• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು?

By Staff
|

SIMI activist Kamruddin Nagoriಕರ್ನಾಟಕದ ನೆಮ್ಮದಿಯ ತಾಣವಾದ ಜೋಯಿಡಾ ಕಾಡಿನ ಪಕ್ಕದಲ್ಲೇ ಇರುವ ಕಾಸಲ್‌ರಾಕ್ ಸೇರಿದಂತೆ ಭಾರತದ ವಿವಿಧೆಡೆಗಳಲ್ಲಿ ನಡೆದ ಸಿಮಿ ಉಗ್ರರ ಸಭೆಗಳ ಕುರಿತಾಗಿ, ಅವರು ಮಾಡಿದ ಚರ್ಚೆಗಳ ಕುರಿತಾಗಿ, ಖರೀದಿಸಿದ ಶಸ್ತ್ರಾಸ್ತ್ರಗಳ ಕುರಿತಾಗಿ ಹೆಸರಾಂತ ಉಗ್ರವಾದಿ ಕಮರುದ್ದೀನ್ ನಾಗೋರಿ ಎಂಬಾತ ಮಂಪರು ಪರೀಕ್ಷೆಯಲ್ಲಿ ಬಾಯಿಬಿಟ್ಟ ವಿವರಗಳು ಇಲ್ಲಿವೆ. ಮಂಪರು ಪರೀಕ್ಷೆಯಲ್ಲಿ ಹುಬ್ಬಳ್ಳಿ, ಕಾಸಲ್‌ರಾಕ್‌ನಲ್ಲಿ ನಡೆಸುತ್ತಿರುವ ಚಟುವಟಿಕೆಗಳು, ಎನ್‌ಕೌಂಟರ್ ಸ್ಪೆಷಾಲಿಸ್ಟ್ ದಯಾನಾಯಕ್ ಹತ್ಯೆ ಮಾಡುವ ಕುರಿತು ಮಾನಾಡಿದ್ದಾನೆ. ಉಗ್ರವಾದವೆಂಬುದು ಕರ್ನಾಟಕಕ್ಕೆ ಎಷ್ಟು ಹತ್ತಿರವಾಗಿದೆ ಎಂಬುದಕ್ಕೆ ನಾಗೋರಿ ಮಾತುಗಳೇ ಸಾಕ್ಷಿ.

ಅಂಕಣಕಾರ : ರವಿ ಬೆಳಗೆರೆ

"ನಾನು ಕಮರುದ್ದೀನ್ ನಾಗೋರಿ, ಕಮರುದ್ದೀನ್ ಅಲಿಯಾಸ್ ರಾಜು ಅಲಿಯಾಸ್ ಅಬ್ದುಲ್ಲಾ ಅಲಿಯಾಸ್ ಸಲ್ಮಾನ್ ಚಾಂದ್ ಮಹಮ್ಮದ್ ನಾಗೋರಿ. ನಾನು 11/2, ನಾಗೋರಿ ಮೂಹಲ್ಲಾ, ತೋಪಖಾನಾ ರಸ್ತೆ, ಉಜ್ಜೈನ್ ನ ನಿವಾಸ, ಜೆಹಾದ್ ಸಂಬಂಧಿ ಚಟುವಟಿಕೆಗಳನ್ನು ಮಾಡಲೆಂದೇ ನಾನು 'ಸಿಮಿ' ಸಂಘಟನೆ ಸೇರಿದೆ. ಇಸ್ಲಾಂ ಬಗ್ಗೆ ಪ್ರಚಾರ ಮಾಡುವುದು, ಮುಸ್ಲಿಂ ಸಮಾಜದ ಮೇಲೆ ನಡೆಯುವ ದಬ್ಬಾಳಿಕೆಯನ್ನು ವಿರೋಧಿಸುವುದು ಮತ್ತು ಅಲ್ಲಾಹುವಿಗಾಗಿ ಪ್ರಾಣತ್ಯಾಗ ಮಾಡುವುದು ಜೆಹಾದ್ ನ ಉದ್ದೇಶಗಳಾಗಿರುತ್ತವೆ.

