ಹೊಸಪೇಟೆ ಕ್ಷೇತ್ರ ಪರಿಚಯ: ಕಾಂಗ್ರೆಸ್ಸಿಗೆ ಗೆಲುವಿನ 'ಆನಂದ' ಸಿಗುವುದೇ?
ಹೊಸಪೇಟೆ ಕ್ಷೇತ್ರದ ಶಾಸಕ ಆನಂದ್ ಸಿಂಗ್. ಮೂಲತಃ ಗಣಿ ಉದ್ಯಮಿ. ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಜನಪರ ಕಾಳಜಿ ಹೊಂದಿರುವ ಆನಂದ್ ಸಿಂಗ್ ಅವರ ಬೆಂಬಲಕ್ಕೆ ಕ್ಷೇತ್ರದ ಜನತೆ ಇರುತ್ತಾರೆ ಎಂಬ ನಿರೀಕ್ಷೆಯಿದೆ.
ಇಲ್ಲಿನ ಶಾಸಕ ಆನಂದ್ ಸಿಂಗ್. ಮೂಲತಃ ಗಣಿ ಉದ್ಯಮಿ. ಇವರ ಪಕ್ಷ ಬಿಜೆಪಿ. ಈ ಹಿಂದಿನ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದು ಬಂದಿದ್ದಾರೆ. ಜನಪರ ಕಾಳಜಿ ಇರುವಂಥವರು, ಜನರೊಂದಿಗೆ ಬೆರೆಯುವಂಥವರು ಎಂಬ ಅಭಿಪ್ರಾಯ ಇವರ ಮೇಲಿರುವುದಿರಿಂದ ಕ್ಷೇತ್ರದ ಜನತೆಗೆ ಈಗಲೂ ಇವರ ಬೆಂಬಲಕ್ಕಿದ್ದಾರೆಂದು ಹೇಳಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ರೆಡ್ಡಿಗಳ ಪ್ರಭಾವ ಕುಗ್ಗಿದ ವೇಳೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಹೇಗಿದ್ದರೂ, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಂಥಾ ವರ್ಚಸ್ಸಿಲ್ಲದಿರುವುದರಿಂದ ಈ ಬಾರಿಯೂ ಈ ಕ್ಷೇತ್ರ ಆನಂದ್ ಸಿಂಗ್ ಅವರ ಗೆಲುವಿನ ಮೂಲಕ ಬಿಜೆಪಿ ಪಾಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಬಾರಿ ಇವರು ಗೆದ್ದರೆ, ಅದು ಅವರ ಪಾಲಿಗೆ ಹ್ಯಾಟ್ರಿಕ್ ಗೆಲುವಾಗಲಿದೆ.












Click it and Unblock the Notifications