ಇಲ್ಲ, ಮಂಡೆ ಬಿಸಿಯೂ ಇಲ್ಲ!

''ವೀಕೆಂಡ್ ಬಂತೆಂದರೆ ಸಾಕು, ಸಿಕ್ಕಾಪಟ್ಟೆ ಬಿಜಿ‚... ಅದೂ ಈ ಸಮ್ಮರ್‌ಟೈಮಲ್ಲಂತೂ ಕೇಳಲೇಬೇಡಿ!"" - ಇದು ಅಮೆರಿಕದ ದೊಡ್ಡದೊಡ್ಡ ಶಹರಗಳಲ್ಲಿ ನೆಲೆಸಿರುವ ಕನ್ನಡಿಗ ಕುಟುಂಬದವರ(ಈ ಅಂಕಣದ ಸ್ಕೋಪ್ ದೃಷ್ಟಿಯಿಂದ ಕನ್ನಡಿಗರು ಎಂದಿದ್ದೇನೆ. ನಿಜವಾಗಿ ಎಲ್ಲರಿಗೂ ಅನ್ವಯವಾಗುತ್ತದೆ) ಒಕ್ಕೊರಲ ಅಭಿಪ್ರಾಯ ಮತ್ತು ಅನುಭವ. ಇದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ.
ವೀಕ್ಲಿ ಗ್ರೋಸರಿಶಾಪಿಂಗ್ ಆಗಬೇಕು, ಬಟ್ಟೆಒಗೆತ ಆಗಬೇಕು; ಮಗನನ್ನು ಫ‚ುಟ್‌ಬಾಲ್/ಕರಾಟೆ/ಸ್ವಿಮ್ಮಿಂಗ್/ಟೆನಿಸ್‌ಗೆ ಕರಕೊಂಡು ಹೋಗಬೇಕು, ಮಗಳನ್ನು ಮ್ಯೂಸಿಕ್/ಡಿಬೇಟ್/ಮ್ಯಾಥ್ ಕ್ಲಾಸಿಗೆ ಕರಕೊಂಡುಹೋಗಬೇಕು; ಸ್ಲೀಪ್‌ಓವರ್ ಇದ್ರೆ ಮಕ್ಕಳನ್ನು ಹೋಗಿಬಿಟ್ಟುಬರಬೇಕು, ಮಾರನೆದಿನ ಕರಕೊಂಡುಬರಬೇಕು, ಈಮಧ್ಯೆ 'ಇಂಥವರ" ಮಗಳ ಆರಂಗೇಟ್ರಂ ಎಟೆಂಡ್ ಮಾಡಬೇಕು, 'ಇಂಥವರ" ಮಗನ ಡ್ರಾಮಾ ಶೋಗೆ ಹೋಗಬೇಕು. ಇನ್ನು ವೆಡ್ಡಿಂಗ್ ಶವರ್ರು, ವೆಡ್ಡಿಂಗು, ಗೃಹಪ್ರವೇಶ, ಆನಿವರ್ಸರಿ, ಬೇಬಿಶವರ್ರು...(ಒಂದೇ ಮನೆಯವರದಲ್ಲ!) ಇತ್ಯಾದಿ ಫ‚ಂಕ್ಷನ್ಸ್ ಇರುತ್ತ್ವೆ, ಒಂದಿಷ್ಟು ದೈವಭಕ್ತಿಯುಳ್ಳವರಾದ್ರೆ ಟೆಂಪಲ್‌ಗೆ ಹೋಗಿ ಅರ್ಚನೆಮಾಡಿಸಿ ಬರಬೇಕು (ಅಲ್ಲಿನ ಕೆಫ‚ೆಟೆರಿಯಾದಿಂದ ಪಾರ್ಸೆಲ್ ಕಟ್ಟಿಸಿ ತರಬೇಕು) - ಅಂತೂ ಲಿಸ್ಟ್ ತುಂಬಾ ಉದ್ದವಿರುತ್ತದೆ.
