ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮಿ ಉಗ್ರವಾದಿ ಮಂಪರು ಪರೀಕ್ಷೆಯಲ್ಲಿ ಹೇಳಿದ್ದೇನು?

By Staff
|
Google Oneindia Kannada News

(ಮುಂದುವರಿದಿದೆ...)

Mumbai encounter specialist Daya Nayakದಯಾನಾಯಕ್ ಹೊಡೆದು ಕೊಲ್ಲುವ ಹುನ್ನಾರ

ಉಜ್ಜೈನ್‌ನಲ್ಲಿ ನಡೆದ ಸಭೆಯಲ್ಲಿ ಎಹತೆಶಾಮ್ ದಯಾನಾಯಕ್ ಎಂಬ ಪೊಲೀಸ್ ಅಧಿಕಾರಿಯ ಬಗ್ಗೆ ಪದೇಪದೇ ಹೇಳುತ್ತಿದ್ದ. ಆತನೊಂದಿಗೆ ಪ್ರಮೀಣ್ ತೊಗಾಡಿಯಾ, ಮುನ್ನಾ ಬಜರಂಗಿ ಮತ್ತು ಬಾಬು ಬಜರಂಗಿಯ ಕುರಿತಾಗಿಯೂ ಹೇಳುತ್ತಿದ್ದ. ಇವರನ್ನು ಹೊಡೆದು ಕೊಲ್ಲುವ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಲಾಲ್ ಕೃಷ್ಣ ಅಡ್ವಾಣಿ, ಉಮಾಭಾರತಿ ಅಥವಾ ಅಟಲ್ ಬಿಹಾರಿ ವಾಜಪೇಯಿ ಇವರ ಬಗ್ಗೆ ಪ್ರಸ್ತಾಪವಾಗಿರಲಿಲ್ಲ. ಇಂದೋರ್, ಭೋಪಾಲ್ ಅಥವಾ ಉತ್ತರ ಪ್ರದೇಶದಲ್ಲಿ ನಾವು ಯಾರನ್ನೂ ಕೊಲ್ಲುವ ಉದ್ದೇಶವಿಟ್ಟುಕೊಂಡಿರಲಿಲ್ಲ. ಮುಖ್ಯವಾಗಿ ಮಹಾರಾಷ್ಟ್ರದ ದಯಾನಾಯಕ್‌ನನ್ನೂ, ಗುಜರಾತದ ಕೆಲವರನ್ನೂ ಮೌಸರ್(ಪಿಸ್ಟಲ್) ನಿಂದ ಹೊಡೆದು ಕೊಲ್ಲಲು ತೀರ್ಮಾನಿಸಿದ್ದೆವು. ಬುರ್ಹಾನ್ಪುರದಿಂದ ಮೌಸರ್ ತರಲು ನನಗೆ ವಹಿಸಲಾಗಿತ್ತು. ಆದರೆ ಇಂದೋರ್‌ನ ಮುಂಬೈ ಬೋಸ್ ಕಂಡಿಯಾ ರೋಡ್ ನ ಮನೆಯಿಂದ ನನ್ನ ಕೆಲವು ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡುಬಿಟ್ಟರು. ಅಂತೆಯೇ ಶ್ಯಾಮ್ ನಗರ್ ಮನೆಯಿಂದ ನಮ್ಮ ಗುಂಪಿನ ಹದಿಮೂರು ಜನರನನ್ನು ಬಂಧಿಸಲಾಯಿತು. ಅವರಲ್ಲಿ ಕೆಲವರು, ಹುಬ್ಬಳ್ಳಿಯಲ್ಲಿ ಸಿಮಿ ಸಂಘಟನೆಯವರು ಬಂಧಿತರಾದ ಮೇಲೆ ತೆಲೆತಪ್ಪಿಸಿಕೊಂಡು ಇಂದೋರಕ್ಕೆ ಬಂದಿದ್ದರು. ಅವರನ್ನು ಇಂದೋರ್ ನಲ್ಲಿ ಬಂಧಿಸಲಾಯಿತು. ಅವರಿಗೆ ಆಶ್ರಯ ನೀಡಿದ್ದ ನಮ್ಮ ಕೆಲವು ಕಾರ್ಯಕರ್ತರೂ ಸಿಕ್ಕುಬಿದ್ದಿದ್ದರು. ಇಂದೋರ್ ಮನೆಯಲ್ಲಿದ್ದಾಗ ಒಂದು ಲೀಗಲ್ ಪಾಲಿಸಿ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಅದರ ಪ್ರಕಾರ ಬಂಧಿತ ಸಿಮಿ ಸದಸ್ಯರ ಕುಟುಂಬದವರನ್ನೂ ಭೇಟಿಯಾಗುವುದು, ಅವರಿಗೆ ಧೈರ್ಯ ಹೇಳುವುದು, ಬಂಧಿತ ಸಿಮಿ ಸದಸ್ಯರಿಗೆ ಜಾಮೀನು ದೊರೆಕಿಸಿಕೊಡುವುದು ಮತ್ತು ಪೊಲೀಸರು ಯಾರ್ಯಾರನ್ನು ಹುಡುಕುತ್ತಿದ್ದಾರೋ, ಅವರಿಗೆ ತೊಂದರೆಯಾಗದಂತೆ ಸರಂಡರ್ ಮಾಡಿಸಿ, ಅವರನ್ನೂ ಬಿಡುಗಡೆ ಮಾಡಿಸುವುದು ನಮ್ಮ ಲೀಗಲ್ ಪಾಲಿಸಿಯ ಕರ್ತವ್ಯವಾಗಬೇಕು ಎಂದು ತೀರ್ಮಾನಿಸಲಾಯಿತು. ಕರ್ನಾಟಕದಿಂದ ಪರಾರಿಯಾಗಿ ಬಂದಿದ್ದವರನ್ನು ರಕ್ಷಿಸಲೆಂದೇ ನಾವು ಇಂದೋರ್‌ನಲ್ಲಿ ಕಜರಾನಾ ಹಾಗೂ ಶ್ಯಾಮ್ ನಗರದ ಮನೆಗಳಲ್ಲಿ ಆಶ್ರಯ ಕೊಟ್ಟಿದ್ದೆವು.

