ರಾಜಕಾರಣಿಗಳ ವ್ಯಕ್ತಿಚಿತ್ರ ಮಾಲಿಕೆ ಆರಂಭ

J.S. Narayana Rao, The authorಶ್ರೀಸಾಮಾನ್ಯರಿಗೆ ರಾಜಕಾರಣಿಗಳ ಪರಿಚಯ ಅಷ್ಟಾಗಿರುವುದಿಲ್ಲ. ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಜನತೆಗೆ ರಾಜಕಾರಣಿಗಳ ಒಂದು ಸಾಧಾರಣ ಚಿತ್ರವಷ್ಟೇ ಸಿಗುತ್ತದೆ. ಆದರೆ, ರಾಜಕಾರಣಿಗಳ ನಿಕಟ ಪರಿಚಯ ಮತ್ತು ಅವರ ಅಂತರಂಗದ ಬಹುತೇಕ ಸಂಗತಿಗಳು ದಕ್ಕುವುದು ಅವರನ್ನು ಹತ್ತಿರದಿಂದ ಬಲ್ಲ ಪತ್ರಕರ್ತರಿಗೆ ಮಾತ್ರ.

ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ವರದಿಗಾರಿಕೆಯನ್ನು ಮಾಡುತ್ತಿರುವ ಜೆ.ಎಸ್. ನಾರಾಯಣ ರಾವ್ (ಜೆಸುನಾ) ನಮ್ಮ ಅನೇಕ ರಾಜಕಾರಣಿಗಳ ಗುಣ, ಸ್ವಭಾವ, ಶಕ್ತಿ, ದೌರ್ಬಲ್ಯ, ತೆವಲು, ತಿಕ್ಕಲುತನಗಳನ್ನು ತೀರ ಹತ್ತಿರದಿಂದ ಬಲ್ಲವರು. ಮುಖ್ಯಮಂತ್ರಿ ಡಿ.ದೇವರಾಜ ಅರಸರಿಂದ ಹಿಡಿದು ವಿಧಾನ ಪರಿಷತ್ ಸದಸ್ಯೆ ಆರತಿವರೆಗೆ, ಚಿರ ವಿರಹಿ ರಾಯರೆಡ್ಡಿಯಿಂದ ಮಂತ್ರವಾದಿ ಕಾನಡೆತನಕ 26 ಮಂದಿ ಆಯ್ದ ರಾಜಕಾರಣಿಗಳನ್ನು ಕುರಿತು ಜೆಸುನಾ ಅವರು ಬರೆದ ವ್ಯಕ್ತಿ ಚಿತ್ರಗಳ ಮಾಲಿಕೆ ದಟ್ಸ್‌ಕನ್ನಡದಲ್ಲಿ ಮೇ 20 ಮಂಗಳವಾರದಿಂದ ಆರಂಭವಾಗಲಿದೆ.

ಇಲ್ಲಿ ಕಾಣಿಸಲಾಗುತ್ತಿರುವ ವ್ಯಕ್ತಿ ಚಿತ್ರಗಳು ಮುದ್ರಣ ಮಾಧ್ಯಮದಲ್ಲಿ ಕಾಲಕಾಲಕ್ಕೆ ಬೆಳಕುಕಂಡಂಥವು. ಸಿರ್ಸಿಯ ದಿನಪತ್ರಿಕೆ "ಧ್ಯೇಯನಿಷ್ಠ", ಬೆಳಗಾವಿ ದಿನಪತ್ರಿಕೆ "ಹಸಿರು ಕ್ರಾಂತಿ", "ವಿಜಯ ಕಿರಣ" (ಸಂಜೆಪತ್ರಿಕೆ, ಬೆಂಗಳೂರು) "ದೆಹಲಿ ವಾರ್ತೆ" (ದಿನಪತ್ರಿಕೆ ದೆಹಲಿ) "ಕರುನಾಡ ಸಂಜೆ", "ಸೂರ್ಯ" ಮುಂತಾದ ಪತ್ರಿಕೆಗಳಲ್ಲಿ ವಿಭಿನ್ನ ಕಾಲಘಟ್ಟದಲ್ಲಿ ಪ್ರಕಟವಾಗಿರುವ ವ್ಯಕ್ತಿ ಚಿತ್ರಗಳು. ಈ ಬರಹಗಳ ಸಂಕಲನ "ಕಾರಿಡಾರ್ ಕಾಲಕೋಶ" ಎಂಬ ಶೀರ್ಷಿಕೆಯಲ್ಲಿ ಇತ್ತೀಚೆಗೆ ಪುಸ್ತಕ ರೂಪದಲ್ಲೂ ಬೆಳಕು ಕಂಡಿದೆ.

ಇಲ್ಲಿ ಮೂಡಿಬರಲಿರುವ ವ್ಯಕ್ತಿ ಚಿತ್ರಣಗಳ ಇತಿಮಿತಿಯನ್ನು ಮಾನ್ಯ ಓದುಗರು ಅರಿಯಬೇಕು. ಇವೆಲ್ಲ ಅಂಕಣ ಬರಹಗಳಾದ್ದರಿಂದ, ರಾಜಕಾರಣಿಯ ಒಂದು ಕಾಲಘಟ್ಟದ ಚಿತ್ರಣ ಮಾತ್ರ ಕೊಡಬಲ್ಲುದು. ಒಂದು ಸಾಮಾಜಿಕ ಸಂದರ್ಭ ಮತ್ತು ಮದವೇರಿದ ರಾಜಕೀಯ ಚೌಕಟ್ಟಿನಲ್ಲಿ ವ್ಯಕ್ತಿ ವಿಶೇಷಗಳನ್ನು ಬಿಂಬಿಸುವುದಷ್ಟೆ ಲೇಖಕರ ಕೆಲಸ. ನಮ್ಮ ಜನಪ್ರತಿನಿಧಿಗಳು ಅಧಿಕಾರ ತುಂಬಿ ತುಳುಕಾಡುವ ವಿಧಾನಸೌಧದ ಮೂರನೆ ಮಹಡಿ, ವಿಧಾನಸಭೆ, ಶಾಸಕರಭವನ ಹಾಗೂ ಸುತ್ತಮುತ್ತಲಿನ ಅಧಿಕಾರದ ಪ್ರಭಾವಳಿಯಲ್ಲಿ ಹೇಗೆ ಬದುಕುತ್ತಾರೆ ಎಂದು ಕಾಣಿಸುವುದು ಬರಹದ ಮೂಲ ಉದ್ದೇಶ. ಈ ಪುಸ್ತಕದಲ್ಲಿ ಬರುವ ವಿಭಿನ್ನ ರಾಜಕೀಯ ಕಲಾವಿದರ ವಕ್ರ ಭಾವಚಿತ್ರವನ್ನು ರಚಿಸಿದವರು ಖ್ಯಾತ ಕಲಾವಿದ ಬಿ.ಜಿ.ಗುಜ್ಜಾರಪ್ಪ.

ಈ ಧಾರಾವಾಹಿಯಲ್ಲಿ ಮಿಂಚುವ ರಾಜಕೀಯ ಕಲಾವಿದರಲ್ಲಿ ಕೆಲವರು ಈಗಿಲ್ಲ. ಇನ್ನು ಕೆಲವರು ಇದ್ದೂ ಇಲ್ಲದಂತಾಗಿದ್ದಾರೆ. ಮತ್ತೆ ಕೆಲವರು ಆ ಪಕ್ಷಬಿಟ್ಟು ಈ ಪಕ್ಷ ಸೇರಿಕೊಂಡಿದ್ದಾರೆ. ರಾಜಕಾರಣಿಗಳ ನೆಲೆಗಳು ಬದಲಾಗುತ್ತಲೇ ಇರುತ್ತದಾದ್ದರಿಂದ ಪ್ರಸಕ್ತ ಅಧಿಕಾರ, ಪಕ್ಷ, ಸ್ಥಾನಮಾನಗಳ ಚೌಕಟ್ಟಿನಿಂದಾಚೆ ಅವರನ್ನು ಓದಿಕೊಳ್ಳುವುದು ಲೇಸು. ಒಂದು ಮಾತು : ರಾಜಕಾರಣಿಗಳು ಎಲ್ಲೇ ಇರಲಿ,ಅಧಿಕಾರ ಕೈತಪ್ಪಿರಲಿ ಅಥವಾ ಹೊಸ ಅಧಿಕಾರ ಕೈತುಂಬಿ ಬಂದಿರಲಿ, ಬದಲಾಗದೇ ಇರುವುದು ಹುಟ್ಟುಗುಣ ಮಾತ್ರ. ಸ್ವಭಾವಗಳಿಗೆ ಜಯವಾಗಲಿ! - ಸಂಪಾದಕ.

ಈ ಧಾರಾವಾಹಿಯಲ್ಲಿ ಬರುವ ಮೊದಲ ಪಾತ್ರಧಾರಿ : ತಂತ್ರ+ದ್ವೇಷ+ದರ್ಪ= ದೇವೇಗೌಡ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+