ನಾಗಠಾಣ ಕ್ಷೇತ್ರ: ಮೀಸಲು ಕ್ಷೇತ್ರದಲ್ಲಿ ಮುಸುಕಿನ ಹೋರಾಟ
Recommended Video

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿ ಗುರುತಿಸಿಕೊಂಡ ನಾಗಠಾಣ, ವಿಜಯಪುರ ಜಿಲ್ಲೆಯ ಒಂದು ಪ್ರಮುಖ ವಿಧಾನಸಭಾ ಕ್ಷೇತ್ರ.
ಐತಿಹಾಸಿಕವಾಗಿಯೂ ಈ ಸ್ಥಳ ಹಲವು ಮಹತ್ವಗಳನ್ನು ಹೊಂದಿದೆ. ಬೀರಸಿದ್ದೇಶ್ವರ, ಉದಯೇಶ್ವರ, ಮಲ್ಲಿಕಾರ್ಜುನ ಸ್ವಾಮಿ ಎಂಬ ಮೂರು ದೇವಾಲಯಗಳು ಇಲ್ಲಿ ಪ್ರಸಿದ್ಧಿ ಪಡೆದಿವೆ. ಬೀರಸಿದ್ದೇಶ್ವರ ಮತ್ತು ಪರಮಾನಂದ ಜಾತ್ರೆಗಳನ್ನು ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಆಚರಿಸಲಾಗುತ್ತದೆ.
ವಿಜಯಪುರ-ಇಂಡಿ ರಸ್ತೆಯಲ್ಲಿ ಈ ಊರು ನೆಲೆಸಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವುದರಿಂದ ಈ ಊರಿನ ಮೇಲೆ ಮರಾಠಿ ಪ್ರಭಾವ ಸಾಕಷ್ಟಿದೆ.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ ಈ ಕ್ಷೇತ್ರವನ್ನು 2013 ರಲ್ಲಿ ಕಾಂಗ್ರೆಸ್ ನ ಪ್ರೊ.ರಾಜು ಆಲಗೂರು ಪ್ರತಿನಿಧಿಸಿದ್ದರು. ಈ ಬಾರಿಯೂ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ. ಕಳೆದ ಚುನಾವಣೆಯಲ್ಲಿ ರಾಜು ಅವರ ವಿರುದ್ಧ ಸೋತಿದ್ದ ಜೆಡಿಎಸ್ ನ ಪುಲಸಿಂಗ್ ಚೌಹಾಣ್ ಕೂಡ ಮರಳಿ ಯತ್ನ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರು ಎಂಬುದು ಇನ್ನು ತಿಳಿಯಬೇಕಷ್ಟೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ್ 45570 ಮತ ಪಡೆದಿದ್ದರೆ ಜೆಡಿಎಸ್ ನ ಚೌಹಾಣ್ 44903 ಮತ ಪಡೆದು ರೋಚಕ ಸೋಲುಂಡಿದ್ದರು.












Click it and Unblock the Notifications