ಯೋಗದಿಂದ ಸೊಂಪಾದ ಕೂದಲು ಉಳಿಸಿಕೊಳ್ಳಲು ಸಾಧ್ಯ

Posted By: ಆರ್ಟ್ ಆಫ್ ಲಿವಿಂಗ್
Subscribe to Oneindia Kannada

ತಲೆ ಮೇಲೆ ಸೊಂಪಾಗಿ ಕೂದಲಿರಬೇಕು, ಆಗಾಗ ಬಾಚಣಿಕೆಯಿಂದ ನೀಟಾಗಿ ಬಾಚುತ್ತಿರಬೇಕು ಎಂಬುದು ತಲೆ ಮೇಲೆ ಕೂದಲಿದ್ದವರ ಆಸೆಗಳಲ್ಲೊಂದಾಗಿರುತ್ತದೆ. ಆದರೆ, ಇದ್ದಕ್ಕಿದ್ದಂತೆ ಬಾಚಣಿಕೆಯಲ್ಲಿ ಜೊಂಪುಜೊಂಪು ಕೂದಲು ಬರಲು ಪ್ರಾರಂಭಿಸುತ್ತದೆ. ಇನ್ನೆರಡೇ ವರ್ಷದಲ್ಲಿ ತಲೆ ಬಾಣಲೆಯಾಗಿಬಿಡುತ್ತೇನೋ ಎಂಬ ಆತಂಕ ಶುರುವಾಗುತ್ತದೆ.

ಬದಲಾಗುತ್ತಿರುವ ಜೀವನಶೈಲಿ, ಅತಿಯಾದ ವಾಯುಮಾಲಿನ್ಯ ಇಂಥ ಆತಂಕವನ್ನು ತಂದೊಡ್ಡಿದೆ. ತಲೆತುಂಬ ಇದ್ದ ಕೂದಲು ನೋಡನೋಡುತ್ತಿದ್ದಂತೆ ಖಾಲಿಖಾಲಿಯಾಗಿರುತ್ತದೆ. ತಲೆ ಬಾಚುವುದೆಂದರೆ ನಡುಕ ಹುಟ್ಟಲು ಆರಂಭವಾಗುತ್ತದೆ. ಇದಕ್ಕೆ ಪರಿಹಾರ ಇಲ್ಲವೆ ಎಂದು ನೀವು ಕೇಳಬಹುದು. ಖಂಡಿತ ಇದೆ. ಅದುವೆ ಯೋಗ! [ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]

ಯೋಗದಲ್ಲಿ ಖಂಡಿತ ಈ ತೊಂದರೆಗಿದೆ ಮದ್ದು. ನಿಯಮಿತವಾಗಿ ಯೋಗ ಮಾಡುವುದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಕೂದಲುದುರುವ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಮಾತ್ರ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಬಹಳ ಕೂದಲು ಉದುರಿ ಹೋದ ನಂತರ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಿಗುವುದಕ್ಕಿಂತಲೂ ಹೆಚ್ಚಾಗಿ, ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಈ ಪ್ರಾಚೀನ ಪದ್ಧತಿಯಿಂದ ಕೂದಲುದುರುವಿಕೆಯನ್ನು ಹೇಗೆ ತಡೆಗಟ್ಟಬಹುದು ಮತ್ತು ಆರೋಗ್ಯವಾದ ಕೂದಲನ್ನು ಹೇಗೆ ಹೊಂದುವುದು ಎಂಬುದರ ಬಗ್ಗೆ ತಿಳಿಯಲು ಕೆಳಗಿನ ವಿವರಗಳನ್ನು ಓದಿರಿ. [ಸ್ಮಾರ್ಟ್ ಫೋನ್ ತರುವ ನೋವು ಶಮನಕ್ಕೆ ಯೋಗಾಸನ]

