ದಾವಣಗೆರೆ ಅಖಾಡದಲ್ಲಿರುವ ಅಂತಿಮ ಅಭ್ಯರ್ಥಿಗಳು

ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ, ಉತ್ತರ ಕ್ಷೇತ್ರದಿಂದ ಶಾಮನೂರು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಿಂದ ಸಚಿವ ಎಸ್.ಎ.ರವೀಂದ್ರನಾಥ್ ಮರು ಆಯ್ಕೆ ಬಯಸಿದ್ದಾರೆ.
ಹೊನ್ನಾಳಿ ಕ್ಷೇತ್ರದಿಂದ ಯಡಿಯೂರಪ್ಪ ಕಟ್ಟಾ ಬೆಂಬಲಿಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹರಪನಹಳ್ಳಿ ಕ್ಷೇತ್ರದಿಂದ ಮಾಜಿ ಸಚಿವ ಕರುಣಾಕರ ರೆಡ್ಡಿ, ಜಗಳೂರು ಕ್ಷೇತ್ರದಿಂದ ಎಸ್.ವಿ.ರಾಮಚಂದ್ರ, ಕಾಂಗ್ರೆಸ್ ಟಿಕೆಟ್ ವಂಚಿತ ಸೈಯದ್ ಸೈಫುಲ್ಲಾ ದಾವಣಗೆರೆ ದಕ್ಷಿಣ ಕೇತ್ರದಿಂದ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ.
[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
2008ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. ಆದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ದಾವಣಗೆರೆ ಮಹಾನಗೆ ಪಾಲಿಕೆಯಲ್ಲಿ ಒಂದು ಸ್ಥಾನವನ್ನು ಗಳಿಸದೇ ಬಿಜೆಪಿ ಮುಖಭಂಗ ಅನುಭವಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಜಿಲ್ಲೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಹೀಗಿದೆ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ ಸಿಪಿ/ಪಕ್ಷೇತರರು /ಇತರೆ |
| 103 | ಜಗಳೂರು (ಎಸ್.ಟಿ) | ಡಾ.ಬಿ.ಅರುಣ್ ಕುಮಾರ್ | ರಾಜೇಶ್ ಎಚ್.ಪಿ | ಡಾ.ಜಿ.ರಂಗಯ್ಯ | ಎಸ್.ವಿ.ರಾಮಚಂದ್ರ | ಎಚ್.ರಮೇಶ್ (ಬಿಎಸ್ಆರ್) |
| 104 | ಹರಪನಹಳ್ಳಿ | ಕರುಣಾಕರ ರೆಡ್ಡಿ | ಎಂ.ಪಿ.ರವೀಂದ್ರ | ಎ.ಜಿ.ವಿಶ್ವನಾಥ್ | ಕೊಟ್ರೇಶ್ | ಸಿರಾಜ್ ಶೇಖ್ (ಬಿಎಸ್ಆರ್) |
| 105 | ಹರಿಹರ | ರಾಮಪ್ಪ. ಎಸ್ | ಎಸ್.ಎಂ.ವಿರೇಶ್ | ಎಚ್.ಎಸ್.ಶಿವಶಂಕರ್ | ಬಿ.ಪಿ.ಹರೀಶ್ | ಎಸ್.ಕೆ.ಬಸವರಾಜ್ (ಬಿಎಸ್ಆರ್) |
| 106 | ದಾವಣಗೆರೆ ಉತ್ತರ | ಎಸ್.ಎ.ರವೀಂದ್ರನಾಥ್ | ಎಸ್.ಎಸ್.ಮಲ್ಲಿಕಾರ್ಜುನ್ | ಟಿ.ದಾಸಕರಿಯಪ್ಪ | **** | ಎಂ.ಬಸವರಾಜಯ್ಯ (ಬಿಎಸ್ಆರ್) |
| 107 | ದಾವಣಗೆರೆ ದಕ್ಷಿಣ | ಬಿ.ಲೋಕೇಶ್ | ಶಾಮನೂರು ಶಿವಶಂಕರಪ್ಪ | ಸೈಯದ್ ಸೈಫುಲ್ಲಾ | ಬಿ.ಎಂ.ಸತೀಶ್ | ಸಫೀಕ್ ಪಂಡಿತ್(ಬಿಎಸ್ಆರ್) |
| 108 | ಮಾಯಕೊಂಡ (ಎಸ್ ಸಿ) | ಬಸವರಾಜ್ ನಾಯಕ್ | ಕೆ.ಶಿವಮೂರ್ತಿ | ಕೆ.ಜಿ.ಆರ್.ನಾಯ್ಕ್ | ಪ್ರೊ.ಲಿಂಗಣ್ಣ | ಎನ್.ಶ್ರೀನಿವಾಸ ನಾಯಕ್(ಬಿಎಸ್ಆರ್) |
| 109 | ಚನ್ನಗಿರಿ | ಎಚ್.ಎಸ್.ಶಿವಕುಮಾರ್ | ವಡ್ನಾಳ್ ರಾಜಣ್ಣ | ಹೊದಿಗೆರೆ ರಮೇಶ್ | ಮಾಡಾಳ್ ವಿರೂಪಾಕ್ಷಪ್ಪ | ಹಮೀದ್ ಅಹ್ಮದ್ (ಬಿಎಸ್ಆರ್ ಕಾಂಗ್ರೆಸ್) |
| 110 | ಹೊನ್ನಾಳಿ | ಶಾಂತನಗೌಡ ಡಿ.ಜಿ. | ಡಾ.ಎಚ್.ಪಿ.ರಾಜಕುಮಾರ್ | ಎಂ.ಆರ್.ಮಹೇಶ್ | ಎಂ.ಪಿ.ರೇಣುಕಾಚಾರ್ಯ | ಕೆ.ರೇಣುಕಾಚಾರಿ (ಬಿಎಸ್ಆರ್ ಕಾಂಗ್ರೆಸ್) |












Click it and Unblock the Notifications