ಶಾಂಪೂ ಹಾಕಿ ಕಾರ್ ವಾಷಿಸಬೇಕು, ಜಾಹೀರಾತುಗಳೊಂದಿಗೆ ನಾಲ್ಕು ಪೌಂಡ್ ತೂಕದ ಬಂಡಲ್‌ನಲ್ಲಿ ಬರುವ ಸಂಡೇ ನ್ಯೂಸ್‌ಪೇಪರನ್ನು ವಾಚಿಸಬೇಕು. ಬೇಸ್‌ಮೆಂಟು-ಗರಾಜು ಕ್ಲೀನ್ ಮಾಡಬೇಕು; ಈ ವೀಕೆಂಡಾದರೂ ಮಾಡ್ಬೇಕಿತ್ತು, ಮಾಡೊಕ್ಕಾಗಿಲ್ಲ ಅಂತ ಅಟ್‌ಲೀಸ್ಟ್ ಪರಿತಪಿಸಬೇಕು. ಜತೆಯಲ್ಲೇ, ಚಳಿಗಾಲವಾದರೆ ಹಿಮಕರ್ಷಣ (snow ploughing) ಆಗಬೇಕು, ಬೇಸಿಗೆಯಾದರೆ ಗ್ರಾಸಕ್ಷೌರ (lawn mowing) ಮಾಡಬೇಕು. (ಸ್ಪೂನರಿಸಂ ಪ್ರಕಾರವೂ, ಸ್ವಂತ ಮನೆಯುಳ್ಳವರು ಕಾಲಾನುಕಾಲಕ್ಕೆ 'lawnಅ ಮೋ" ಮಾಡಬೇಕು, ಇಲ್ಲಾಂದರೆ ನೇಬರ್‌ಹುಡ್‌ನಲ್ಲಿ ಅವರ 'ಮಾನ low" ಆಗುವ ಸಾಧ್ಯತೆಯಿರುತ್ತದೆ!)
ಇಷ್ಟೆಲ್ಲ ಕೆಲಸಗಳು ಮಾತ್ರವಾ? ವೀಕೆಂಡಲ್ಲಿ ಮಾಡಿಕೊಡ್ತೇನೆ ಎಂದು ದಾಕ್ಷಿಣ್ಯಕ್ಕೆ ಒಪ್ಪಿದ ಕಮಿಟ್‌ಮೆಂಟುಗಳು ಬೇರೆ. ಊಟ-ನಿದ್ರೆ ಟೈಮ್‌ಟೇಬಲ್ ಕೂಡ ಗಡ್‌ಬಡಾಯಿಸುತ್ತದೆ. ಸಮಾರಂಭಗಳು, ಗೆಟ್-ಟುಗೆದರ್ಸ್ ಇದ್ದರಂತೂ ಅಲ್ಲಿ ಪೊಗದಸ್ತಾದ ಊಟವನ್ನು ಚೆನ್ನಾಗಿ 'ಹೊಡೆ"ಯೋದ್ರಿಂದ ಮಧ್ಯಪ್ರದೇಶದಲ್ಲಿ ಕೋಲಾಹಲ ಆಗೋದೂ ಇದೆ. ಒಟ್ಟಿನಲ್ಲಿ ವೀಕೆಂಡ್‌ನಲ್ಲಿ ಒಂದರಹಿಂದೆಒಂದು ಸ್ಟ್ರಾಂಗ್ ಆಗಿ ಬಂದು ಅಪ್ಪಳಿಸುವುದರಿಂದ ವೀಕೆಂಡು ಅಕ್ಷರಶಃ ಎಟ್ ದ ಎಂಡ್ ಇಟ್ ವಾಸ್ ಸ್ಟ್ರಾಂಗ್ ಎಂಡ್... ಎನ್ನುವಂತಾಗುತ್ತದೆ. ಯಾವಾಗ ಸೋಮವಾರದ ಬೆಳಗಾಗುತ್ತದೋ, ಶಾಲೆ-ಆಫಿ‚ೕಸು ರೆಗ್ಯುಲರ್ ರುಟಿನ್‌ಗಳು ರೆಸ್ಯುಮ್ ಆಗುತ್ವೊ ಅಂತ ಎದುರು ನೋಡುವಂತಾಗುತ್ತದೆ. ಸೋಮವಾರ ಕೊನೆಗೂ ಬಂದಾಗ ಒಮ್ಮೆ ಉಸ್ಸಪ್ಪಾ ಅಂತನಿಸಿ ಇವತ್ತಿನ ನಮ್ಮ ಶೀರ್ಷಿಕೆ ಉದ್ಗಾರವಾಗಿ ಹೊರಡುತ್ತದೆ!