ಹಿಂದೂ ಪ್ರಮುಖರ ಹತ್ಯೆ

ನಮ್ಮ ತರಬೇತಿ ಮೂರು ಮುಖ್ಯವಾದ ಪ್ರಾಂತ್ಯಗಳಿವೆ. ಮೂದಲ ಹಂತದಲ್ಲಿ ನಾವು ಕಾರ್ಯಕರ್ತರಾಗಬಲ್ಲಂಥವರನನ್ನು ಗುರುತಿಸುತ್ತೇವೆ ದಂಗೆಗಳಾದಾಗ ಅಮಾಯಕ ಮುಸ್ಲಿಂರನ್ನು ಪೊಲೀಸರು ಬಂಧಿಸದಂತೆ ಎಚ್ಚರಿಕೆ ವಹಿಸುತ್ತೇವೆ. ಮೂರನೇ ಹಂತದಲ್ಲಿ ಹಿಂದೂ ಪ್ರಮುಖರನ್ನು ಹತ್ಯೆ ಮಾಡಬೇಕೆಂಬುದನ್ನು ಕಲಿಸುತ್ತೇವೆ. ನಾವು ಅಂಥ ವ್ಯಕ್ತಿಗಳನ್ನು ಹತ್ಯೆ ಮಾಡಲು ಷಾರ್ಪ್ ಷೂಟರುಗಳನ್ನು ಹುಡುಕುತ್ತಿದ್ದು, ಅವರಿಗೆ ತರಬೇತಿ ನೀಡಲು ಉತ್ಸುಕರಾಗಿದ್ದೇವೆ. ನಮಗೆ ಉಗ್ರವಾದಿ ಸಂಘಟನೆಗಳ ಸಂಪರ್ಕವಿದ್ದು, ಅದರಿಂದ ನಮಗೆ ಹಣ ಬರುತ್ತದೆ. ಬಾಂಗ್ಲಾದೇಶದ ಜಮಾತೆ-ಎ-ಇಸ್ಲಾಮ್ ಮತ್ತು ಲಷ್ಕರ್-ಎ-ತೊಯಿಬಾದೊಂದಿಗೆ ನಮಗೆ ಸಂಪರ್ಕಗಳಿವೆ. ಆದರೆ, ಹೂಝಿ, ಮತ್ತು ಹರ್ಕತ್-ಉಲ್-ಮುಜಾಹಿದೀನ್ ಸಂಘಟನೆಯೊಂದಿಗೆ ನಮಗೆ ಸಂಪರ್ಕವಿಲ್ಲ. ಈದ್ಗಾ-ಉಲ್-ಹತ್ ಸಮಾವೇಶದಲ್ಲಿ ಮಲೇಷಿಯಾದ ತಂಝೀಮ್, ಇರಾನ್, ಪಾಕಿಸ್ತಾನ್, ಬಾಂಗ್ಲಾದೇಶ ಮತ್ತು ಪ್ಯಾಲೆಸ್ತೀನದ ಕೆಲವು ಮುಜಾಹಿದೀನ್ ಸದಸ್ಯರು ಭಾಗಹಿಸಿದ್ದರು.

ಕೇಂದ್ರ ಸಿಮಿ ಸಂಘಟನೆ ಏರ್ಪಡಿಸಿದ್ದ ಅಲೀಘಡದ ಸಮವೇಶದಲ್ಲಿ 30 ಸಾವಿರ ಸದಸ್ಯರು ಭಾಗವಹಿಸಿದ್ದರು. ಆಗ ಅಬ್ದುಲ್ ಬಸಿ ಫಲಾಹಿ ಮತ್ತು ಸಲಾವುದ್ದೀನ್ ಸಲಾಮ್ ಈ ಸಮಾವೇಶದ ನೇತಾರರಾಗಿದ್ದರು. ಬಿಹಾರದಲ್ಲಿರುವ ಅಬ್ದುಲ್ ಬಸಿ ಫಲಾಹಿ ಈಗಲೂ ಸಿಮಿಯ ಪ್ರಮುಖ ಸದಸ್ಯವಾಗಿದ್ದಾನೆ. ಅಲೀಘಡದ ಸಮಾವೇಶಕ್ಕೆ ಕೆಲವು ವಿದೇಶಿ ಉಗ್ರರೂ ಬಂದಿದ್ದರು. ಅಲ್ಲಿ ಜೆಹಾದ್ ಬಗ್ಗೆ ಭಾಷಣ ಮಾಡಲಾಯಿತು. ಸಿಮಿ ಸಂಘಟನೆಯ ಅತ್ಯಂತ ಪುರಾತನ ಸದಸ್ಯನಾದ ಜಿಯಾವುದ್ದೀನ್ ಸಿದ್ದಿಕಿ ಈಗ ಪಾಕಿಸ್ತಾನದಲ್ಲಿದ್ದಾನೋ, ಅಪಘಾನಿಸ್ತಾನಕ್ಕೆ ಹೋಗಿದ್ದಾನೋ ಗೊತ್ತಿಲ್ಲ. ಆದರೆ ಪೊಲೀಸರು ಅನೇಕರನ್ನು ಬಂಧಿಸತೊಡಗಿದಾಗನಿಂದ, ಅಂದರೆ 2003 ರಿಂದ ಹೆಣ್ಣು ಮಕ್ಕಳು ಸಿಮಿಯಲ್ಲಿ ಭಾಗವಹಿಸುವುದು ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ಸಮಾವೇಶ

