ಹೈದರಾಬಾದಿನಿಂದ ಇಂದೇ ಹಿಂದಿರುಗುತ್ತಾರಾ ಶಾಸಕರು?
ಬೆಂಗಳೂರು, ಮೇ 18: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ನಿಗೂಢ ನಡೆಗಳು ನಡೆಯುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪತ್ತೆ ಮಾಡುವುದೇ ಒಂದು ಹರಸಾಹಸ ಎನ್ನಿಸಿದೆ.
ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಿಂದ ಹೊರಟ ಶಾಸಕರು ಕೊಚ್ಚಿಗೂ ಹೋಗದೆ ಎಲ್ಲಿ ಹೋದರು ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೋಟೆಲ್ ಗೆ ಶಾಸಕರು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲು ಯಾರು ವಿಶ್ವಾಸಮತ ಯಾಚಿಸಬೇಕು ಎಂಬುದನ್ನು ರಾಜ್ಯಪಾಲರು ನಿರ್ಧರಿಸಬೇಕು- ಸುಪ್ರೀಂ ಕೋರ್ಟ್
ಅಕಸ್ಮಾತ್ ನಾಳೆಯೇ ವಿಶ್ವಾಸಮತ ಯಾಚಿಸಬೇಕಿದ್ದಲ್ಲಿ ಹೈದರಾಬಾದಿನಲ್ಲಿರುವ ಶಾಸಕರೆಲ್ಲರೂ ಇಂದೇ ರಾಜ್ಯಕ್ಕೆ ಹಿಂದಿರುಗಬೇಕಾಗುತ್ತದೆ.
ಎಲ್ಲಾ ಶಾಸಕರಿಗೂ ಸೂಕ್ತ ರಕ್ಷಣೆ ನೀಡಿ. ಮತ್ತು ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರಬೇಕು ಎಂದ ಸುಪ್ರೀಂ ಕೋರ್ಟ್.
ನಾಳೆಯೇ ವಿಶ್ವಾಸಮತ ಸಾಬೀತುಪಡಿಸಲು ನಾವು ಸಿದ್ಧರಿದ್ದೇವೆ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಹೇಳಿಕೆ.
ನಾಳೆಯೇ ಸರ್ಕಾರ ತನ್ನ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಯಡಿಯೂರಪ್ಪ ನೂತನ ಸರಕಾರದ ಹಣೆಬರಹ ಸಹ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ರಾಜ್ಯಪಾಲರಿಗೆ ಯಡಿಯೂರಪ್ಪ ನೀಡಿದ್ದರೆನ್ನಲಾದ ಎರಡು ಪತ್ರಗಳನ್ನು ಕೋರ್ಟೆಗೆ ಸಲ್ಲಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದು, ಯಡಿಯೂರಪ್ಪನವರಿಗೆ ಇಂದು ಅಗ್ನಿಪರೀಕ್ಷೆ ಎದುರಾಗಲಿದೆ
ತಾಜ್ ಕೃಷ್ಣ ಹೋಟೆಲ್ ತಲುಪಿದ ಕಾಂಗ್ರೆಸ್ ಶಾಸಕರು. ಶಾಸಕರನ್ನು ಸ್ವಾಗತಿಸಿದ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಮುಖಂಡ ಉತ್ತಮ್ ಕುಮಾರ್ ರೆಡ್ಡಿ.
Karnataka Congress MLAs arrive at #Hyderabad's Taj Krishna Hotel, Telangana Pradesh Congress Committee (TPCC) head Uttam Kumar Reddy also present. pic.twitter.com/BTSwh4qtmU
— ANI (@ANI) May 18, 2018
ಹೈದ್ರಾಬಾದ್ ನ ನೋವೋಟೆಲ್ ರೆಸಾರ್ಟ್ ತಲುಪಿದ ಜೆಡಿಎಸ್ ಶಾಸಕರ ತಂಡ. ಹೈದ್ರಾಬಾದ್ ಹೊರ ವಲಯದಲ್ಲಿರೋ ರೆಸಾರ್ಟ್.
"ಮುಖ್ಯಮಂತ್ರಿಗಳ ಪತ್ರವನ್ನು ನಾವು ಸುಪ್ರೀಂ ಕೋರ್ಟಿಗೆ ತಲುಪಿಸುತ್ತೇವೆ. ಆ ಪತ್ರದಲ್ಲಿ ಮುಖ್ಯಮಂತ್ರಿಗಳ ಬಳಿ ಬಹುಮತವಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ನಾವು ಸದನದಲ್ಲೂ ಅದನ್ನು ಸಾಬೀತುಪಡಿಸುತ್ತೇವೆ. ಇಲ್ಲಿ ಕುದುರೆ ವ್ಯಾಪಾರದ ಪ್ರಶ್ನೆಯೇ ಇಲ್ಲ. ಶಾಸಕರನ್ನು ರೆಸಾರ್ಟಿಗೆ ಕರೆದೊಯ್ದಿದ್ದು ಮತ್ತೊಂದು ಮಾರ್ಗ"- ಮುಕುಲ್ ರೊಹಟ್ಗಿ, ಬಿಜೆಪಿ ಪರ ವಕೀಲ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ ಗುಪ್ತಚರ ಇಲಾಖೆ ಡಿಐಜಿ ಸಂದೀಪ್ ಪಾಟೀಲ್.
"ಶಾಸಕರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಅವರು ಮೂರ್ನಾಲ್ಕು ದಿನದಿಂದ ಜನರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ನಾವು ಹೇಗೆ ಬಹುಮತ ಸಾಬೀತುಪಡಿಸುತ್ತೇವೆ ಎಂಬುದನ್ನು ನೋಡುತ್ತಿರಿ. ಎಷ್ಟು ಶಾಸಕರು ನಮ್ಮನ್ನು ಬೆಂಬಲಿಸುತ್ತಾರೆ ನೋಡಿ. ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಗೌರವ ನೀಡುತ್ತೇವೆ"- ಬಸವರಾಜ್ ಬೊಮ್ಮಾಯಿ, ಬಿಜೆಪಿ ಮುಖಂಡ
ಹೈದರಾಬಾದಿನಿಂದ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ನಿಂದ ತಾಜ್ ಕೃಷ್ಣ ಹೊಟೇಲ್ ಗೆ ಶಾಸಕರು ಶಿಫ್ಟ್
ಬೆಳಿಗ್ಗೆ ಹೈದರಾಬಾದಿನ ಬಂಜಾರಾ ಹಿಲ್ಸ್ ನಲ್ಲಿರುವ ಪಾರ್ಕ್ ಅಯಾತ್ ಹೊಟೇಲ್ ತಲುಪಿದ ಶಾಸಕರು.












Click it and Unblock the Notifications