ವಾರಾಂತ್ಯದ ವರಸೆಯ ವಿವರಗಳನ್ನು ನಾನು ಇಲ್ಲಿಗೇ ನಿಲ್ಲಿಸುತ್ತೇನೆ. ಏಕೆಂದರೆ ಸಹಅಂಕಣಕಾರ ಮತ್ತು ನಮ್ಮೂರಿನವರೇ ಆದ ಡಾ।ಮೈ.ಶ್ರೀ.ನ ಅವರು ''ವಾಷಿಂಗ್‌ಟನ್‌ನಲ್ಲಿ ವಾರಾಂತ್ಯದ ವರಸೆ"" ಎಂಬ ಹರಟೆಯನ್ನು ಸೋದಾಹರಣವಾಗಿ ಇನ್ನೂಹೆಚ್ಚು ಸ್ವಾರಸ್ಯಕರವಾಗಿ ಈಗಾಗಲೇ ಬರೆದಿದ್ದಾರೆ. ಸೋ ಹಾಗಾಗಿ (ಬೇಕಂತಲೇ ಆ ದ್ವಿರುಕ್ತಿ) ನಾನು, 'Monday Busy ಇಲ್ಲ ಮತ್ತು ಮಂಡೆ ಬಿಸಿಯೂ ಇಲ್ಲ..." ಟೈಟಲ್‌ಅನ್ನು ಸ್ವಲ್ಪ ಇಲಾಬೊರೇಟಿಸುತ್ತೇನೆ. ಮುಖ್ಯವಾಗಿ 'ಬಿಜಿ‚"ನೆಸ್ ಮತ್ತು ಅದರಿಂದಾಗುವ 'ಬಿಸಿ"ಯ ಬಗ್ಗೆ ತಣ್ಣಗಿನ ಕೆಲ ಒಬ್ಸರ್ವೇಶನ್ಸ್.
*
''ಈ ಮಾರ್ಗವು ಕಾರ್ಯನಿರತವಾಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಡಯಲ್ ಮಾಡಿ!"" ಎಂಬ ಉಲಿಯನ್ನು ಕರ್ನಾಟಕದ ಯಾವುದೇ ಊರಿಗೆ ಎಸ್‌ಟಿಡಿ/ಐಎಸ್‌ಡಿ ಫ‚ೋನಾಯಿಸುವ ಪ್ರತಿಯಾಬ್ಬರೂ ಒಂದಲ್ಲ ಒಂದು ಸಲವಾದರೂ ಕೇಳಿಯೇ ಇರುತ್ತಾರೆ. Busy ಎನ್ನುವ ಆಂಗ್ಲಪದಕ್ಕೆ 'ಕಾರ್ಯನಿರತ" ಅಥವಾ 'ವ್ಯಸ್ತ" ಎಂಬ ಭಾಷಾಂತರ. ನಿರ್ಜೀವಿ ಯಂತ್ರದ ಮಟ್ಟಿಗೆ Busy ಎಂದರೆ ನಿಜವಾಗ್ಲೂ ಕಾರ್ಯನಿರತವೇನೋ ಸರಿ, ಆದರೆ ನಾವು-ನೀವು ಬಹುತೇಕ ಸಂದರ್ಭಗಳಲ್ಲಿ ತೋರಿಕೆಗಾಗಿ, ಢೋಂಗಿಯಾಗಿ, Busy ಆಗಿರದೇನೇ 'ಬಿಜಿ‚" ಎಂದು ಹೇಳಿಕೊಳ್ಳುವುದೇ ಹೆಚ್ಚು ಅಂತನಿಸುವುದಿಲ್ಲವೆ?
"Being busy does not always mean real work. Seeming to do is not doing." - ಹೀಗೆಂದು ಹೇಳಿದ್ದು ಮಹಾನ್‌ವಿಜ್ಞಾನಿ ಥೊಮಸ್ ಆಲ್ವಾ ಎಡಿಸನ್ ಅಲ್ವಾ? ಅವನ ಸಂಶೋಧನೆಯ ಬಲ್ಬು ಉರಿದು ಉರಿದು ಬಿಸಿಯಾದಂತೆಯೇ, ಯಾವಾಗಲೂ 'ಬಿಜಿ‚"ಯಾಗಿರುವುದರಿಂದ ನಮ್ಮ ಮಂಡೆ ಬಿಸಿಯಾಗುವುದು!
''ಚಡ್ಡಿ ಹರಿಯುವಷ್ಟು ಕೆಲ್ಸ ಇದೆ, ಯಾವುದಕ್ಕೂ ಟೈಮಿಲ್ಲ..."" ಅನ್ನೋದು ಸದಾ ಡೆಡ್‌ಲೈನ್ ಭೂತದ ನೆರಳಲ್ಲೇ ನರಳುವ ಸಾಫ‚್‌್ಟವೇರಿಗರ ಕಾಮನ್ ಕಂಪ್ಲೇಂಟು. ಆದರೆ ಅದೇ ಸಾಫ‚್‌್ಟವೇರಿಗರು, ದಿನಕ್ಕೆ ಒಂದೆರಡು ಗಂಟೆಯಾದರೂ ಫ‚ಾರ್ವರ್ಡ್‌ಇಮೈಲ್‌ಪಾರಾಯಣ, ಇನ್ಸ್ಟಂಟ್ ಮೆಸ್ಸೆಜಿಂಗ್, ಎಸ್ಸೆಮ್ಮೆಸ್ಸು, ಸ್ಟಾಕ್‌ಅಪ್‌ಡೇಟ್ಸ್, ಕ್ರಿಕೆಟ್‌ಸ್ಕೋರು (ಈಗ ಫ‚ುಟ್‌ಬಾಲ್ ಕ್ರೇಜ್) ಇತ್ಯಾದಿ ಎಲ್ಲ ನೆಟ್ ಬೆನಿಫಿ‚ಟ್‌ಗಳತ್ತಲೂ ಮುಖಮಾಡಿರುತ್ತಾರೆ ಎಂಬುದನ್ನು ಗಮನಿಸಬೇಕು. ನಿಜವಾಗಿ ಚಡ್ಡಿ ಹರಿಯುವುದು ಕೆಲ್ಸದಿಂದಲೋ ಅಥವಾ ಇಂಥ ಕೊ-ಕರಿಕ್ಯುಲರ್, ಎಕ್ಸ್ಟ್ರಾ-ಕರಿಕ್ಯುಲರ್ ಚಟುವಟಿಕೆಗಳಿಂದಲೋ ಗೊತ್ತಿಲ್ಲ. ಅಷ್ಟಕ್ಕೂ, ಚಡ್ಡಿ ಹರಿಯುವುದಕ್ಕೂ 'ಬಿಜಿ‚"ನೆಸ್ಸಿಗೂ ಏನು ಸಂಬಂಧ ಅನ್ನೋದಂತೂ ನನಗೆ ಅರ್ಥವಾಗೊದೇ ಇಲ್ಲ.
'ಬಿಜಿ‚"ನೆಸ್ ಎಷ್ಟು ಅಗಾಧ ಪ್ರಮಾಣದಲ್ಲಿದೆ ಎಂಬುದಕ್ಕೆ ನಮ್ಮ ಚಿತ್ಪಾವನಿಮರಾಠಿ ಭಾಷೆಯಲ್ಲಿ ಒಂದು ಒಳ್ಳೆಯ ನುಡಿಗಟ್ಟು ಇದೆ - ಭಾಷಾಂತರಿಸಿದರೆ ಅದು, ''ನನಗೀಗ ಅಂಡು ತುರಿಸಲೂ ಪುರುಸೊತ್ತಿಲ್ಲ, ಕಂಡಾಬಟ್ಟೆ ಬಿಜಿ‚..."" ಎಂದಾಗುತ್ತದೆ. ವಿಪರ್ಯಾಸವೆಂದರೆ ಅಷ್ಟು ಮಾಡಲಿಕ್ಕೂ ಪುರುಸೊತ್ತಿಲ್ಲ ಅಂತಾದ್ರೆ ಎಂಥ ಕಷ್ಟದ ಸಂಗತಿ ನೋಡಿ. ಆ ಕೆಲ್ಸವನ್ನು (ಯಾವುದಕ್ಕೆ ಟೈಮಿಲ್ಲವೊ ಅದನ್ನು) ಔಟ್ ಸೋರ್ಸ್ ಮಾಡಲಿಕ್ಕಾದರೂ ಆಗುತ್ತದೆಯೆ? ಅಯ್ಯೋ ರಾಮಾ!
'ಬಿಜಿ‚"ನೆಸ್ ರೋಗ ಮನುಷ್ಯರಿಗೆ ಮಾತ್ರ ತಗಲೋದು. ಪ್ರಾಣಿಗಳೆಲ್ಲ ತಮ್ಮಷ್ಟಕ್ಕೇ ತಾವೇ ತಂತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರೂ ಆ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ, 'ಬಿಜಿ‚" ಅಂತ ಹೇಳಿಕೊಳ್ಳುವುದಂತೂ ಇಲ್ಲವೇಇಲ್ಲ. ತೀರಾ ಕೆದಕಿದರೆ ಕೆಣಿಕಿದರೆ ಮಾತ್ರ ಬಾಯಿಬಿಚ್ಚುತ್ತವೆ. ಈ ಸಿದ್ಧಾಂತಕ್ಕೆ ಪುಷ್ಟೀಕರಣವಾಗಿ ನಾವೆಲ್ಲ ಎರಡನೆ ಕ್ಲಾಸಿನಲ್ಲಿ ಕಲಿತ ಪದ್ಯವನ್ನು ಉಲ್ಲೇಖಿಸಬಹುದು. ಅದರಲ್ಲಿ, ಪುಟ್ಟಮಗುವೊಂದು ತನ್ನ ಜತೆ ಆಡಲಿಕ್ಕೆ ಇರುವೆ, ಜೇನ್ನೊಣ, ಕೋಗಿಲೆ, ನಾಯಿಮರಿ ಇತ್ಯಾದಿಗಳನ್ನು ಕೇಳಿಕೊಳ್ಳುತ್ತದೆ. ಅವಾದರೋ ತಂತಮ್ಮ ಕೆಲಸಗಳಲ್ಲಿ ವ್ಯಸ್ತವಾಗಿರುತ್ತವೆ, ಮಗು ಎಷ್ಟು ದೀನವಾಗಿ ಬೇಡಿಕೊಂಡರೂ ಕೆಲಸ ಮುಂದುವರಿಸಿಕೊಂಡೇ ಇರುತ್ತವೆ.
'ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ... ಆಡಲಿಕ್ಕೆ ಅಮ್ಮನಿಂದ ಕರಣಿ ಬೆಲ್ಲ ತರುವೆ..." ಎಂಬ ಪ್ರಲೋಭನೆಗೆ ಇರುವೆಯಾಗಲೀ, 'ಕುಹೂಕುಹೂ ಕೂಗುತಿರುವ ಮಧುರಕಂಠ ಕೋಗಿಲೆ... ಎಲೆಯ ಬಲೆಯ ನೆಲೆಯಾಳಿರಲು ನಾನು ಜೊತೆಗೆ ಬರುವೆ..." ಎಂಬ ಹೊಗಳಿಕೆಗೆ ಕೋಗಿಲೆಯಾಗಲೀ, 'ನಾಯಿಮರಿ ನಾಯಿಮರಿ ನಿನ್ನ ಜೊತೆಗೆ ಆಡುವೆ... ಕುಂಯ್‌ಕುಂಯ್ ರಾಗ ಕಲಿಸು ನಿನ್ನ ಹಾಗೆ ಹಾಡುವೆ..." ಎಂಬ ಬೇಡಿಕೆಗೆ ನಾಯಿಮರಿಯಾಗಲೀ ಯಾವುವೂ ಬಗ್ಗುವುದಿಲ್ಲ. ಹಾಗಂತಹೇಳಿ 'ನಾವು ಸಿಕ್ಕಾಪಟ್ಟೆ ಬಿಜಿ‚..." ಅಂತೇನೂ ಅವು ಸಿಡಿಮಿಡಿಗೊಳ್ಳುವುದಿಲ್ಲ. ಕೂಲ್‌ಆಗಿಯೇ, 'ಕೆಲ್ಸ ಮಾಡ್ತಿದ್ದೇನೆ, ಮುಗಿಸಿ ಆಮೇಲೆ ಬರ್ತೇನೆ..." ಎನ್ನುತ್ತವೆ. ಕೊನೆಗೆ ಮಗು ಕೂಡ, 'ಯಾರು ಇವರು ನನ್ನ ಸಂಗ ಆಡಲಿಕ್ಕೆ ಒಲ್ಲರು... ತಮ್ಮತಮ್ಮ ಕೆಲಸದಲ್ಲಿ ವೇಳೆ ಕಳೆವರೆಲ್ಲರು... ಅವರ ಹಾಗೆ ಮೊದಲು ನನ್ನ ಕೆಲಸ ನಾನು ಮಾಡುವೆ..." ಎಂದು ಆಟದ ಆಸೆಯನ್ನು ಬಿಟ್ಟು, ಹೋಮ್‌ವರ್ಕ್‌ಗೆ ಹಚ್ಚಿಕೊಳ್ಳುತ್ತದೆ.
'ಬಿಜಿ‚"ಯಾಗಿರೋದು ಮತ್ತು ಹಾಗಾಂತ ಹೇಳಿಕೊಳ್ಳೋದು ಪ್ರಾಮಾಣಿಕರ ಲಕ್ಷಣವಲ್ಲ. ನಮಗೆಲ್ಲರಿಗೂ ದಿನಕ್ಕೆ ಇಪ್ಪತ್ತನಾಲ್ಕೇ ಗಂಟೆಗಳಿರೋದು, ಒಂದಲ್ಲಒಂದು ಚಟುವಟಿಕೆಯಿಂದ ಆ ಇಪ್ಪತ್ತನಾಲ್ಕು ಗಂಟೆಗಳು ತುಂಬಿರೋದು. ಬಹಳಷ್ಟು ಮಂದಿಗೆ ಪ್ರತಿದಿನವೂ 'ಬಿಜಿ‚" ದಿನ, ಅವರು ಬಿಜಿ‚ ಬಿಜಿ‚ಯೆಂದು ಹೇಳಿಕೊಳ್ಳುವುದರಲ್ಲೇ ಸೋತು ಸುಣ್ಣವಾಗುತ್ತಾರೆಯೇ ಹೊರತು ಕೆಲಸಗಳಾವುವೂ ಸುಸೂತ್ರ ಆಗುವುದಿಲ್ಲ. 'ವ್ಯಸ್ತ" ದಿನ ಅವರ ಪಾಲಿಗೆ 'ವ್ಯರ್ಥ" ದಿನ ಆಗುತ್ತದೆ. ಹಾಗಿದ್ರೆ ಈ 'ಬಿಜಿ‚"ನೆಸ್ ಭೂತವನ್ನು ನಿರ್ಮೂಲ ಮಾಡೋದು ಹೇಗೆ?
