• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮ್ಮ ಸೆಕ್ಸ್‌ ಅಂದರೆ ಏನೇ? ಸ್ವಲ್ಪ ಹೇಳೇ...

By ಗಗನಸಖಿ
|

ಒಂದು ಕಾಲದಲ್ಲಿ ಎಲ್ಲವೂ ಬದುಕಿನ ಸಂಪರ್ಕದಿಂದಲೇ ಕಲಿತಿರುತ್ತಿದ್ದ ಪಾಠವಾಗಿರುತ್ತಿತ್ತು. ಆ ಕಲಿಕೆಯಿಂದ ಮೌಲ್ಯಗಳು ನಮ್ಮಲ್ಲಿ ಅಗೋಚರವಾಗಿ ಸಮೀಕರಣಗೊಂಡಿರುತ್ತಿತ್ತು. ಆದರೆ ಈಗ ಎಲ್ಲವೂ ಪ್ರಯೋಗಶಾಲೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕವೇ ಆಗಬೇಕು! ಅದಕ್ಕೆ ಈ ದೇಹವೂ ಹೊರತಲ್ಲ.

ಆ ದಿನ ಬ್ಯಾಂಕ್‌ ಚಂದ್ರಿಕಾಳನ್ನು ನೋಡ್ಬರೋಣಾಂತ ಹೋಗಿದ್ದೆ. ಏನೋ ಕೆಲಸದಲ್ಲಿದ್ದಳು. ಕಾಯುತ್ತಾ ಕೂತಿದ್ದೆ. ಪಕ್ಕದಲ್ಲಿ ಒಂದು ಎಂಟ್ಹತ್ತು ವರ್ಷದ ಮುದ್ದು ಹುಡುಗ ಕುಳಿತಿದ್ದ. ಒಂದೈದು ನಿಮಿಷದ ನಂತರ ಜೊತೆಯಲ್ಲಿದ್ದ ಅಪ್ಪನನ್ನು ಕೇಳಿದ 'ಅಪ್ಪ, baby ಯಾಕೆ ಮದುವೆ ಆದ್ಮೇಲೆ ಹುಟ್ಟುವುದು, ಮದುವೆಗೆ ಮುಂಚೆ ಯಾಕಿಲ್ಲ?’ ಅಬ್ಬ, ಆ ಎಸಿ ಛೇಂಬರ್ನಲ್ಲೂ ನಾನು ಬೆವತಿದ್ದು ನೀವು ನೋಡಬೇಕಿತ್ತು!

ಮದುವೆ ಒಂದು ಸಂಸ್ಕೃತಿ. ಮಗುವಾಗುವ ಮೂಲ ಒಂದು instinct.. ಎರಡನ್ನೂ ಒಂದೆ ಚೌಕಟ್ಟಿನಲ್ಲಿ ಹಿಡಿದಿಡುವುದು civilization ಅಂತ ನಾನಂದ್ಕೋತೀನಿ. ಅದನ್ನು ಅಪ್ಪ ಹೇಗೆ ಹೇಳುತ್ತಾನೆ ಅನ್ನುವ ಕುತೂಹಲದಲ್ಲಿ ಕಿವಿಗಳನ್ನು ಚುರುಕಾಗಿಸಿಕೊಂಡೆ. ಆತ ಉತ್ತರಿಸಲು ಎಷ್ಟು ತಿಣುಕುತ್ತಿದ್ದ ಅಂದರೆ ಬಹುಶಃ ಅವನ ಅಮ್ಮ ಹೆರಿಗೆಯಲ್ಲೂ ಅಷ್ಟು ಒದ್ದಾಡಿರಲಿಲ್ಲವೇನೋ!

My mom will take sex lessons to me

ಹುಡುಗನಲ್ಲಿ ಅಸಮಾಧಾನ ಉಳಿಸಿ ಅಪ್ಪ ಕೆಲ್ಸಕ್ಕೆ ಹೋದ. ಆಲ್ಲೇ ಯಾರದೋ ಬಳಿ ಮಾತ್ನಾಡ್ತಿದ್ದ ಅಮ್ಮ ಬಂದು ಪಕ್ಕಕ್ಕೆ ಕೂತಳು. ಆ ಹುಡುಗ ಅದೇ ಪ್ರಶ್ನೆಯನ್ನು ಅಮ್ಮನಲ್ಲಿ ಕೇಳಿದ. ಅವಳೂ ಒಂದೆರಡು ನಿಮಿಷ ಸಮಯತೆಗೆದ್ಕೊಂಡಳು. ಆದರೂ ಎಷ್ಟು ಸರಳವಾಗಿ ಸಮಂಜಸವಾಗಿ ಉತ್ತರಿಸಿದಳು ಗೊತ್ತಾ? ಮನಸ್ಸಿನಲ್ಲೇ ಭೇಷ್‌ ಅಂದುಕೊಂಡೆ.

