• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನಸ್ಸು ಮನಸ್ಸಲ್ಲಿದ್ದರೆ ಅಲ್ಲಿ ಮನಃಶಾಂತಿ!

By Staff
|

‘ಈ ಜಗದಲ್ಲಿ ಒಂದೇ ಕಥೆ ಹಲವು ರೂಪತಾಳಿ ಆಟವಾಡುತ್ತದೆ. ಈ ಎಲ್ಲಾ ಕಥೆಗಳ ಹಿಂದೆ ಒಂದು ಕಥೆ ಇದೆ. ಅದು ಮಾಯಾ ಕಥೆ ಅದರ ರೂಪಗಳು ಅನಂತ!’ - ಅಂಬಿಕಾತನಯದತ್ತ.

Do bubbly babes boss over always?ಓಹ್ಹೋ! ಅಲ್ಲಾ ನಾವೆಲ್ಲಾ ಯಾಕ್ಹೀಗ್ಮಾಡ್ತೀವಿ? ಪಾಪ ಅವಳಿಗೆ ಏನು ಅನ್ನಿಸುತ್ತೆ ಅಂತ ನಮಗ್ಯಾಕೆ ಇಷ್ಟು ದಿನ ಗಮನಕ್ಕೇ ಬಂದಿರಲಿಲ್ಲ? ಹಾಗಂತ ನಮಗೇನೂ ದುರುದ್ದೇಶ ಇರಲಿಲ್ವಲ್ಲ! ನಮ್ಮ್ಹತ್ರೇನು magic wand ಇದೆಯಾ, ಎಲ್ಲಾರ ಮನಸ್ಸನ್ನು ಮನಗಾಣಲು?! ಅಯ್ಯೊ, ಯಾಕಿಷ್ಟು ಗೊಣಗೋದು. . . . .ಇನ್ನ್ಮೇಲೆ ಹಾಗ್ಮಾಡ್ದಿದ್ದ್ರೆ ಆಯ್ತಪ್ಪ!

ಏನ್ರೀ, ಅವಳು ನನಗಿಂತ ಒಂದೆರ್ಡ್ವರ್ಷ ಚಿಕ್ಕವಳಿರಬೇಕಲ್ಲ್ವಾ? ಹೂಂ, ಈಗ ಆ ಮಾತ್ಯಾಕ್ಬಿಡಿ. ಒಟ್ಟ್ನಲ್ಲಿ ನಾನು ಅವಳನ್ನು ಅವಳ ಹುಟ್ಟಿನಿಂದಲೇ ನೋಡಿದ್ದೀನಪ್ಪ. ಅವಳು ಇರುವುದೇ ಹಾಗೆ. ಪಕ್ಕದ್ಮನೆ ಕಮಲ ಆಂಟಿಯಿಂದ ಹುಣಸೆತೊಕ್ಕಿನ recipe ತಿಳಿದ್ಕೊಳ್ಳೋದ್ರಿಂದ ಹಿಡಿದು ಹುಣಸೆ ಮರದ botanical nameವರೆಗು ಎಲ್ಲಾ ವಿಷಯದಲ್ಲೂ ಆಸಕ್ತಿ ತೋರಿಸ್ತಾಳೆ.

ಬೆಳಗ್ಗೆ ಷೋನಲ್ಲಿ ‘ಜೋಗಿ’ ಸಿನೆಮಾ ನೋಡ್ಕೊಂಡ್ಬಂದು ರಾತ್ರಿ ‘ಯಯಾತಿ’ ಕಾದಂಬರಿ ಬಗ್ಗೆ ವಿಮರ್ಶೆ ಮಾಡ್ತಿರ್ತಾಳೆ. ತನ್ನ ಮಗುವಿಗೆ ಶೀತ ಆದ್ರೆ ಅಳ್ತಾಳೆ. ಮಾರನೇ ದಿನ ಪಕ್ಕದ ಮನೆ adolescent ಮಗನ ಅಮ್ಮನಿಗೆ counselling ಮಾಡ್ತಿರ್ತಾಳೆ. ಗೌರಿ ತದಿಗೆ ದಿನ ತಲೆ ತುಂಬಾ ಹೂವು ಮುಡ್ಕೊಂಡು, ರೇಷ್ಮೆ ಸೀರೆ ಉಟ್ಕೊಂಡು ಮುತ್ತೈದೆಯರಿಗೆ ಕೋಸಂಬರಿ ಪಾನಕದ ಎಲಡ್ಕೆ ಕೊಡ್ತಾಳೆ. ಮತ್ತೊಂದಿನ ಜೀನ್ಸ್‌ ಹಾಕೊಂಡು ಕುಮಾರ ಪರ್ವತದ trekking ಹೊರಡ್ತಾಳೆ. ಹೌದು, ಸರಿಯಾಗಿ ಹೇಳಿದ್ರೀ! ಅವಳನ್ನು ನೋಡಿದ್ರೆ ಆ ಕಾರ್ನ್‌ಫ್ಲೇಕ್ಸ್‌ ಜಾಹೀರಾತಿನ super women ಇವಳೇನಾ ಅನ್ನಿಸುತ್ತೆ ನಿಜ.

