯಶ್- ಅಜಿತ್ ಒಂದೇ ಸಿನಿಮಾದಲ್ಲಿ?
ಮುಂದೆ ಕೆಜಿಎಫ್ 3ಗೆ ಅಜಿತ್ ನಟನೆಯ ಸಿನಿಮಾ ಲಿಂಕ್ ಮಾಡಲಾಗುತ್ತದೆ. ಅವರ ಸಿನಿಮ್ಯಾಟಿಕ್ ಯುನಿವರ್ಸ್ ಸಿನಿಮಾಗಳಲ್ಲಿ ಅಜಿತ್ ಅವರ ಪಾತ್ರವು ಅತ್ಯಂತ ವಿಶೇಷವಾಗಿದೆ ಎಂದು ಮೂಲಗಳು ತಿಳಿಸಿವೆ. ಇದರರ್ಥ ಭವಿಷ್ಯದಲ್ಲಿ ಅಜಿತ್ ಮತ್ತು ಯಶ್ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳವು ಸಾಧ್ಯತೆ ಇದೆ. ಈ ಕುರಿತು ಅಧಿಕೃತ ಘೋಷಣೆಗಳು ಮಾತ್ರವೇ ಬಾಕಿ ಇದೆ.
Exclusive: The big reveal! #AjithKumar and #PrashanthNeel are set to collaborate for two consecutive projects. Their second collaboration will mark the beginning of #PrashanthCinematicUniverse with climax leading to #KGF3.
— DT Next (@dt_next) July 24, 2024
🖊️: @iamkaushikr
Read more https://t.co/FVPhJU2Rk4 pic.twitter.com/r81gHzDcSR
ಸದ್ಯ ನಟ ಅಜಿತ್ ಕುಮಾರ್ ಅವರು 'ವಿದಾಮುಯಾರ್ಚಿ' ಸಿನಿಮಾ ಪೂರ್ಣಗೊಳಿಸಿದ್ದಾರೆ ಮತ್ತು ಶೀಘ್ರವೇ ಅಧಿಕ್ ರವಿಚಂದ್ರನ್ ಅವರ ಮತ್ತೊಂದು ಸಿನಿಮಾ ಸೆಟ್ ಏರಲಿದೆ.
ಈ ಮಧ್ಯೆ ನಟ ಅಜಿತ್ ಕುಮಾರ್ ಅವರು ಪ್ರಶಾಂತ್ ನೀಲ್ ಅವರೊಂದಿಗೆ ಎರಡು ಸಿನಿಮಾ ಮಾಡಲು ಸಹಿ ಮಾಡಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಅವರು ಮುಂದಿನ ಪ್ರಾಜೆಕ್ಟ್ ಕಂಪ್ಲಿಟ್ ಆಗುತ್ತಿದ್ದಂತೆ ಕೆಜಿಎಫ್ ಜತೆಗೆ ಲಿಂಕ್ ಇರುವ ಹೊಸ ಸರಣಿ ಸಿನಿಮಾಗಳಿಗೆ ಸಜ್ಜಾಗಲಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications