ಇಬ್ಬರು ಉಪಮುಖ್ಯಮಂತ್ರಿ ನೇಮಕ ಎಚ್ ಡಿಕೆ ಗೆ ಸುತಾರಾಂ ಇಷ್ಟವಿಲ್ಲ!

ಬೆಂಗಳೂರು, ಮೆ 22: ಜಾತಿ ಓಲೈಕೆಗಾಗಿ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡುವುದು ರಾಜಕೀಯದ ಹೊಸ ಟ್ರೆಂಡ್ ಆಗಿದೆ. ಕರ್ನಾಟಕದ ಹೊಸ ಸರ್ಕಾರದಲ್ಲೂ ಕಾಂಗ್ರೆಸ್, ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳ ಬೇಡಿಕೆಯನ್ನಿಟ್ಟಿದ್ದು, ಇದಕ್ಕೆ ಜೆಡಿಎಸ್ ಒಲವು ತೋರಿಲ್ಲ.

ಮೊದಲಿಗೆ ಬೇಷರತ್ ಬೆಂಬಲ ಎಂದಿದ್ದ ಕಾಂಗ್ರೆಸ್ ಇದೀಗ ಜೆಡಿಎಸ್ ಮುಂದೆ ಒಂದೊಂದೇ ಷರತ್ತನ್ನಿಡುತ್ತಿದೆ. ಓರ್ವ ದಲಿತರು ಮತ್ತು ಓರ್ವ ಲಿಂಗಾಯತ ಶಾಸಕರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನದ್ದು. ಆದರೆ ಇದಕ್ಕೆ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಮಣೆ ಹಾಕುವಂತೆ ಕಾಣುತ್ತಿಲ್ಲ.

JD(S) still not in favour of two Congress Deputy CMs in Karnataka

ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಮೇ 23(ಬುಧವಾರ)ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮೇ 15 ರಂದು ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ 38 ಸ್ಥಾನ ಗೆದ್ದಿದ್ದ ಜೆಡಿಎಸ್ ಗೆ ಕಾಂಗ್ರೆಸ್ ನ 78 ಶಾಸಕರು ಮತ್ತು ಇತರ 2 ಶಾಸಕರು ಬೆಂಬಲ ನೀಡಿದ್ದರಿಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಆಡಳಿತ ನಡೆಸಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+