ಶಿವಣ್ಣ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಐಶ್ವರ್ಯಾ ರೈ ಪುತ್ರಿ: ಆರಾಧ್ಯಾ ಸಂಸ್ಕಾರಕ್ಕೆ ಭಾರೀ ಮೆಚ್ಚುಗೆ

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಮಗಳು ಆರಾಧ್ಯಾ ಯಾರಿಗೆ ತಾನೇ ಗೊತ್ತಿಲ್ಲ. ತಾಯಂತೆ ಮುದ್ದಾದ ಮುಖ, ಸದಾ ನಗುವಿನಿಂದಲೇ ಎಲ್ಲರ ಮೆಚ್ಚುಗೆ ಗಳಿಸಿರುವ ಆರಾಧ್ಯ ಇದೀಗ ತಮಗಿರುವ ಸಂಸ್ಕಾರದಿಂದ ಮತ್ತೆ ಎಲ್ಲರ ಹೃದಯ ಗೆದ್ದಿದ್ದಾರೆ. ಆರಾಧ್ಯಾ ಯಾವಾಗಲೂ ತಮ್ಮ ತಾಯಿ ಐಶ್ವರ್ಯಾ ರೈ ಅವರ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದು, ಇತ್ತೀಚಿಗೆ ನಡೆದ ಸೈಮಾ ಅವಾರ್ಡ್ಸ್​​ಗೂ ಆರಾಧ್ಯಾ ಆಗಮಿಸಿದ್ದರು.

ಸೈಮಾ ಅವಾರ್ಡ್ಸನಲ್ಲಿ ಮಿಂಚಿದ ಆರಾಧ್ಯಾಳ ಅನೇಕ ಫೋಟೋಗಳು ವಿಡಿಯೋಗಳು ಎಲ್ಲೆಡೆ ವೈರಲ್‌ ಆಗುತ್ತಿದೆ. ಅದರಲ್ಲಿ ಆರಾಧ್ಯಾ ಕಲಿತಿರುವ ಸಂಸ್ಕಾರ ಎಂತಹದ್ದು ಎನ್ನುವ ವಿಡಿಯೋವೊಂದು ವೈರಲ್‌ ಆಗುತ್ತಿದ್ದು, ನೋಡುಗರು ಅದರಲ್ಲೂ ಆರಾಧ್ಯಾ ಕನ್ನಡಿಗರ ಮನಸ್ಸನ್ನು ಮತ್ತಷ್ಟು ಗೆದ್ದಿದ್ದಾರೆ.

Aaradhya Bachchan Touches Sandalwood Actor Shiva Rajkumar s Feet

ಇತ್ತೀಚಿಗಷ್ಟೇ ದುಬೈನಲ್ಲಿ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. ಭಾರತೀಯ ಎಲ್ಲಾ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಅನೇಕ ತಾರೆಯರು ಸೈಮಾದಲ್ಲಿ ಪ್ರಶಸ್ತಿ ಗಳಿಸಿ ಮಿಂಚಿದರು. ಬಾಲಿವುಡ್‌ ಎವೆರ್‌ಗ್ರೀನ್‌ ಬ್ಯೂಟಿ ಐಶ್ವರ್ಯ ರೈ ಕೂಡ . ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದುಕೊಂಡರು. ಈ ವೇಳೆ ಮಗಳು ಆರಾಧ್ಯಾ ಜೊತೆಯಲ್ಲಿದ್ದರು.

ಸೈಮಾ ವೇದಿಕೆಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಐಶ್ವರ್ಯ ರೈ, ಚಿಯಾನ್ ವಿಕ್ರಮ್ ಜೊತೆ ವೇದಿಕೆಯಿಂದ ಕೆಳಗಿಳಿದು ಬಂದರು. ಈ ವೇಳೆ ವೇದಿಕೆ ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಎದುರಿಗೆ ಬರುತ್ತಿದ್ದರು. ವೇದಿಕೆಯ ಮುಂಭಾಗದಲ್ಲಿ ಎದುರಾದ ವಿಕ್ರಮ್ ಅವರನ್ನು ಶಿವಣ್ಣ ಮಾತನಾಡಿಸಿದರು.

Aaradhya Bachchan Touches Sandalwood Actor Shiva Rajkumar s Feet

ಈ ವೇಳೆ ಐಶ್ವರ್ಯ ರೈ ಬಚ್ಚನ್ ಸ್ವಲ್ಪ ಮುಂದೆ ಹೋಗಿ ನಂತರ ಹಿಂದೆ ತಿರುಗಿ ನೋಡಿದ ಐಶ್ವರ್ಯ ರೈ, ಡಾ.ಶಿವರಾಜ್ ಕುಮಾರ್ ಅವರನ್ನು ಕಂಡು ಮರಳಿ ಹಿಂದೆ ಬಂದು ಮಾತನಾಡಿಸಿದ್ದಾರೆ. ಇಬ್ಬರು ಭಯ ಕುಶಲೋಪರಿ ವಿಚಾರಿಸಿದ್ದು, ಈ ವೇಳೆ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳನ್ನೂ ಡಾ.ಶಿವರಾಜ್ ಕುಮಾರ್ ಅವರಿಗೆ ಪರಿಚಯಿಸಿದ್ದಾರೆ. ಈ ಸಂದರ್ಭದಲ್ಲಿ ಆರಾಧ್ಯಾ ಅಲ್ಲಿಯೇ ಶಿವಣ್ಣನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಶಿವಣ್ಣ ಆರಾಧ್ಯಾಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಆರಾಧ್ಯಾಳ ಸಂಸ್ಕಾರ ಕಂಡು ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಗಳನ್ನು ಮುದ್ದಾಗಿ ಅಲ್ಲದೇ ಸಂಸ್ಕಾರವಂತಳಾಗಿ ಬೆಳೆಸಿದ್ದೀರಿ ಎಂದು ಐಶ್ವರ್ಯ ರೈ ಅವರನ್ನು ಕೂಡ ಶ್ಲಾಘೀಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+