ಸುಂದರವಾದ ಕೂದಲು ತಲೆಗೆ ಕಿರೀಟ

ಸುಂದರವಾದ ಕೂದಲು ತಲೆಗೆ ಕಿರೀಟ

ಹೊಳೆಯುತ್ತಿರುವ, ಸುಂದರವಾದ, ಬಲಿಷ್ಠವಾದ ಕೂದಲನ್ನು ಬಯಸುವಲ್ಲಿ ಎಲ್ಲಾ ಮಹಿಳೆಯರೂ ಅಷ್ಟೇ ಏಕೆ ಪುರುಷರೂ ಒಂದೇ. ಸುಂದರವಾದ ಕೇಶವು ಖಂಡಿತವಾಗಿಯೂ ನಿಮಗೊಂದು ಕಿರೀಟವಿದ್ದಂತೆ. ನಮ್ಮ ಜೀವನದ ಮೊದಲನೆಯ ಎರಡು ದಶಕಗಳಲ್ಲಿ ನಮ್ಮ ಕೂದಲಿನ ಬೇರುಗಳು ಬಹಳ ಬಲಿಷ್ಠವಾಗಿರುತ್ತವೆ.

ಸ್ವಲ್ಪ ಕೂದಲುದುರುತ್ತಿದ್ದರೆ ಭಯಬೇಡ

ಸ್ವಲ್ಪ ಕೂದಲುದುರುತ್ತಿದ್ದರೆ ಭಯಬೇಡ

ಖಾಯಿಲೆಗಳೊಡನೆ ಸಂಬಂಧಪಡದಿದ್ದರೆ ಕೂದಲಿನ ನಷ್ಟವು ಬಹಳ ಗಂಭೀರವಾದ ಆರೋಗ್ಯದ ಸಮಸ್ಯೆ ಆಗುವುದಿಲ್ಲ. ಒಂದು ದಿನಕ್ಕೆ 75-100 ಕೂದಲು ನಷ್ಟವಾಗುವುದು ಸಾಮಾನ್ಯ. ಆದ್ದರಿಂದ ನಿಮ್ಮ ಬಾಚಣೆಗೆಯಲ್ಲಿ ಸ್ವಲ್ಪ ಕೂದಲು ಸಿಕ್ಕ ಮಾತ್ರಕ್ಕೆ ಭಯಪಡಬೇಕಿಲ್ಲ. (ಚಿತ್ರದಲ್ಲಿ : ಅಧೋಮುಖ ಶ್ವಾನಾಸನ)

ಕೀಳರಿಮೆಗೆ ಕಾರಣವಾಗಬಾರದು ಅಲ್ವಾ?

ಕೀಳರಿಮೆಗೆ ಕಾರಣವಾಗಬಾರದು ಅಲ್ವಾ?

ಕೆಲವೊಮ್ಮೆ ಕೂದಲು ಸಣ್ಣದಾಗುವುದನ್ನು ನೆನೆಸಿಕೊಂಡೇ ಅನೇಕ ಮಹಿಳೆಯರಿಗೆ ನಿದ್ದೆ ಹತ್ತುವುದಿಲ್ಲ. ಏಕೆಂದರೆ ಕೂದಲು ಸೌಂದರ್ಯವನ್ನು ವರ್ಧಿಸುತ್ತದೆ ಮತ್ತು ಕೂದಲು ನಷ್ಟವಾದರೆ ಜನರಲ್ಲಿ, ವಿಶಿಷ್ಟವಾಗಿ ಯುವಕರಲ್ಲಿ ಕೀಳರಿಮೆಗೆ ಕಾರಣವಾಗುತ್ತದೆ. ಇದು ಆಗಬಾರದಲ್ವೆ?

