ಕನ್ನಡದ ಖ್ಯಾತ ನಟಿಗೆ 41ನೇ ವಯಸ್ಸಿನಲ್ಲಿ ಹೆರಿಗೆ, ಗಂಡು ಮಗುವಿಗೆ... Kannada Actress
ಸಿನಿಮಾ ನಟ & ನಟಿಯರದ್ದು ರಂಗು ರಂಗಿನ ಬದುಕು, ಅದರಲ್ಲೂ ಬಹುತೇಕ ನಟಿಯರು ಮದುವೆ ಆಗದೆ ಜೀವನ ನಡೆಸುತ್ತಾರೆ. ಆದರೆ ಇದಕ್ಕೆ ವಿರುದ್ಧವಾಗಿ ಇನ್ನೂ ಹಲವು ನಟಿ & ನಟರು ಮದುವೆ ಆಗಿ ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಅದರಲ್ಲೂ ನಟಿಯರು ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಬಂದು ಉತ್ತಮ ಜೀವನ ಕೂಡ ಕಟ್ಟಿಕೊಂಡಿದ್ದಾರೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿಗೆ 41ನೇ ವಯಸ್ಸಿನಲ್ಲಿ ಹೆರಿಗೆ, ಗಂಡು ಮಗುವಿಗೆ...
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಂದ ಸುಂದರ ಸುಂದರ ನಟಿಯರು ಬದುಕು ಕಟ್ಟಿಕೊಂಡು, ಈಗ ಗಂಡ & ಮಕ್ಕಳ ಜೊತೆಗೆ ಉತ್ತಮವಾಗಿ ಸಂಸಾರ ನಡೆಸುತ್ತಿದ್ದಾರೆ. ಕನ್ನಡದ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಇತಿಹಾಸ ಇದ್ದು, ಸುಮಾರು 100 ವರ್ಷಗಳ ಪುರಾತನ ಇತಿಹಾಸವನ್ನ ನಮ್ಮ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಹೊಂದಿದೆ. ಹೀಗಾಗಿಯೇ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹೊರಗೆ ಕೂಡ ದೊಡ್ಡ ಹೆಸರು ಇದೆ. ಅದರಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬೇರೆ ಬೇರೆ ಭಾಷೆಯ ಸುಂದರ ನಟಿಯರು ಕೂಡ ಎಂಟ್ರಿ ಕೊಟ್ಟು ಬದುಕು ಕಟ್ಟಿಕೊಂಡು ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಿ ದುಡ್ಡು ದುಡಿದಿದ್ದಾರೆ...

ಕನ್ನಡದ ಖ್ಯಾತ ನಟಿಗೆ 41ನೇ ವಯಸ್ಸಿನಲ್ಲಿ ಹೆರಿಗೆ...
ಹೌದು, ಸಿನಿಮಾ ಸ್ಟಾರ್ ಆಗಬೇಕು ಅಂತಾ ಬರುವ ನಟಿಯರು ಸಾಕಷ್ಟು ಸೈಕಲ್ ಹೊಡೆದು ಪರದಾಡುವ ಸಂದರ್ಭ ಕೂಡ ಎದುರಾಗುತ್ತದೆ. ಅದರಲ್ಲೂ ಆರಂಭದಲ್ಲಿ ಅವಕಾಶ ಪಡೆದು ಆಫರ್ ಗಿಟ್ಟಿಸಿಕೊಳ್ಳಲು ಒದ್ದಾಟ ಗ್ಯಾರಂಟಿ. ಬೇರೆ ಬೇರೆ ಭಾಷೆಗಳಿಂದ ಕನ್ನಡ ಸಿನಿಮಾಗೆ ಬಂದು ಮಿಂಚಿದ ನಟಿಯರು ಕೂಡ ಸಾಕಷ್ಟು ಜನ ಇದ್ದಾರೆ. ಅದೇ ರೀತಿಯಾಗಿ ಕನ್ನಡದ ಸಿನಿಮಾ ಮಾಡಿ ದೊಡ್ಡ ಹೆಸರು ಮಾಡಿದ್ದ ಕನ್ನಡದ ಖ್ಯಾತ ನಟಿಗೆ 41ನೇ ವಯಸ್ಸಿನಲ್ಲಿ ಹೆರಿಗೆ, ಗಂಡು ಮಗುವಿಗೆ...