ಈ ಕಡೆ ತಿರುಗಿದರೆ ನ್ಯೂಸ್‌ ಪೇಪರ್‌ ಹೆಡ್ಲೈನ್ಸ್‌ ಕಾಣುತ್ತಿತ್ತು 'ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೇ ಬೇಡವೇ?’ ನಾನಂತೂ ಅದರ ಬಗ್ಗೆ ಯಾವತ್ತೂ ಯೋಚಿಸಿದ್ದವಳೇ ಅಲ್ಲ. ಪಕ್ಕದಲ್ಲಿದ್ದ ಅಮ್ಮ ಮಗನ ಸಂವಾದ ನನ್ನ ತಲೆ ಹೊಕ್ಕಿತು. ಹೌದಲ್ಲಾ ಅದು ಬೇಕೇ ಬೇಡವೇ. . . . . ನಿಮಗೇ ಗೊತ್ತಲ್ಲ, ಯಾವುದಕ್ಕೂ ನನ್ನದೇ ಆದ ನಿರ್ಧಾರಕ್ಕೆ ಬರುವವರೆಗೂ ನನಗೆ ಅನ್ನ ನೀರು ಗಂಟಲಲ್ಲಿ ಇಳಿಯೋಲ್ಲ ಅಂತ!

ಹಾಗೂ ಹೀಗೂ ಮಿಸುಕಾಡಿ ಬೇಕು ಅನ್ನೋ ತೀರ್ಮಾನಕ್ಕಂತೂ ಬಂದೆ. ಆದರೆ ಯಾರಿಂದ ದೊರೆಯಬೇಕು? ಮತ್ತೊಂದು ಮಜಲಿಗೆ ಹತ್ತಿದ್ದೆ. ಮುಚ್ಚಿಟ್ಟ ದೇಹಗಳ ಬಿಚ್ಚಿಕೊಂಡ ಮನಸ್ಸುಗಳ ನಡುವಿನ ಒಂದು ಆರೋಗ್ಯಕರ ಕ್ರಿಯೆ, ಪ್ರಕ್ರಿಯೆಯನ್ನು ಅನಾರೋಗ್ಯಕರವಾಗಿ ಸಾರ್ವಜನಿಕ ಅನಾವರಣಕ್ಕೆ ದೂಡಿ ನಮ್ಮ ಮಕ್ಕಳನ್ನು ಅಸಹಜ adulthoodಗೆ ದಬ್ಬಿ ಬಿಡುತ್ತೇವಾ? ಅನುಮಾನ ಕಾಡಿತು. ಶಾಲೆಯಲ್ಲಿ ಶಿಕ್ಷಣ ಅನ್ನುವ ಹೆಸರಿನಲ್ಲಿ ಒಂದು ಮಗುವಿನ ಹಸಿ ಮನಸ್ಸಿಗೆ ಪಿಕಾಸಿ ಹಾಕಿ ಕೆತ್ತಿ ಬಂಜರನ್ನು ಬಿತ್ತುವುದು ಸಮ್ಮತವೇ?. . . . ಯೋಚಿಸುತ್ತಲೇ ಇದ್ದೆ. ಉಹೂಂ, ಉತ್ತರ ಬರುವ ಮೊದಲು ನಿಟ್ಟುಸಿರು ತನ್ನ ಗೆಲುವನ್ನು ಸಾಧಿಸಲು ಹೊರಟ್ಟಿತ್ತು, ಇಲ್ಲ ಹಾಗಾಗಲಿಲ್ಲ. ಯಾಕೆಗೊತ್ತಾ, ತಕ್ಷಣ ಅಮ್ಮ ನೆನಪಾದಳು!

