ಕ್ಷೇತ್ರ ಪರಿಚಯ : ಶಹಪುರದಲ್ಲಿ ಯಾರಿಗೆ ಗೆಲುವು?
ಈ ಹಿಂದೆ ಕಲಬುರಗಿ ಜಿಲ್ಲೆಯಲ್ಲಿದ್ದ ಶಹಾಪುರ ಈಗ ಯಾದಗಿರಿ ಜಿಲ್ಲೆಗೆ ಸೇರಿದೆ. ಕ್ಷೇತ್ರದ ಹಿಂದಿನ ಹೆಸರು 'ಸಗರ'. ಕೃಷ್ಣ ಮತ್ತು ಭೀಮಾ ನದಿಗಳ ನಡುವಿನ ಜೀವರಗಿ, ಶಹಪುರ, ಸುರಪುರ ತಾಲೂಕು ಪ್ರದೇಶವನ್ನು 'ಸಗರನಾಡು' ಎಂದು ಕರೆಯಲಾಗುತ್ತದೆ.
ಕೃಷ್ಣಾ ಮತ್ತು ಭೀಮಾ ನದಿಗಳ ನಡುವಿನ ಪಟ್ಟಣ ಶಹಪುರ. ಶಹಪುರದ ಕೋಟೆ ಪ್ರಸಿದ್ಧ ಪ್ರವಾಸಿ ಸ್ಥಳ. ಪರ್ಶಿಯನ್ ಭಾಷೆಯ ಶಾಸನಗಳನ್ನು ಈ ಕೋಟೆಯಲ್ಲಿ ಕಾಣಬಹುದಾಗಿದೆ. ಕ್ರಿ.ಶ. 950-1150ರ ನಡುವೆ ಕೋಟೆಯನ್ನು ನಿರ್ಮಿಸಲಾಗಿದೆ ಎನ್ನುತ್ತದೆ ಇತಿಹಾಸ. ಕೋಟೆಯಲ್ಲಿ 7 ಮಹಾದ್ವಾರಗಳು, 7 ಉಕ್ಕಿನ ತೋಪುಗಳನ್ನು ಕಾಣಬಹುದಾಗಿದೆ.
ಕಳೆದ ಮೂರು ದಶಕದಿಂದಾಗಿ ದರ್ಶನಾಪುರ ಮತ್ತು ಶಿರವಾಳ ಕುಟುಂಬದವರು ಶಹಾಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾ ಬರುತ್ತಿದ್ದಾರೆ. ಕೆಜೆಪಿಯ ಗುರುಪಾಟೀಲ ಕ್ಷೇತ್ರದ ಹಾಲಿ ಶಾಸಕರು.

ಕಳೆದ ಚುನಾವಣೆ ಫಲಿತಾಂಶ : 2013ರ ಚುನಾವಣೆಯಲ್ಲಿ ಕೆಜೆಪಿಯ ಗುರು ಪಾಟೀಲ್ 54,924 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಶರಣಬಸಪ್ಪ ದರ್ಶನಾಪುರ ಅವರು 49,128 ಮತ, ಜೆಡಿಎಸ್‌ನ ಶರಣಪ್ಪ ಸಲಾದಪುರ ಅವರು 12,159 ಮತಗಳನ್ನು ಪಡೆದಿದ್ದರು.
2018ರ ಚುನಾವಣೆಗೆ ನರಸಿಂಹ ನಾಯ್ಕ್ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಅಮೀನ್ ರೆಡ್ಡಿ, ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯ್ಕ್ ಅವರು ಅಭ್ಯರ್ಥಿಯಾಗಿದ್ದಾರೆ.












Click it and Unblock the Notifications