ರವಿಚಂದ್ರನ್ ಅವರ ಹೆಸರು ಕೇಳಿದ್ರೆ ಕನ್ನಡಿಗರು ಫುಲ್ ಖುಷಿಯಾಗುತ್ತಾರೆ & ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರವಿಚಂದ್ರನ್ ಅವರಿಗೆ ದೊಡ್ಡ ಹೆಸರು ಇದೆ. ಪ್ರಮುಖವಾಗಿ ಈ ನಮ್ಮ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರು ಆಯ್ಕೆ ಮಾಡಿಕೊಳ್ಳುವ ಹೀರೋಯಿನ್ ಅಂದ್ರೆ ನಾಯಕ ನಟಿಯರ ಬಗ್ಗೆ ಆಗಾಗ ಚರ್ಚೆ ಕೂಡ ನಡೆಯುತ್ತಾ ಇರುತ್ತದೆ ಬಿಡಿ. ಯಾಕೆ ಅಂದ್ರೆ ರವಿಚಂದ್ರನ್ ಅವರ ಆಯ್ಕೆ ಅಷ್ಟು ಸೂಪರ್ ಆಗಿ ಇರುತ್ತದೆ. ಅದೇ ರೀತಿಯಾಗಿ, 2005ರ ಸಮಯದಲ್ಲೂ ರವಿಚಂದ್ರನ್ ಅವರು ಒಬ್ಬರು ಸುಂದರ & ಸೂಪರ್ ನಟಿಯನ್ನ ಕನ್ನಡದ ಸಿನಿಮಾ ಇಂಡಸ್ಟ್ರಿಗೆ ಅಹಂ ಪ್ರೇಮಾಸ್ಮಿ ಸಿನಿಮಾ ಮೂಲಕ ಪರಿಚಯ ಮಾಡಿದ್ದರು....
ಮದುವೆ ನಂತರ ಗರ್ಭಿಣಿ ಆದಾಗ ಸಮಸ್ಯೆ...
ಹೀಗೆ, 2005 ಸಮಯದಲ್ಲಿ ರಿಲೀಸ್ ಆಗಿದ್ದ ಅಹಂ ಪ್ರೇಮಾಸ್ಮಿ ಸಿನಿಮಾ ದೊಡ್ಡ ಹೆಸರನ್ನ ಮಾಡಿತ್ತು. ಇದೇ ಸಿನಿಮಾದ ಮೂಲಕ ದೊಡ್ಡ ಹೆಸರು ಮಾಡಿದ್ದ, ಸುಂದರ ನಟಿ ಆರತಿ ಛಾಬ್ರಿಯಾ ಅವರ ಬದುಕಿನಲ್ಲಿ ಹಲವು ಸಮಸ್ಯೆ ಎದುರಾಗಿದ್ದವು. ಈ ವಿಚಾರವನ್ನ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು, ಇದೀಗ ಚರ್ಚೆ ಶುರುವಾಗಿದೆ. ಅಹಂ ಪ್ರೇಮಾಸ್ಮಿ ಸಿನಿಮಾ ಹೀರೋಯಿನ್ ಆಗಿದ್ದ ನಟಿ ಆರತಿ ಛಾಬ್ರಿಯಾ ಅವರು ಆಸ್ಟ್ರೇಲಿಯಾ ವ್ಯಕ್ತಿಯನ್ನ ಮದುವೆ ಆಗಿದ್ದರು. ಆದರೆ ಮದುವೆ ನಂತರ ಮಗು ವಿಚಾರದಲ್ಲಿ ಸಮಸ್ಯೆ ಶುರುವಾಗಿತ್ತಂತೆ...
41ನೇ ವಯಸ್ಸಿನಲ್ಲಿ ಗುಟ್ಟಾಗಿ ಹೆರಿಗೆ...
ಅಹಂ ಪ್ರೇಮಾಸ್ಮಿ ಸಿನಿಮಾ ನಟಿ ಆರತಿ ಛಾಬ್ರಿಯಾ ಅವರು 2019 ಸಮಯದಲ್ಲಿ ಅಂದ್ರೆ ಕೊರೊನಾ ವೈರಸ್ ಅಪ್ಪಳಿಸುವ ಮೊದಲು ಮದುವೆ ಆಗಿ, ವಿಶಾರದ್ ಎಂಬುವವರ ಜೊತೆ ಆಸ್ಟ್ರೇಲಿಯಾ ದೇಶದಲ್ಲಿ ಸೆಟಲ್ ಆಗಿದ್ದಾರೆ. ಹೀಗಿದ್ದಾಗ ಸಾಕಷ್ಟು ತಡವಾಗಿ ಮದುವೆಯನ್ನ ಆಗಿದ್ದ ನಟಿ ಆರತಿ ಛಾಬ್ರಿಯಾ ಅವರು ಮಗುವಿಗೆ ಜನ್ಮ ನೀಡುವ ವಿಚಾರದಲ್ಲಿ ಸಾಕಷ್ಟು ಸಮಸ್ಯೆ ಎದರಿಸಿದ್ದರಂತೆ. ಅದರಲ್ಲೂ, ರವಿಚಂದ್ರನ್ ಅವರ ಸಿನಿಮಾ ಅಹಂ ಪ್ರೇಮಾಸ್ಮಿ ನಟಿಗೆ ಮೊದಲ ಮಗು ಗರ್ಭಪಾತ ಆಗಿ ಮೃತಪಟ್ಟಿತ್ತಂತೆ.
