Get Updates
Get notified of breaking news, exclusive insights, and must-see stories!

Yuva Rajkumar: ದೊಡ್ಮನೆಯಲ್ಲಿ ಬಿರುಕು: ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ: ವಿಚ್ಛೇದನಕ್ಕೆ ಮುಂದಾದ ದಂಪತಿ

ಬೆಂಗಳೂರು, ಜೂನ್ 10: ಇತ್ತೀಚೆಗಷ್ಟೇ ಬಿಡುಗಡೆಯಾದ 'ಯುವ' (Yuva Film) ಸಿನಿಮಾ ಮೂಲಕ ಸುದ್ದಿಯಾಗಿದ್ದ ದೊಡ್ಮನೆ ಕುಡಿ ಇದೀಗ ದಾಂಪತ್ಯದಲ್ಲಿನ ಬಿರುಕು ಹಾಗೂ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹೌದು, ನಟ ಯುವ ರಾಜಕುಮಾರ್ (Yuva Rajkumar) ಅವರ ಐದು ವರ್ಷದ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ವರದಿ ಆಗಿದೆ.

ವರನಟ ಡಾ.ರಾಜಕುಮಾರ್ ಮೊಮ್ಮಗ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಪುತ್ರ ನಟ ಯುವ ರಾಜಕುಮಾರ್ ಅವರು 2019ರಲ್ಲಿ ಶ್ರೀದೇವಿ ಅವರೊಂದಿಗೆ ಮದುವೆ ಆಗಿದ್ದರು. ವೈಯಕ್ತಿಕ ಕಾರಣಗಳಿಂದ ಅವರ ಐದು ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ. ಈ ಸಂಬಂಧ ಪತ್ನಿಗೆ ಯುವ ಅವರು ನೋಟಿಸ್ ನೀಡಿದ್ದಾರೆ.

A Rift in Actor Yuva Rajkumar Married Life Yuva Gave Divorce Notice to His wife

ಸದ್ಯ ಯುವ ರಾಜ್ ಕುಮಾರ್ ಪತ್ನಿ ಶ್ರೀದೇವಿಯವರು ವಿದೇಶದಲ್ಲಿದ್ದಾರೆ. ಆರು ತಿಂಗಳ ಹಿಂದೆ ಶ್ರೀದೇವಿಯಿಂದ ವಿಚ್ಛೇದನಕ್ಕೆ ಕೋರಿ ಯುವ ರಾಜಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯಂತ ಇದೀಗ ಪತ್ನಿಗೆ ನೋಟಿಸ್ ಜಾರಿಯಾಗಿದೆ.

ದೊಡ್ಮನೆ ಕುಟುಂಬದಲ್ಲಿ ಇದು ಮೊದಲ ವಿಚ್ಛೇದನ

ದಾಂಪತ್ಯ ಕಲಹ ವಿಚಾರ, ವಿಚ್ಛೇದನ ವಿಚಾರವಾಗಿ ಮೇರು ನಟ ಡಾ.ರಾಜಕುಮಾರ್ ಕುಟುಂಬದಲ್ಲಿ ಮುನ್ನೆಲೆಗೆ ಬಂದ ಮೊದಲ ನಟ ಎನ್ನಬಹುದಾಗಿದೆ. ಈ ವರೆಗೆ ಅವರ ಕುಟುಂಬದಲ್ಲಿ ಈ ವಿಚಾರವಾಗಿ ಯಾರೊಬ್ಬರು ಮುನ್ನೆಲೆ ಬಂದಿಲ್ಲ.
ಸದ್ಯ ಯುವ ರಾಜಕುಮಾರ್ ಪತ್ನಿಯಿಂದ ದೂರುವಾಗುವ (ಡಿವೋರ್ಸ್‌) ವಿಚಾರ ತಿಳಿದ ಡೊಡ್ಮನೆ ಕುಟುಂಬದ ಹಾಗೂ ಯುವ ರಾಜಕುಮಾರ್ ಅವರು ಅಭಿಮಾನಿಗಳಿಗೆ ಭರಸಿಡಿಲು ಬಡಿದಂತಾಗಿದೆ.

