108971malenaduದೀರ್ಘ ಕಾಲ ಬಾಳುವ ಹೂ ಬಿಗ್ನೋನಿಯಾ/literature/articles/2008/1229-long-lasting-bignonia-flower.htmlಹೇಮಂತ ಮುಗಿದು ಶಿಶಿರ ಋತು ಕಾಲಿಡುತ್ತಿದ್ದಂತೆ ಮಲೆನಾಡಿನ ಕಾಡಿನಲ್ಲಿ ಹಳೆತನ ಅಳಿದು ಹೊಸತನ ಪಡೆಯುವ ಸಂಭ್ರಮ. ಸಾವಿರಾರು ಪ್ರಭೇದಗಳ ಹೂಗಳು ನನಗಿಂತ ಚೆಲುವೆಯರು ಯಾರಲ್ಲಿ? ಎಂದು ಬೀಗಲು ಪ್ರಾರಂಭಿಸುತ್ತವೆ. ಅವುಗಳ ಆಯುಷ್ಯ ಮಾತ್ರ ಒಂದೇ ದಿನ. ಆದರೆ, ಬಿಗ್ನೋನೇಸಿಯೇ (Bignoniaceae) ಕುಟುಂಬಕ್ಕೆ ಸೇರಿದ ಬಿಗ್ನೋನಿಯಾ ಹೂ ಮಾತ್ರ ಭರ್ತಿ ಎರಡು ತಿಂಗಳುಗಳ ಕಾಲ ದೀರ್ಘ ಬಾಳುತ್ತದೆ.* ರಾಘವೇಂದ್ರ 33747http://kannada.oneindia.com/img/2008/12/29-bignonia2.jpg108971malenaduಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg108971malenaduಆಲೆಮನೆಯತ್ತ ಹೋಗೋಣ ಬನ್ನಿ/column/shreenidhi/2009/0224-alemane-in-malenadu.htmlಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಕರ್ನಾಟಕದ ಹಳ್ಳಿಗಳಲ್ಲಿ, ಅದರಲ್ಲಿಯೂ ಮಲೆನಾಡ ಹಳ್ಳಿಗಳಲ್ಲಿ ಆಲೆಮನೆಗಳು ಜೀವ ಪಡೆಯಲು ಶುರುಮಾಡುತ್ತವೆ. ಮುಸ್ಸಂಜೆ ಹೊತ್ತಲ್ಲಿ ಮಂಡಕ್ಕಿ, ಮಿರ್ಚಿ ಮೆಲ್ಲುತ್ತ ಗಿಂಡಿಗಟ್ಟಲೆ ತಾಜಾತಾಜಾ ಕಬ್ಬಿನಹಾಲನ್ನು ಗಂಟಲಿಗಿಳಿಸುತ್ತಿದ್ದರೆ... ಅದರ ಆನಂತ, ರಸಾಸ್ವಾದವನ್ನು ಪದಗಳಲ್ಲಿ ವರ್ಣಿಸುವುದು ಅಸಾಧ್ಯ. ಸಾಧ್ಯವಾದರೆ ಹಳ್ಳಿಗಳಲ್ಲಿ ಸಿಗುವ ಆಲೆಮನೆಗೆ ಭೇಟಿ ನೀಡಿ ಕಬ್ಬಿನರಸ ಹೀರಿರಿ.* ಶ್ರೀನಿಧಿ ಡಿಎಸ್ಮತ್ತೆ ಮಲೆನಾಡಿನ ಸುದ್ದಿ ಬರೀತಿದೀನಿ ಅಂತ 34838http://kannada.oneindia.com/img/2009/02/24-alemane1.jpg108971malenaduಮಣ್ಣನ್ನು ಮರೆತವರು ಮರಳಿ ಮಣ್ಣಿಗೆ/literature/my-karnataka/2009/0312-recession-malenadu-software-enggs-come-back.htmlಶಿವರಾಮ ಕಾರಂತರ 'ಮರಳಿ ಮಣ್ಣಿಗೆ' ಕೃತಿಯ ಬಗ್ಗೆ ಮಾತನಾಡುತ್ತಿಲ್ಲ. ಮಣ್ಣನ್ನೆ ಮರೆತು ಹೊದ ನಮ್ಮ ಜಿಲ್ಲೆಯ ಪ್ರತಿಭಾವಂತರು ಮರಳಿ ಮಣ್ಣಿಗೆ ಮರಳುತ್ತಿರುವವ ಬಗ್ಗೆ ಒಂದಿಷ್ಟು ಮಾತು. ಆರ್ಥಿಕ ಬಿಕ್ಕಟ್ಟು ಜಾಸ್ತಿ ದುಃಖವನ್ನು ತಂದಿದ್ದರೆ, ಒಂದು ಹಿಡಿ ಮಣ್ಣಿನಷ್ಟು ಸಂತೋಷವನ್ನೂ ಮರಳಿ ನೀಡಿದೆ. ಡಾಲರ್ ಕನಸನ್ನು ಬೆನ್ನತ್ತಿ ಋಣವನ್ನು ಮರೆತಿದ್ದ ಯುವಕ ಯುವತಿಯರಿಗೆ ಆರ್ಥಿಕ ಸಂಕಷ್ಟ ತಕ್ಕ ಪಾಠ 35172http://kannada.oneindia.com/img/2009/03/12-vinayak-patagar1.jpg108971malenaduಹಳ್ಳಿ ಹುಡುಗರ ಉಳಿಮನೆ (ಹೋಂಸ್ಟೇ)'ನಮ್ಮನೆ'/travel/karnataka/help/2009/0316-nammane-home-stay-talavata-shivamogga.htmlಕೆಲಸ ಅರಸುತ್ತಿರುವ ಹಳ್ಳಿ ಯುವಕರು ಬೆಂಗಳೂರಿಗೆ, ಕೆಲಸ ಸಿಕ್ಕ ಹಳ್ಳಿ ಸಾಫ್ಟ್ ವೇರ್ ಇಂಜಿನಿಯರುಗಳು ಡಾಲರ್ ಕನಸಿನಲ್ಲಿ ವಿದೇಶಕ್ಕೆ ಜಿಗಿಯುತ್ತಿರುವ ಸಂದರ್ಭದಲ್ಲಿ ಸಮಾನಮನಸ್ಕ ಶಿವಮೊಗ್ಗ ಜಿಲ್ಲೆ ತಳವಾಟದ ಹಳ್ಳಿ ಯುವಕರು ಪಟ್ಟಣಿಗರನ್ನೇ ಹಳ್ಳಿಗೆ ಸೆಳೆಯುವ ಕೈಂಕರ್ಯಕ್ಕೆ ಕೈಹಾಕಿದ್ದಾರೆ. ಪಟ್ಟಣ ಸೇರಬೇಕೆನ್ನುವ ಯುವಕರಿಗೆ ಮಾದರಿಯಾಗಿದ್ದಾರೆ. ಎಂಥವರ ಕೈಗೂ ನಿಲುಕುವ ಹೋಂಸ್ಟೇ ನಿರ್ಮಿಸಿ ಊಟ ವ್ಯವಸ್ಥೆಯ ಆತಿಥ್ಯ ನೀಡಿ ಉಪಜೀವನಕ್ಕೆ 35259http://kannada.oneindia.com/img/2009/03/16-nammane-homestay2.jpg194752marriageಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg194752marriageಪ್ರಾಮಿಸ್‌ ಮಾಡಿದ್ರೆ ಮಾತ್ರ ನಾನ್‌ ಈ ವಿಷ್ಯಾ ಹೇಳ್ತೀನಿ!/column/women/2007/020307gossipping.htmlಕಂಡೋರ ಪತ್ರ, ಅದರಲ್ಲೂ ಪ್ರೇಮ ಪತ್ರಗಳ ಓದೋದು ತಪ್ಪು ಅಂತ ನಮಗೆಲ್ಲರಿಗೂ ಚೆನ್ನಾಗಿ ಗೊತ್ತು, ಆದರೆ ಹಾಳಾದ್ದು ಎಂಥದ್ದೋ ಒಂದು ರೀತಿಯ ಕುತೂಹಲ! ಮೊನ್ನೆ ಹೀಗೆ ಒಂದು ಲವ್‌ಲೆಟರ್‌ ನನ್‌ ಕಣ್ಣಿಗೆ ಬಿತ್ತು. ಅದರ ಬಗ್ಗೆ ನಿಮಗೆ ಹೇಳ್ದೆಯಿದ್ರೇ, ಬೆಳಗ್ಗೆ ತಿಂದ ತಿಂಡಿ ಜೀರ್ಣವಾಗೋದಾದ್ರೂ ಹೇಗೆ? ಅವಳು ಆ ಲವ್‌ಲೆಟರ್‌ನಲ್ಲಿ ಏನೇನ್‌ ಬರ್ದೀದಾಳೆ? ಯಾರಿಗೆ ಬರ್ದೀದಾಳೆ ಅಂತಾ 10897http://kannada.oneindia.com/img/2009/08/27-woman-water1.jpg194752marriageಸಲ್ಲೂ, ಕತ್ರೀನಾ ವಿವಾಹ; ಸಾಮ್ನಾದಲ್ಲಿ ವರದಿ!/movies/bollywood/2009/01/24-are-salman-khan-katrina-kaif-married.htmlಬಾಲಿವುಡ್ ನ ಹಳೆಯ ಪ್ರೇಮಿಗಳು ಸಲ್ಮಾನ್ ಖಾನ್ ಮತ್ತ್ತು ಕತ್ರಿನಾ ಕೈಫ್ ಮದುವೆಯಾಗಿದ್ದಾರೆ ಎಂದು ಮಾರಾಠಿ ದೈನಿಕ 'ಸಾಮ್ನಾ' ವರದಿ ಮಾಡಿದೆ. ಕಡೆಗೂ ಸಲ್ಮಾನ್ ಖಾನ್ ಹೃದಯಕ್ಕಾದ ಗಾಯ ವಾಸಿ ಮಾಡಿಕೊಂಡಿದ್ದಾರಲ್ಲಾ ಎಂದು ಸಮಾಧಾನ ಪಡುವ ವೇಳೆಗೆ ಆ ಸುದ್ದಿ ತಿರುವುಮರುವಾಗಿದೆ!ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ ಜನ್ಮ ದಿನವಾದ ಜ.23ರಂದು ಪ್ರಕಟವಾದ ಸಾಮ್ನಾ ಪತ್ರಿಕೆಯಲ್ಲಿ ಸಲ್ಮಾನ್ 34267http://kannada.oneindia.com/img/2009/01/24-katrina-kaif2e.jpg194752marriageಮಲೆನಾಡ ಮದುವೆಯೆಂದರೆ.. ಸುಮ್ನೆನಾ?