• search

ಮಕ್ಕಳು ದಾರಿ ತಪ್ಪುತ್ತಿರುವುದಕ್ಕೆ ಕಾರಣರು ಯಾರು?

By Prasad
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  "ಏನ್ ಸಾರ್, ಈಗಿನ ಕಾಲದಲ್ಲಿ ಮಕ್ಕಳ ಮೇಲೆ ತಂದೆ ತಾಯಿಯರಿಗೆ ಹಿಡಿತವೇ ಇರೋದಿಲ್ಲ. ನಾವೇನೋ ಅಂದ್ಕೊಂಡಿರ್ತೀವಿ, ಮಕ್ಕಳು ಅಲ್ಲಿ ಇನ್ನೇನೋ ಮಾಡ್ತಿರ್ತಾರೆ!" ಅಂತ ಹಿರಿಯರೊಬ್ಬರೊಂದಿಗೆ ಅಂದಾಗ, ಅವರು "ಇಂದಿನ ಕಾಲದಲ್ಲಿ ಮಕ್ಕಳೇ ಇರಬಾರದು!" ಎಂದು ಮುಖಕ್ಕೆ ರಪ್ಪಂತ ರಾಚಿದ್ದರು.

  ಅನಿರೀಕ್ಷಿತವಾಗಿ ಬಂದಿದ್ದ ಅವರ ಮಾತು ಅವಾಕ್ಕಾಗುವಂತೆ ಮಾಡಿತ್ತು. ಅವರ ಮಾತಲ್ಲಿ ಸತ್ಯಾಂಶ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು. ಮಕ್ಕಳನ್ನು ಬೆಳೆಸುವ ಜವಾಬ್ದಾರಿ ದೊಡ್ಡವರ ಕೈಯಲ್ಲಿರುತ್ತದೆ. ಅಲ್ಲಿಂದ ಮಕ್ಕಳು ಏನು ಮಾಡುತ್ತಾರೋ ಅದು ಅವರ ಜವಾಬ್ದಾರಿಯಾಗಿರುತ್ತದೆ.

  ಹೀಗೆ ಬೆಳೆಸಬೇಕು ನೋಡಿ ಮಕ್ಕಳನ್ನಾ.. ಹ್ಯಾರೀಸ್ ಬೆನ್ನುತಟ್ಟಿದ್ದ ಪ್ರಕಾಶ್ ರೈ

  ಮಕ್ಕಳು ಸುಸಂಸ್ಕೃತರಾಗಿ, ಸಮಾಜದಲ್ಲಿ ಸಜ್ಜನಿತರಾಗಿ, ಹಿರಿಯರಿಗೆ ಗೌರವ ಕೊಡುವಂತೆ, ಕಾನೂನಿನ ನೀತಿ ನಿಯಮಗಳನ್ನು ಪಾಲಿಸುವಂತೆ ಮಾಡುವ ಜವಾಬ್ದಾರಿ ಹಿರಿಯರ ಕೈಯಲ್ಲಿಲ್ಲವೆ? ಎಂದು ಆಡಬೇಕಾದ ಮಾತು ಅರ್ಧದಲ್ಲೇ ಉಳಿದಿತ್ತು. ಆದರೆ, ಅಂಕೆ ಮೀರಿದ ಮಕ್ಕಳು ಬಾಗಿಯಾವೆ ಎಂದು ಚಿಂತಿಸಿದಾಗ, ಹಿರಿಯರು ಹೇಳಿದ್ದು ಅಕ್ಷರಶಃ ನಿಜ ಅಂತಲೂ ಅನ್ನಿಸಿತ್ತು.

  Who is responsible for the faults of children?

  ತನ್ನ ಹೆಗಲಿಗಿಂತ ಎತ್ತರಕ್ಕೆ ಬೆಳೆದ ಮಗನಿಗೆ ಡಿಯೋವನ್ನೋ, ಅಪಾಚೆಯನ್ನೋ, ಪ್ಯಾಷನ್ ಅನ್ನೋ ಕೊಡಿಸಿ, ಜೇಬಿಗೊಂದಿಷ್ಟು ಪಾಕೆಟ್ ಮನಿ ನೀಡಿ ಮನೆಯಿಂದ ಕಾಲೇಜಿಗೆ ಕಳಿಸಿದರೆ ತನ್ನ ಜವಾಬ್ದಾರಿ ಮುಕ್ಕಾಲು ಭಾಗ ಮುಗಿಯಿತು ಅಂತ ತಂದೆ ಅಂದುಕೊಂಡಿರುತ್ತಾರೆ. ಅಲ್ಲಿ ಮಗ ಏನು ಮಾಡುತ್ತಿರುತ್ತಾನೆ ಎಂಬುದರ ಅರಿವು ಅಪ್ಪನಿಗಿರುತ್ತದಾ?

  ಮೊಹಮ್ಮದ್ ನಾಲಪಾಡ್! ಈತನ ಹೆಸರು ಭಾರತದ ಗಡಿದಾಟಿ ಅಂತಾರಾಷ್ಟ್ರೀಯ ಪರಿಧಿಯಲ್ಲಿ ರಾರಾಜಿಸುತ್ತಿದೆ. ಈತನ ಗ್ಯಾಂಗು ಹೊಡೆದ ಏಟಿಗೆ ಕ್ಷಣಕ್ಷಣವೂ ಮಲ್ಯ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿರುವ ವಿದ್ವತ್ ಎಂಬುವವ ಮತ್ತೆ ಸಹಜ ಸ್ಥಿತಿಗೆ ಬರಲು ಇನ್ನೆಷ್ಟು ವರ್ಷಗಳು ಉರುಳಬೇಕೋ? ಪರಪ್ಪನ ಅಗ್ರಹಾರದಲ್ಲಿ ರಾಜಾರೋಶವಾಗಿ ಕಂಬಿ ಎಣಿಸುತ್ತಿರುವ ನಾಲಪಾಡ್ ಗಹಗಹಿಸಿ ನಗುತ್ತಿರಬೇಕು.

  ನಿಮ್ಮ ಜನಪ್ರತಿನಿಧಿ: ಉದ್ಯಮಿ ನಲಪಾಡ್ ಅಹ್ಮದ್ ಹ್ಯಾರೀಸ್

  ಈಕುರಿತಾಗಿ ಒನ್ಇಂಡಿಯಾ ಕನ್ನಡದಲ್ಲಿ ಕೇಳಿದ ಪ್ರಶ್ನೆಗೆ ಶೇ.65.66ರಷ್ಟು ಜನ ಮಗನನ್ನು ಬೇಕಾಬಿಟ್ಟಿ ಬೆಳೆಸಿದ, ಸಾಲದೆಂಬಂತೆ ರಾಜಕೀಯದಲ್ಲೂ ಸ್ಥಾನಮಾನ ದಕ್ಕಿಸಿಕೊಟ್ಟ ಅಪ್ಪ, ಶಾಂತಿನಗರದ ಶಾಸಕ ಎನ್ಎ ಹ್ಯಾರಿಸ್ ಅವರದೇ ತಪ್ಪು ಎಂದು ಷರಾ ಬರೆದಿದ್ದಾರೆ. ಶೇ.19.5ರಷ್ಟು ಜನರು ವ್ಯವಸ್ಥೆಯ ಮೇಲೆ ತಪ್ಪು ಹೊರೆಸಿದ್ದರೆ, ಶೇ.14.84ರಷ್ಟು ಜನರು ಮಗನೇ ಕಾರಣ ಎಂದು ಅಭಿಪ್ರಾಯ ತಿಳಿಸಿದ್ದಾರೆ.

  ಸೌತ್ ಎಂಡ್ ಸರ್ಕಲ್ ನಲ್ಲಿ ಹಿಂದೆ ಹುಡುಗಿಯನ್ನು ಕೂಡಿಸಿಕೊಂಡು, ರಸ್ತೆ ನಿಯಮವನ್ನೂ ಪಾಲಿಸದೆ, ಪೊಲೀಸರ ಅಣತಿಯನ್ನೂ ಗೌರವಿಸದೆ, ಹೆಲ್ಮೆಟ್ ಕೂಡ ಧರಿಸದೆ ಭರ್ ಅಂತ ಸಾಗುವ ಮಗ, ಇನ್ನಾರಿಗೋ ಇನ್ನೆಲ್ಲೋ ಗುದ್ದಿ ಆಸ್ಪತ್ರೆ ಸೇರಿದಾಗ ಮಾತ್ರ, ಮಗನನ್ನು ಜವಾಬ್ದಾರಿಯುತವಾಗಿ ಬೆಳೆಸಲಿಲ್ಲ, ಆತನನ್ನು ಹದ್ದುಬಸ್ತಿನಲ್ಲಿ ಇಡಬೇಕಾಗಿತ್ತು ಎಂದು ಅಪ್ಪ ಚಿಂತಿಸಬೇಕೆ?