ಶಾಂಪೂ, ಕೂದಲಿನ ಬಣ್ಣ ಬೇಡವಣ್ಣ

ಶಾಂಪೂ, ಕೂದಲಿನ ಬಣ್ಣ ಬೇಡವಣ್ಣ

ಶಾಂಪೂ, ಕೂದಲಿನ ಬಣ್ಣ, ಇತ್ಯಾದಿಗಳನ್ನು ಹೆಚ್ಚಾಗಿ ಬಳಸುವುದರಿಂದ, ಅವುಗಳಲ್ಲಿ ರಾಸಾಯನಿಕಗಳು ಹೆಚ್ಚಾಗಿದ್ದರೆ ಕೂದಲು ಹೆಚ್ಚಾಗಿ ಉದುರುತ್ತದೆ ಮತ್ತು ಸಣ್ಣಗಾಗುತ್ತದೆ. ಕೂದಲಿನ ಸ್ಥಿತಿಯು ನೇರವಾಗಿ ನಿಮ್ಮ ಸಾಮಾನ್ಯ ಆರೋಗ್ಯದೊಡನೆ ಸಂಬಂಧಪಟ್ಟಿದೆ. ನಿಮ್ಮ ಕೂದಲಿನ ಸ್ಥಿತಿ ನಿಮ್ಮ ಆರೋಗ್ಯದ ಮಾಪನ ಯಂತ್ರವಿದ್ದಂತೆ. (ಚಿತ್ರದಲ್ಲಿ : ಭುಜಂಗಾಸನ)

ಕೆಟ್ಟ ಜೀವನಶೈಲಿ ಕೂದಲುದುರಲು ಕಾರಣ

ಕೆಟ್ಟ ಜೀವನಶೈಲಿ ಕೂದಲುದುರಲು ಕಾರಣ

ಕೂದಲುದುರುವಿಕೆಯ ಸಾಮಾನ್ಯ ಕಾರಣಗಳೆಂದರೆ ಒತ್ತಡ, ಹಾರ್ಮೋನುಗಳ ಏರುಪೇರು, ಮುದಿತನ, ಕೆಟ್ಟದಾಗಿ ತಿನ್ನುವ ಅಭ್ಯಾಸಗಳು, ಖಾಯಿಲೆಗಳು, ಔಷಧಿಗಳು, ರಾಸಾಯನಿಕ ಶಾಂಪುಗಳನ್ನು ಅಥವಾ ಕೂದಲಿನ ಬಣ್ಣವನ್ನು ಹೆಚ್ಚಾಗಿ ಬಳಸುವುದು, ಆನುವಂಶಿಕ ಖಾಯಿಲೆಗಳು, ಸಿಗರೇಟು ಸೇದುವುದು ಇತ್ಯಾದಿ.

ಯೋಗ ಧ್ಯಾನದಿಂದ ಕೂದಲಿನ ಆರೋಗ್ಯ ವೃದ್ಧಿ

ಯೋಗ ಧ್ಯಾನದಿಂದ ಕೂದಲಿನ ಆರೋಗ್ಯ ವೃದ್ಧಿ

ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮಗೆ ಆರೋಗ್ಯವಾದ ಕೂದಲು ಸಿಗುವುದು ಮಾತ್ರವಲ್ಲದೆ ದೇಹದ ಇಡೀ ವ್ಯವಸ್ಥೆಗೂ ಲಾಭವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮಗ್ರ ಬೆಳವಣಿಗೆಯೂ ಆಗುತ್ತದೆ. ಯೋಗದಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗುವುದಲ್ಲದೆ ಜೀರ್ಣ ಶಕ್ತಿ ಸುಧಾರಿಸುತ್ತದೆ ಮತ್ತು ಒತ್ತಡ ಹಾಗೂ ಆತಂಕವೂ ಕಡಿಮೆಯಾಗುತ್ತದೆ. (ಚಿತ್ರದಲ್ಲಿ : ಉಷ್ಟ್ರಾಸನ)

ಯಾವ ಆಸನಗಳನ್ನು ಮಾಡಬಹುದು

ಯಾವ ಆಸನಗಳನ್ನು ಮಾಡಬಹುದು

ಕೂದಲುದುರುವಿಕೆಯನ್ನು ತಡೆಗಟ್ಟಲು ಉತ್ಥಾನಾಸನ, ಶಾಸನಾಂಗಾಸನ, ಉಷ್ಟ್ರಾಸನ, ಅಧೋಮುಖ ಶ್ವಾನಾಸನ, ವಜ್ರಾಸನ, ಮತ್ಯ್ಯಾಸಾನ, ಉತ್ಥಾನಪಾದಾಸನ, ಮುಂತಾದವುಗಳನ್ನು ಮಾಡಬಹುದು. (ಚಿತ್ರದಲ್ಲಿ : ಮತ್ಯಾಸನ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hair loss, probably is the most worrying problem women are facing. Changing and bad lifestyle is the main reason for hair loss. But, yoga and meditation have the solution for hair loss in initial stage. So, don't worry start yoga practice.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