'ರೆಬೆಲ್ ಸ್ಟಾರ್' ಎಂಬಿ ಪಾಟೀಲರಿಗೆ ರಾಹುಲ್ ಗಾಂಧಿ ಕಿವಿಮಾತು?

ನವದೆಹಲಿ, ಜೂನ್ 09: ಅತೃಪ್ತ ಶಾಸಕ ಎಂ ಬಿ ಪಾಟೀಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾಗಿದೆ. ಈ ಭೇಟಿ ಹಣ್ಣೊ, ಕಾಯೋ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಕೆಲವು ಮೂಲಗಳ ಪ್ರಕಾರ ದೆಹಲಿಗೆ ದೌಡಾಯಿಸಿದ್ದ ಎಂ ಬಿ ಪಾಟೀಲರಿಗೆ ನಿರೀಕ್ಷಿತ ಪ್ರತಿಫಲ ಸಿಕ್ಕಂತಿಲ್ಲ. ರಾಹುಲ್ ಗಾಂಧಿ ಸೂಕ್ತ ಹುದ್ದೆ ನೀಡುವ ಭರವಸೆಯನ್ನು ನೀಡಿದ್ದಾರಾದರೂ, ಇದು ಬೀಸುವ ದೊಡ್ಡೆಯಿಂದ ತಪ್ಪಿಸಿಕೊಳ್ಳುವ ಉಪಾಯವಾ ಎಂಬುದು ಹೈಕಮಾಂಡ್ ಗೇ ಗೊತ್ತು!

Karnataka Cabinet: Rahul Gandhi ensures suitable portfolio to MB Patil

"ರಾಜ್ಯದಲ್ಲಿ ಹಿರಿಯ ನಾಯಕರು ಎಂದು ಹೆಸರು ಪಡೆದವರು ನೀವು. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಿ. ಭಿನ್ನಮತವನ್ನು ನೀವೇ ಶಮನ ಮಾಡಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮನಸ್ಸು ಮಾಡಿ" ಎಂದು ರಾಹುಲ್ ಗಾಂಧಿ ಎಂ ಬಿ ಪಾಟೀಲಗೆ ಕಿವಿಮಾತು ಹೇಳಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಮತ್ತು ಉತ್ತಮ ಹುದ್ದೆಯನ್ನು ನೀಡುತ್ತೇವೆ. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಒಟ್ಟಾಗಿ, ಹೊಂದಾಣಿಕೆಯಿಂದ ಕೆಲಸ ಮಾಡುವಲ್ಲಿ ಗಮನ ಹರಿಸಿ ಎಂದೂ ಸಹ ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+