Mother Theresa: ವೆಬ್ ಸಿರೀಸ್ ಆಗಿ ಬರಲಿದೆ ನೋಬೆಲ್ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೇಸಾ ಜೀವನ
ಬಡವರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ, ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ ಮದರ್ ತೆರೇಸಾ (Mother Teresa) ಅವರ ಜೀವನ ಚರಿತ್ರೆ ವೆಬ್ ಸರಣಿ ರೂಪದಲ್ಲಿ ಮೂಡಿಬರಲಿದೆ. ಮಲಯಾಳಂ ನಿರ್ದೇಶಕ ಪಿ ಚಂದ್ರಕುಮಾರ್ ಅವರು ಮದರ್ ತೆರೇಸಾ ಅವರ ಜೀವನವನ್ನು 3 ಸೀಸನ್‌ಗಳಲ್ಲಿ ವೆಬ್ ಸರಣಿಯನ್ನು ಮಾಡಲು ಸಿದ್ಧರಾಗಿದ್ದಾರೆ
ಇದೊಂದು ಪ್ಯಾನ್ ಇಂಡಿಯಾ ವೆಬ್‍ಸೀರೀಸ್ ಆಗಿದ್ದು, ಚೆನ್ನೈ ಮೂನ್ ಮೂವೀಸ್ ಅಡಿಯಲ್ಲಿ ಮಲಯಾಳಂನ ಹಿರಿಯ ಚಲನಚಿತ್ರ ನಿರ್ದೇಶಕ ಪಿ ಚಂದ್ರಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ. ಕ್ಯಾಥೋಲಿಕ್ ಚರ್ಚ್ ಕಲ್ಕತ್ತಾದ ಮಿಷನರೀಸ್ ಆಫ್ ಚಾರಿಟಿಯ ಸಂಸ್ಥಾಪಕರಾದ ಮದರ್ ಥೆರೆಸಾ ಅವರ ಜೀವನಗಾಥೆಯನ್ನು ಈ ವೆಬ್ ಸರಣಿಯಲ್ಲಿ ಹೇಳಲಾಗುತ್ತದೆ.

ಮದರ್ ತೆರೇಸಾ ಬೆಂಗಳೂರಿಗೂ ಇದೆ ನಂಟು
ಭಾರತದಲ್ಲಿ, ಬೆಂಗಳೂರಿನಲ್ಲಿ ತನ್ನ ಜೀವನದ ಬಹುಪಾಲು ಬದುಕಿದ ಅಲ್ಬೇನಿಯನ್ ಸನ್ಯಾಸಿನಿ ಮದರ್ ತೆರೇಸಾ ಪಾತ್ರವನ್ನು ನಿರ್ವಹಿಸುವ ನಾಯಕ ನಟಿಯನ್ನು ಹುಡುಕಾಡುತ್ತಿದ್ದಾರೆ. ವೆಬ್ ಸರಣಿಗೆ ಹೊಸ ಮುಖವನ್ನು ತಂಡ ಹುಡುಕುತ್ತಿದೆ. ಮದರ್ ತೆರೇಸಾ ಜೊತೆ ಕಾಲ ಕಳೆದ ಕೋಲ್ಕತ್ತಾ ಮೂಲದ ಪತ್ರಕರ್ತರೊಬ್ಬರು ಹೇಳಿದಂತೆ ಘಟನೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇನೆ ಎಂದು ನಿರ್ದೇಶಕ ಪಿ ಚಂದ್ರಕುಮಾರ್ ಹೇಳಿದ್ದಾರೆ.
ಮದರ್ ತೆರೇಸಾ ಅವರ ಜೀವಿತಾವಧಿಯಲ್ಲಿ ಅವರ ವಿರುದ್ಧ ಹೊರಿಸಲಾದ ಪ್ರಮುಖ ಆರೋಪವೆಂದರೆ ಅವರು ಧಾರ್ಮಿಕ ಮತಾಂತರ ಮತ್ತು ಪ್ರಚಾರಕ್ಕಾಗಿ ಭಾರತಕ್ಕೆ ಬಂದರು ಎಂಬುದು. ಈ ವೆಬ್ ಸರಣಿಯಲ್ಲಿ ಅದನ್ನು ಕೂಡ ಶೋಧಿಸಲಾಗುತ್ತದೆ. ಈ ಆರೋಪಗಳಲ್ಲಿ ಯಾವುದೇ ಸತ್ಯವಿದ್ದರೆ ಸರಣಿಯಲ್ಲಿ ಅದನ್ನೂ ಕೂಡ ತೋರಿಸಲಾಗುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.

ಈ ವೆಬ್ ಸಿರೀಸ್ 1979 ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದ ಮದರ್ ತೆರೇಸಾ ಅವರ ಅತ್ಯಂತ ಪ್ರಾಮಾಣಿಕ ಚಿತ್ರಣವಾಗಿದೆ ಎಂದು ಚಲನಚಿತ್ರ ನಿರ್ಮಾಪಕರು ಹೇಳಿದ್ದಾರೆ. ಜೊತೆಗೆ ಅವರು ಎಂದಿಗೂ ಖ್ಯಾತಿ ಅಥವಾ ಹಣದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದೂ ಸೇರಿಸಿದ್ದಾರೆ. ಈ ವೆಬ್ ಸಿರೀಸ್ 30 ಕಂತುಗಳಲ್ಲಿ, ಪ್ರತಿ 10 ಸಂಚಿಕೆಗಳ 3 ಸೀಸನ್‌ಗಳಾಗಿ ವಿಂಗಡಿಸಲಾಗಿದೆ. ಪ್ರಮುಖ ಒಟಿಟಿ ಪ್ಲಾಟ್‌ಫಾರ್ಮ್‌ಗೆ ವೆಬ್ ಸಿರೀಸ್ ಮಾರಾಟ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪ್ರಮುಖ ಸೆಟ್
40 ರ ದಶಕದ ಕೊನೆಯಲ್ಲಿ ಮತ್ತು 50 ರ ದಶಕದ ಆರಂಭದಲ್ಲಿ ಕೋಲ್ಕತ್ತಾವನ್ನು ಮರುಸೃಷ್ಟಿಸಲು ತಯಾರಕರು ಬೆಂಗಳೂರಿನಲ್ಲಿ ಪ್ರಮುಖ ಸೆಟ್ ಅನ್ನು ಹಾಕಲಿದ್ದಾರೆ. ಮದರ್ ತೆರೇಸಾ ಅವರ ಜೀವನದ ವಿವಿಧ ಹಂತಗಳನ್ನು ಸೆರೆಹಿಡಿಯಲಾಗುತ್ತದೆ. ಮೊದಲ 10 ಕಂತುಗಳಿಗೆ ಕನಿಷ್ಠ 3 ತಿಂಗಳುಗಳು ಬೇಕಾಗುತ್ತವೆ, ಅದನ್ನು ಪೂರ್ಣಗೊಳಿಸಲು ಒಟ್ಟು ಒಂದೂವರೆ ವರ್ಷ ಬೇಕಾಗಬಹುದು ಎಂದಿದ್ದಾರೆ. ಕೆಲವು ಭಾಗಗಳನ್ನು ಸೆಟ್‌ಗಳಲ್ಲಿ ಚಿತ್ರೀಕರಿಸಿದರೆ, ಮತ್ತೆ ಕೆಲವು ಭಾಗಗಳನ್ನು ಡಾರ್ಜಿಲಿಂಗ್, ವ್ಯಾಟಿಕನ್, ಬಾಂಗ್ಲಾದೇಶದಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ.












Click it and Unblock the Notifications