/column/shreenidhi/2009/0217-marriage-rituals-in-malenadu-karnataka.htmlನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ 34711http://kannada.oneindia.com/img/2009/02/17-woman-havyaka1.jpg194752marriageಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಕಂಕಣಬಲ/movies/bollywood/2009/03/30-shilpa-shetty-to-marry-raj-kundra.htmlಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(33)ಗೆ ಕಡೆಗೂ ಕಂಕಣ ಬಲ ಕೂಡಿಬಂದಿದೆ. ತನ್ನ ಬಹುಕಾಲದ ಗೆಳೆಯ,ಲಂಡನ್ ಉದ್ಯಮಿ ರಾಜ್ ಕುಂದ್ರಾ(34) ಜತೆ ಶಿಲ್ಪಾ ಸಪ್ತಪದಿ ತುಳಿಯಲಿದ್ದಾರೆ. ಮುಂದಿನ ಅಕ್ಟೋಬರ್ ನಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ ಹಸೆಮಣೆ ಏರಲು ಸಿದ್ಧವಾಗಿದ್ದಾರೆ.''ಸಾಂಪ್ರಾದಾಯಿಕ ವಿವಾಹದಲ್ಲಿ ನನಗೆ ಬಹಳಷ್ಟು ನಂಬಿಕೆಯಿದೆ. ನನ್ನ ತಂದೆ ತಾಯಿ ಸುದೀರ್ಘ 35 ವರ್ಷಗಳಷ್ಟು ಕಾಲ ವೈವಾಹಿಕ ಜೀವನ ನಡೆಸಿದ್ದಾರೆ. ಮದುವೆಗಳು 35576http://kannada.oneindia.com/img/2009/03/30-shilpashetty-raj1.jpg30952shreenidhiಮನೆಯಿಂದ ಮನೆಗೆ../column/shreenidhi/2008/0826-old-memories-from-one-home-to-another.htmlಊರಿಂದ ಊರಿಗೆ ಹೋಗುವುದು, ಮನೆಯಿಂದ ಮನೆ ಬದಲಾಯಿಸುವುದು ಬಾಡಿಗೆದಾರರಿಗೆ, ವರ್ಗಾವಣೆಯ ಸರ್ಕಾರಿ ಕೆಲಸ ಇರುವವರಿಗೆ ತಪ್ಪದ ಕರ್ಮ. ಆದರೆ ಅದರಲ್ಲೂ ಸ್ವಾರಸ್ಯವಿರುತ್ತದೆ. ಪ್ರತಿ ಬಾಡಿಗೆ ಮನೆಯೂ ನಮ್ಮ ಸ್ವಂತ ಮನೆಯೇ, ಅದನ್ನು ಬಿಡುವವರೆಗೆ. ಇಂಥ ಅನುಭವಗಳು ಪ್ರತಿಯೊಬ್ಬರದೂ ಆಗಿರುತ್ತವೆ. ಮನೆ ಬದಲಾಯಿಸುವುದು ಸಾಮಾನು ಸರಂಜಾಮುಗಳ ಮೆರವಣಿಗೆ ಮಾತ್ರವಲ್ಲ ನೆನಪುಗಳ ಮೆರವಣಿಗೆ. ಅಂಕಣಕಾರ : ಶ್ರೀನಿಧಿ ಡಿ.ಎಸ್. ವರುಷ 1145http://kannada.oneindia.com/img/2009/09/23-loaded-van1.jpg30952shreenidhiಲಾರಾ ಇಂಗಲ್ಸ್ ವೈಲ್ಡರ್ ಮತ್ತು ಕ್ರಿಸ್ಮಸ್/column/shreenidhi/2008/1223-laura-ingalls-wilder-little-house-series.htmlಮಗುವಿನ ಮುಗ್ಧತೆಯಿಂದ ಮಕ್ಕಳ ಕಥೆಗಳನ್ನು ಮನೋಜ್ಞವಾಗಿ ಬರೆದ ಲಾರಾಳ ನೆನಪು ಇವತ್ತಿನ ಕಾಡುಹರಟೆಯಲ್ಲಿ ಒಂದೇಸಮನೆ ಕಾಡುತ್ತಿದೆ. ವಿಸ್ಕಾನ್ ಸಿನ್ ಕಾಡಿನ ಮರದತೊಗಟೆಗಳಿಂದ ಸೂಸಿಬರುವ ಪರಿಮಳ ನೆತ್ತಿಗೇರುತ್ತಿದೆ. ನಾನೂ ಕೂಡ ನನ್ನ ಬಾಲ್ಯದ ಕಥೆಗಳನ್ನು ಬಾಲ್ಯದ ಭಾಷೆಯಲ್ಲೇ ಬರೆಯಲಾರೆನೇ ಎಂದು ನನಗೆ ನಾನೇ ಕೇಳಿಕೊಳ್ಳಲಾರಂಭಿಸಿದ್ದೇನೆ!* ಶ್ರೀನಿಧಿ ಡಿ. ಎಸ್.