40,00,00,000 ಕೋಟಿ ಲಾಸ್‌ ಮಾಡಿಕೊಂಡ ಕಮಲ್‌ ಹಾಸನ್‌! ಕನ್ನಡಿಗರನ್ನು ಕೆಣಕಿ ಈಗ ತಮಿಳಿಗರಿಗೆ ಈಗ ಬಕೆಟ್!

Kamal Haasan: ನಟ ಕಮಲ್‌ ಹಾಸನ್‌ ಅವರು ಕರ್ನಾಟಕ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಮೇಲೆಯೂ ಕನ್ನಡಿಗರ ಕ್ಷಮೆ ಕೇಳಿಲ್ಲ. ಈ ನಡುವೆ ಪಕ್ಕಾ ರಾಜಕಾರಣಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಸಂಕಷ್ಟ ಬಂದ ಸಂದರ್ಭದಲ್ಲಿ ತಮಿಳುನಾಡಿನ ಜನ ನನ್ನ ಕೈಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಮತ್ತೆ ಅನವಶ್ಯಕವಾಗಿ ತಮಿಳಿಗರು ಹಾಗೂ ಕನ್ನಡಿಗರ ನಡುವೆ ವಿವಾದ ಸೃಷ್ಟಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ನಾನು ಈಗ ಏನು ಮಾತನಾಡುವುದಿಲ್ಲ ಅಂತ ಹೇಳುತ್ತಲ್ಲೇ ಸಿನಿಮಾ ಪ್ರಮೋಷನ್‌ಗೆ ಸರ್ಕಸ್ಸ್‌ ಮಾಡಿದ್ದಾರೆ. ತಮಿಳುನಾಡು ಹಾಗೂ ತಮಿಳಿಗರ ಪರವಾಗಿ ಅವರು ಮಾತನಾಡಿರುವುದು ಏನು ಎನ್ನುವುದು ಇಲ್ಲಿದೆ.

ತಮಿಳು - ಕನ್ನಡ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್‌ ಹಾಸನ್‌ ಅವರು, ಇದೀಗ ತಮಿಳುನಾಡಿಗೆ ಮೆಚ್ಚುಗೆ ಸೂಚಿಸುವಂತೆ ಮಾತನಾಡಿರುವುದು ಕನ್ನಡಿಗರನ್ನು ಕೆರಳಿಸಿದೆ. ನೆಲ - ಜಲ ಹಾಗೂ ಭಾಷೆಯ ವಿಚಾರದಲ್ಲಿ ಜನ ಭಾವನಾತ್ಮಕವಾಗಿರುತ್ತಾರೆ. ಈ ವಿಚಾರದಲ್ಲಿ ಕಮಲ್‌ ಹಾಸನ್‌ ಅವರು ಮಾತ್ರವಲ್ಲ. ಯಾರೇ ಆಗಿರಲಿ ಈ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸುವಂತೆ ಮಾತನಾಡಬಾರದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

40 00 00 000 crores lost Kamal Haasan Now a bucket for Tamils

ಕನ್ನಡಿಗರ ತೀವ್ರ ಆಕ್ರೋಶ ಹಾಗೂ ವಿರೋಧಗಳ ಕಾರಣದಿಂದಾಗಿ ನಟ ಕಮಲ್‌ ಹಾಸನ್‌ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಇದರ ಹೊರತಾಗಿಯೂ ಕಮಲ್‌ ಹಾಸನ್‌ ಅವರ ತಮಿಳು ಪ್ರೀತಿ ಏನು ಕಡಿಮೆ ಆಗಿಲ್ಲ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಈ ಸಿನಿಮಾಗೆ ಕೋಟ್ಯಾಂತರ ರೂಪಾಯಿ ಲಾಸ್‌ ಆಗುತ್ತಿದೆ. ಹೀಗಾಗಿ, ತಮಿಳುನಾಡಿನಲ್ಲಿ ಸಿನಿಮಾವನ್ನು ಹೇಗಾದರೂ ಮಾಡಿ ಸಕ್ಸಸ್‌ ಮಾಡಿಕೊಳ್ಳಬೇಕು ಎಂದು ನಟ ಕಮಲ್‌ ಹಾಸನ್‌ ಅವರು ಹರಸಾಹಸಪಡುತ್ತಿದ್ದಾರೆ. ನಟ ಕಮಲ್‌ ಹಾಸನ್‌ ಅವರು ತಮಿಳಗರನ್ನು ಸಂತೋಷಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಅವರು ಕೊಟ್ಟಿರು ಹೇಳಿಕೆ ವೈರಲ್‌ ಆಗುತ್ತಿದೆ.

