ಹಾಸ್ಯ : 'ಕಾವು' ಏರಿದ ಚರ್ಚೆಯಲ್ಲಿ ಜನನಾಯಕರು
ಹಾಸ್ಯಮಯ ಕಿರುಚಿತ್ರಗಳು, ಅಣಕು ಗೀತೆಗಳು, ಕನ್ನಡ ಚಲನಚಿತ್ರ ಗೀತೆಗಳಿಗೆ ಬೆಲೆ ತರುವ ಮಿಮಿಕ್ರಿ, ಡೈಲಾಗ್ ಡಬ್ ಸ್ಮಾಶ್ ಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿರುವ ನಮ್ದುಕೆ ತಂಡ ಈಗ ತಮ್ಮ ಜನಪ್ರಿಯ ಸರಣಿಯನ್ನು ಮುಂದುವರೆಸುತ್ತಾ ಟಿವಿ 69ನ ಮೂರನೇ ಎಪಿಸೋಡು ನಿಮ್ಮ ಮುಂದಿಡುತ್ತಿದೆ.
ನಮಸ್ಕಾರ,
ಎಲ್ಲರಿಗೂ Tv 69 ಪ್ರಸ್ತುತ ಪಡಿಸುತ್ತಿದೆ "ಕಾವು " ಏರಿದ ಚರ್ಚೆ :special segment . ಈ ಸನ್ನಿವೇಶದಲ್ಲಿ ಬರುವ ಎಲ್ಲ ಪಾತ್ರಗಳು ಕಾಲ್ಪನಿಕ. ಈ video ನೋಡಿ ಇಷ್ಟ ಆದರೆ,ನಗು ಬಂದರೆ ಶೇರ್ ಮಾಡಿ,ಲೈಕ್ ಮಾಡಿ. subscribe ಮಾಡಿ.ನಮ್ಮ Namdu K ಪೇಜ್ ಲೈಕ್ ಮಾಡಿ ಎಂದು ನಮ್ದುಕೆ ತಂಡದ ಶ್ರವಣ್ ಕೇಳಿಕೊಂಡಿದ್ದಾರೆ.[ಕಾವೇರಿ 3 ಪೆಗ್ ಅಣಕು ಗೀತೆ]

ಕಾವೇರಿ ನದಿ ನೀರು ಹಂಚಿಕೆ ವಿವಾದ ತಾರಕಕ್ಕೇರಿರುವ ಸಂದರ್ಭದಲ್ಲಿ ಪ್ಯಾನೆಲ್ ಡಿಸ್ಕಷನ್ ಗಾಗಿ ಬಂದ ರಾಜ್ಯದ ಪ್ರಮುಖ ರಾಜಕಾರಣಿಗಳು ಯಾವ ರೀತಿ ಪ್ರತಿಕ್ರಿಯೆಗಳನ್ನು ನೀಡುತ್ತಾರೆ, ಜನ ಪ್ರತಿನಿಧಿಗಳ ಮ್ಯಾನರೀಸಂ ಯಾವ ರೀತಿ ಇರುತ್ತದೆ. ಅವರು ಚರ್ಚೆ ಸಂದರ್ಭದಲ್ಲಿ ಯಾವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.
ಟಿವಿ ನಿರೂಪಕರ ಪಾಡು ಎಲ್ಲವನ್ನು ಕ್ಲುಪ್ತವಾಗಿ ನಾಲ್ಕು ಮುಕ್ಕಾಲು ನಿಮಿಷಗಳಲ್ಲಿ ಹೇಳುವ ಪ್ರಯತ್ನವನ್ನು ನಮ್ದುಕೆ ತಂಡ ಮಾಡಿದೆ. ಇಲ್ಲಿ ಬರುವ ಪಾತ್ರಗಳು ಹಾಗೂ ಮಾತುಕತೆ ಯಾವುದೇ ಜನಪ್ರತಿನಿಧಿಯನ್ನು ಹೋಲುತ್ತಿದ್ದರೆ, ಅದು ಕೇವಲ ಕಾಕತಾಳೀಯ ಎಂದು ಸೂಚನೆ ನೀಡಿದ್ದಾರೆ. ಒಮ್ಮೆ ನೋಡಿ ಆನಂದಿಸಿ...












Click it and Unblock the Notifications