ಹೌದು, ಒಂದು ಹೆಣ್ಣು ಯಾವ ವಯಸ್ಸಿನವಳೇ ಆಗಲೀ ಅಮ್ಮನಾದ ಕೂಡಲೇ unisex ಆಗಿಬಿಡುತ್ತಾಳೆ. ಅಜ್ಜ ಖುಷ್ವಂತ್‌ ಸಿಂಗ್‌ಗೂ ಯಾವುದೇ ಮುಜುಗರವಿಲ್ಲದೆ ಲೈಂಗಿಕ ಶಿಕ್ಷಣ ಕೊಡಬಲ್ಲವಳಾಗುತ್ತಾಳೆ. ಇದು ಪ್ರಕೃತಿ ಅವಳಿಗೆ ಕೊಟ್ಟಿರುವ amazing ಶಕ್ತಿ. ಅಮ್ಮನಿಗೆ ಇಷ್ಟು mettle ಇಲ್ಲದಿದ್ದರೆ ಜಾನಪದದಿಂದ ಕಂಪ್ಯೂಟರ್‌ವರೆಗೂ ನಮ್ಮೊಡನೆ ಹಾಗೇ ಸುಮ್ಮನೆ ಕುಳಿತುಬಿಟ್ಟಿದ್ದಾಳಲ್ಲ ಅದು ಹೇಗೆ?! ಅವಳಿಗೆ ಜ್ಞಾನವನ್ನು ಅರಿವು ಮಾಡುವ ಯುಕ್ತಿ ಇದೆ ಅನ್ನುವುದು ಸತ್ಯಾತಿಸತ್ಯತಾನೇ? ಎರಡು ದೇಹಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯ ವಿಚಾರಗಳು ಆರೋಗ್ಯಕರ. ಮಧುರ. ಅದರ ಬಗೆಗಿನ ಸಮಸ್ತ ignoranceಅನ್ನು ಕಿತ್ತೊಗೆದು innocence ಅನ್ನು ಹಾಗೇ ಉಳಿಸಿಕೊಡುವ ಕಲೆ ಅಮ್ಮನಿಗಷ್ಟೇ ಗೊತ್ತು. ಕಾಮನೆಗಳ ಉತ್ಕರ್ಷದಲ್ಲೂ ಬ್ರಹ್ಮಚರ್ಯ ಪಾಲನೆ ಮಾಡಿದ್ದಕ್ಕೆ ತಾನೆ ಅವಳು ಅಮ್ಮನಾಗಿದ್ದು?!

ಇಷ್ಟೆಲ್ಲಾ backup ಇರುವ 'ಅಮ್ಮ’ನೇ ಈ ಕೆಲಸಕ್ಕೆ ಸರಿ ಅನ್ನಿಸಿತು ನನಗೆ. ಅವಳಿಗೆ ವಿಶ್ವರೂಪ ದರ್ಶನ ನೀಡುವುದು ತಿಳಿದಿದೆ. ಆದರೆ ಕಾಲಕ್ಕೆ ತಕ್ಕಂತೆ ಅವಳ ಅಂತರಂಗ ಅನುರೂಪಗೊಳ್ಳುವುದಷ್ಟೇ ಬಾಕಿಯಿದೆ. ಅದನ್ನು ಮಾಡಿಬಿಟ್ಟರೆ ಆಯಿತಲ್ಲಾ ಇನ್ನೇನು tension?! ಪರಿಹಾರ ಸಿಕ್ಕಿತಲ್ಲ so ಸಮಾಧಾನವೂ ಆಯಿತು. ಮುಖದ ಮೇಲೆ ಅರಳಿತ್ತು ನಗು. ಲೈಂಗಿಕ ಶಿಕ್ಷಣವನ್ನು ಕುಟುಂಬ ಕಲ್ಯಾಣ ಶಿಕ್ಷಣವೆಂದು ಪರಿಗಣಿಸಬೇಕೂಂತ ಆ ಬಾಳೇಕುಂದ್ರಿ ಡಾಕ್ಟರ್‌ ಹೇಳ್ತಿದ್ದರೆ, ಆಹಾ. . . . .

ಹೇ, hold on ಅಂತೀರಾ? ಏನೋ ಕಾಡ್ಹರಟೆ ಹೊಡ್ಕೋತಾ ಸುಮ್ಮನಿರ್ತಾಳೆ ಅಂದ್ರೆ ಸಮಾಜೋದ್ಧಾರದ ಮಾತಾಡ್ತಾಳಲ್ಲಾ ಅಧಿಕ ಪ್ರಸಂಗಿ ಅಂತೀರಾ? ಹೌದು, ನೀವು ಹೀಗೆ ನನ್ನ ಭುಜಕ್ಕೆ ಭುಜ ಸೇರಿಸಿ, ಕೈಗೆ ಕೈ ಜೋಡಿಸಿ, ನನ್ನ ಹೆಜ್ಜೆಯಲ್ಲೊಂದಾಗಿತ್ತಿದ್ದರೆ ನಾನು ಸರ್ಕಾರಕ್ಕೆ ಮಾತ್ರವಲ್ಲ ಇಂದ್ರಲೋಕಕ್ಕೂ memorandum ತೆಗೆದುಕೊಂಡು ಹೋಗುವವಳೇ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sex education by mother. Mother is best suited person to impart sex education in modern society argues Gaganasakhi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more