India
  • search
  • Live TV
keyboard_backspace

ಕೋವಿಡ್-19 ಲಸಿಕೆ ಕುರಿತು FAQs, ಡಾ. ವಿಕೆ ಪಾಲ್ ಸಲಹೆಗಳು

Google Oneindia Kannada News

* ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?

* ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ? ಹಾಲುಣಿಸುವ ತಾಯಂದಿರ ಕಥೆ ಏನು?

* ಲಸಿಕೆ ಪಡೆದ ನಂತರ ನನ್ನ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆಯೇ?

* ಲಸಿಕೆಯ ಡೋಸ್‌ಗಳನ್ನು ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯವೇ?

* ನಾನು ಕೋವಿಡ್ ಸೋಂಕಿಗೆ ಒಳಗಾದರೆ ಎಷ್ಟು ದಿನಗಳ ನಂತರ ನಾನು ಲಸಿಕೆ ಪಡೆಯಬಹುದು?

ಇವು ಕೋವಿಡ್ ಲಸಿಕೆಯ ಬಗ್ಗೆ ಜನರು ಆಗಾಗ್ಗೆ ಕೇಳುವ ಕೆಲವು ಪ್ರಶ್ನೆಗಳು. ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಅವರು ಡಿಡಿ ನ್ಯೂಸ್‌ ವಾಹಿನಿಯ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಲಸಿಕೆಗಳ ಬಗ್ಗೆ ಜನರು ಹೊಂದಿರುವ ವಿವಿಧ ಅನುಮಾನಗಳನ್ನು ಪರಿಹರಿಸಿದ್ದಾರೆ.

ಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆ ಕೋವ್ಯಾಕ್ಸಿನ್, ಸ್ಪುಟ್ನಿಕ್ ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಸೂಚನೆ

ಸರಿಯಾದ ಸಂಗತಿ ಮತ್ತು ಮಾಹಿತಿ ತಿಳಿಯಲು ಹಾಗೂ ಸೋಂಕಿನಿಂದ ರಕ್ಷಿಸಿಕೊಳ್ಳಲು ಮುಂದೆ ಓದಿ... ಕೇಂದ್ರ ಆರೋಗ್ಯ ಸಚಿವಾಲಯದ ʻಎಫ್‌ಎಕ್ಯೂʼಗಳಲ್ಲಿ ಈ ಪ್ರಶ್ನೆಗಳ ಜೊತೆಗೆ ಮತ್ತು ಮತ್ತಷ್ಟು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಓದಲು ಇಲ್ಲಿ ಕ್ಲಿಕ್‌ ಮಾಡಿ:

 ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?

ಅಲರ್ಜಿ ಹೊಂದಿರುವ ಜನರು ಲಸಿಕೆ ಪಡೆಯಬಹುದೇ?

ಡಾ. ಪಾಲ್: ಯಾರಿಗಾದರೂ ಗಂಭೀರವಾದ ಅಲರ್ಜಿ ಸಮಸ್ಯೆ ಇದ್ದರೆ, ಅಂಥವರು ವೈದ್ಯಕೀಯ ಸಲಹೆಯ ನಂತರವೇ ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆದರೆ, ಇದು ಸಾಮಾನ್ಯ ಶೀತ, ಚರ್ಮದ ಅಲರ್ಜಿ ಮುಂತಾದ ಸಣ್ಣ ಅಲರ್ಜಿಗಳ ಪ್ರಶ್ನೆಯಾಗಿದ್ದರೆ, ಲಸಿಕೆಯನ್ನು ತೆಗೆದುಕೊಳ್ಳಲು ಹಿಂಜರಿಯಬಾರದು.