ಇಸವಿ 2003ರಲ್ಲಿ ಬೆಂಗಳೂರಿನಲ್ಲಿ ಷಾಹಿದ್ ಬದ್ರುಲ್ಲಾನ ನೇತೃತ್ವದ ಒಂದು ಪ್ರಮುಖ ಸದಸ್ಯರ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ 35 ಪ್ರಮುಖರ ಪೈಕಿ ನನಗೆ ನೆನಪಿರುವುದೆಂದರೆ ಸಫ್ದರ್, ಹಫೀಜ್, ಆಮಿಲ್, ಹಿಯಾನ್ ಖಾನ್, ಮಹಾರಾಷ್ಟ್ರದ ಇರ್ಷಾದ್ ಖಾನ್, ನಾಗಪುರದ ಡಾ, ಅಬ್ರಾರ್ ಖಾನ್, ಲಬನ್ ಮದ್ರು, ಜಮೀಲ್, ಜುನೈದ್, ಬಿಜಾಪುರದ ತಾರಿಕ್ ಮತ್ತು ಹಬೀಬ್, ಕೇರಳದ ಡಾ. ಅಬ್ದುಲ್ ಝವಿ, ಯಾಯ ಕಮ್ಮುಟ್ಟಿ, ಎಜಾಜ್, ಮಹಾರಾಷ್ಟ್ರದ ಇಕ್ಬಾಲ್, ದಿಲ್ಲಿಯಲ್ಲಿ ಓದುತ್ತಿರುವ ಉಬೇದ್, ಫಾಹೀಮ್, ಸುಲ್ತಾನ್ ಪುರದ ಸಿಮಿ ವಕೀಲ ಹೂಮಾನ್, ಕಲೀಮ್ ಅಖ್ತರ್, ಇಮ್ರಾನ್ ಅನ್ಸಾರಿ, ಯುನಾನಿ ವಿದ್ಯಾರ್ಥಿ ಅಕ್ರಮ್ ಫಲಾಹಿ, ಮುಂತಾದವರಿದ್ದರು. ಬೆಂಗಳೂರಿನಲ್ಲಿ ಖಚಿತವಾಗಿ ಯಾವ ಜಾಗದಲ್ಲಿ ಸಭೆ ನಡೆಯಿತೆಂದು ನನಗೆ ಗೊತ್ತಿಲ್ಲ. ಆದರೆ ಅದೊಂದು ಪಾಳು ಬಿದ್ದ ಪ್ರದೇಶದಂತಿತ್ತು. ಬೆಂಗಳೂರಿನ ರೈಲು ನಿಲ್ದಾಣದಿಂದ ನಲವತ್ತೈದು ನಿಮಿಷ ಡ್ರೈವ್ ಮಾಡಿದರೆ, ನಗರದೊಳಗೆ ಆ ಪ್ರದೇಶ ಸಿಗುತ್ತದೆ. ಅಲ್ಲಿ ನಾವು ಐದಾರು ಮಂದಿ ಉಳಿದುಕೊಂಡಿದ್ದೇವು. ಆಗ ನಡೆದ ಸಭೆಯಲ್ಲಿ ಭಾರತೀಯ ಮಟ್ಟದ ನಾಯಕನಾಗಿ, ಅಧ್ಯಕ್ಷನಾಗಿ ಷಾಹಿದ್ ಬದರ್‌ನನ್ನು ಆಯ್ಕೆ ಮಾಡಲಾಯಿತು. ಹಿಂಡಲ್ ಘಾಟ್‌ನ ಎಜಾಜ್ ನನ್ನು ಜನರಲ್ ಸೆಕ್ರಟರಿಯಾಗಿ ಆಯ್ಕೆ ಮಾಡಲಾಯಿತು. ಹುಬ್ಬಳ್ಳಿಯ ಅದ್ನಾನ್ ನನ್ನೂ, ಸಫ್ದರ್ ನನ್ನೂ ಕೇಂದ್ರ ಸಮಿತಿಗೆ ನೇಮಿಸಿ, ಅವರಿಗೆ ವಿಶೇಷ ಅಧಿಕಾರ ನೀಡಲಾಯಿತು. ಆ ಸಭೆಗೆ ಪ್ರತಿ ರಾಜ್ಯದಿಂದಲೂ ಇಬ್ಬರು ಮೂವರನ್ನು ಕರೆಯಲಾಗಿತ್ತು. ಮುಂಬೈ ಸ್ಫೋಟ ಸಂಭವಿಸಿದ್ದರಿಂದ ಹೆಚ್ಚಿನ ಹಿಂದೂ ಪ್ರಮುಖರ ಹತ್ಯೆ ಮಾಡಲಾಗಲಿಲ್ಲ. ಕೊಡಲೇ ಅನೇತ ಸಿಮಿ ಕಾರ್ಯಕರ್ತರು ಬಂಧನವಾಗಿದ್ದರಿಂದ ಸಂಘಟನೆ ಕುಸಿದು ಬಿತ್ತು. ಆದರೂ ಸಿಬ್ಲಿಯಂತಹ ನಾಯಕರು ಚಟುವಟಿಕೆಗಳನ್ನು ಜಾರಿಯಲ್ಲಿಟ್ಟರು.

ಹೀಗೆ ಸಾಗುತ್ತಿದೆ ಬಂಧಿತ ಸಿಮಿ ಪ್ರಮುಖನೊಬ್ಬನಮಂಪರು ಪರೀಕ್ಷೆಯ ಹೇಳಿಕೆ. ಗಮನಿಸಿ ಓದಿದರೆ ಬೆಂಗಳೂರು, ಹುಬ್ಬಳ್ಳಿ, ಉತ್ತರ ಕರ್ನಾಟಕ, ಕ್ಯಾಸಲ್ ರಾಕ್, ಕರ್ನಾಟಕ ಮೂಲಕ ಸಬ್ ಇನ್ಸ್ ಪೆಕ್ಟರ್ ದಯಾನಾಯಕ್ ಹೀಗೆ ಸಿಮಿ ಉಗ್ರರ ಚಟುವಟಿಕೆಗಳು ನಮ್ಮ ಆಸುಪಾಸಿನಲ್ಲೇ ಹಾದು ಹೋಗುತ್ತವೆ. of course, ಬೇರೆಯವಕ್ಕೆ ಹೋಲಿಸಿ ನೋಡಿದರೆ ಸಿಮಿ ಸಂಘಟನೆ ಅಷ್ಟು ಹುಲುಸಾಗಿ, ಬೇರಿಳಿದು ಬೆಳೆದಿಲ್ಲ. ಒಂದು ಬಾರಿ ಇದೆಲ್ಲದರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೊನ್ನೆ ನಡೆದ ಬಾಂಬ್ ಸ್ಫೋಟವನ್ನು ಮತ್ತೆ ಪರಿಶೀಲಿಸಿ, ನೆನಪು ಮಾಡಿಕೊಳ್ಳಿ. ಅದು ಯಾರ ಕೃತ್ಯವೆಂದು ಮನವರಿಕೆಯಾಗತೊಡಗುತ್ತದೆ.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X