ಮತದಾರರನ್ನು ಓಲೈಸಲು ಶ್ರೀರಾಮುಲು ಮತಭಿಕ್ಷೆ
ಬಳ್ಳಾರಿ,ಫೆ. 23: ಮತದಾರರನ್ನು ಓಲೈಸಲು ಒಂದೆಡೆ ಬಾಡೂಟ. ಇನ್ನೊಂದೆಡೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಂಸದ ಬಿ. ಶ್ರೀರಾಮುಲು ನೇತೃತ್ವದಲ್ಲಿ ಮೂರು ದಿನಗಳ ಚುನಾವಣಾ ಪ್ರಚಾರ ಅಧಿಕೃತವಾಗಿ ಶುಕ್ರವಾರ ಅರಂಭ ಆಗಿದ್ದು, ಇಂದು ಅರವತ್ತು ಹಳ್ಳಿಗಳಲ್ಲಿ ಸಂಚರಿಸಿಮತಭಿಕ್ಷೆ' ಬೇಡಿದ್ದಾರೆ.
ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮದ ಆರಾಧ್ಯದೈವಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಮುಖಂಡರು, ಯುವಶಕ್ತಿ ಮತ್ತು ಹಿರಿಯರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಆರಂಭಿಸಿದ ಬಿ. ಶ್ರೀರಾಮುಲು, ಪ್ರಸ್ತಾಪಿತ ಅಭ್ಯರ್ಥಿ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ, ಕಳೆದಬಾರಿ ಸ್ಪರ್ಧಿಸಿ, ಸೋಲನುಭವಿಸಿದ್ದ ಪಿ. ಓಬಳೇಶ್, ಮಾಜಿ ಎಂಎಲ್ಸಿ ಮೃತ್ಯುಂಜಯ ಜಿನಗಾ, ಮುಖಂಡ ಎಸ್. ಗುರುಲಿಂಗನಗೌಡ, ಡಾ. ವೆಂಕಟಮಹಿಪಾಲ್ ಸೇರಿ ಅನೇಕರು ವಿವಿಧ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.

ಬೆಳಗ್ಗೆ 8 ಗಂಟೆಯಿಂದ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ. ಜನರನ್ನು ಉದ್ದೇಶಿಸ ಮಾತನಾಡುವ ಬಿ. ಶ್ರೀರಾಮುಲು, ನಾನು ಸಂಸದನಾಗಿದ್ದೇನೆ. ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಗೆ ನೀಡುವುದು ಕಷ್ಟವಿದೆ. ಕಾರಣ ನನ್ನ ಸಹೋದರ ಮಾವ, ಮಾಜಿ ಸಂಸದ ಸಣ್ಣ ಫಕ್ಕೀರಪ್ಪ ಅವರು ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಲು ಇವರಿಗೆ ಮತ ಹಾಕಿ.

ಇವರಿಗೆ ನೀವು ನೀಡುವ ಮತ, ನನಗೂ ಮಾಡುವ ಆಶೀರ್ವಾದ' ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.











Click it and Unblock the Notifications