ಡಾ. ಗುಲೇರಿಯಾ: ಅಲರ್ಜಿಗಾಗಿ ಮೊದಲಿನಿಂದಲೂ ಔಷಧ ತೆಗೆದುಕೊಳ್ಳುತ್ತಿರುವವರು ಅವುಗಳನ್ನು ನಿಲ್ಲಿಸಬಾರದು, ಅವರು ತಮ್ಮನ್ನು ಲಸಿಕೆ ಪಡೆಯುವಾಗ ನಿಯಮಿತವಾಗಿ ಔಷಧ ಸೇವನೆ ಮುಂದುವರಿಸಬೇಕು. ಲಸಿಕೆಯಿಂದಾಗಿ ಉದ್ಭವಿಸುವ ಅಲರ್ಜಿಗಳ ನಿರ್ವಹಣೆಗಾಗಿ ಎಲ್ಲಾ ಲಸಿಕೆ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ನೀವು ತೀವ್ರ ಅಲರ್ಜಿಯನ್ನು ಹೊಂದಿದ್ದರೂ, ಔಷಧ ತೆಗೆದುಕೊಳ್ಳುವುದನ್ನು ಮುಂದುವರಿಸಿ ಮತ್ತು ಹೋಗಿ ಲಸಿಕೆ ಹಾಕಿಸಿಕೊಳ್ಳಿ ಎಂಬುದು ನಮ್ಮ ಸಲಹೆ.

 ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?

ಗರ್ಭಿಣಿಯರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?

ಡಾ. ಪಾಲ್: ಆರೋಗ್ಯ ಇಲಾಖೆಯ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಗರ್ಭಿಣಿಯರಿಗೆ ಲಸಿಕೆನೀಡಬಾರದು. ಏಕೆಂದರೆ, ಲಸಿಕೆ ಪ್ರಯೋಗಗಳಿಂದ ಪ್ರಸ್ತುತ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಗರ್ಭಿಣಿ ಮಹಿಳೆಯರಿಗೆ ಲಸಿಕೆಯನ್ನು ಶಿಫಾರಸು ಮಾಡಬಹುದೇ ಎಂಬ ಬಗ್ಗೆ ವೈದ್ಯರು ಮತ್ತು ವೈಜ್ಞಾನಿಕ ಸಮುದಾಯವು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಹೊಸ ವೈಜ್ಞಾನಿಕ ಮಾಹಿತಿಗಳ ಆಧಾರದ ಮೇಲೆ ಕೆಲವೇ ದಿನಗಳಲ್ಲಿ ಭಾರತ ಸರಕಾರವು ಈ ಬಗ್ಗೆ ಸ್ಪಷ್ಟತೆ ಒದಗಿಸಲಿದೆ.

ಅನೇಕ ಕೋವಿಡ್-19 ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವೆಂದು ಕಂಡುಬಂದಿವೆ; ನಮ್ಮ ಎರಡು ಲಸಿಕೆಗಳಿಗೂ ಈ ಮಾರ್ಗವನ್ನು ಮುಕ್ತಗೊಳಿಸಬೇಕು ಎಂಬುದು ನಮ್ಮ ಭಾವನೆ. ನಾವು ಸಾರ್ವಜನಿಕರನ್ನು ಸ್ವಲ್ಪ ಹೆಚ್ಚು ತಾಳ್ಮೆಯಿಂದಿರಿ ಎಂದು ವಿನಂತಿಸುತ್ತೇವೆ, ಏಕೆಂದರೆ, ಈಗಿನ ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಸುರಕ್ಷತಾ ಕಾಳಜಿಗಳಿಂದಾಗಿ ಗರ್ಭಿಣಿಯರನ್ನು ಮಹಿಳೆಯರನ್ನು ಆರಂಭಿಕ ಪ್ರಯೋಗಗಳಲ್ಲಿ ಬಳಸಿಕೊಂಡಿಲ್ಲ.

Corona ಉಸಿರಾಟದ ತೊಂದರೆಯನ್ನು ಮನೆಯಲ್ಲಿಯೆ ತಡೆಗಟ್ಟುವುದು ಹೇಗೆ?Corona ಉಸಿರಾಟದ ತೊಂದರೆಯನ್ನು ಮನೆಯಲ್ಲಿಯೆ ತಡೆಗಟ್ಟುವುದು ಹೇಗೆ?

 ಹಾಲುಣಿಸುವ ತಾಯಂದಿರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?

ಹಾಲುಣಿಸುವ ತಾಯಂದಿರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದೇ?

