ಮುಖ್ಯಮಂತ್ರಿ ಅಭ್ಯರ್ಥಿಯ ಮೈಸೂರು ಜಿಲ್ಲಾದರ್ಶನ
ಮೈಸೂರು, ಮೇ 1: ಸಾಂಸ್ಕೃತಿಕ ರಾಜಧಾನಿ, ಅರಮನೆಯ ನಾಡು, ಕಾವೇರಿ ಕಣಿವೆಯ ಮೈಸೂರು ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸುವ ಜಿಲ್ಲೆ. ನೋವಿನ ಸಂಗತಿಯೆಂದರೆ, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಮೊಗೆ ಗೌಡ ಅವರ ಅಕಾಲಿಕ ನಿಧನದಿಂದ (210) ಕ್ಷೇತ್ರದಲ್ಲಿ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆರಿಸಿ ಕಳಿಸುವ ಅವಕಾಶ ಜಿಲ್ಲೆಯ ವರುಣಾ ಕ್ಷೇತ್ರಕ್ಕೆ ಇದೆ. ಆದರೆ ಆ ಅಭ್ಯರ್ಥಿ ಅಂದರೆ ಸಿದ್ದರಾಮಯ್ಯ ಗೆಲುವಿಗೆ ಮುನ್ನ ಕಾಪು ಸಿದ್ದಲಿಂಗಸ್ವಾಮಿ, ಚೆಲುವರಾಜು ನಾಯ್ಕ್ ಅವರನ್ನು ಸಮರ್ಥವಾಗಿ ಎದುರಿಸಬೇಕು. ಇವರಿಬ್ಬರನ್ನೂ ಜಯಿಸಿದಾಕ್ಷಣ ಸಿದ್ರಾಮಯ್ಯ ಮುಖ್ಯಮಂತ್ರಿ ಆಗೇಬಿಟ್ಟರು ಅಂತೇನಿಲ್ಲ. ಆದರೆ ಅಂತಹ ಸದವಕಾಶವೊಂದು ಮೈಸೂರಿಗೆ ಒದಗಿಬಂದಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಅದರ ಹೊರತಾಗಿ ವಿ ಶ್ರೀನಿವಾಸ ಪ್ರಸಾದ್, ವಾಸು ಎಚ್, ತನ್ವೀರ್ ಸೇಠ್, ಎಚ್ಎಸ್ ಶಂಕರಲಿಂಗೇಗೌಡ, ಎಸ್ ಎ ರಾಮದಾಸ್, ಜಿಟಿ ದೇವೇಗೌಡ, ಚಿಕ್ಕಮಾದು ಮುಂತಾದವರು ಕಣದಲ್ಲಿರುವುದು ಗಮನಾರ್ಹವಾಗಿದೆ.

| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ /ಪಕ್ಷೇತರರು |
| 211 | ಕೃಷ್ಣರಾಜನಗರ | ಎಂಪಿ ಕುಮಾರ್ | ದೊಡ್ಡಸ್ವಾಮೆ ಗೌಡ | ಸಾರಾ ಮಹೇಶ್ | ಕೆ ಎಸ್ ಬಸಂತ್ | - |
| 212 | ಹುಣಸೂರು | ಅಣ್ಣಯ್ಯ ನಾಯಕ್ | ಎಚ್ ಪಿ ಮಂಜುನಾಥ್ | ಕುಮಾರಸ್ವಾಮಿ | ಮಂಜುನಾಥ್ ಅರಸ್ | ದ್ಯಾವಪ್ಪ ನಾಯಕ್ |
| 213 | ಎಚ್ ಡಿ ಕೋಟೆ ಪ. ಪಂಗಡ | ಸಿದ್ದರಾಜು | ಚಿಕ್ಕಣ್ಣ | ಚಿಕ್ಕಮಾದು | ಡಾ. ಎಚ್ ವಿ ಕೃಷ್ಣಸ್ವಾಮಿ | - |
| 214 | ನಂಜನಗೂಡು- ಪ. ಪಂಗಡ | ಡಾ. ಶಿವರಾಂ | ವಿ ಶ್ರೀನಿವಾಸ ಪ್ರಸಾದ್ | ಕೇಶವಮೂರ್ತಿ | ಎಸ್ ಮಹಾದೇವಯ್ಯ | ಆರ್ ಮಾದೇಶ |
| 215 | ಚಾಮುಂಡೇಶ್ವರಿ | ಹೇಮಂತಕುಮಾರ್ ಗೌಡ | ಎಂ ಸತ್ಯನಾರಾಯಣ | ಜಿಟಿ ದೇವೇಗೌಡ | ಅಪ್ಪಣ್ಣ | ಕೆಪಿ ಚಿದಾನಂದ |
| 216 | ಕೃಷ್ಣರಾಜ | ಎಸ್ ಎ ರಾಮದಾಸ್ | ಎಂಕೆ ಸೋಮಶೇಖರ್ | ವಾಸು ಎಚ್ | ಎಚ್ ವಿ ರಾಜೀವ್ | ನಂಜುಂಡ ಸ್ವಾಮಿ |
| 217 | ಚಾಮರಾಜ | ಬಿ ನಾಗೇಂದ್ರ | ವಾಸು | ಎಚ್ಎಸ್ ಶಂಕರಲಿಂಗೇಗೌಡ | ಅರುಣಕುಮಾರ್ ಗೌಡ | ಎನ್ ಭಾರತಿ |
| 218 | ನರಸಿಂಹರಾಜ | ಬಿಪಿ ಮಂಜುನಾಥ್ | ತನ್ವೀರ್ ಸೇಠ್ | ಸಂದೇಶ್ ಸ್ವಾಮಿ | ಎನ್ ಕೆ ಫರೀದ್ | ಸಿದ್ದಿಕಿ |
| 219 | ವರುಣಾ | ಎಸ್ ಡಿ ಮಹೇಂದ್ರ | ಸಿದ್ದರಾಮಯ್ಯ | ಚೆಲುವರಾಜು ನಾಯ್ಕ್ | ಕಾಪು ಸಿದ್ದಲಿಂಗಸ್ವಾಮಿ | ಗಿರೀಶ್ |
| 220 | ತಿ. ನರಸೀಪುರ- ಪ. ಜಾತಿ | ಸಿ ರಮೇಶ್ | ಡಾ. ಎಸ್ ಸಿ ಮಹಾದೇವಪ್ಪ | ಎಂಸಿ ಸುಂದರೇಶನ್ | ಪುಟ್ಟಬಸವಯ್ಯ | - |












Click it and Unblock the Notifications