ಈ ಕಾರಣ 2ನೇ ಬಾರಿಗೆ ಅವರು ಗರ್ಭಿಣಿ ಆದಾಗ ಯಾರಿಗೂ ಈ ವಿಚಾರ ಹೇಳಲೇ ಇಲ್ಲವಂತೆ. ಅವರಿಗೆ ಭಯ ಇದ್ದ ಕಾರಣ, ರವಿಚಂದ್ರನ್ ಅವರ ಸಿನಿಮಾ ಅಹಂ ಪ್ರೇಮಾಸ್ಮಿ ನಟಿ ಆರತಿ ತಾವು ಗರ್ಭಿಣಿ ಆಗಿದ್ದ ವಿಚಾರ ಮುಚ್ಚಿಟ್ಟಿದ್ದರಂತೆ. ಹೀಗೆ ತಮ್ಮ 41ನೇ ವಯಸ್ಸಿನಲ್ಲಿ ಹೆರಿಗೆ ಆಗಿ, ಗಂಡು ಮಗುವಿಗೆ ಜನ್ಮ ನೀಡಿದ ನಂತರ ಹೊರಗೆ ಹೇಳಿದರಂತೆ. ಯಾಕಂದ್ರೆ ತಮಗೆ ಈ ವಿಚಾರದಲ್ಲಿ ತುಂಬಾ ಭಯ ಕಾಡ್ತಾ ಇತ್ತು ಅನ್ನೋದನ್ನ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು ವೈರಲ್ ಆಗುತ್ತಿದೆ....
20 ವರ್ಷಗಳ ಹಿಂದೆ ಅಹಂ ಪ್ರೇಮಾಸ್ಮಿ...
ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರ ಸಿನಿಮಾ ಅಹಂ ಪ್ರೇಮಾಸ್ಮಿ ದೊಡ್ಡ ಮಟ್ಟಿಗೆ ಹಿಟ್ ಆಗಿ ಕನ್ನಡಿಗರ ಮನಸ್ಸು ಗೆದ್ದಿತ್ತು. ಸರಿಯಾಗಿ 20 ವರ್ಷಗಳ ಹಿಂದೆ ಅಂದ್ರೆ 2005 ಮೇ 27ಕ್ಕೇ ಅಹಂ ಪ್ರೇಮಾಸ್ಮಿ ಸಿನಿಮಾ ರಿಲೀಸ್ ಆಗಿತ್ತು. ಇದೇ ಸಿನಿಮಾದಲ್ಲಿ ನಟಿ ಆರತಿ ಛಾಬ್ರಿಯಾ ಅವರು ಮೊದಲ ಬಾರಿಗೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟಿದ್ದರು. ನಟಿ ಆರತಿ ಛಾಬ್ರಿಯಾ ಅವರಿಗೆ ಅಹಂ ಪ್ರೇಮಾಸ್ಮಿ ಸಿನಿಮಾ ಸಿಕ್ಕಾಪಟ್ಟೆ ದೊಡ್ಡ ಹಿಟ್ ಕೊಟ್ಟಿತ್ತು. ಅಲ್ಲದೆ ಸಿನಿಮಾ ನೋಡಿ ಕನ್ನಡಿಗರು ಮನಸ್ಸು ತುಂಬಿಕೊಂಡರು, ಈಗಲೂ ಅಹಂ ಪ್ರೇಮಾಸ್ಮಿ ಸಿನಿಮಾದ ಸೀನ್‌ಗಳು ವೈರಲ್ ಆಗುತ್ತಲೇ ಇರುತ್ತವೆ. ಹಾಗೇ ಅಹಂ ಪ್ರೇಮಾಸ್ಮಿ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದವು. ಹೀಗೆ ಕನ್ನಡದ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ನಟಿಗೆ 41ನೇ ವಯಸ್ಸಿನಲ್ಲಿ ಹೆರಿಗೆ ಆಗಿ, ಗಂಡು ಮಗುವಿಗೆ ಜನ್ಮ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು.












Click it and Unblock the Notifications