ಡಾ. ಗುಲೇರಿಯಾ: ಅನೇಕ ದೇಶಗಳು ಗರ್ಭಿಣಿಯರಿಗೆ ಲಸಿಕೆಯನ್ನು ಪ್ರಾರಂಭಿಸಿವೆ. ಅಮೆರಿಕದ ʻಎಫ್‌ಡಿಎʼ ಫೈಜರ್ ಮತ್ತು ಮಾಡರ್ನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ಗೆ ಸಂಬಂಧಿಸಿದ ದತ್ತಾಂಶವೂ ಶೀಘ್ರದಲ್ಲೇ ಹೊರಬೀಳಲಿದೆ. ಈಗಾಗಲೇ ಕೆಲವೊಂದು ದತ್ತಾಂಶಗಳು ಲಭ್ಯವಿದ್ದು, ಕೆಲವೇ ದಿನಗಳಲ್ಲಿ ಭಾರತದಲ್ಲಿಯೂ ಗರ್ಭಿಣಿಯರಿಗೆ ಲಸಿಕೆ ಹಾಕಲು ಅಗತ್ಯವಿರುವ ಸಂಪೂರ್ಣ ದತ್ತಾಂಶವನ್ನು ಪಡೆಯಲು ಮತ್ತು ಅನುಮೋದಿಸಲು ಸಾಧ್ಯವಾಗಲಿದೆ ಎಂದು ನಾವು ಆಶಿಸುತ್ತೇವೆ.

ಡಾ. ಪಾಲ್: ಈ ಬಗ್ಗೆ ಒಂದು ಸ್ಪಷ್ಟ ಮಾರ್ಗಸೂಚಿ ಇದೆ, ಹಾಲುಣಿಸುವ ತಾಯಂದಿರಿಗೆ ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಯಾವುದೇ ಭಯದ ಅಗತ್ಯವಿಲ್ಲ. ಲಸಿಕೆಯ ಮೊದಲು ಅಥವಾ ನಂತರ ಸ್ತನ್ಯಪಾನವನ್ನು ನಿಲ್ಲಿಸುವ ಅಥವಾ ವಿರಮಿಸುವ ಅಗತ್ಯವಿಲ್ಲ.

 ಲಸಿಕೆ ಪಡೆದ ನಂತರ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳು ಉತ್ಪತ್ತಿಯಾಗುತ್ತಾ?

ಲಸಿಕೆ ಪಡೆದ ನಂತರ ದೇಹದಲ್ಲಿ ಸಾಕಷ್ಟು ಪ್ರತಿಕಾಯಗಳು ಉತ್ಪತ್ತಿಯಾಗುತ್ತಾ?

ಡಾ. ಗುಲೇರಿಯಾ: ಲಸಿಕೆಗಳ ಪರಿಣಾಮಕಾರಿತ್ವವನ್ನು ನಾವು ಕೇವಲ ಪ್ರತಿಕಾಯಗಳು ಉತ್ಪತ್ತಿಯಾಗುವ ಪ್ರಮಾಣದಿಂದ ಮಾತ್ರ ನಿರ್ಣಯಿಸಬಾರದು ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಲಸಿಕೆಗಳು ಅನೇಕ ರೀತಿಯ ರಕ್ಷಣೆಯನ್ನು ನೀಡುತ್ತವೆ - ಉದಾಹರಣೆಗೆ ಪ್ರತಿಕಾಯಗಳ ಮೂಲಕ, ಜೀವಕೋಶ-ಮಧ್ಯಸ್ಥಿಕೆಯ ರೋಗನಿರೋಧಕತೆ ಮೂಲಕ ಮತ್ತು ಸ್ಮರಣೆ ಜೀವಕೋಶಗಳ ಮೂಲಕ (ಇದರಿಂದ ನಾವು ಸೋಂಕಿಗೆ ಒಳಗಾದಾಗ ಹೆಚ್ಚು ಪ್ರತಿಕಾಯಗಳು ಉತ್ಪಾದನೆಯಾಗುತ್ತವೆ) ಹೀಗೆ. ಅಲ್ಲದೆ, ಇಲ್ಲಿಯವರೆಗೆ ಬಂದಿರುವ ಎಲ್ಲಾ ಪರಿಣಾಮಕಾರಿತ್ವದ ಫಲಿತಾಂಶಗಳು ಪ್ರಾಯೋಗಿಕ ಅಧ್ಯಯನಗಳನ್ನು ಆಧರಿಸಿವೆ, ಅಲ್ಲಿ ಪ್ರತಿ ಪ್ರಯೋಗದ ಅಧ್ಯಯನ ವಿನ್ಯಾಸವು ಸ್ವಲ್ಪ ಭಿನ್ನವಾಗಿದೆ.

ಇಲ್ಲಿಯವರೆಗೆ ಲಭ್ಯವಿರುವ ದತ್ತಾಂಶವು ಎಲ್ಲಾ ಲಸಿಕೆಗಳ - ಕೋವಾಕ್ಸಿನ್, ಕೋವಿಶೀಲ್ಡ್ ಅಥವಾ ಸ್ಪುಟ್ನಿಕ್ ವಿ - ಪರಿಣಾಮಕಾರಿತ್ವವು ಹೆಚ್ಚು ಕಡಿಮೆ ಸಮಾನವಾಗಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಈ ಲಸಿಕೆಯನ್ನು ತೆಗೆದುಕೊಳ್ಳಿ ಅಥವಾ ಆ ಲಸಿಕೆಯನ್ನು ತೆಗೆದುಕೊಳ್ಳಿ ಎಂದು ನಾವು ಹೇಳಿದರೆ ತಪ್ಪಾಗುತ್ತದೆ, ನಿಮ್ಮ ಪ್ರದೇಶದಲ್ಲಿ ಯಾವ ಲಸಿಕೆ ಲಭ್ಯವಿದ್ದರೂ ದಯವಿಟ್ಟು ಅದನ್ನು ತೆಗೆದುಕೊಳ್ಳಿ. ಇದರಿಂದ ನೀವು ಮತ್ತು ನಿಮ್ಮ ಕುಟುಂಬ ಸುರಕ್ಷಿತವಾಗಿರುತ್ತೀರಿ.

ಕೋವಿಡ್ 19 ಆತಂಕದ ನಡುವೆ ದಂತ ಆರೈಕೆ ಅತಿ ಮುಖ್ಯಕೋವಿಡ್ 19 ಆತಂಕದ ನಡುವೆ ದಂತ ಆರೈಕೆ ಅತಿ ಮುಖ್ಯ

 ಪ್ರತಿಕಾಯ ಪರೀಕ್ಷೆ ಅಗತ್ಯವಿಲ್ಲ

ಪ್ರತಿಕಾಯ ಪರೀಕ್ಷೆ ಅಗತ್ಯವಿಲ್ಲ

ಡಾ. ಪಾಲ್: ಲಸಿಕೆಯ ನಂತರ ಪ್ರತಿಕಾಯ ಪರೀಕ್ಷೆಯನ್ನು ಮಾಡಿಸಲು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಕೇವಲ ಪ್ರತಿಕಾಯಗಳು ಮಾತ್ರ ವ್ಯಕ್ತಿಯ ರೋಗನಿರೋಧಕತೆಯನ್ನು ಸೂಚಿಸುವುದಿಲ್ಲ. ಈ ಕಾರಣಕ್ಕಾಗಿ ಇಂತಹ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ. ಅಲ್ಲದೆ, ಟಿ-ಕೋಶಗಳು ಅಥವಾ ಸ್ಮರಣೆ ಕೋಶಗಳೂ ಸಹ ದೇಹದ ಪ್ರತಿರೋಧಕ ಶಕ್ತಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಾವು ಲಸಿಕೆಯನ್ನು ಪಡೆದಾಗ ಇವು ಕೆಲವು ಬದಲಾವಣೆಗಳಿಗೆ ಒಳಗಾಗುತ್ತವೆ, ಅವು ಬಲಗೊಳ್ಳುತ್ತವೆ ಮತ್ತು ಪ್ರತಿರೋಧ ಶಕ್ತಿಯನ್ನು ಪಡೆಯುತ್ತವೆ.

ಆದರೆ, ಪ್ರತಿಕಾಯ ಪರೀಕ್ಷೆ ವೇಳೆ ಟಿ-ಜೀವಕೋಶಗಳು ಪತ್ತೆವಾಗುವುದಿಲ್ಲ. ಏಕೆಂದರೆ ಇವು ಇರುವುದು ಮೂಳೆ ಮಜ್ಜೆಯಲ್ಲಿ. ಆದ್ದರಿಂದ, ಲಸಿಕೆ ಪಡೆಯುವ ಮೊದಲು ಅಥವಾ ನಂತರ ಪ್ರತಿಕಾಯ ಪರೀಕ್ಷೆಗಳನ್ನು ಮಾಡಿಸುವ ಪ್ರವೃತ್ತಿ ಬೇಡ. ಲಭ್ಯವಿರುವ ಲಸಿಕೆಯನ್ನು ತೆಗೆದುಕೊಳ್ಳಿ, ಸರಿಯಾದ ಸಮಯದಲ್ಲಿ ಎರಡೂ ಡೋಸ್‌ಗಳನ್ನು ತೆಗೆದುಕೊಳ್ಳಿ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಿ ಎಂಬುದು ನಮ್ಮ ಮನವಿ. ಅಷ್ಟೇ ಅಲ್ಲ, ಕೋವಿಡ್-19 ಸೋಂಕಿಗೆ ಒಳಗಾಗದವರಿಗೆ ಲಸಿಕೆಯ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದಲೂ ಜನರು ಹೊರಬರಬೇಕು.

 ಲಸಿಕೆ ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುತ್ತದೆಯೆ?

ಲಸಿಕೆ ತೆಗೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುತ್ತದೆಯೆ?

ಡಾ. ಪಾಲ್: ವಿಶೇಷವಾಗಿ ʻಆಸ್ಟ್ರಾ-ಜೆನೆಕಾʼ ಲಸಿಕೆಗೆ ಸಂಬಂಧಿಸಿದಂತೆ ಇಂತಹ ಸಮಸ್ಯೆಯ ಕೆಲವು ಪ್ರಕರಣಗಳು ಗಮನ ಸೆಳೆದಿವೆ. ಈ ಸಮಸ್ಯೆ ಯುರೋಪಿನಲ್ಲಿ, ಅದರಲ್ಲೂ ಕೊಂಚ ಮಟ್ಟಿಗೆ ಯುವ ಜನರಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಅವರ ಜೀವನಶೈಲಿ, ದೇಹ ಮತ್ತು ಆನುವಂಶಿಕ ರಚನೆ ಇದಕ್ಕೆ ಕಾರಣ. ಆದರೆ, ನಾವು ಭಾರತದಲ್ಲಿ ಈ ದತ್ತಾಂಶವನ್ನು ವ್ಯವಸ್ಥಿತವಾಗಿ ಪರಿಶೀಲಿಸಿದ್ದೇವೆ. ಅಂತಹ ರಕ್ತ ಹೆಪ್ಪುಗಟ್ಟುವ ಘಟನೆಗಳು ಇಲ್ಲಿ ಬಹುತೇಕ ನಗಣ್ಯವಾಗಿವೆ. ಅದರ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲವೆಂಬ ಭರವಸೆಯನ್ನು ನಾನು ನಿಮಗೆ ನೀಡಲು ಬಯಸುತ್ತೇನೆ. ಯುರೋಪಿಯನ್ ದೇಶಗಳಲ್ಲಿ, ಈ ಸಮಸ್ಯೆ ನಮ್ಮ ದೇಶಕ್ಕಿಂತಲೂ ಸುಮಾರು 30 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ.