ಪಾಪ, ಏನ್ರೀ, ಅಷ್ಟು bubbly ಆಗಿದ್ದಾಳೆ ಅಂದ ಮಾತ್ರಕ್ಕೆ ನಾವು ಅವಳನ್ನ ಏನೆಲ್ಲಾ ಅಂತೀವಿ? ಅವಳು ಯಾವುದೊ sensible ವಾದ ಮಾಡ್ತಿದ್ದರೆ ‘ಅಮ್ಮ ತಾಯೀ ನಿನ್ನ ಗಂಡನ ಗತಿಯೇನೇ’ ಅಂತೀವಿ. ಅವಳು ಪದ್ದತಿ, ಸಂಪ್ರದಾಯ ಅಂತ ಏನಾದ್ರು ಮಾತ್ನಾಡಿದ್ರೆ ‘ಅಯ್ಯೋ, ನಿನ್ನ ಸೊಸೆ ಗತಿಯೇನೇ’ ಅಂತ ಪ್ರಲಾಪಿಸ್ತೇವೆ. ಸ್ತ್ರೀ ಶೋಷಣೆ, ಕೌಟುಂಬಿಕ ಹಿಂಸೆ ಮಣ್ಣು ಮಸಿ ಅಂತ ಅವಳ ಬಾಯಿಂದ ಒಂದ್ಮಾತು ಕೇಳಿದ್ರೂ ಸಾಕು ‘ಪಾಪ, ಅವಳ ಅತ್ತೆ ಮಾವ ಎಷ್ಟು ಹೆದರಿ ನಡುಗ್ತಾರೋ’ ಅಂತ ಬೆನ್ನಹಿಂದೆ ಲೊಚಗುಟ್ಟುತ್ತೀವಿ.

ಒಟ್ಟಿನಲ್ಲಿ ಅವಳು ಏನೇ ಮಾತಾಡಿದ್ರು ಒಂದು ಕೊಂಕು ತೆಗೆದು ಅವಳ ಕಾಲೆಳೀತಾನೆ ಇರ್ತೀವಿ. ಅದು ಅಷ್ಟೇ ಆಗಿದಿದ್ರೆ ಪರಾವಾಗಿಲ್ಲ. ಆದರೆ ಪ್ರತೀ ಸಲಿ ಅವಳ ಮನೆಯವರ ಸ್ಥಿತಿ ಗತಿ ಬಗ್ಗೆ ಪರೋಕ್ಷವಾಗಿ ಅವಳನ್ನು ಚುಚ್ಚ್ತಾನೆ ಇರ್ತೀವಿ. ನಮಗ್ಯಾಕ್ರೀ ಬೇಕು ಇದು? ‘ಒಂದು ಮನಸ್ಸಲ್ಲಿ ಎರಡು ಮನಸ್ಸು ಇದು ಮನಸ್ಸಿನ ನಿಯಮ’ ಅಂತ ಗೊತ್ತಿದ್ದರೂ ಅವಳು ನಮ್ಮೊಡನೆ ಇರೋಹಾಗೆ ಮನೆಯಲ್ಲೂ ಇರ್ತಾಳೆ ಅನ್ನುವ assumption ಮೇಲೆ ನಾವ್ಯಾಕೆ ಮೂತಿ ತಿವಿಬೇಕು.

