ಕೆಜೆಪಿಯ 28 ಅಭ್ಯರ್ಥಿಗಳ ಐದನೇ ಪಟ್ಟಿ ಪ್ರಕಟ

Karnataka Janata Party
ಬೆಂಗಳೂರು, ಏ.16: ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಾ ದಿನಗಳನ್ನು ಕಳೆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕೆಜೆಪಿ 28 ಅಭ್ಯರ್ಥಿಗಳ ಐದನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ಒಟ್ಟು 196 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯ ಕುಮಾರ್ ಐದನೇ ಪಟ್ಟಿಯಲ್ಲಿ ಮೊದಲು ಘೋಷಿಸಿದ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ವಿ.ಸೋಮಣ್ಣ ಸ್ಪರ್ಧಿಸುವ ವಿಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗಿದ್ದು, ಪುಟ್ಟನರಸಪ್ಪ ಅವರ ಬದಲಾಗಿ ವೀರಶೈವ ಮುಖಂಡ ವಾಗೀಶ್ ಪ್ರಸಾದ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.

ಶಿಗ್ಗಾವಿ ಕ್ಷೇತ್ರದಲ್ಲಿ ಸಚಿವ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಬಾಪುಗೌಡ ಕಾಶೀನಾಥಗೌಡ ಪಾಟೀಲ್, ಜೆಡಿಎಸ್‌ನ ಮುಖಂಡ ಎಚ್.ಡಿ. ರೇವಣ್ಣ ವಿರುದ್ಧ ಎಚ್.ಎಲ್. ಯಮುನಾ ಅವರಿಗೆ ಟಿಕೆಟ್ ನೀಡಲಾಗಿದೆ. 28 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಮೂವರು ಮಹಿಳೆಯರು, ಮೂವರು ಮುಸ್ಲಿಮರು ಮತ್ತು ಒಬ್ಬ ಕ್ರಿಶ್ಚಿಯನ್ ಪಂಗಡದವರಿದ್ದಾರೆ ಎಂದು ಹೇಳಿದರು.

ಅಭ್ಯರ್ಥಿಗಳ ಪಟ್ಟಿ

ಮುದ್ದೇಬಿಹಾಳ - ಮಂಗಳಾದೇವಿ ಬಿರಾದರ್
ನರಗುಂದ - ಕೆ.ಎಸ್. ಪರ್ವತಗೌಡ
ಶಿಗ್ಗಾವಿ - ಬಾಪುಗೌಡ ಕಾಶೀನಾಥ ಗೌಡ ಪಾಟೀಲ್
ಶ್ರವಣಬೆಳಗೊಳ - ಗೋಪಾಲಸ್ವಾಮಿ
ಬಾಗಲಕೋಟೆ - ಬಲರಾಮ್ ಪೂರಪ್ಪ ನಾಯಕ
ಬೊಮ್ಮನಹಳ್ಳಿ - ಬಿ. ರಮೇಶ್ ರೆಡ್ಡಿ
ಚಿಕ್ಕಮಗಳೂರು - ಡಾ.ಕೆ.ಬಿ. ವೇದಮೂರ್ತಿ
ಹನೂರು - ಪೊನ್ನಾಚಿ ಮಹದೇವಸ್ವಾಮಿ
ಮಾಲೂರು - ನಾರಾಯಣಸ್ವಾಮಿ
ಕೆಜಿಎಫ್ - ಭಾಸ್ಕರ್
ಕೋಲಾರ - ಅಬ್ದುಲ್ ರೆಹಮಾನ್ ಮುಜೀಬ್
ಯಲ್ಲಾಪುರ - ಮಹೇಶ್ ಹೊಸಕೊಪ್ಪ
ಪುತ್ತೂರು - ಜಯರಾಮ್ ಭಟ್
ದೇವನಹಳ್ಳಿ - ಹನುಮಂತಪ್ಪ
ಚನ್ನಪಟ್ಟಣ - ನೆರಳೂರು ನಾಗರಾಜಪ್ಪ
ಚಿಕ್ಕಪೇಟೆ - ಖಮರ್ ತಾಜ್
ಔರಾದ್ - ದಾದಾಜಿ ಭೀಮಜಾದವ್ ಚಿಮ್ಮೆಗಾಂವ್
ಮುಧೋಳ - ಕಿರಣ್ ವಿಠ್ಠಲ್ ಕಟ್ಟಿಮನಿ
ಬಿಜಾಪುರ ನಗರ - ಡಾ. ಕರಿಬಸವರಾಜ್ ಬಿ. ನಾಗೂರು
ರಾಯಚೂರು - ಕೆ.ಎಂ. ಬಸವರಾಜಪ್ಪ
ಬೆಂಗಳೂರು ದಕ್ಷಿಣ - ಜಗದೀಶ್ ರೆಡ್ಡಿ
ಹೊಸಕೋಟೆ - ಸೈಯದ್ ಗೌಸ್
ಹೊಳೇನರಸೀಪುರ - ಎಚ್.ಎಲ್. ಯಮುನಾ
ಕುಣಿಗಲ್ - ಪ್ರಕಾಶ್
ಮಹಾಲಕ್ಷ್ಮಿಲೇಔಟ್ - ವೀರೇಶ್‌ಕುಮಾರ್
ಬೈಂದೂರು - ನವೀನ್‌ಚಂದ್ರ ಉಪ್ಪುಂದ
ಮೂಡಬಿದರೆ - ವೆಲೇರಿಯನ್ ಕುಟಿನ್ಹಾ
ಬೀಳಗಿ - ಮಲ್ಲಿಕಾರ್ಜುನ ಅಂಗಡಿ

ಕೆಲವು ಅಭ್ಯರ್ಥಿಗಳ ಬದಲಾವಣೆ : ಚಿತ್ರದುರ್ಗ ಕ್ಷೇತ್ರದಲ್ಲಿ ಸುನೀತಾ ಮಲ್ಲಿಕಾರ್ಜುನ್ ಬದಲಾಗಿ ಮಾಜಿ ಶಾಸಕ ಉಮಾಪತಿ, ಗೋಕಾಕ್ ಕ್ಷೇತ್ರದಲ್ಲಿ ನಿಂಗಪ್ಪ ಬಿ. ನಿರ್ವಾಣಿ ಬದಲಾಗಿ ಉಮೇಶ್ ಬಿ. ನಿರ್ವಾಣಿ, ನೆಲಮಂಗಲದಲ್ಲಿ ವೆಂಕಟೇಶ್ ಬಾಬು ಬದಲಾಗಿ ಚೆಲುವರಾಜು, ರಾಯಭಾಗ ಕ್ಷೇತ್ರದಲ್ಲಿ ಅಶೋಕ್ ಕಾಂಬ್ಳೆ ಬದಲಾಗಿ ಬಾಳಾ ಸಾಹೇಬ್ ವಡ್ಡರ್ ಅವರನ್ನು ಕಣಕ್ಕಿಳಿಸಲಾಗಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+