Busy Day ಅನ್ನೋ ಕಾನ್ಸೆಪ್ಟನ್ನೇ ಕಿತ್ತುಹಾಕಬೇಕು. ಅದಕ್ಕೆ ಬದಲು Full Day ಎನ್ನುವ ಮೈಂಡ್‌ಸೆಟ್ ಬೆಳೆಸಿಕೊಳ್ಳಬೇಕು. ಅಂದರೆ, 'ವ್ಯಸ್ತ" ದಿನ ಹೋಗಿ 'ಪರಿಪೂರ್ಣ" ದಿನ ಎನಿಸಬೇಕು. ಕೆಲವು ಸರಳಸೂತ್ರಗಳನ್ನು ಪಾಲಿಸಿದರೆ ಅದನ್ನು ಸಾ-ಧಿ-ಸುವುದು ಕಷ್ಟವೇನಲ್ಲ.
1) ಬಿಜಿ‚ಯೆಂದು ಆವೇಶಪೂರಿತ ಜೀವನ ನಡೆಸೋದೂ ಒಂದೇ, ಅರ್ಧ ಸತ್ತಂತೆ ಬದುಕೋದೂ ಒಂದೇ! ಪ್ರತಿದಿನದ ಪ್ರತಿಚಟುವಟಿಕೆಯಲ್ಲೂ ಒಂದು ತೆರನಾದ Flow (ಹರಿವು) ಇರಬೇಕು. ಈ Flow ಕಾನ್ಸೆಪ್ಟನ್ನು ಚಿಕಾಗೊ ವಿಶ್ವವಿದ್ಯಾಲಯದ ಒಬ್ಬ ಮನೋವಿಜ್ಞಾನಿ ಮತ್ತು ಶಿಕ್ಷಣತಜ್ಞ Prof.Mihaly Csikszentmihalyi ಎನ್ನುವವರು ಚೆನ್ನಾಗಿ ವಿವರಿಸಿದ್ದಾರೆ. Flow ಎಂದರೆ ಅದೊಂದು ಮನಸ್ಸಿನ ಸ್ಥಿತಿ. ಸೃಜನಶೀಲತೆ (creativity) ಮತ್ತು ಉತ್ಪಾದಕತೆ(productivity) ಗರಿಷ್ಠವಾಗಿರುವ ಸ್ಥಿತಿ. Flow ದಿಂದಾಗಿ ಒಳ್ಳೊಳ್ಳೆಯ ಆಲೋಚನೆಗಳು ಹೊಳೆಯುತ್ತವೆ, ಸಾಮರ್ಥ್ಯ ದ್ವಿಗುಣವಾಗುತ್ತದೆ, ಮಾಡುತ್ತಿರುವ ಕೆಲಸ ಫಲಪ್ರದವಾಗಿ ಸಂತೋಷ ಸಿಕ್ಕೇ ಸಿಗುತ್ತದೆ. ಆದರೆ Flow ಉಂಟಾಗಬೇಕಾದರೆ, ಮಾಡುತ್ತಿರುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದನ್ನು ಕಲಿಯಬೇಕು. ಗುರಿ ಸಾಧನೆಯ ಏಕಾಗ್ರಚಿತ್ತದಲ್ಲಿ 'ಸಮಯ"ದ ಕಲ್ಪನೆ ಕರಗಿಹೋಗಬೇಕು. ಇದಾಗಬೇಕಿದ್ದರೆ ಟೈಮಿಲ್ಲ ಟೈಮಿಲ್ಲ ಎಂಬ ಚಡಪಡಿಕೆ ನಿಲ್ಲಬೇಕು. ಬಿಜಿ‚ ಬಿಜಿಯೆಂದು ಹಾರಾಡುತ್ತಿರುವವರಿಂದ ಇದು ಸಾಧ್ಯವಾಗುವುದಿಲ್ಲ.