ಕಮಲ್‌ ಹಾಸನ್‌ ಅವರ ಪ್ರೊಡೆಕ್ಷನ್‌ನಿಂದಲೇ ಥಗ್‌ ಲೈಫ್‌ ಸಿನಿಮಾ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದರೆ ಕೋಟ್ಯಾಂತರ ರೂಪಾಯಿ ಬರುತ್ತಿತ್ತು. ಆದರೆ, ಕಮಲ್‌ ಹಾಸನ್‌ಗೆ ಇದೀಗ ಕೋಟಿ ಕೋಟಿ ಲಾಸ್‌ ಆಗಿದೆ. ಇದನ್ನು ಹೇಗಾದರೂ ಮಾಡಿ ತಮಿಳುನಾಡಿನಲ್ಲಿ ಸಕ್ಸಸ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಭಾಷಾ ವಿವಾದದ ವಿಚಾರವಾಗಿ ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಇದಕ್ಕೆಲ್ಲಾ ಸಮಯ ಬರಲಿದೆ ಆಗ ಮಾತನಾಡಲಿದ್ದೇನೆ. ಮಾಧ್ಯಮಗಳನ್ನು ಉದ್ದೇಶಿಸಿ ನಿಮ್ಮ ಜೊತೆ ಮಾತನಾಡುವುದು ಇದೆ. ಖಂಡಿತವಾಗಿಯೂ ಈ ವಿಚಾರವಾಗಿ ಮಾತನಾಡಲಿದ್ದೇನೆ ಅಂತ ಹೇಳಿದ್ದಾರೆ. ಅಲ್ಲದೇ ಈ ವಿಚಾರದಲ್ಲಿ ಬೆಂಬಲ ನೀಡಿರುವ ಅಥವಾ ತಮಿಳುನಾಡಿನ ಜನರಿಗೆ ನನ್ನ ಧನ್ಯವಾದಗಳು. ಮಾಧ್ಯಮಗಳಿಗೂ ಧನ್ಯವಾದಗಳು ಅಂತ ಹೇಳುವ ಮೂಲಕ ತಮಿಳಿಗರನ್ನು ಮೆಚ್ಚಿಸುವುದಕ್ಕೆ ಮುಂದಾಗಿದ್ದಾರೆ.

ಅಲ್ಲದೇ ಉಯಿರೆ, ಉರವೆ & ತಮಿಳೆ' ( ಜೀವ, ಸಂಬಂಧ ಹಾಗೂ ತಮಿಳು ಸಂಸ್ಕೃತಿ) ಎಂದರೆ ಏನು ಎನ್ನುವ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ಈ ಮಾತುಗಳನ್ನು ಬಿಟ್ಟು ನಾನು ಕದಲುವುದಿಲ್ಲ ಅಂತ ಪುನರುಚ್ಚರಿಸಿದ್ದಾರೆ.

40,00,00,000 ಕೋಟಿ ಲಾಸ್‌: ಇನ್ನು ನಟ ಕಮಲ್‌ ಹಾಸನ್‌ ಅವರ ಸಿನಿಮಾ ಥಗ್‌ಲೈಫ್ ಕರ್ನಾಟಕದಲ್ಲಿ ಬಹಿಷ್ಕಾರ ಆಗಿರುವುದರಿಂದಾಗಿ ಕರ್ನಾಟಕದ ಚಿತ್ರಮಂದಿರಗಳಿಂದ ಬರುತ್ತಿದ್ದ ಕೋಟ್ಯಾಂತರ ರೂಪಾಯಿ ಹಣ ಕಮಲ್‌ಗೆ ಲಾಸ್‌ ಆಗಿದೆ. ಒಂದು ಅಂದಾಜಿನ ಪ್ರಕಾರ ಕಮಲ್‌ ಹಾಸನ್‌ ಸಿನಿಮಾಗೆ 30 ರಿಂದ 40 ಕೋಟಿ ರೂಪಾಯಿ ಲಾಸ್‌ ಆಗಿದೆ ಅಂತ ಹೇಳಲಾಗುತ್ತಿದೆ.

ತಮಿಳುನಾಡಿನಲ್ಲೇ ಲಾಸ್‌: ತಮಿಳುನಾಡಿನಲ್ಲಿಯೇ ಕಮಲ್‌ ಹಾಸನ್‌ ಅವರ ಥಗ್‌ಲೈಫ್‌ ಮೂವಿ ಅಟ್ಟರ್‌ ಫ್ಲಾಪ್‌ ಆಗುತ್ತಿದ್ದು. ತಮಿಳುನಾಡಿನಲ್ಲೂ ಸಿನಿಮಾಗೆ ಕೋಟ್ಯಾಂತರ ರೂಪಾಯಿ ನಷ್ಟವಾಗುವ ಆತಂಕ ಎದುರಾಗಿದೆ. ಕಮಲ್‌ ಹಾಸನ್‌ ಅವರು ಸಿನಿಮಾ ಕರ್ನಾಟಕದಲ್ಲಿ ಬ್ಯಾನ್‌ ಆಗಿರುವುದೇ ಒಳ್ಳೆಯದು ಅವರು ತಲೆನೋವಿನಿಂದ ತಪ್ಪಿಸಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+