ಗುಲಬರ್ಗ ಜಿಲ್ಲೆಯ ಅಧಿಕೃತ ಅಭ್ಯರ್ಥಿಗಳ ಪಟ್ಟಿ

ಉತ್ತರ ಕರ್ನಾಟಕದ ನಿಗಿನಿಗಿ ಕೆಂಡದಂತಿರುವ ಗುಲಬರ್ಗ ಜಿಲ್ಲೆಯಲ್ಲಿ ಇಂದಿಗೂ ಉರ್ದು ಪ್ರಭಾವ ಸಾಕಷ್ಟಿದೆ. ಮುಸ್ಲಿಂ ಮತಗಳನ್ನು ಒಲಿಸಿಕೊಂಡವನೇ ಇಲ್ಲಿ ರಾಜನಾಗುತ್ತಾನೆ. ಹೀಗಿರುವ ಗುಲಬರ್ಗದ ನೆತ್ತಿನಯ ಮೇಲೆ ಸೂರ್ಯ ಸುಡುತ್ತಿರುವಾಗಲೇ ಚುನಾವಣೆ ಆಗಮಿಸಿದೆ. ಜಿಲ್ಲೆಯಲ್ಲಿ ಒಟ್ಟು 9 ವಿಧಾನಸಭೆ ಕ್ಷೇತ್ರಗಳಿದ್ದು, ಜಿದ್ದಾಜಿದ್ದಿಯ ಕುಸ್ತಿಗೆ ಅಖಾರ ರೆಡಿಯಾಗಿದೆ.
ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ (ಫೇಸ್ ಬುಕ್ ಪುಟ) ಅವರು ಕಳೆದ ಬಾರಿ ವಿಜಯ ಸಾಧಿಸಿದ್ದ ಬಿಜೆಪಿಯ ವಾಲ್ಮಿಕಿ ನಾಯಕ್ ಅವರ ವಿರುದ್ಧ ಸೆಣೆಸಲಿದ್ದಾರೆ. ಟಿಕೆಟ್ ಗಿಟ್ಟಿಸಲು ಸಫಲವಾದ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್ಸಿಗೆ ಗೆಲುವು ತಂದುಕೊಡುವರೆ ಎಂದು ಎಲ್ಲರೂ ಎದುರುನೋಡುತ್ತಿದ್ದಾರೆ. [ಫಲಿತಾಂಶ: ಗೆದ್ದವರು, ಸೋತವರ ವಿವರ]
ಚಿಂಚೋಳಿಯಲ್ಲಿ ಬಿಜೆಪಿಯಿಂದ ಗೆದ್ದಿದ್ದ ಸುನೀಲ್ ವಲ್ಯಾಪುರೆ ಈಗ ಕೆಜೆಪಿ ಟಿಕೆಟ್ ಗಿಟ್ಟಿಸಿಕೊಂಡು ಬಿಜೆಪಿಗೇ ಸೆಡ್ಡು ಹೊಡೆದಿದ್ದಾರೆ. ಬಿಜೆಪಿಯ ರಮೇಶ್ ಯಾಕಾಪುರ ಅವರು ವಲ್ಯಾಪುರೆಯನ್ನು ಸೋಲಿಸುತ್ತಾರಾ? ಅಥವಾ ಇವರಿಬ್ಬರ ಜಗಳದ ಲಾಭ ಬೇರೆ ಪಕ್ಷಕ್ಕೆ ಆಗುತ್ತದಾ? ಇನ್ನು ಗುಲಬರ್ಗ ಉತ್ತರದಲ್ಲಿ ಮುಸ್ಲಿಂರದ್ದೇ ದರ್ಬಾರು.