ಆಕೆ ಬರೆಯಹೊರಟಿದ್ದು ಎಂದಿಗೂ ಕಳೆದುಹೋಗಬಾರದ ಕಥೆಗಳನ್ನು. ಅವಳ ಜೀವನಾನುಭವಗಳು 33657http://kannada.oneindia.com/img/2008/12/23-laura-ingalls-wilder1.jpg30952shreenidhiಬಂದಿದೆ ಹೊಸ ವರುಷ ತಂದಿದೆ ಬಲು ಹರುಷ/column/shreenidhi/2008/1230-cheers-lets-celebrate-the-new-year.htmlಬದುಕಿನಲ್ಲಿ ಬರುವ ಎಲ್ಲದನ್ನೂ ಖುಷಿಯಲ್ಲಿ ಅನುಭವಿಸುವ ಹಲವರಿಗೆ, ಇದೊಂದು ಪರ್ವಕಾಲ! ಕುಣಿದು ಕುಪ್ಪಳಿಸಿ, ಹೊಸ ಜಿಗಿತಕ್ಕೆ ಅಣಿಯಾಗುವ ಸಮಯ. ಎಲ್ಲದನ್ನೂ ಸಮಾನವಾಗಿ ನೋಡುವ, ನಿರ್ಭಾವುಕ ಮನಸ್ಸಿಗೆ ಇದು ಅತ್ಯಂತ ಮಾಮೂಲಿಯ ಮತ್ತೊಂದು ದಿನ. ಎಂದಿನಂತೆ, ಒಂದು ದಿನಾಂಕ ಬದಲಿಯಾಗುತ್ತದೆ, ಅಷ್ಟೆ.* ಶ್ರೀನಿಧಿ ಡಿ.ಎಸ್.ಹೊಸ ನಿರ್ಧಾರಗಳನ್ನ ತೆಗೆದುಕೊಳ್ಳುವ, ಹೊಸ ವಿಚಾರಗಳನ್ನ ತುಂಬಿಕೊಳ್ಳುವ ದಿವ್ಯ ಘಳಿಗೆ ನವ ವರ್ಷ. ಒಂದು 33789http://kannada.oneindia.com/img/2008/12/30-new-year1.gif30952shreenidhiನಮ್ಮೂರಿನ ಅಂದಿನ ಚೆಂದದ ಕೆರೆಗೆ ಇಂದೇನಾಗಿದೆ?/column/shreenidhi/2009/0106-sad-story-of-a-lake-in-karnataka.html* ಶ್ರೀನಿಧಿ ಡಿ.ಎಸ್.ಒಂದು ಉದ್ದನೆಯ ಏರಿ, ಏರಿಯ ಕೆಳಗೆ ದೊಡ್ಡ ಕೆರೆ. ನಿಂತು ನೋಡುತ್ತಿದ್ದರೆ, ಅದರ ತುದಿ ಕಾಣುವಷ್ಟರಲ್ಲಿ ಕಣ್ಣು ನೋಯಬೇಕು, ಅಷ್ಟು ದೊಡ್ಡದು. ಕೆರೆಯ ತುಂಬ ಗಾಳಿಗೆ ಅಲ್ಲಾಡುತ್ತ ನಿಂತ ತಾವರೆಯ ಹೂವುಗಳು. ಜೊತೆಗೆ ಹಸಿರು ಹುಲ್ಲ ಜೊಂಡು. ದಂಡೆಯ ಪಕ್ಕದಲ್ಲೇ ಸಾಲು ಮರಗಳು. ಕೆರೆಯ, ಅಕೋ ಆ ತುದಿಯಲ್ಲಿ ಒಂದು ಹಳೆಯ ಕಾಲದ ಶಿವನ 33924http://kannada.oneindia.com/img/2009/01/06-lake1.jpg30952shreenidhiರಾಜು ಅನಂತಸ್ವಾಮಿಗೆ ಬ್ಲಾಗಿಗಳ ಅನಂತ ನಮನ/mixed-bag/blogs/2009/0119-tribute-raju-ananthaswamy-by-kannada-bloggers.html[ಗಾಯಕ ರಾಜು ಅನಂತಸ್ವಾಮಿ ಅವರ ಅಕಾಲಿಕ ಮರಣ ದುರಂತವೇ ಸರಿ. ಅವರ ಅಗಣಿತ ಅಭಿಮಾನಿಗಳು ತಮ್ಮ ನೋವು,ಆಘಾತ, ವಿಷಾದ ಹಾಗೂ ಅಂತಿಮ ನಮನವನ್ನು ಬ್ಲಾಗ್ ಲೋಕದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಆಯ್ದ ಕೆಲವನ್ನು ಇಲ್ಲಿ ಕೊಡಲಾಗಿದೆ. ಮಿಕ್ಕವರು ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಲು ಅಡ್ಡಿಯಿಲ್ಲ. -ಸಂಪಾದಕ]*ಚೆಂಡೆಮದ್ದಳೆಕಣ್ತುಂಬಿ ಬರುತ್ತದೆ….!ನಾವು ಕ್ರಮಿಸುವ ದಾರಿಯನ್ನು ಪ್ರತಿ ಪ್ರತಿ ಹಂತದಲ್ಲೂ ಪ್ರಶ್ನಿಸುತ್ತಲೇ ನಮ್ಮ ಖಚಿತತೆಯನ್ನು ಮತ್ತಷ್ಟು 34153http://kannada.oneindia.com/img/2009/01/19-raju-ananthaswamy2.jpgnews"> ಮಲೆನಾಡ ಮದುವೆಯೆಂದರೆ.. ಸುಮ್ನೆನಾ? | Marriage rituals in Malenadu/Karnataka - ಮಲೆನಾಡ ಮದುವೆಯೆಂದರೆ.. ಸುಮ್ನೆನಾ? - Kannada Oneindia

ಮಲೆನಾಡ ಮದುವೆಯೆಂದರೆ.. ಸುಮ್ನೆನಾ?

Marriage rituals in Malenadu (Photo by Vasanth)
ನಗರಗಳಲ್ಲಿ ಮದುವೆಗಳೆಂದರೆ ಧಾರ್ಮಿಕ ಕಾರ್ಯಗಳಿಂದ ಹಿಡಿದು ಪ್ರತಿಯೊಂದನ್ನು ಕಾಂಟ್ರಾಕ್ಟ್ ಕೊಟ್ಟು ಕೈಬೀಸಿ ಮದುವೆ ಮಂಟಪಕ್ಕೆ ನಡೆದು ಬರುವಷ್ಟರ ಮಟ್ಟಕ್ಕೆ ಯಾಂತ್ರಿಕವಾಗಿವೆ. ಎಲ್ಲ ಮದುವೆಗಳೂ ಹೀಗೇ ಇಲ್ಲದಿದ್ದರೂ ಕಷ್ಟ ತಪ್ಪಿದರೆ ಸಾಕಪ್ಪ ಅನ್ನುವಂತಾಗಿವೆ. ಆದರೆ, ಮಲೆನಾಡುಗಳಲ್ಲಿ ಮದುವೆಗಳೆಂದೆ ಹೀಗಲ್ಲ. ಅಲ್ಲಿಯ ಸಂಭ್ರಮಕ್ಕೆ ಎಲ್ಲೆಯೇ ಇಲ್ಲ. ಊರಿನ ಪ್ರತಿಯೊಬ್ಬರೂ ಬಂಧುಗಳೇ. ಇಷ್ಟೊಂದು ಜನರನ್ನ ಹೇಗಪ್ಪ ಸಂಭಾಳಿಸುವುದು ಅಂದುಕೊಂಡರೂ ಮದುವೆ ಮುಗಿಸಿ ನೆಂಟರಿಷ್ಟರನ್ನು ಸಾಗಹಾಕಿದಾಗ ಏನೋ ಒಂಥರ ಖಾಲಿಖಾಲಿ.

* ಶ್ರೀನಿಧಿ ಡಿಎಸ್

ಸಿಕ್ಕಾಪಟ್ಟೆ ಬಿಸ್ಲು, ಮಕ್ಳಿಗೆಲ್ಲ ರಜೆ. ಹೊರಗೆ ತಿರುಗಾಡೋಕೆ ಹೊರಟರೆ ಬೆವ್ರು- ಸೆಖೆ. ಬಿಸಿ ಗಾಳಿ. ಮನೆ ಹಂಚಿನ್ ಮೇಲೆ, ಚಪಾತಿ ಸುಡಬಹುದು. ಊರಲ್ಲಿ ಜಾತ್ರೆ , ದಿನಾ ದೇವಸ್ಥಾನಕ್ಕೆ ಬೇರೆ ಹೋಗ್ಬೇಕು. ಹಲಸಿನ ಹಪ್ಳ ಮಾಡೋ ಚಿಂತೆ, ಮಳೆಗಾಲಕ್ ಕಟ್ಗೆ ಒಟ್ ಮಾಡೋ ಕಷ್ಟ, ಕರೆಂಟಿಲ್ದೇ ಒದ್ದಾಡೋ ರಾತ್ರೆ, ಒಂದಾ ಎರಡಾ? ಎಲ್ಲ ಈ ಬೇಸಿಗೆಯ ಜೊತೆ ಜೊತೆಗೇ ಬರತ್ತೆ. ಅದೇನೋ ಹೇಳ್ತಾರೆ ನಮ್ಮಲ್ಲಿ, "ಬಕನ್ ಬಾರಿ, ಮಗನ್ ಮದ್ವೆ, ಹೊಳಿಂದಚೀಗ್ ಪ್ರಸ್ಥ, ಎಲ್ಲ ಒಟ್ಟಿಗೇ ಬಂದಿತ್ತಡ" ಅಂತ.

ಹಾ! ಮದ್ವೆ ಅಂದ್ ಕೂಡ್ಲೆ ನೆನ್ಪಾಯ್ತು, ಈ ಮದ್ವೆ ಗೌಜು ಗಲಾಟೇನೂ ಬರೋದು ಬೇಸ್ಗೇಲೆ. ಪ್ರತೀ ವರ್ಷ ಎಪ್ರೀಲು ಮೇ ತಿಂಗ್ಳಲ್ಲಿ ಕಡ್ಮೆ ಅಂದ್ರೂ 10 ಮದ್ವೆ ಇದ್ದಿದ್ದೆ. ಅದರಲ್ಲಿ 4-5 ನಮ್ಮ ಅತ್ಯಂತ ಹತ್ತಿರದೋರ್ದು. ಮನೇಲಿ ನೀರಿರಲ್ಲ, ನಮಗೇ ಪರದಾಟ, ಅದ್ರ್ ಜೊತೆಗೆ, ಒಂದಿಷ್ಟ್ ಜನ ನೆಂಟ್ರು - ನಮ್ ಮನೆ ಹತ್ರ ಅಂತ ಬಂದು ಉಳ್ಕೊಂಡಿರೋರು, ಚಿಳ್ಳೆ ಪಿಳ್ಳೆಗಳ ಸಮೇತ. ಮೂರು ಟ್ಯೂಬ್ ಲೈಟು, ಒಂದಿಷ್ಟ್ ಗ್ಲಾಸು, ಒಡಿಯೋದೆ. ನಮಗೆ ಬೈಯೋ ಹಾಂಗೂ ಇಲ್ಲ, ಬಿಡೋ ಹಾಂಗೂ ಇಲ್ಲ, ಬಿಸಿ ತುಪ್ಪ!

ಹೊರಗಡೆ ತೋಟದಲ್ಲಿ ಕೆಲ್ಸಕ್ ಬಂದಿರೋರು ಒಂದಿಷ್ಟ್ ಜನ . ಅವ್ರ್ಗೂ ಮಾಡ್ ಹಾಕಿ, ಬಂದೊರ್ನ ಸುಧಾರ್ಸಿ, ಉಫ್, ಅಮ್ಮ ಕಂಗಾಲು. ಮದ್ವೆ ಮನೆಗೆ ಬೇರೆ ಹೋಗ್ಬೇಕು, 2 ದಿನಾ ಮುಂಚೆ! ಮಂಗಳ ಪತ್ರ ಕೊಟ್ ಕೂಡ್ಲೆ ಧಮಕೀನೂ ಬಂದಿರುತ್ತದೆ, "ಎರಡು ದಿನ ಮುಂಚೆ ಬಂದು ಎಲ್ಲಾ ಸುಧಾರ್ಸಿಕೊಡಕು" ಅಂತ. ಏನೇ ರಗ್ಳೆ ಇದ್ರೂ, ಮದ್ವೆ ಮನೆ ಅಂದ್ರೆ ಖುಷಿನೇ ಬಿಡ್ರೀ! ನಂಗೆ, ನಿಮ್ಗೆ ಮತ್ತೆ ಎಲ್ಲರಿಗೂ, ಅಲ್ವಾ?

ಮದ್ವೆ ಮನೆ ಓಡಾಟದಲ್ಲಿರೋ ಸಂತೋಷ ಮತ್ ಎಲ್ಲೂ ಇಲ್ಲ! ಎಲ್ಲರೂ ಕೆಲ್ಸ ಮಾಡೋರೆ. ನಾನ್ ಹೇಳ್ತಿರೋದು ಮನೇಲೇ ನಡಿಯೋ ಮಲೆನಾಡಿನ ಮದ್ವೆ ಬಗ್ಗೆ, ಈ ಪೇಟೆ ಛತ್ರದ್ ಮದ್ವೇ ಅಲ್ಲಾ ಮತ್ತೆ. ಚಪ್ಪರ ಹಾಕೋರೇನೂ, ಪಾತ್ರೇ ಸಾಗ್ಸೋರೇನು, ಹೂವು, ಹಣ್ಣು ತರೋರೇನು, ಓಡಾಟವೇ ಓಡಾಟ. ಮಕ್ಳಿಗಂತೂ ದೊಡ್ಡೋರ್ ಕೈ ಕಾಲಡಿಗೆ ಸಿಗೋದೆ ಸಂಭ್ರಮ. ಉಮೇದಲ್ಲಿ ಕೆಲಸ ಮಾಡೋ ಯುವಕರ ಒಂದು ಪಂಗಡ ಆದ್ರೆ, ಕೆಲ್ಸ ಮಾಡ್ಸೋ ಹಿರೀರದು ಇನ್ನೊಂದು. "ತಮ್ಮಾ, ಆ ಬದಿ ಸ್ವಾಂಗೆ ಹೊಚ್ಚಿದ್ದು ಸರಿ ಆಯ್ದಿಲ್ಲೆ ನೋಡು, ಹಾನ್, ಸ್ವಲ್ಪ ಇತ್ಲಾಗ್ ತಗ, ಹಾ, ಹಾಂಗೆ.. ಈಗ್ ಸರಿ ಆತು", "ಒಲೆ ಸ್ವಲ್ ವಾರೆ ಆದಾಂಗ್ ಇದ್ದು, ಆ ತಿಮ್ಮಣ್ಣನ್ ಕರಿ", "ಬೆಳ್ಗೆ ಹಾಲ್ ತಪ್ಪವು ಯಾರು, ಬೇಗ್ ಹೋಗ್ ಬನ್ನಿ" ಉಸ್ತುವಾರಿ ಕೆಲ್ಸ! ಕೆಲ್ಸಾ ಮಾಡ್ತಾ ಇರೋ ಹುಡುಗ್ರು ಇವ್ರ್ ಮೇಲೆ ಸೇಡ್ತೀರ್ಸ್ಕೊಳಕ್ಕೆ ಸರಿಯಾದ್ ಟೈಮ್ ಗೆ ಕಾಯೋದಂತೂ ಸುಳ್ಳಲ್ಲ.

ಇಡೀ ಊರಿನ ಹುಡುಗ ಪಾಳಯಕ್ಕೆ ಈ ಮದ್ವೆ, ಒಂದು ನೆಪ. ಮದ್ವೆ ಮುಗಿಯೋ ತಂಕ ಇವರ ಹಾರಾಟನ ಯಾರೋ ಕೇಳೋ ಹಾಂಗಿಲ್ಲ! ಪರೀಕ್ಷೆ, ಮಾಷ್ಟ್ರು, ಅಪ್ಪ ಯಾರ್ ಕಾಟನೂ ಇರಲ್ಲ ಬೇರೆ. ಮನೆ ಹಿಂದಿನ ಬ್ಯಾಣದ ಗೇರು , ಮಾವುಗಳೆಲ್ಲ ಇವರದೇ ಪಾಲು. ಹುಡುಗೀರ ಪ್ರಪಂಚ ಬೇರೆಯದೇ, ಹೊಸ ಬಟ್ಟೆ, ಮದರಂಗಿ, ಹೂವು, ಅಮ್ಮನ ಹೊಸ ರೇಷ್ಮೆ ಸೀರೆಯ ಚಂದ, ಬೆಂಗಳೂರಿಂದ ಬಂದ ಅಕ್ಕ ಕಲಿಸಿಕೊಟ್ಟಿರೋ ಜಡೆ ಹಾಕುವ ನೂತನ ವಿಧಾನ..

ಇಷ್ಟೆಲ್ಲ ಗಡಿಬಿಡಿ ಎಲ್ಲರಿಗೆ ಇದ್ದರೂ, ಎಲ್ಲೋ ಒಂದು ಜೊತೆ ಕಣ್ಣು ಇನ್ನೊಂದನ್ನ ಸಂಧಿಸಿಯೇ ಸಂಧಿಸುತ್ತವೆ ಮತ್ತು ಚಿಗುರು ಪ್ರೇಮವೊಂದು ಹುಟ್ಟುತ್ತದೆ, ಮತ್ತದು ಅವರಿಬ್ಬರಿಗೆ ಮಾತ್ರ ತಿಳಿದಿರುತ್ತದೆ! ಅದೇ ಊರಿನ್ ಹುಡ್ಗಿ ಇರಬಹುದು, ವರ್ಷಗಟ್ಲೆ ಅವಳು ಇವನ್ನ - ಇವನು ಅವಳನ್ನ ನೋಡ್ತಾ ಇದ್ರೂ, ಈ ಮದ್ವೆ ಮನೆ ಅವರಲ್ ಹೊಸ ಭಾವ ಹುಟ್ಟಿಸುತ್ತದೆ. ಎಲ್ಲೋ ಅಟ್ಟದ ಮೇಲಿನ ಬಾಳೆಗೊನೆಯನ್ನ ಕೆಳಗಿಳ್ಸೋವಾಗ, ಪಾತ್ರೆ ದಾಟಿಸುವಾಗ, ತರಕಾರಿ ಹೆಚ್ಚುವಾಗ, ತೋಟದಲ್ಲಿ ವೀಳ್ಯದೆಲೆ ಏಣಿಯನ್ನ ಅವನು ಹತ್ತಿದ್ದಾಗ, ಒತ್ತಾಯ ಮಾಡಿ ಹೋಳಿಗೆ ಬಡಿಸುವಾಗ!..

ತಲೆ ಮೇಲೆ ಸುಡೋ ಬಿಸ್ಲಿದ್ರೂ, ಗಾಳಿ ಬೀಸೋದು ನಿಲ್ಸಿದ್ರೂ, ಸಿಕ್ಕಾಪಟ್ಟೆ ಜನ ಅತ್ತಿಂದಿತ್ತ ಓಡಾಡ್ತಾ ಇದ್ರೂ, ಯಾವ್ದೋ ಒಂದು ಮಸ್ತ್ ಘಳಿಗೆಯಲ್ಲಿ ಹುಟ್ಟಿ ಬಿಡುತ್ತದೆ ಈ ಭಾವ. ದೂರದೂರಿಂದ ಬಂದ ಹುಡುಗನಾದರೆ ಅಥವ ಹುಡುಗಿಯಾದರೆ ಕತ್ತಲ ಮೂಲೆಯವರೆಗೆ ಸಾಗೀತೇನೋ, ಇಲ್ಲವಾದರೆ ಹೆಚ್ಚಿನ ಸಂದರ್ಭಗಳಲ್ಲಿ, ಕಣ್ಣ ಆರಾಧನೆಯಲ್ಲೇ ಕಳೆಯುತ್ತದೆ. ಪರಸ್ಪರ ನೋಟದಲ್ಲೇ ಅಚ್ಚರಿ- ನಗು.

ಮದುವೆ ಬರಿಯ ಇಬ್ಬರದಲ್ಲ , ಹಲವು ಬಂಧಗಳನ್ನ ಬೆಸೆಯುತ್ತದೆ. ನಾಲ್ಕು ವರ್ಷದಿಂದ ಮಾತಾಡ್ದೇ ಇರೋ ಗಣಪಣ್ಣ- ಮಾಬ್ಲೇಶ್ವರ ಈ ಮದುವೇಲಿ ಒಟ್ಟಿಗೇ ಅನ್ನದ ಕೌಳಿಗೆ ಹಿಡ್ದ್ರೂ ಆಶ್ಚರ್ಯ ಇಲ್ಲ! ಪಾಲಾಗಿ, ಅಡ್ಡ ಬಾಗಿಲುಗಳನ್ನ ಮುಚ್ಚಿದ್ದ ಮನೆಗಳು, ಈಗ ತೆರೆದುಕೊಳ್ಳುತ್ತವೆ, ಎಲ್ಲರ ಮನೆಯ ಬಾಳೇ ಎಲೆಗಳೂ ಸಾಲಾಗಿ ಹಾಕಲ್ಪಡುತ್ತವೆ, ಸಾಲುಮನೆಗಳ ಅಟ್ಟದ ಮೇಲೆ ಹಾಸಿರುವ ಕಂಬಳಿಗಳು, ಇಡಿಯ ಊರಿನದು!. ಎಲ್ಲ ಕೊಟ್ಟಿಗೆಗಳ ಗಿಂಡಿ ನೊರೆ ಹಾಲು ಬಂದು ಬೀಳುವುದು ಒಂದೇ ಪಾತ್ರೆಗೆ. ವೆಂಕಣ್ಣನ ಮನೆಯ ಚಾಲಿಯೂ, ಗಿರಿ ಭಟ್ಟರ ಕೆಂಪಡಕೆಯೂ, ಒಂದೇ ವೀಳ್ಯದ ಬಟ್ಟಲೊಳಗೆ.

ಮದುವೆ, ಇಡಿಯ ಊರನ್ನ ಒಗ್ಗೂಡಿಸಿರುತ್ತದೆ. ಮದುವೆ ಮುಗಿದ ಮೇಲೆ, ಎಲ್ಲ ತೆರಳಿದ ಮೇಲೆ, ಊರಿಗೂರೇ ಆ ಖಾಲಿತನವನ್ನ ಅನುಭವಿಸುತ್ತದೆ. ಚಪ್ಪರ, ಮನೆಯ ಮೆತ್ತು ಎಲ್ಲ ಖಾಲಿ. ಬಾಡಿದ ಹೂವಿನ ರಾಶಿ, ಸುತ್ತಿಟ್ಟ ಚಾಪೆಗಳು, ತಮ್ಮ ತಮ್ಮ ಮನೆಗಳಿಗೆ ತೆರಳಲು ಸಿದ್ಧವಾಗಿ ನಿಂತ ಪಾತ್ರೆ- ಕಂಬಳಿಗಳ ಗಂಟು, ಪೆಚ್ಚು ಮೋರೆಯಲ್ಲಿ ಮತ್ತೆ ತೋಟದ ಕಡೆಗೆ ಹೊರಟು ನಿಂತ ಆಳು.. ಮಗಳನ್ನ ಕಳುಹಿಸಿ ಕೊಟ್ಟ ಅಪ್ಪ- ಅಮ್ಮ ಮಾತ್ರವಲ್ಲ, ಮದುವೆ ಮನೆಯಲ್ಲಿ ಸಿಕ್ಕಿದ್ದ ಹೊಸ ಗೆಳೆಯನನ್ನ ಕಳೆದುಕೊಂಡ ಹುಡುಗಿಯೂ ಅಷ್ಟೇ ನೋವನುಭವಿಸುತ್ತಾಳೆ. ಇನ್ನು ಯಾವಾಗ ಬರುವವನೋ ಅವನು..

ಎಲ್ಲರ ಮನೆಯ ಪಾತ್ರೆ ಪಗಡ, ಕಂಬಳಿಗಳು ಅವರ ಮನೆಯ ಮೇಲುಪ್ಪರಿಗೆಯಲ್ಲಿ ಕುಳಿತಾದ ಮೇಲೆ, ಕರೆದ ನೊರೆಹಾಲು ಮತ್ತೆ ತಮ್ಮ ತಮ್ಮ ಮನೆಯ ಗಿಂಡಿಗಳೊಳಗೇ ಕಲಕಲು ಶುರುವಾದ ಮೇಲೆ, ಸಾಲು ಸಾಲಾಗಿ ಎಲ್ಲರ ಮನೆಯ ಚಿಟ್ಟೆಗಳನ್ನ ನೆಗೆದೋಡುತ್ತಿದ್ದ ಪುಟ್ಟ ಪೋರಿಯ ಕಾಲ್ಗೆಜ್ಜೆ ಶಬ್ದ, ಮುಂದೆಷ್ಟೋ ದಿನಗಳವರೆಗೆ ಅನುರಣಿಸುತ್ತಿರುತ್ತದೆ, ಬಿಸಿಲ ಮಧ್ಯಾಹ್ನಗಳಲ್ಲಿ.

ಪೂರಕ ಓದಿಗೆ
ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+