  ಮತ್ತೊಂದು ನೈಜ ಘಟನೆಯಲ್ಲಿ, ಮನೆಗೆ ಬಂದ ಅತಿಥಿಯನ್ನು ಕಾಲೇಜು ಹುಡುಗನೊಬ್ಬ ಬೈಕಿನ ಮೇಲೆ ಎಲ್ಲೋ ಬಿಟ್ಟುಬರಬೇಕಾಗಿ ಬಂದಾಗ, ಆ ಹಿರಿಯರು ನೀನು ಹೆಲ್ಮೆಟ್ ಧರಿಸುವವರೆಗೆ ನಿನ್ನ ಗಾಡಿಯ ಮೇಲೆ ಹತ್ತಲ್ಲ, ತಮಗೂ ಹೆಲ್ಮೆಟ್ ಬೇಕು ಎಂದು ಪಟ್ಟು ಹಿಡಿದಿದ್ದರು. ಇಲ್ಲೇ ಪಕ್ಕದ ಕಾಲೋನಿಯಲ್ಲೇ ಬಿಡಬೇಕಾದ ಸ್ಥಳವಿದೆ ಎಂದು ಹೇಳಿದರೂ ಹಿರಿಯರು ಒಪ್ಪಲಿಲ್ಲ. ನಂತರ ಯುವಕ ಹೆಲ್ಮೆಟ್ ಧರಿಸಲೇಬೇಕಾಯಿತು.

  ಮಕ್ಕಳು ಹೇಗೆ ಬದಲಾಗುತ್ತಿದ್ದಾರೆ, ವ್ಯವಸ್ಥೆ ಅವರನ್ನು ಹೇಗೆ ಬದಲಾಗುವಂತೆ ಮಾಡುತ್ತಿದೆ, ಹೇಗೆ ಅವರ ಆಯ್ಕೆಗಳು ದಿಕ್ಕು ತಪ್ಪುತ್ತಿವೆ ಎಂಬುದಕ್ಕೆ ಇವು ಕೆಲವೊಂದು ಉದಾಹರಣೆಗಳು ಮಾತ್ರ. ಇಂಥವನ್ನು ನಾವು ದಿನಂಪ್ರತಿ ನೋಡುತ್ತಿರುತ್ತೇವೆ. ನಿಮ್ಮ ಮಗ ಅಥವಾ ಮಗ ಹೊರಗೆ ಏನು ಮಾಡುತ್ತಿದ್ದಾರೆಂದು ಒಂದು ಕಣ್ಣಿಡಿ, ಸಾಧ್ಯವಾದರೆ.

  ಮಕ್ಕಳಿಗೆ ಕಪಾಳಕ್ಕೆ ಬಿಗಿದು ತಿಳಿ ಹೇಳುವ ವಯಸ್ಸು ಅವರಿಗೆ ದಾಟಿರಬಹುದು, ಆದರೆ ಕಿವಿಹಿಂಡಿ ಅಥವಾ ಒಪ್ಪುವಂತೆ ಮನವೊಲಿಸುವುದು ಖಂಡಿತವಾಗಿಯೂ ಪೋಷಕರಿಗೆ ಸಾಧ್ಯವಿದೆ. ಈಗ ನಾಲಪಾಡ್ ಪ್ರಕರಣದಲ್ಲಿ, ಬುದ್ಧಿ ಹೇಳಬೇಕಾಗಿರುವುದು ಅಥವಾ ಪಾಠ ಕಲಿಸಬೇಕಾಗಿರುವುದು ಪರಪ್ಪನ ಅಗ್ರಹಾರ ಜೈಲು ಸೇರಿರುವ ನಾಲಪಾಡ್ ಗ್ಯಾಂಗಿಗಾ ಅಥವಾ ಅವರ ಅಪ್ಪಂದಿರಿಗಾ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Who is responsible for the faults of children? Is it the parents who fail to make their kids a responsible citizen or children themselves who never come under the control of parents or the society itself? Majority people say it is the parents.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more