ಬಿಜೆಪಿಗೆ ಚಾನ್ಸ್ ಕೊಡಿ ಎಂದ ಸ್ವಾಮಿ ಟ್ವೀಟ್ ಗೆ ಸಕತ್ ಪ್ರತಿಕ್ರಿಯೆ
ಬೆಂಗಳೂರು, ಮೇ 15: 'ಜನಾದೇಶಕ್ಕೆ ಬೆಲೆ ಕೊಟ್ಟು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿ, ನಮಗೆ ನಾಲ್ಕು ಸ್ಥಾನಗಳು ಸಾಕು' ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.
ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಎರಡೂ ಕೂಡಾ ಸರ್ಕಾರ ರಚನೆ ಮಾಡುವ ವಿಶ್ವಾಸದಲ್ಲಿವೆ. ರಾಜ್ಯಪಾಲರು ಯಾರಿಗೆ ಅವಕಾಶ ನೀಡುತ್ತಾರೆ ಕಾದು ನೋಡಬೇಕಿದೆ. ಈ ನಡುವೆ ರಾಜ್ಯಪಾಲರ ನಡೆ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ರಾಜ್ಯಪಾಲರು ಬಿಜೆಪಿ ಪರ ನಿಲುವು ತಾಳುವುದು ಸರಿಯಲ್ಲ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಜನಾದೇಶಕ್ಕೆ ಬೆಲೆ ಕೊಟ್ಟು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಬಹುದು. ಇದಲ್ಲದೆ ರಾಜ್ಯಪಾಲ ವಜುಭಾಯಿ ವಾಲ ಅವರ ಮುಂದೆ ಒಟ್ಟು ನಾಲ್ಕು ಆಯ್ಕೆಗಳಿವೆ, ಬಿಜೆಪಿ ಅಲ್ಲದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟಕ್ಕೆ ಆಹ್ವಾನ ನೀಡಬಹುದು. ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡಬಹುದು.
|
ಬಿಜೆಪಿಗೆ ಮೊದಲು ಚಾನ್ಸ್ ಕೊಡಿ ಎಂದ ಸ್ವಾಮಿ
ಜನಾದೇಶಕ್ಕೆ ಬೆಲೆ ಕೊಟ್ಟು ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿ, ಬಿಜೆಪಿಗೆ ಮೊದಲು ಚಾನ್ಸ್ ಕೊಡಿ ಎಂದ ಸ್ವಾಮಿ ಟ್ವೀಟ್ ಮಾಡಿದ್ದಾರೆ.
|
ಶಶಿಕಲಾಗೆ ಸರ್ಕಾರ ಮಾಡಲಾಗಲಿಲ್ಲ ಏಕೆ?
ಬಿಜೆಪಿಗೆ ಚಾನ್ಸ್ ಕೊಡಿ ಎಂದ ಸ್ವಾಮಿಗೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು ತಮಿಳುನಾಡಿನಲ್ಲಿ ಶಶಿಕಲಾ ನಟರಾಜನ್ ಹಾಗೂ ಅವರ ಬೆಂಬಲಿಗರಿಗೆ ಬಹುಮತ ಸಿಕ್ಕರೂ ಸರ್ಕಾರ ರಚನೆ ಸಾಧ್ಯವಾಗಲಿಲ್ಲವೇಕೆ? ಎಂದು ಪ್ರಶ್ನಿಸಿದ್ದಾರೆ.
|
ಗೋವಾದಲ್ಲಿ ಏಕೆ ಮಾಡಲಿಲ್ಲ?
ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಮಣಿಪುರದಲ್ಲಿ 60 ಕ್ಷೇತ್ರಗಳಲ್ಲಿ ಬಿಜೆಪಿ 21, ಕಾಂಗ್ರೆಸ್ 28ಗಳಿಸಿತ್ತು. ಆದರೆ, ಪಕ್ಷೇತರರನ್ನು ತಮ್ಮ ತೆಕ್ಕೆಗೆ ಹಾಕಿಕೊಂಡ ಬಿಜೆಪಿ ಅಧಿಕಾರ ಸ್ಥಾಪಿಸಿತು. ಗೋವಾದಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 13 ಸ್ಥಾನ ಗಳಿಸಿತ್ತು. ಆದರೆ, ಬಿಜೆಪಿ ಮೈತ್ರಿ ಸಾಧಿಸಿ, ಸರ್ಕಾರ ರಚಿಸಿತು. ಇದು ಯಾಕೆ ಹೀಗೆ ಆಯ್ತು?
|
ಎಸ್ ಆರ್ ಬೊಮ್ಮಾಯಿ ಕಾಲದ ಕೇಸ್
ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಕಾಲದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿಗೆ ನ್ಯಾಯಾಲಯದಿಂದ ಸಿಕ್ಕಿರುವ ಆದೇಶವನ್ನು ಒಮ್ಮೆ ಓದಿಕೊಂಡು ಹಕ್ಕು ಮಂಡನೆ ಮಾಡಿ ಎಂದು ಸಲಹೆ ಕೊಟ್ಟ ಸಾರ್ವಜನಿಕರು.
|
ದಯವಿಟ್ಟು ಈ ಪಟ್ಟಿ ನೋಡಿ
ದಯವಿಟ್ಟು ಈ ಪಟ್ಟಿ ನೋಡಿ, ಗೋವಾ, ಮಣಿಪುರ, ಮೇಘಾಲಯ, ಅರುಣಾಚಲ ಪ್ರದೇಶ, ಬಿಹಾರದ ಚುನಾವಣೆ ಹಾಗೂ ಫಲಿತಾಂಶ ನೋಡಿ ಕಲಿಯಿರಿ.
|
ವಾಜಪೇಯಿಗೆ ಸಿಕ್ಕ ಅವಕಾಶ
ಅಟಲ್ ಬಿಹಾರಿ ವಾಜಪೇಯಿಗೆ ಪ್ರಧಾನಿಯಾಗಲು ಸಿಕ್ಕ ಅವಕಾಶ, ಸರ್ಕಾರ ಉರುಳಿದ್ದು, ದೇವೇಗೌಡರು ಪ್ರಧಾನಿಯಾಗಿದ್ದನ್ನು ಸ್ಮರಿಸಿದ ಸ್ವಾಮಿ.












Click it and Unblock the Notifications