1991ರಲ್ಲಿ ಮುಂಬಯಿಯಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರ ಮತ್ತು ಗುಜರಾತಿದಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ನಾವು ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಹೌದು. ಕೃಷ್ಣಾ ಕಮೀಷನ್ ವರದಿಯಲ್ಲಿ ಈ ಮುಸ್ಲಿಂ ವಿರೋಧಿ ದಂಗೆಯಲ್ಲಿ ಯಾರ್ಯಾರು ಪಾಲ್ಗೊಂಡಿದ್ದಾರೆಂಬುದರ ವಿವರಗಳಿವೆ. ಆದರೆ ಅಂಥವರ ವಿರುದ್ಧ ಸರ್ಕಾರ ಕ್ರಮಕೈಗೊಂಡಿಲ್ಲ. ನಮ್ಮ ಕೈಗೆ ಕೃಷ್ಣಾ ಕಮೀಷನ್ ವರದಿಯ ಪ್ರತಿ ಸಿಕ್ಕ ಮೇಲೆ ಮುಸ್ಲಿಮರ ಮೇಲೆ ಹಲ್ಲೆ ಮಾಡಿದ ಅಂಥ ವ್ಯಕ್ತಿಗಳ ಪಟ್ಟಿಮಾಡುವುದು ಸಾಧ್ಯವಾಗುತ್ತಿದೆ ಆದರೆ ಪ್ರತಿ ದೊರೆಕಿಸಿಕೊಳ್ಳುವ ಜವಾಬ್ದಾರಿಯನ್ನು ಎಹತೆಶಾಮ್ ನಿಗೆ ವಹಿಸಿಕೊಡಲಾಗಿತ್ತು. ಆದರೆ ಅವನು ಮುಂಬೈ ಸ್ಫೋಟದ ನಂತರ ಬಂಧಿತನಾದ. ಹೀಗಾಗಿ ಆ ವರದಿ ನಮ್ಮ ಕೈಗೆ ಸಿಗಲಿಲ್ಲ. ಮಸೀದಿ ಧ್ವಂಸವಾಗುವುದನ್ನೂ, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವಾಗುವುದನ್ನೂ ಕಣ್ಣಾರೆ ನೋಡಿದ ಮೇಲೆ ನಾವೇ ಇಂತಹ ನಿರ್ಣಯಗಳಿಗೆ ಬಂದಿದ್ದೆವೆಯೇ ಹೊರತು ಈ ವಿಷಯದಲ್ಲಿ ನಮ್ಮನ್ನು ಯಾರೂ ಪ್ರಚೋದಿಸಿಲ್ಲ.

ನಾವು ಚೋರಲ್ ನಲ್ಲಿ ಒಂದು ಶಿಬಿರ ಏರ್ಪಡಿಸಿದ್ದು, ಅಲ್ಲಿ ಏರಗನ್‌ನಿಂದ ಗುರಿಯಿಡುವುದನ್ನು ಶಿಬಿರಾರ್ಥಿಗಳಿಗೆ ಕಲಿಸಲಾಯಿತು. ನನ್ನ ಹತ್ತಿರ ಬುರಹಾನ್ ಪುರದಿಂದ ತಂದಿದ್ದ ಏಳು ಕಂಟ್ರಿ ಪಿಸ್ತೂಲಿಗಳಿದ್ದು ಅವುಗಳನ್ನು ತಲಾ ಐದೂವರೆ ಸಾವಿರ ರುಪಾಯಿಗಳಿಗೆ ನಾನೇ ಖರೀದಸಿದ್ದೆ. ಆ ಏಳು ಪಿಸ್ತೂಲುಗಳು ಪೈಕಿ ನಾಲ್ಕು ಪಿಸ್ತೂಲುಗಳನ್ನು ನಾನು ಹುಬ್ಬಳ್ಳಿಯ ಅದ್ನಾನ್ ಗೆ ಕಳಿಸಿಕೊಟ್ಟಿದ್ದೆ. ಸದ್ಯಕ್ಕೆ ಏಳು ಪಿಸ್ತೂಲುಗಳು ಪೊಲೀಸರಿಗೆ ಸಿಕ್ಕು ಹೋಗಿವೆ. ಚೋರಲ್ ಶಿಬಿರದಲ್ಲಿ ಇಪ್ಪತ್ತೊಂದು ಜನ ಭಾಗವಹಿಸಿದ್ದರು. ಅವರಲ್ಲಿ ಒಂದಿಬ್ಬರು ಖಂಡ್ವಾದಿಂದ ಬಂದಿದ್ದರು. ಅದ್ನಾನ್, ಹಫೀಜ್, ಮಂಜರ್ ಮತ್ತು ಜಾರ್ಖಂಡ್ ದಿಂದ ದನಿಷ್ ಮಧ್ಯಪ್ರದೇಶದಿಂದ ಇಬ್ಬರು, ಉತ್ತರ ಪ್ರದೇಶದಿಂದ ಇಬ್ಬರು, ಕೇರಳದಿಂದ ಸಿಬ್ಲಿ ಹಾಗೂ ಮುಂಬೈಯಿಂದ ಸುಭಾನ್ ಬಂದಿದ್ದರು. ಉಳಿದವರು ಇಂದೋರ್ ಹಾಗೂ ಖಂಡ್ವಾದವರಾಗಿದ್ದರು.

ಏಪ್ರಿಲ್ ತಿಂಗಳಲ್ಲಿ ನಾನು ಕ್ಯಾಸಲ್ ರಾಕ್ ಶಿಬಿರಕ್ಕೆ ಹೋಗಿದ್ದೆ ಎಂಬುದು, ಹುಬ್ಬಳ್ಳಿಯಿಂದ ಎರಡೂವರೆ ಗಂಟೆಗಳ ಕಾಲ ಪ್ರಯಾಣ ಮಾಡಿದ ನಂತರ ಸಿಗುವ ತಾಣ. ಕ್ಯಾಸಲ್ ರಾಕ್ (castle rock) ಸಭೆಯ ನಂತರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಾನು ಪಿಸ್ತೂಲುಗಳನ್ನು ಹುಬ್ಬಳ್ಳಿಯಲ್ಲಿ ಅದ್ನಾನ್‌ಗೆ ಕೊಟ್ಟೆ. ಹುಬ್ಬಳ್ಳಿಯಲ್ಲಿ ನಾನು ಒಂದು ದಿವಸ ಮಟ್ಟಿಗೆ ತಂಗಿದ್ದೆ. ಮುಂದೆ ಪಿಸ್ತೂಲುಗಳನ್ನು ಅದ್ನಾನ್ ನನಗೆ ಹಿಂತಿರುಗಿಸಿದ್ದ. ಕ್ಯಾಸಲ್ ರಾಕ್ ಶಿಬಿರ ನಡೆಯುತ್ತಿದ್ದಾಗ ನನ್ನ ಬಳಿ ಯಾವುದೇ ವಾಕೀ-ಟಾಕೀ ಇರಲಿಲ್ಲ.

ಪೆಟ್ರೋಲ್ ಬಾಂಬ್

ಚೋರಲ್ ಶಿಬಿರದಲ್ಲಿ ನಾನು ಐದಾರು ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸಿ ಶಿಬಿರಾರ್ಥಿಗಳಿಗೆ ಅವುಗಳ ಬಳಕೆ ಹೇಗೆಂಬುದನ್ನು ತೋರಿಸಿದ್ದೆ. ಮತೀಯ ದಂಗೆಗಳಾದಾಗ, ಹೆಚ್ಚಿನ ಹಿಂದೂಗಳು ಮೈಮೇಲೆ ಬಿದ್ದರೆ ಆ ಪೆಟ್ರೋಲ್ ಬಾಂಬ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅವರಿಗೆ ವಿವರಿಸಿದ್ದೆ. ಇವುಗಳನ್ನು ತಯಾರಿಸಲು ಬೇಕಾದ ವಸ್ತುಗಳು ಅಗ್ಗದ ಬೆಲೆಗೆ ಸಿಗುತ್ತವೆ. ತಯಾರಿಸುವ ವಿಧಾನವೂ ಸುಲಭ. ಈ ಬಾಂಬುಗಳು ಭಯಂಕರವಾಗಿ ಶಬ್ದ ಮಾಡುತ್ತವೆ, ಆದರೆ ಇವುಗಳಿಂದ ಹೆಚ್ಚಿನ ಪ್ರಾಣ ಹಾನಿ ಸಂಭವಿಸುವುದಿಲ್ಲ ಎಂದು ನಾನು ಅವರಿಗೆ ವಿವರಿಸಿದ್ದೆ. ಅವುಗಳನ್ನು ನಾನು ಬಾಬ್ರಿ ಮಸೀದಿ ಉಧ್ವಸ್ತವಾದ ನಂತರ ಉಜ್ಜೈನ್‌ನಲ್ಲಿ ನಡೆದ ಮತೀಯ ದಂಗೆಗಳು ಕಾಲದಲ್ಲಿ ತಯಾರು ಮಾಡುವುದನ್ನು ಕಲಿತಿದ್ದೆ. ಆ ದಿನಗಳಲ್ಲಿ ದಂಗೆಗಳು ಹದಿನೈದು ದಿನ ನಡೆದಿದ್ದವು. ಇಂಥ ಪೆಟ್ರೋಲ್ ಬಾಂಬ್‌ಗಳಿಂದ ನಾನು ಮೂವತ್ತು-ಮೂವತ್ತೈದು ಜನರನ್ನು ಕೊಂದಿದ್ದೆ. ಹಿಂದೂಗಳು ಮೈಮೇಲೆ ಏರಿ ಬಂದಾಗ ನಮಗೆ ತಿರುಗಿ ನಿಂತು ಬಡಿದಾಡಲು ಬೇರೆ ದಾರಿಯಿರುವುದಿಲ್ಲ ನೋಡಿ? ಮಧ್ಯ ಪ್ರದೇಶದಲ್ಲೂ ಮೇಲಿಂದ ಮೇಲೆ ಕೋಮು ಗಲಭೆಗಳಾಗುತ್ತವಾದ್ದರಿಂದ ಅವುಗಳ ವಿರುದ್ಧ ಬಡಿದಾಡಲು ನಾವು ಸಿದ್ಧರಿರಬೇಕು ಎಂದು ಶಿಬಿರಾರ್ಥಿಗಳಿಗೆ ಹೇಳಿದೆ. ಸುಲ್ತಾನ್ ಗೇಟ್‌ನಲ್ಲಿ ನಡೆದ ದಂಗೆಯಲ್ಲಿ ಭಜರಂಗ ದಳದವರು ನೂರಾರು ಸಂಖ್ಯೆಯಲ್ಲಿ ನುಗ್ಗಿ ಬಂದು ಮುಸ್ಲಿಂ ಮನೆಯೊಂದನ್ನು, ಅದರೊಳಗಿದ್ದವರ ಸಮೇತ ಸುಟ್ಟು ಹಾಕಿದರು. ಇಂಥ ಹಲ್ಲೆಗಳನ್ನು ಎದುರಿಸಲು ನಾವೆಲ್ಲ ಸಿದ್ಧರಿರಬೇಕು ಎಂದು ಅವರಿಗೆ ಹೇಳಿದೆ.

ಕುರಾನ್‌ನಲ್ಲಿ ಹುಡುಕಿ

ಕ್ಯಾಸಲ್ ರಾಕ್ ಶಿಬಿರವನ್ನು ನಡೆಸಲು ಹುಬ್ಬಳ್ಳಿಯ ಅದ್ನಾನ್ ಸಾರ್ವಜನಿಕರಿಂದ ದೇಣಿಗೆ ಪಡೆದು ತಂದಿದ್ದ. ಅಂತೆಯೇ ಅವನಿಗೆ ಸಫ್ದರ್ ನಾಗೋರಿಯಿಂದಲೂ ಸ್ವಲ್ಪ ಹಣ ಬಂದಿತ್ತು. ಚೋರಲ್ ಶಿಬಿರಕ್ಕೆ ಸುಮಾರು ಆರು ಸಾವಿರ ಹಣ ಕೊಟ್ಟರು. ಎಷ್ಟು ಖರ್ಚಾಯಿತು, ಯಾರೆಲ್ಲ ಹಾಜರಿದ್ದರು ಅಂತ ಗೊತ್ತಿಲ್ಲ, ಯಾಕೆಂದರೆ ಆ ಸಭೆಗೆ ನಾನು ಹಾಜರಾಗಿರಲಿಲ್ಲ. ಆದರೆ ಉಜ್ಜೈನ್‌ನಲ್ಲಿ ಜುಲೈ 5 ಮತ್ತು 6ರಂದು ನಡೆದ ಸಭೆಗೆ ಎಹತ್‌ಶಾಮ್ ಹಾಜರಾಗಿದ್ದ. ಅವತ್ತಿನ ಸಭೆಯಲ್ಲಿ ಭಾರತೀಯ ಮುಸ್ಲಿಮರ ಮೇಲೆ ನಡೆಯುವ ಹಿಂಸಾಚಾರ ಕುರಿತು ಚರ್ಚಿಯಲಾಯಿತಲ್ಲದೆ, ಸಿಮಿ ಸಂಘಟನೆ ನಿಷ್ಕ್ರಿಯವಾಗಿರುವ ಬಗ್ಗೆಯೂ ಕಳವಳದಿಂದ ಮಾತನಾಡಲಾಯಿತು. ಫೀಲ್ಡ್‌ನಲ್ಲಿ ಕೆಲಸ ಮಾಡಲು ನಮಗೆ ತುಂಬ ಜನ ಹುಡುಗರು ಬೇಕು. ಹೊಸ ಹುಡುಗರನ್ನು ಸೇರಿಸಿಕೊಳ್ಳಲು ನಾವು ತೀರ್ಮಾನಿಸಿದೆವು. ಆದರೆ ಈ ವಿಷಯದಿಂದ ಸಿಮಿ ಸಂಘಟನೆಯನ್ನು ದೂರವಿಡಲು ನಾವು ನಿರ್ಧರಿಸಿದೆವು. ಈ ಸಂದರ್ಭದಲ್ಲೇ ಎಹತೆಶಾಮ್ ಗೆ ಕೃಷ್ಣಾ ವರದಿಯನ್ನು ಸಂಪಾದಿಸುವಂತೆ ಸೂಚಿಸಲಾಯಿತು. ಹಾಗೇನೇ, ಮುಸ್ಲಿಮರ ವಿರುದ್ಧ ಕೆಲಸ ಮಾಡಿದ ಹಿಂದೂ ಪ್ರಮುಖರನ್ನು ಕೊಲ್ಲುವ ಬಗ್ಗೆ ಭಾರತದ ವಿವಿಧ ಮುಸ್ಲಿಂ ನಾಯಕರ ಅಭಿಪ್ರಾಯವೇನಿದೆ ಎಂಬುದನ್ನು ತಿಳಿದುಕೊಳ್ಳುವಂತೆ ಸುಭಾನ್ ಗೆ ಆದೇಶ ನೀಡಲಾಯಿತು. ಕುರಾನ್ ಗ್ರಂಥವನ್ನು ಮತ್ತೊಮ್ಮೆ ಅಭ್ಯಸಿಸಿ, ನಮ್ಮ ಧರ್ಮದ ವಿರುದ್ಧ ಈ ತೆರೆನಾದ ಚಟುವಟಿಕೆಗಳಲ್ಲಿ ತೊಡಗಿದವರಿಗೆ ಏನು ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ವಿವರಿಸುವಂತೆ ಸಾರ್ಜಿಲ್‌ಗೆ ಸೂಚಿಸಲಾಯಿತು. ಅವತ್ತಿನ ಸಭೆಯ ನಂತರ ನಾನು, ಎಹತೆಶಾಮ್, ಸಿಬ್ಲಿ, ಹಫೀಜ್, ಸಾರ್ಜಿಲ್ ಮುಂತಾದವರು ಚೆದುರಿದೆವು. ಸಾರ್ಜಿಲ್, ಸಿಬ್ಲಿ, ಮತ್ತು ಇನ್ನೂಬ್ಬ ವ್ಯಕ್ತಿಯೊಂದಿಗೆ ಎಹತೆಶಾಮ್ ಮುಂಬೈಗೆ ಹೋದ. ಆಗ ನಡೆದ ಸಭೆಯಲ್ಲಿ ನಾನಷ್ಟೆ ಅಲ್ಲದೆ ಇಡೀ ಸಿಮಿ ಸಂಘಟನೆ ಮುಂಬೈ ಸ್ಫೋಟಗಳನ್ನು ಬೆಂಬಲಿಸಬೇಕೆಂದು ತೀರ್ಮಾನಿಲಾಯಿತು.

ಮುಂದು ಓದಿ : ಹಾರ್ಡ್ ಡಿಸ್ಕ್‌ನಲ್ಲಿ ಏನೇನಿದೆ? »

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X