ಡಾ. ಗುಲೇರಿಯಾ: ಅಮೆರಿಕ ಮತ್ತು ಯುರೋಪಿಯನ್ ಜನರಿಗೆ ಹೋಲಿಸಿದರೆ ಶಸ್ತ್ರಚಿಕಿತ್ಸೆಯ ನಂತರವೂ ಭಾರತೀಯರಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಎಂದು ಈ ಮೊದಲೇ ಕಂಡು ಬಂದಿದೆ. ವ್ಯಾಕ್ಸಿನ್ ಪ್ರೇರಿತ ʻಥ್ರಾಂಬೋಸಿಸ್ʼ ಅಥವಾ ʻಥ್ರಾಂಬೋಸೈಟೊಪೆನಿಯಾʼ ಎಂದು ಹೆಸರಿಸಲಾದ ಈ ಅಡ್ಡ ಪರಿಣಾಮವು ಭಾರತದಲ್ಲಿ ಬಹಳ ವಿರಳವಾಗಿದ್ದು, ಭಾರತದಲ್ಲಿ ಇದರ ಪ್ರಮಾಣ ಯುರೋಪ್‌ಗಿಂತ ಕಡಿಮೆ ಪ್ರಮಾಣದಲ್ಲಿ ಕಂಡುಬಂದಿದೆ. ಆದ್ದರಿಂದ, ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಇದಕ್ಕಾಗಿ ಚಿಕಿತ್ಸೆಗಳು ಸಹ ಲಭ್ಯವಿದ್ದು, ಬೇಗನೆ ಸಮಸ್ಯೆ ಪತ್ತೆ ಮಾಡಿದರೆ ಇದರ ಮೊರೆ ಹೋಗಲು ಅವಕಾಶವಿದೆ.

 ಕೋವಿಡ್ ಸೋಂಕು ನಂತರ ಲಸಿಕೆ ಯಾವಾಗ?

ಕೋವಿಡ್ ಸೋಂಕು ನಂತರ ಲಸಿಕೆ ಯಾವಾಗ?

ನಾನು ಕೋವಿಡ್ ಸೋಂಕಿಗೆ ತುತ್ತಾಗಿದ್ದರೆ, ಎಷ್ಟು ದಿನಗಳ ನಂತರ ನಾನು ಲಸಿಕೆ ಪಡೆಯಬಹುದು?

ಡಾ. ಗುಲೇರಿಯಾ: ಕೋವಿಡ್-19 ಸೋಂಕಿಗೆ ಒಳಗಾದ ವ್ಯಕ್ತಿಯು ಚೇತರಿಸಿಕೊಂಡ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಇತ್ತೀಚಿನ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗೆ ಮಾಡುವುದರಿಂದ ದೇಹವು ಬಲವಾದ ರೋಗನಿರೋಧಕಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಮತ್ತು ಲಸಿಕೆಯ ಪರಿಣಾಮವು ಉತ್ತಮವಾಗಿರುತ್ತದೆ.

ನಮ್ಮ ಲಸಿಕೆಗಳು ಇದುವರೆಗೂ ಭಾರತದಲ್ಲಿ ಕಂಡುಬರುವ ರೂಪಾಂತರಿ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ತಜ್ಞರಾದ ಡಾ. ಪಾಲ್ ಮತ್ತು ಡಾ. ಗುಲೇರಿಯಾ ಇಬ್ಬರೂ ಪ್ರತಿಪಾದಿಸಿದರು ಹಾಗೂ ಭರವಸೆ ನೀಡಿದರು. ಲಸಿಕೆಗಳನ್ನು ತೆಗೆದುಕೊಂಡ ನಂತರ ನಮ್ಮ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ ಅಥವಾ ಲಸಿಕೆಗಳನ್ನು ತೆಗೆದುಕೊಂಡ ನಂತರ ಜನರು ಸಾಯುತ್ತಾರೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಅವರು ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು. ಇದು ಗ್ರಾಮೀಣ ಪ್ರದೇಶಗಳು ಮತ್ತು ದೂರ ಪ್ರದೇಶಗಳಲ್ಲಿರುವ ಕೆಲವರು ಹೊಂದಿರುವ ತಪ್ಪು ನಂಬಿಕೆ ಎಂದು ಹೇಳಿದರು.

English summary
Can people with allergies get vaccinated ? Is blood clotting common after taking the vaccine shots ? Dr. V K Paul, Member (Health) and Dr. Guleria addressed doubts.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X