2) ಬಿಜಿ‚ಯಾಗಿರೋದು ಒಂದು ದುರ್ವ್ಯಸನ: ಯಾವುದೇ ಕೆಟ್ಟ ಚಾಳಿಯಂತೆಯೇ 'ಬಿಜಿ‚"ನೆಸ್ ಕೂಡ ಒಂಥರದ ಪರಮಾನಂದವನ್ನು, ಅಮಲನ್ನು ಕೊಡುವುದಕ್ಕಾರಂಭಿಸಿರುತ್ತದೆ. ಕಳಪೆಮಟ್ಟದ ಕಾರ್ಯನಿರ್ವಹಣೆಗೆ ಅದೊಂದು ನೆಪವಾಗುತ್ತದೆ. ಗಮನಹರಿಸಬೇಕಾದ ಸಂಗತಿಗಳತ್ತ ನಿರ್ಲಕ್ಷ್ಯಕ್ಕೆ ದಾರಿಯಾಗುತ್ತದೆ. ಎಷ್ಟೋ ಜನ 'ಬಿಜಿ‚"ಯಾಗಿರೋದು ಅಂದರೆ ವೆರಿ ಇಂಪಾರ್ಟೆಂಟ್ ಕೆಲ್ಸ ಮಾಡ್ತಿರೋದು ಅಂತ ತಪ್ಪಾಗಿ ಅರ್ಥೈಸುತ್ತಾರೆ. ವಾಸ್ತವವಾಗಿ 'ಬಿಜಿ‚"ಯಾಗಿರೋದು ಅಂದರೆ ಸ್ವನಿಯಂತ್ರಣವಿಲ್ಲದಿರೋದು; ಕೆಲಸದ ಬಗ್ಗೆ ಆದ್ಯತೆಯಾಧಾರದ ಯೋಜನೆ ಇಲ್ಲದಿರೋದು!
3) ಆದ್ಯತೆಯನುಸಾರ ವಿಂಗಡಣೆ: ಎಲ್ಲವನ್ನೂ ಮಾಡಬಲ್ಲೆ ಎಂಬುದು ಹುಂಬತನ. ತನ್ನಿಂದ ಎಷ್ಟು ಸಾಧ್ಯ ಮತ್ತು ಯಾವುದು ಹೆಚ್ಚು ಮುಖ್ಯ ಎಂಬ ಸ್ಪಷ್ಟ ಅರಿವಿದ್ದು ಮಾಡಬೇಕಾದ ಕೆಲಸಗಳ ಪಟ್ಟಿಮಾಡಿಕೊಂಡರೆ ಎಷ್ಟೋ ಅನುಕೂಲವಾಗುತ್ತದೆ. ಅದಕ್ಕೆ ಬದಲು ಎಲ್ಲವನ್ನೂ ರಾಶಿಹಾಕಿಕೊಂಡು ಬಿಜಿ‚ ಬಿಜಿ‚ಯೆಂದು ತೋರಿಕೊಂಡರೆ ನಮ್ಮ ಬದುಕಿನ ಬಂಡಿಯ ಡ್ರೈವರ್‌ಸೀಟಿಂದ ನಮ್ಮ ಎತ್ತಂಗಡಿಯಾಗುತ್ತದೆ. ಬಾಹ್ಯಶಕ್ತಿಗಳ ಕೈಗೆ ನಿಯಂತ್ರಣವನ್ನು ಒಪ್ಪಿಸಿದಂತಾಗುತ್ತದೆ.
4) ಇಲ್ಲ, ಆಗೋದಿಲ್ಲ ಎಂದು ಹೇಳಲು ಕಲಿಯಬೇಕು: ಕೆಲವರಿರುತ್ತಾರೆ, ದಾಕ್ಷಿಣ್ಯಕ್ಕಾಗಿ ಎಲ್ಲವನ್ನೂ ಒಪ್ಪಿಕೊಳ್ಳುವವರು. ಕೊನೆಗೆ ಯಾವೊಂದನ್ನೂ ಸರಿಯಾಗಿ ಮಾಡಲಾಗದವರು (ಸಮ್ಮೇಳನ ತಯಾರಿಗಳ ವೇಳೆ ಇದ್ದಬಿದ್ದ ಸಮಿತಿಗಳೆಲ್ಲದರಲ್ಲೂ ಸೇರಿಕೊಂಡು ಎಲ್ಲ ಕಡೆ ಇದ್ದೂ ಇಲ್ಲದಂತಿರುವವರ ಚಿತ್ರ ಈಗಾಗಲೆ ನಿಮ್ಮ ಮನಸ್ಸಲ್ಲಿ ಮೂಡಿರಬಹುದು). ಸ್ವಸಾಮರ್ಥ್ಯದ ಮಿತಿಯನ್ನು ಚೆನ್ನಾಗಿ ಅರಿತವನು ಆರೀತಿ ಮಾಡುವುದಿಲ್ಲ. No ಎಂದು ಹೇಳಲು ಆತ ಹಿಂಜರಿಯುವುದಿಲ್ಲ. ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಅದಕ್ಕೆ ನೂರುಪ್ರತಿಶತ ಏಕಾಗ್ರತೆ ಬೇಕು, ಶಿಸ್ತು ಬೇಕು. ಇನ್ನೊಬ್ಬರನ್ನು ಸಂತೋಷಪಡಿಸಲಿಕ್ಕಾಗಿ ನಮ್ಮಲ್ಲಿನ ಈ ಸದ್ಗುಣಗಳು ಬಲಿಯಾಗಬಾರದು. Yes ಎಂದು ಒಪ್ಪಿಕೊಂಡು ಕೆಲಸ ಮಾಡದೇ ಇರೋದಕ್ಕಿಂತ No ಎಂದು ಮೊದಲೇ ಹೇಳಿ ಕೈತೊಳೆದುಕೊಳ್ಳುವುದು ಯಾವತ್ತಿಗೂ ಒಳ್ಳೆಯದೇ.
5) ಅಭಿವ್ಯಕ್ತಿಯಲ್ಲಿ ಬದಲಾವಣೆ: ತನಗೆ ತಾನೇ ಹೇಳಿಕೊಳ್ಳುವುದಿರಲಿ ಅಥವಾ ಬೇರೆಯವರ ಮುಂದೆ ಘೋಷಿಸುವುದಿರಲಿ - 'ನಾನು ಬಿಜಿ‚ಯಾಗಿದ್ದೇನೆ" ಎಂದು ಹೇಳುವುದನ್ನು ನಿಲ್ಲಿಸಬೇಕು. ಬೇಕಿದ್ದರೆ 'ನನ್ನ ಕನಸುಗಳು, ಆಕಾಂಕ್ಷೆಗಳು ಕೊಚ್ಚಿಹೋಗುವುದನ್ನು ನೋಡಲಾರೆ" ಎಂದೋ ಅಥವಾ 'ಎಲ್ಲ ಮಾಡುತ್ತೇನೆಂದು ಹೊರಟರೆ ಕಾರ್ಯನಿರ್ವಹಣೆ ಕುಸಿಯುವ ಭಯವಿದೆ" ಅಂತನೋ ಅರ್ಥ ಬರುವಂತೆ ಪ್ರಾಮಾಣಿಕವಾಗಿ ಹೇಳಿಕೊಳ್ಳುವುದನ್ನು ಅಭ್ಯಾಸಮಾಡಿಕೊಳ್ಳಬೇಕು. ಆಗ ಬಿಜಿ‚ ಬಿಜಿ‚ ಬಿಜಿ‚ಯೆಂದು ಅಡಿಗಡಿಗ್ಹಾರುವುದು ತಪ್ಪುತ್ತದೆ. ಮೊದಲ ನಾಲ್ಕು ಸೂತ್ರಗಳನ್ನು ಪಾಲಿಸಿದರೆ ಸಹಜವಾಗಿಯೇ ನಮ್ಮಲ್ಲಿನ ಏಕಾಗ್ರತೆ ಹೆಚ್ಚುತ್ತದೆ, ಕೆಲಸದಲ್ಲಿ ತತ್ಪರರಾಗುವುದು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಯಾರಾದರೂ ''ಹೇಗಿದ್ದೀರಿ?"" ಎಂದು ಕೇಳಿದರೆ ''ಬಿಜಿ‚!"" ಎನ್ನುವ ಉತ್ತರಕ್ಕಿಂತ ಹೆಚ್ಚು ಅರ್ಥಪೂರ್ಣವಾದದ್ದನ್ನು, ಇಂಟೆರೆಸ್ಟಿಂಗ್ ಆಗಿರುವಂಥದ್ದನ್ನು ಹೇಳುವ ಸಾಮರ್ಥ್ಯ, ಯೋಗ್ಯತೆಗಳು ನಮಗೆ ಬರುತ್ತವೆ!
*
ನೀವೀಗ ಬಿಜಿ‚ಯಾಗಿದ್ದೀರೋ ಇಲ್ಲವೋ ಗೊತ್ತಿಲ್ಲ. ಮಂಡೆಬಿಸಿಯಂತೂ ಖಂಡಿತ ಆಗಿಲ್ಲ ಅಂದ್ಕೊಳ್ತೇನೆ - ಯಾಕಂದ್ರೆ ಇವತ್ತು ಟ್ಯೂಸ್‌ಡೇ ಅಲ್ಲವೆ? ಮತ್ತು, ವಿಚಿತ್ರಾನ್ನ ಭಕ್ಷಣ ಮಾಡೋದು ಮಂಡೆಬಿಸಿ ನಿವಾರಣೆಗಲ್ಲವೆ?
ನಿಮ್ಮ 'ಬಿಜಿ‚"ನೆಸ್ ಸಮಾಚಾರ ತಿಳಿಸುತ್ತ ಪತ್ರಿಸಿ, ವಿಳಾಸ - [email protected]
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications