ರೇಣುಕಾ ಸೇರ್ಪಡೆ, ಕೆಜೆಪಿ 2ನೇ ಪಟ್ಟಿ ಬಿಡುಗಡೆ

ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪನವರ ಮುಖವಾಣಿಯಾಗಿದ್ದ ಹೊನ್ನಾಳಿ (ದಾವಣಗೆರೆ ಜಿಲ್ಲೆ) ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಕರ್ನಾಟಕ ಜನತಾ ಪಕ್ಷಕ್ಕೆ ಅಧಿಕೃತವಾಗಿ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು. ರೇಣುಕಾಚಾರ್ಯ ಕೆಜೆಪಿ ಸೇರ್ಪಡೆಗೆ ಕೆಲವರ ವಿರೋಧವಿದೆ ಎಂಬ ಊಹಾಪೋಹಕ್ಕೆ ಅವರು ತೆರೆ ಎಳೆದರು.
ಮೊದಲ ಹಂತದಲ್ಲಿ 69 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಯಡಿಯೂರಪ್ಪ, ಶನಿವಾರ ಪತ್ರಿಕಾಗೋಷ್ಠಿ ನಡೆಸಿ, 33 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ 2 ಮಹಿಳೆಯರು, 4 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಮತ್ತು 1 ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಲಾಗಿದೆ.
ಪಕ್ಷ ಸೇರಿದ ನಂತರ, ಕೆಜೆಪಿ ಸೇರಿದ್ದು ತುಂಬಾ ಸಂತಸ ತಂದಿದೆ ಎಂದ ರೇಣುಕಾಚಾರ್ಯ ಅವರು, ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಕೇವಲ ರಬ್ಬರ್ ಸ್ಟಾಂಪ್ ಆಗಿದ್ದು, ಅನಂತ್ ಕುಮಾರ್ ಅವರ ಹಿಂಬಾಲಕರಾಗಿದ್ದಾರೆ. ಈಶ್ವರಪ್ಪ ಮತ್ತು ಅನಂತ್ ಕುಮಾರ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರೂ ಮೈಸೂರಿನಲ್ಲಿ ಕಿತ್ತಾಡಿಕೊಂಡಿದ್ದರು ಎಂದರು. ಸದಾನಂದ ಗೌಡ ಅವರು ತಮ್ಮಿಂದ ಹಣ ಪಡೆದಿದ್ದನ್ನು ಬಹಿರಂಗಪಡಿಸಿದ್ದಕ್ಕಾಗಿ ತಮ್ಮನ್ನು ಪಕ್ಷದಿಂದಲೇ ಉಚ್ಚಾಟಿಸಿದರು. ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಅವರು ನುಡಿದರು.
ಕೆಜೆಪಿಯ ಎರಡನೇ ಪಟ್ಟಿಯಲ್ಲಿರುವವರು
ಹೊನ್ನಾಳಿ - ಎಂ.ಪಿ. ರೇಣುಕಾಚಾರ್ಯ
ರಾಜರಾಜೇಶ್ವರಿ ನಗರ - ವೆಂಕಟೇಶ ಗೌಡ
ಭಟ್ಕಳ - ಶಿವಾನಂದ ನಾಯಕ್
ಟಿ ನರಸಿಪುರ - ಪುಟ್ಟ ನರಸಯ್ಯ
ಅರಸಿಕೆರೆ - ಡಾ. ಲೋಕೇಶ್
ಸಕಲೇಶಪುರ - ಉಮೇಶ್
ಬೈಲಹೊಂಗಲ - ಡಾ. ವಿಶ್ವನಾಥ್ ಪಾಟೀಲ
ತೀರ್ಥಹಳ್ಳಿ - ಮಂಜುನಾಥ ಗೌಡ
ಗುಲಬರ್ಗ ಗ್ರಾಮಾಂತರ - ಬಾಬುರಾವ್ ಚೌಹಾಣ್
ಸಾಗರ - ಬಿಆರ್ ಜಯಂತ್
ಸಿವಿ ರಾಮನ್ ನಗರ - ರವಿ ಕುಮಾರ್
ಮಂಡ್ಯ - ವೆಂಕಟೇಶ್ ಆಚಾರ್
ಗಂಗಾವತಿ - ಬಸವರಾಜ್ ಪಾಟೀಲ್ ಅನ್ವರಿ
ಮಾನ್ವಿ - ಗಂಗಾಧರ ನಾಯ್ಕ್
ಸೇಡಂ - ವೈಜನಾಥ್ ಪಾಟೀಲ
ಜೇವರ್ಗಿ - ಮಲ್ಲಿನಾಥಗೌಡ ಪಾಟೀಲ
ಮಲ್ಲೇಶ್ವರಂ - ಗುಟ್ಟಹಳ್ಳಿ ಕುಮಾರ್
ಬಸವಕಲ್ಯಾಣ - ಮಲ್ಲಮ್ಮ ಅಟ್ಟೂರು
ಚಿತ್ರದುರ್ಗ - ಸುನೀತಾ ಮಲ್ಲಿಕಾರ್ಜುನ್
ಕೆಆರ್ ನಗರ - ಬಸಂತ್
ಚಾಮರಾಜ - ಅರುಣ್ ಕುಮಾರ್ ಗೌಡ
ಹೂವಿನಹಡಗಲಿ - ಮಧು ನಾಯಕ್
ಶಿರಗುಪ್ಪ - ನರಸಿಂಹ ನಾಯಕ್
ಗದಗ - ಸಂಕಣ್ಣನವರ್
ಯಲಬುರ್ಗ - ಸಿಎಚ್ ಪೊಲೀಸ್ ಪಾಟೀಲ
ತುಮಕೂರು ಗ್ರಾಮಾಂತರ - ನಿಂಗಪ್ಪ
ಧಾರವಾಡ ಗ್ರಾಮಾಂತರ - ತವನಪ್ಪ ಅಷ್ಟಗಿ
ಶಿವಾಜಿನಗರ - ಪೆರುಮಾಳ್
ರಾಮದುರ್ಗ - ಪಂಚಗಟ್ಟಿಮಠ
ಕೊಪ್ಪಳ - ಕೆಎಂ ಸೈಯದ್
ಬೇಲೂರು - ವಿಶ್ವನಾಥ
ನವಲಗುಂದ - ಚಂದ್ರಶೇಖರ ದಾಡಿಬಾಯಿ
ಗೌರಿಬಿದನೂರು - ಟಿಎಸ್ ಮುರಳಿಧರ್
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications