ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಂಡತಿ ಎಂದರೆ ಹೇಗಿರಬೇಕು?

By Staff
|
Google Oneindia Kannada News


ಇದೇನೋ ಸಂಚಿ ಹೊನ್ನಮ್ಮಳ ಅಪ್ಪಣೆಗಳ ಥರಾ ಇದೆ ಬರಹ ಅಂದುಕೊಳ್ಳಬೇಡಿ. ಕಾಲ ಬದಲಾದಂತೆಲ್ಲ ಗಂಡು ಹೆಣ್ಣಿ(ಗಂಡ ಹೆಂಡತಿ)ನ ಸಂಬಂಧದ ಸ್ವರೂಪವೂ ಬದಲಾಗಿದೆ ಅಂತ ನನಗೆ ಗೊತ್ತು. ಹಗಲಿಡೀ ಗಂಡನಿಗೆ ಸರಿಸಮನಾಗಿ ದುಡಿದು ಬರುವ ಗಂಡನಿಗೆ ಸರಿಸಮನಾಗಿ ದುಡಿದು ಬರುವ ಹೆಂಡತಿ ತೀರ 'ಅಚ್ಚ ಮುತ್ತೈದೆ'ಯ ಶೈಲಿಯಲ್ಲಿ ಬದುಕುವುದು ಕಷ್ಟ.

  • ರವಿ ಬೆಳಗೆರೆ

ಹೆಂಡತಿ ಯಾಕೆ ಇಷ್ಟವಾಗ್ತಾಳೆ? ಮೊನ್ನೆ ಅದನ್ನೇ ಯೋಚಿಸುತ್ತಿದ್ದೆ. ಹೆಂಡತಿಯನ್ನು ವಿಪರೀತವಾಗಿ ಹೊಡೆಯುವವರು, ಅಸಹ್ಯಕರವಾಗಿ ಬಯ್ಯುವವರು, ಸುಟ್ಟು ಕೊಲ್ಲುವವರು, ಅವರಿಗೆಲ್ಲ ಮೂಲತಃ ಹೆಂಡತಿಯ ಮೇಲೆ ಪ್ರೀತಿ ಹುಟ್ಟಿರುವುದೇ ಇಲ್ಲವೇನೋ? ಆಕೆ ಪ್ರೀತಿಸಿರುತ್ತಾಳೆ, ಮೈಗೆ ಸುಖ ಕೊಟ್ಟಿರುತ್ತಾಳೆ, ಆಡುಗೆ ಮಾಡಿ ಹಾಕಿರುತ್ತಾಳೆ, ಮಕ್ಕಳನ್ನು ಹೆತ್ತು ಕೊಟ್ಟಿರುತ್ತಾಳೆ, ಗಂಡ ಹೊರಗೆ ಹೋದಾಗ ಇಲ್ಲಿ ಮನೆಯೆಂಬ ಕೋಟೆ ಕಾದಿರುತ್ತಾಳೆ. ಆದರೂ ಯಾಕೆ ದ್ವೇಷಿಸುತ್ತಾನೆ? ಯಾಕೆಂದರೆ, mostly ಆರಂಭದಲ್ಲೇ ಆತನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿರುವುದಿಲ್ಲ. ಆ ಪ್ರೀತಿ ಯಾಕೆ ಹುಟ್ಟುತ್ತದೆ ಎಂಬುದೇ ನನ್ನ ಮೂಲಭೂತ ಪ್ರಶ್ನೆ.

ಒಮ್ಮೆ ನೀವು ಇಳಿಸಾಯಂಕಾಲಗಳಲ್ಲಿ ಬಾರುಗಳಿಗೆ ಹೋಗಿ ನೋಡಬೇಕು. 'ನನ್ನ ಹೆಂಡ್ತಿ ದೇವರು ಕಣೋ'ಎಂಬ ಮಾತು ಪ್ರತೀ ಬಾರಿನ, ಪ್ರತೀ ಟೇಬಲ್ಲಿನಲ್ಲಿ ಕೇಳಿಸುತ್ತದೆ. ಹಾಗೆ ಹೆಂಡತಿಯನ್ನು 'ದೇವತೆ'ಅಂದವರೇ ಏಳನೆಯ ಪೆಗ್ಗಿನ ನಂತರ ಮನೆಗೆ ಹೋಗಿ ಹೆಂಡತಿಯನ್ನು ದನಕ್ಕೆ ಬಡಿಯುವಂತೆ ಬಡಿದಿರುತ್ತಾರೆ. ಆ ಮಾತು ಬೇರೆ. ಆದರೆ ಹೆಂಡತಿ ಇಷ್ಟವಾಗುವುದಕ್ಕೆ ಕೆಲವು ಫಂಡಮೆಂಟಲ್ ಕಾರಣಗಳಿವೆ. ಆಕೆಯ ರೂಪು, ಆಳ್ತನ, ಸೌಷ್ಠವ, ಘಮ, ಗಂಧ, ದನಿ ಮುಂತಾದವೆಲ್ಲ ಮೊದಲ ಸುತ್ತಿನ ಅಪ್ರಿಸಿಯೇಷನ್ನುಗಳು.

ಈ ಹುಡುಗಿ ಎಷ್ಟು ಚೆನ್ನಾಗಿದ್ದಾಳಲ್ಲವಾ? ನಾನು ಅಂದುಕೊಂಡ ಹಾಗೇ ಇದ್ದಾಳಲ್ಲವಾ? Yes ಹೆಂಡತಿ ಅಂದರೆ ಹೀಗಿರಬೇಕು ಅಂತ ಮೊದಲ ಸುತ್ತಿನಲ್ಲಿ ನಿರ್ಧರಿಸುತ್ತಾನೆ ಗಂಡಸು. ಅಲ್ಲಿಗೆ ಹನಿಮೂನು ಮುಗಿದು, ಮೊದಲ ತಿಂಗಳು ಕಳೆದು, 'ತಿಂಗಳ ಕಷ್ಟ'ದ ಮೂರು ದಿನದ ರೆಸ್ಟ್ ಅನುಭವಿಸಿ, ಒಬ್ಬರಿಗೊಬ್ಬರ ಸಾಂಗತ್ಯ ಇಷ್ಟವಾಗಿ ಇನ್ನೇನು ಪರಸ್ಪರರು ಹಳತಾಗಬೇಕು : ಅಷ್ಟರಲ್ಲಿ ಗಂಡಸಿಗೆ ತನ್ನ ಬದುಕಿನಲ್ಲಿ ಎಂಥ ಬದಲಾವಣೆ ಬಂತು ಎಂಬುದು ಅರಿವಿಗೆ ಬರತೊಡಗುತ್ತದೆ. ಅದನ್ನು ಅವನ ಅರಿವಿಗೆ ತರಿಸುವುದರಲ್ಲೇ ಹೆಂಡತಿಯಾದವಳ ಜಾಣತನವಿರೋದು. ಅದಕ್ಕಾಗಿ ಆಕೆ ಮದುವೆಗೆ ಮುಂಚಿನಿಂದಲೇ ಸಿದ್ಧಳಾಗಿರಬೇಕು.

ಒಂದಳತೆಗೆ ಗಂಡನ ಜೀವನ ಶೈಲಿ, ನಿತ್ಯದ ಬದುಕು, ಅವನ ಅಭ್ಯಾಸಗಳು, ಏಳುವ ಹೊತ್ತು, ರುಚಿಯ ರೀತಿ, ಅಭಿರುಚಿ ಮುಂತಾದವುಗಳದೊಂದು studyಆಕೆಗಿರಬೇಕು. ಲವ್ ಮ್ಯಾರೇಜುಗಳಲ್ಲಿ ಇವೆಲ್ಲ ಗೊತ್ತಾಗಿ ಬಿಟ್ಟಿರುತ್ತವೆ ಅಂದುಕೊಳ್ಳುತ್ತೇವೆ. 'ಅವ್ನು ಹೆಂಗೆ ಅಂತ ನಂಗೆ ಗೊತ್ತಿಲ್ವಾ?'ಅಂತ ಹುಡುಗಿ assumeಮಾಡಿಕೊಂಡು ಬಿಟ್ಟಿರುತ್ತಾಳೆ. ಆದರೆ ಮದುವೆಯಾದ ಮೇಲೆ ಎಲ್ಲ ಗಂಡಸರೂ ಒಂದೇ ಎಂಬಂತಹ ಅಸಡ್ಡೆಯ ಮಾತಿರುವುದು ಹೌದಾದರೂ, ಹೆಣ್ಣಿನಂತೆಯೇ ಗಂಡಸು ಕೂಡ ಪ್ರತಿ ನಿಮಿಷದ ಅದ್ಭುತ, ಮಿಲನ, ಮಾತು, ದನಿ, ಘಮಗಳ ಮೆರವಣಿಗೆ ಮುಗಿಯುತ್ತಿದ್ದಂತೆಯೇ what next? ಅಂತ ಕೇಳುತ್ತಾನೆ.

'ಮದುವೆಯಾಯಿತಲ್ಲ? ಇನ್ನೇನು settle ಆದೆ'ಅಂತ ಹುಡುಗಿ ಅಂದುಕೊಳ್ಳುವಷ್ಟರಲ್ಲೇ 'ನಿನ್ನ ಹೊಸ ಬೆರಗುಳೆಲ್ಲಿ ಮೇಡಂ?'ಅಂತ ಬೇರೆಯೇ ಛಾಪ್ಟರು ಆರಂಭಿಸುತ್ತಾನೆ ಗಂಡಸು. ಆ ಪ್ರಶ್ನೆಗೆ ಉತ್ತರಿಸುವುದರಲ್ಲೇ ಹೆಣ್ಣಿನ ಜಾಣತನವಿರೋದು. ಅವಳು ನನಗಿಂತ ಬೇಗ ಏಳುತ್ತಾಳೆ. ನಾನು ಎದ್ದು ಕುಳಿತು ಕಾಫಿ ಮುಗಿಸಿ ಆವತ್ತಿನ ಪತ್ರಿಕೆಯ ಕಡೆಗೆ ಕೈ ಚಾಚುವಷ್ಟರಲ್ಲಿ ಅವಳ ಸ್ನಾನವಾಗಿರುತ್ತದೆ.

ಅಮ್ಮ ಆರೋಗ್ಯವಾಗಿದ್ದಾಗ ಹೀಗೇ ದೇವರಿಗೆ ದೀಪ ಹಚ್ಚುತ್ತಿದ್ದಳಲ್ಲವಾ? ಅದ್ಯಾವಾಗ ಮನೆಯನ್ನೆಲ್ಲ ಇಷ್ಟು ಚೊಕ್ಕಟ ಮಾಡಿದಳು? ಮನೆ ಅಂದರೆ ಹೀಗಿರಬೇಕು. ತಿಂಡಿಯ ಘಮ ಮತ್ತೆ ಅಮ್ಮನನ್ನು ನೆನಪಿಸುತ್ತದೆ. ಮೊನ್ನೆ ಮೊನ್ನೆ ಚೂಡಿ, ಜೀನ್ಸು ಹಾಕಿಕೊಂಡು ಗೆಳೆತಿಯರ ಮಧ್ಯೆ ಹರಟುತ್ತ ಪಾನಿಪುರಿ ತಿನ್ನುತ್ತಿದ್ದವಳು, ಇವತ್ತಾಗಲೇ ಶುದ್ಧ ಗೃಹಿಣಿಯಾಗಿ ತನ್ನ ಮಾತು, ಹಾವ ಭಾವ, ವರ್ತನೆ ಎಲ್ಲ ಬದಲಿಸಿಕೊಂಡಿದ್ದಾಳೆ. ತನಗಿಂತ ಚಿಕ್ಕವರಾದರೆ ಗಂಡಸರನ್ನು 'ಬಂದ್ಯಾಪ್ಪಾ.. ಬಾ ಕೂತ್ಕೋ'ಅಂತ, ಹಿರಿಯರಾದರೆ'ನೀವು ಬಂದಿದ್ದು ಸಂತೋಷ ಆಯ್ತು ಭಾವಾ..ಇವರೂ ನೆನೆಸ್ತಾ ಇದ್ರು'ಅಂತ subtle ಆದ ಸಣ್ಣದೊಂದು distance ಇಟ್ಟುಕೊಂಡೇ ಮಾತಾನಾಡುತ್ತಾಳೆ. ಅವಳು ಇಷ್ಟವಾಗುವುದು ಇಂಥ ಕಾರಣಗಳಿಗೇ!

ಇದೇನೋ ಸಂಚಿ ಹೊನ್ನಮ್ಮಳ ಅಪ್ಪಣೆಗಳ ಥರಾ ಇದೆ ಬರಹ ಅಂದುಕೊಳ್ಳಬೇಡಿ. ಕಾಲ ಬದಲಾದಂತೆಲ್ಲ ಗಂಡು ಹೆಣ್ಣಿ(ಗಂಡ ಹೆಂಡತಿ)ನ ಸಂಬಂಧದ ಸ್ವರೂಪವೂ ಬದಲಾಗಿದೆ ಅಂತ ನನಗೆ ಗೊತ್ತು. ಹಗಲಿಡೀ ಗಂಡನಿಗೆ ಸರಿಸಮನಾಗಿ ದುಡಿದು ಬರುವ ಗಂಡನಿಗೆ ಸರಿಸಮನಾಗಿ ದುಡಿದು ಬರುವ ಹೆಂಡತಿ ತೀರ
'ಅಚ್ಚ ಮುತ್ತೈದೆ'ಯ ಶೈಲಿಯಲ್ಲಿ ಬದುಕುವುದು ಕಷ್ಟ. ಹಾಗೆ ನಾನು submissive ಆಗಿ ಬದುಕುವುದೇ ಇಲ್ಲ ಅಂತ ತೀರ್ಮಾನಿಸುವ ರೆಬೆಲ್ ಹೆಂಗಸರೂ ಇರುತ್ತಾರೆ. ಆದರೆ ದಾಂಪತ್ಯವೆಂಬುದು ನಮ್ಮೆಲ್ಲರ ಪ್ರತಿಭಟನೆ, ರಿವೋಲ್ಟುಗಳ ನಡುವೆಯೂ ಒಂದು ಮಿನಿಮಮ್ ಶಿಸ್ತು ಮತ್ತು ಜವಾಬ್ದಾರಿಯನ್ನು ನಿರೀಕ್ಷಿಸುತ್ತದೆ. 'ಇರಲಿಕ್ಕೆ ಮನೆ ಮಾಡಿಕೊಟ್ಟೆ, ಊಟ ತಿಂಡಿಗೆ ಕಡಿಮೆ ಮಾಡಲಿಲ್ಲ. ದೇಹಸುಖದ ಕೊರತೆಯೂ ಆಗಲಿಲ್ಲ. ಇನ್ನೇನು ಗುನುಗು? ಬಿದ್ದಿರು.. 'ಅಂತ ಹೇಳಿದರೆ ಹೇಗೆ ಹೆಂಡತಿ 'ಸುಮ್ಮನೇ ಬಿದ್ದಿರುವುದಿಲ್ಲ'ವೋ, ಹಾಗೆಯೇ ಗಂಡಸು ತನ್ನ ದಿನನಿತ್ಯದ ಅವಶ್ಯಕತೆಗಳ ಪೂರೈಕೆಯಾದ ನಂತರವೂ ಹೆಂಡತಿ ನೀಡುವ ಹೊಸ ಬೆರಗುಗಳಿಗೆ, surpriseಗಳಿಗೆ ಕಾಯುತ್ತಾನೆ.

ಒಂದು ಮಟ್ಟಸ, ಜಾಣತನ, ಎಲ್ಲೋ ಚೂರು ಅಮ್ಮನ ಹೋಲಿಕೆ, ಯಾವತ್ತೋ ನೋಡಿದ ಕ್ಯಾಬರೆ ನರ್ತಕಿಯ ಮಾದಕತೆ, ಮೊದಲ ಸಲ ಅನುಭೂತಿಗೆ ಬಂದ ಶುಭ್ರ ಪ್ರೀತಿಯ ಸ್ಪರ್ಶ, ಇವಳು ಕೆಲವು ವಿಷಯಗಳಲ್ಲಿ ನನಗಿಂತ ಚುರುಕು, ಇವಳ ಕೈಯಲ್ಲಿ ನನ್ನ ಬದುಕು ಸ್ವಸ್ಥ ಮತ್ತು safe, ಪ್ರಾಮಾಣಿಕತೆಯ ವಿಷಯದಲ್ಲಿ ಎರಡು ಮಾತಿಲ್ಲ, ನನ್ನ ಬೇಕುಗಳ ಅರ್ಥವಾದಂತೆಯೇ ನನ್ನ ಬೇಡಗಳೂ ಅರ್ಥವಾಗುತ್ತವೆ ಎಂಬ ಕಾನ್ಫಿಡೆನ್ಸ್ ಗಂಡಸಿನಲ್ಲಿ ಹುಟ್ಟಿಸುತ್ತಾಳಲ್ಲ? ಅಂಥ ಹೆಂಡತಿಯನ್ನು ಬಿಟ್ಟು ಗಂಡನಾದವನು ಬೇರೆಡೆಗೆ usually, ವಲಸೆ ಹೋಗುವುದಿಲ್ಲ. ಅವನನ್ನು ಯಾವತ್ತಿಗೂ ಅತಂತ್ರ ಕಾಡಬೇರದು. ಅನುಮಾನ ನಾಟಬಾರದು.

'ಹಾಂ, ನನ್ನ ಸುಮ್ಸುಮ್ನೆ ಅನುಮಾನಿಸ್ತೀಯಾ?'ಅಂತ ಅಬ್ಬರಿಸುವವರಿರುತ್ತಾರೆ. 'ಹೂಂ.. ನೀನೂ ಅನುಮಾನಕ್ಕೆ ಎಡೆ ಮಾಡಿಕೊಡದಂತೆ ಬದುಕಿ ತೋರಿಸು'ಅನ್ನುತ್ತದೆ ಬದುಕು. ವೈನ ತಪ್ಪಿಹೋದರೆ, ಮಟ್ಟಸ ಮರೆಯಾದರೆ, ರುಚಿ ಶುಚಿಯೆಡೆಗೆ ಅಸಡ್ಡೆ ಬೆಳೆದರೆ ಎಂಥ ಅನುರೂಪ ದಾಂಪತ್ಯವೂ ನೀರಸವಾಗುತ್ತದೆ.

ಇದೆಲ್ಲ ನಿಮಗೆ ಬೋಧನೆ ಅನ್ನಿಸುತ್ತದೇನೋ? ಒಂದು ಮಾತು ನಿಮ್ಮ ಮನೆಯಾತನನ್ನು ಕೇಳಿ ನೋಡಿ!

(ಸ್ನೇಹ ಸೇತು : ಹಾಯ್ ಬೆಂಗಳೂರು!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X