ನಟ ಯುವರಾಜ್ ಕುಮಾರ್ ಹಾಗೂ ಪತ್ನಿ ಶ್ರೀದೇವಿ ಭೈರಪ್ಪ ಅವರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಇವರಿಬ್ಬರು ವಿವಾಹವು ಅದ್ಧೂರಿಯಾಗಿ 2019ರ ಮೇ 25ರಂದು ನಡೆದಿತ್ತು. ಇಬ್ಬರು ಒಪ್ಪಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ 07 ವರ್ಷಗಳ ಪ್ರೀತಿಗೆ ಹಾಗೂ 04 ವರ್ಷಗಳ ವೈವಾಹಿಕ ಜೀವನದಿಂದ ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಮೂಲಕ ದೊಡ್ಮನೆಯ ಕುಟುಂಬದ ದಂಪತಿಗಳು ಬೇರೆಯಾಗುತ್ತಿರುವ ಇವರೇ ಮೊದಲಿಗರು.

A Rift in Actor Yuva Rajkumar Married Life Yuva Gave Divorce Notice to His wife

ಯುವ-ಶ್ರೀದೇವಿ ವಿಚ್ಛೇದನಕ್ಕೆ ಕಾರಣವೇನು?

ಯುವ ರಾಜಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಅವರು ಮೂಲತಃ ಮೈಸೂರು ಮೂಲದವರು. ಇವರಿಬ್ಬರು ಮದುವೆ ಆಗಿ ನಾಲ್ಕು ವರ್ಷಗಳಾಗಿದ್ದು, ಇದೀಗ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಯುವರಾಜ್ ಕುಮಾರ್ ಜೂನ್ 6 ರಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಉನ್ನತ ಶಿಕ್ಷಣದ ಕನಸು ಇಟ್ಟುಕೊಂಡಿರುವ ಶ್ರೀದೇವಿ ಅವರು ವಿದೇಶದಲ್ಲಿದ್ದಾರೆ. ಭಾರತದ ತೊರೆದು ಕೆಲವು ತಿಂಗಳು ಆಗಿವೆ ತಿಳಿದು ಬಂದಿದೆ. ವಿದ್ಯಾಭ್ಯಾಸ ಕಾರಣಕ್ಕೊ? ಇಲ್ಲವೇ ವೈಯಕ್ತಿಕ ಕಾರಣಗಳಿಗೋ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟನೆ ಸಿಗುವ ವಿಶ್ವಾಸವಿದೆ.

ಅಗೌರವ, ಮಾನಸಿಕ ಕ್ರೌರ್ಯ ಎಂದು ಯುವ ಆರೋಪ

ಸದ್ಯ ಒಂದೇ ಬದಿಯಲ್ಲಿ ಡಿವೋರ್ಸ್ ವಿಚಾರ ಕೇಳಿ ಬರುತ್ತಿವೆ. ಈ ವಿಚಾರ ಬಗ್ಗೆ ಸ್ಪಷ್ಟನೆಗಾಗಿ ಶ್ರೀದೇವಿ ಅವರಿಗೆ ಕರೆ ಮಾಡಿದ ಮಾಧ್ಯಮದವರಿಗೆ ಯಾವ ಸ್ಪಂದನೆ ಸದ್ಯದವರೆಗೂ ಸಿಕ್ಕಿಲ್ಲ.

ಮತ್ತೊಂದೆಡೆ ಯುವ ರಾಜ್ ಕುಮಾರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಪತ್ನಿ ವಿರುದ್ಧ ಕೆಲವು ಆರೋಪ ಮಾಡಿದ್ದಾರೆ. ಪತ್ನಿ ಮನೆಯಲ್ಲಿ ಅಗೌರವ ತೋರುತ್ತಾರೆ. ಮಾನಸಿಕವಾಗಿ ಕ್ರೌರ್ಯ ಎಂದೆಲ್ಲ ಅವರು ಆರೋಪಿಸಿದ್ದಾರೆ. ಈ ಕಾರಣದಿಂದ ಯುವ ರಾಜಕುಮಾರ್ ನೊಂದಿದ್ದಾರೆ. ಹೀಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಸದ್ಯದ ಮಾಹಿತಿ.