ಮನೆಯಲ್ಲಿ ಅವಳು ಹಸನ್ಮುಖಿ ಖಂಡಿತ. ಆದರೆ rule maker ಆಗಿಲ್ಲದಿರಬಹುದು! ಅವಳ ಎಗ್ಗುಸಿಗ್ಗಿಲ್ಲದ ಉತ್ಸಾಹ, ಎಡೆಬಿಡದ ಉಲ್ಲಾಸ ನೋಡಿ ನಾವ್ಯಾಕೆ ಅವಳು ಮನೆಯಲ್ಲಿ autonomous ರಾಣಿ ಅಂದ್ಕೊಳ್ಳಬೇಕು? ಇಂತಹ polluted perceptionಗಳಿಂದಾಗಿ ನಾವು ಮನುಷ್ಯ ಸಹಜ ಭಾವಕೇಂದ್ರದಿಂದ ಗಾವುದ ದೂರದಲ್ಲಿ ನಿಲ್ಲುತ್ತಿದ್ದೇವೆ ಅನ್ನಿಸುತ್ತದೆ.

ಮೊನ್ನೆ ರಾತ್ರಿ ಇದನ್ನೇ ಯೋಚನೆ ಮಾಡ್ತಿರೋವಾಗ ನನಗೇನನ್ನಿಸಿತು ಗೊತ್ತಾ? ಅವಳ ಜೀವನ ಪ್ರೀತಿ ಕಂಡರೆ ನಮಗೆಲ್ಲಾ ಹೊಟ್ಟೆ ಕಿಚ್ಚು ಇರಬೇಕು ಅನ್ನಿಸಿತು. ಛೇ, ಯಾರಿಗೂ ಹೇಳ್ಬೇಡ್ರೀ. ಮಾನದ ಗತಿಯೇನು ಹೇಳಿ ಆಮೇಲೆ?! ಅಯ್ಯೋ, ಕಿಚ್ಚು ಪಿಚ್ಚು ಏನೂ ಇಲ್ಲ ಬಿಡಿ.

ಅವಳೇನು ಆ ತರಹ enormityಯೂ ಅಲ್ಲ. ಆದರೆ ನನಗನ್ನಿಸಿದ್ದು ಇಷ್ಟೇಪ್ಪಾ, ಪಾದರಸದ ತರಹ ಚಟ ಪಟ ಅಂತ ಇದ್ದ ಮಾತ್ರಕ್ಕೆ ಮತ್ತೊಬ್ಬರ ಮನಸಿಚ್ಛೆ ಗಮನಿಸೋಲ್ಲ, ಎಲ್ಲ ಅವರ ಮನಸ್ವೇಚ್ಛೆ ಅನ್ನೋದು ಮಾತ್ರ ತಪ್ಪು. ಅರೆರೆ, ಅವಳ್ಯಾಕೆ ಈಗ ನನ್ನನ್ನೇ ನೋಡಿ. . . . . .ನಿಮ್ಮೊಡನೆ ಹೀಗೆ ಓತಪ್ರೋತ ಪ್ರಹಾರ ಮಾಡಿದರೂ ಮನೆಯಲ್ಲಿ ಎಷ್ಟು ಮೌನ, ಮಂದಸ್ಮಿತೆ, ನಯ, ನಾಜೂಕು. . . .ಹ್ಹ ಹ್ಹಾ, ಮುಂದಿನ ನಗೆ ಹಬ್ಬಕ್ಕೆ ಒಂದು ಹೊಸ ಜೋಕ್‌ ಸಿಕ್ಕಿತು ಅಂದ್ಕೊಳ್ಳ್ತಿದ್ದೀರಾ?! ಏನಾದ್ರೂ ಅಂದ್ಕೊಳ್ಳಿ. ಆದರೆ ಮುಂದಿನ ಸಲಿ bubbly ಸಿಕ್ಕಾಗ ಅವಳೇ ಯಾವಾಗ್ಲೂ boss over ಮಾಡ್ತಾಳೆ ಅನ್ನುವ ಮಾತಿಗೆ ಶಬ್ದ ಕೊಡುವ ಮುನ್ನ ಒಮ್ಮೆ ಹೀಗೆ ಯೋಚನೆ ಮಾಡಿ what is obvious is neither a cause nor an answer.

ಹೂಂ ಅಂತೀರಾ? ಇಲ್ಲಾ. . . . . .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X