ಧಾರವಾಡದಲ್ಲಿ ವಿನಯ ಕುಲಕರ್ಣಿಗೆ ಅಚ್ಚರಿಯ ಸೋಲು
ಧಾರವಾಡ, ಮೇ 15: ಧಾರವಾಡ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಪ್ರಕರಟವಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ಸಿನ ವಿನಯ ಕುಲಕರ್ಣಿ ಸೋಲು ಕಂಡಿದ್ದಾರೆ.
ಬಿಜೆಪಿಯ ಅಮೃತ್ ದೇಸಾಯಿ ಅವರ ವಿರುದ್ಧ ಸೋಲುಂಡಿರುವ ಅವರು ಭಾರೀ ಮುಖಭಂಗ ಅನುಭವಿಸಿದ್ದಾರೆ.

2013 ರ ಚುನಾವಣೆಯಲ್ಲಿ ವಿನಯ ಕುಲಕರ್ಣಿ 53453 ಮತ ಗಳಿಸಿದ್ದರೆ, ಅಮೃತ ದೇಸಾಯಿ 35133 ಮತ ಪಡೆದಿದ್ದರು. ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದರಲ್ಲದೆ, ಈ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದರು ಎನ್ನಲಾಗಿದೆ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯವೇ ಅವರ ಸೋಲಿಗೆ ಕಾರಣವಾಯಿತು ಎಂಬುದು ಸದ್ಯದ ಲೆಕ್ಕಾಚಾರ.












Click it and Unblock the Notifications