ಗುಲಬರ್ಗ ಜಿಲ್ಲೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳಿಂದ ಕಣಕ್ಕಿಳಿದಿರುವ ಅಧಿಕೃತ ಅಭ್ಯರ್ಥಿಗಳ ಪಟ್ಟಿ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ ಸಿಪಿ/ಪಕ್ಷೇತರರು/ಇತರೆ |
| 34 | ಅಫಜಲಪುರ | ದಿಲೀಪ ಪಾಟೀಲ | ಮಾಲಿಕಯ್ಯ ವಿ. ಗುತ್ತೇದಾರ | ವಿಠಲ ಹೇರೂರ | ಎಂ.ವಿ. ಪಾಟೀಲ | ಬಾಷಾ ಪಟೇಲ (ಬಿಎಸ್ಆರ್) ಗೋವಿಂದ ಭಟ್ಟ (ಪ) |
| 35 | ಜೇವರ್ಗಿ | ದೊಡ್ಡಪ್ಪಗೌಡ ಪಾಟೀಲ ನರಿಬೋಳ | ಡಾ. ಅಜಯ್ ಸಿಂಗ್ | ಕೇದಾರ ಲಿಂಗಯ್ಯ ಹಿರೇಮಠ | ಮಲ್ಲಿನಾಥ ಗೌಡ ಪಾಟೀಲ | ಬೈಲಪ್ಪ ನೆಲೋಗಿ (ಬಿಎಸ್ಆರ್) |
| 40 | ಚಿತ್ತಾಪುರ (ಎಸ್ ಸಿ) | ವಾಲ್ಮಿಕಿ ನಾಯಕ್ | ಪ್ರಿಯಾಂಕ್ ಎಂ. ಖರ್ಗೆ | ತಿಪ್ಪಣ್ಣ ಒಡೆಯರಾಜ್ | ಸಿ. ಗುರುನಾಥ್ | ವೆಂಕಟೇಶ (ಬಿಎಸ್ಆರ್) |
| 41 | ಸೇಡಂ (ಎಸ್ ಟಿ) | ರಾಜಕುಮಾರ್ ಪಿ. ತೆಲ್ಕೂರು | ಡಾ. ಶರಣಪ್ರಕಾಶ್ ಪಾಟೀಲ | ಮುಖ್ರಂ ಖಾನ್ | ವೈಜನಾಥ ಪಾಟೀಲ | *** |
| 42 | ಚಿಂಚೋಳಿ (ಎಸ್ ಸಿ) | ರಮೇಶ್ ಯಾಕಾಪುರ | ಉಮೇಶ್ ಜಿ. ಜಾಧವ್ | ಮಲ್ಲಿಕಾರ್ಜುನ ಗಾಜರೆ | ಸುನೀಲ್ ವಲ್ಯಾಪುರೆ | ಗೋಪಾಲ ಕಟ್ಟಿಮನಿ (ಬಿಎಸ್ಆರ್) |
| 43 | ಗುಲಬರ್ಗ ಗ್ರಾ. (ಎಸ್ ಸಿ) | ರೇವೂನಾಯಕ್ ಬೆಳಮಗಿ | ರಾಮಕೃಷ್ಣ ಜಿ. | ಡಿ.ಜಿ. ಸಾಗರ | ಬಾಬೂರಾವ್ ಚವ್ಹಾಣ್ | ಬಾಬು ಹೊನ್ನಾ ನಾಯಕ (ಬಿಎಸ್ಆರ್) |
| 44 | ಗುಲಬರ್ಗ ದಕ್ಷಿಣ | ದತ್ತಾತ್ರೆಯ ಪಾಟೀಲ ರೇವೂರ | ಕೈಲಾಸನಾಥ್ ಪಾಟೀಲ | ಶಶೀಲ್ ನಮೋಶಿ | ಎಸ್.ಕೆ. ಕಾಂತ | ಅಮೃತರಾವ್ ಪಾಟೀಲ (ಬಿಎಸ್ಆರ್) |
| 45 | ಗುಲಬರ್ಗ ಉತ್ತರ | ರಾಜಗೋಪಾಲ ರೆಡ್ಡಿ | ಖಮರುಲ್ ಇಸ್ಲಾಂ | ಸೈಯದ್ ಜಾಫರ್ ಹುಸೇನ್ | ನಾಸಿರ್ ಹುಸೇನ್ | ಕಲ್ಯಾಣರಾವ್ ಅಂಬಲಗಿ (ಬಿಎಸ್ಆರ್) |
| 46 | ಆಳಂದ | ಬಸವರಾಜ್ ಪವಾಡ ಶೆಟ್ಟಿ | ಸಿದ್ದಣ್ಣ ಮಾಸ್ತರ್ ಶೇಗಜಿ | ಸುಭಾಷ್ ಗುತ್ತೇದಾರ | ಬಿ.ಆರ್. ಪಾಟೀಲ | ಉದಯಕುಮಾರ್ ಬಿರಾದಾರ್ (ಬಿಎಸ್ಆರ್) |
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications