ಹಳೆಬೇರು ಹೊಸಚಿಗುರು ; ಅದೇ ಮರ ಅದೇ ನೆರಳು
ಕಳೆದ
ಹನ್ನೊಂದು ವರ್ಷಗಳಿಂದ ದಟ್ಸ್ ಕನ್ನಡ ವೆಬ್ ಸೈಟ್ ನೋಡುತ್ತಿರುವವರಿಗೆ ಇಂದು ಕಾಣುತ್ತಿರುವ ಮುಖಪುಟ ಮತ್ತು ಲೇಖನ ಪುಟಗಳ ಹೊಸ ವಿನ್ಯಾಸ ಯಾವುದೇ ಆಚ್ಚರಿಯನ್ನುಂಟು ಮೂಡುವುದಿಲ್ಲ. ಏಕೆಂದರೆ ಕಾಲಕಾಲಕ್ಕೆ ಅಗತ್ಯಗಳಿಗೆ ಮತ್ತು ಓದುಗರ ಅಭಿರುಚಿಗೆ ತಕ್ಕಂತೆ ನಾನಾ ವಿನ್ಯಾಸಗಳನ್ನು ದಟ್ಸ್ ಕನ್ನಡ ನೀಡುತ್ತ ಬಂದಿದೆ. ಹೊಸತನ್ನು ನೀಡುವುದರಲ್ಲಿ ದಟ್ಸ್ ಕನ್ನಡ ಯಾವತ್ತೂ ಮುಂದು ಎನ್ನುವುದನ್ನು ಒತ್ತಿ ಹೇಳಬೇಕಾಗಿಲ್ಲ. id="toptextpromo">ಅನೇಕ
ಹೊಸ ಚಿಗುರಿನ ಲೇಖಕರಿಗೆ ವೇದಿಕೆ ಒದಗಿಸುತ್ತಾ ಬಂದಿರುವ ನಿಮ್ಮ ನೆಚ್ಚಿನ ಅಂತರ್ಜಾಲ ತಾಣ, ವಿಶ್ವಕನ್ನಡಿಗರಿಗೆ ವಿಶಿಷ್ಟ ಬಗೆಯ ಲೇಖನಗಳನ್ನು ನೀಡುತ್ತಾ ಬಂದಿದೆ. ತಾಜಾ ಸುದ್ದಿಯಿಂದ ಸಿನೆಮಾ ಗಾಸಿಪ್ ವರೆಗೆ, ಕಾಮಸೂತ್ರದಿಂದ ಊರ ಉಸಾಬರಿಯವರೆಗೆ, ಜೋಕುಗಳಿಂದ ಜ್ಯೋತಿಷ್ಯದವರೆಗೆ, ಆರೋಗ್ಯ ಸುದ್ದಿಯಿಂದ ಆಟೋಮೊಬೈಲ್ ವರೆಗೆ, ಅಣ್ಣಾ ಹಜಾರೆಯಿಂದ ಬರಾಕ್ ಒಬಾಮಾವರೆಗೆ, ವಿಭಿನ್ನ ಬಗೆಯ ಸುದ್ದಿ, ಲೇಖನಗಳು ಮುಖಪುಟದಲ್ಲೇ ಸುಲಭವಾಗಿ ಸಿಗಲೆಂದು ಈ ವಿನ್ಯಾಸ ಬದಲಾಯಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆದರೆ,
ಈಗ ಮುಖ್ಯ ವಿಷಯ ಹೊಸ ವಿನ್ಯಾಸದ ಬಗ್ಗೆ ಹೇಳುವುದಕ್ಕಾಗಿ ಮಾತ್ರವಲ್ಲ. ಈ ಹೊಸ ಡಿಸೈನ್ ನಮ್ಮ ಓದುಗರಿಗೆ ಹೇಗೆ ಅನಿಸುತ್ತದೆ ಎಂಬುದನ್ನು ತಿಳಿಯಲು ಕೂಡ ನಾವು ಉತ್ಸುಕರಾಗಿದ್ದೇವೆ. ದಟ್ಸ್ ಕನ್ನಡವನ್ನು ಇನ್ನೂ ಉತ್ತಮಪಡಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ನಿಮ್ಮ ಕೈಗಿಡುತ್ತಿದ್ದೇವೆ. ಹೊಸ ವಿನ್ಯಾಸ ಹೇಗಿದೆ? ಓದಲು ಸುಲಭವಾಗಿದೆಯೆ? ಎಂಥ ಲೇಖನಗಳನ್ನು ಇಷ್ಟಪಡುತ್ತೀರಿ? ಇನ್ನೂ ಉತ್ತಮಪಡಿಸಲು ಹೇಗೆ ಸಾಧ್ಯ? ನಿಮ್ಮ ವಸ್ತುನಿಷ್ಠವಾದ ಅನಿಸಿಕೆಗಳಿಗೆ ಸ್ವಾಗತ. ನಿಮ್ಮ ಅಭಿಪ್ರಾಯಗಳನ್ನು ಈ ವಿಳಾಸಕ್ಕೆ ಕಳಿಸಿ : href="mailto:[email protected]">[email protected]











Click it and Unblock the Notifications