ಯುವ ಮತ್ತು ಶ್ರೀದೇವಿ ವಿಚ್ಛೇದನ ವಿಚಾರವಾಗಿ ಇಂದು (ಜೂನ್ 10) ಮಧ್ಯಾಹ್ನ ಕುಟುಂಬಸ್ಥರಾದ ಯುವ ತಂದೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಸಹೋದರ ನಟ ವಿನಯ್ ರಾಜಕುಮಾರ್ ಅವರಿಂದ ಸುದ್ದಿಗೋಷ್ಠಿ ನಡೆಯಲಿದೆ. ಈ ವೇಳೆ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಅವರು ಸಹ ಇರಲಿದ್ದಾರೆ.

ಆರು ತಿಂಗಳಿಂದ ಪ್ರತ್ಯೇಕ ವಾಸ

ವಿಚ್ಛೇದನಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿರುವುದು ಏನೆಂದರೆ ಪತಿ-ಪತ್ನಿ ಆರು ತಿಂಗಳಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಇದು ಏಕೆ? ಎಂಬ ಪ್ರಶ್ನೆ ಸಾಮಾನ್ಯವಾಗಿ ಕಾಡುತ್ತದೆ. ಎಲ್ಲವು ಸರಿ ಇದ್ದಿದ್ದರೆ ದೂರು ಇರುವುದು ಏಕೆ? ಎಂಬ ಅನುಮಾನ ಮೂಡುತ್ತದೆ. ಇಂತಹ ಕೆಲವು ಪ್ರಶ್ನೆಗಳಿಗೆ ಶೀಘ್ರವೇ ಉತ್ತರ ದೊರೆಯಲಿದೆ.

A Rift in Actor Yuva Rajkumar Married Life Yuva Gave Divorce Notice to His wife

ವಿಫಲವಾದ ಕುಟುಂಬದ ಮಧ್ಯಸ್ಥಿಕೆ

ಆರು ತಿಂಗಳಿನಿಂದ ಯುವ-ಶ್ರೀದೇವಿ ಮಧ್ಯೆ ವೈಮಸ್ಸು ಇದೆ ಎನ್ನಲಾಗುತ್ತಿದೆ. ಹೀಗಿದ್ದರೂ ಯುವ ತಂದೆ ರಾಘವೇಂದ್ರ ರಾಜಕುಮಾರ್, ಶಿವಣ್ಣ, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಧ್ಯಸ್ಥಿಕೆ ವಹಿಸಿದ್ದರೆ?. ಮಧ್ಯಸ್ತಿಕೆ ವಹಿಸಿದ್ದೆ ಆದಲ್ಲಿ ಮನೆಯ ಹಿರಿಯರು ಈ ದಂಪತಿಗಳ ಮನಸ್ಸು ಒಲಿಸುವಲ್ಲಿ ವಿಫಲವಾಗಿರಬೇಕು. ಹೀಗಾಗಿ ವಿಚ್ಛೇಧನ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಯುವ ಪತ್ನಿ ಮೊದಲ ಪ್ರತಿಕ್ರಿಯೆ

ಯುವ ವಿಚ್ಛೇದನ ಅರ್ಜಿ ಸಲ್ಲಿಕೆ, ನೋಟಿಸ್ ಜಾರಿ ಬಗ್ಗೆ ಕೊನೆಗೂ ವಿದೇಶದಲ್ಲಿದ್ದುಕೊಂಡೇ ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ. ನನ್ನ-ಅವರ ಮಧ್ಯದ ವಿಷಯ ಏನೆಂದು ಚಿತ್ರರಂಗದಲ್ಲಿ, ಸುದ್ದಿ ಮಾಧ್ಯಮದವರಿಗೆ ಗೊತ್ತಿದೆ. ಈಗಾಗಲೇ ನಾನು ಕಾನೂನಾತ್ಮಕವಾಗಿ (legal) ನೋಟಿಸ್‌ಗೆ ಉತ್ತರ ಕೊಟ್ಟಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ. ಈ ಕುರಿತು ನ್ಯಾಯಾಲಯದ ಮುಂದೆ ಉತ್ತರಿಸಲಿದ್ದೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಶ್ರಿದೇವಿ ಭೈರಪ್ಪ ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+