153697political satireಕನ್ನಡಕ್ಕೆ ಸ್ಥಾನಮಾನ:ವಿನಿವಿಂಕ್ ಸಂತಸ /column/majavani/2009/0112-viniv-inc-sastry-majavani-interview.htmlಬೆಂಗಳೂರು, ಜ.11:ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರಿಯ ಭಾಷೆ ಎಂದು ಘೋಷಿಸಿರುವುದನ್ನು ಕರ್ನಾಟಕದ ಸುಪ್ರಸಿದ್ಧ ಖೈದಿ ವಿನಿವಿಂಕ್ ಶಾಸ್ತ್ರಿಯವರು ಸ್ವಾಗತಿಸಿದ್ದಾರೆ. ನಗರದ ಕೇಂದ್ರ ಕಾರಾಗಾರದಲ್ಲಿ ಮಜಾವಾಣಿ ಪತ್ರಿಕೆಯ ವರದಿಗಾರರೊಂದಿಗೆ ಮಾತನಾಡಿದ ಶಾಸ್ತ್ರಿಯವರು, "ಸುದ್ದಿ ಮತ್ತು ಸ್ವಾರಸ್ಯ ಎರಡೂ ಹಳತಾದರೂ ನಿರ್ಭಿಡೆಯಿಂದ ವರದಿಮಾಡುವ ಮಜಾವಾಣಿ ಪತ್ರಿಕೆ ಈಗಲಾದರೂ ನನ್ನನ್ನು ಸಂಪರ್ಕಿಸಿರುವುದು ಶ್ಲಾಘನೀಯ. ಎಷ್ಟೋ ವರ್ಷಗಳ ಹೋರಾಟದ ನಂತರ ಕನ್ನಡವನ್ನು ಶಾಸ್ತ್ರಿಯ 34017http://kannada.oneindia.com/img/2009/01/12-vinivinc-shastri1e.jpg153697political satireದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg153697political satireಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg153697political satireನ್ನನ್ನತ್ರ ಇನ್ನೂ ಐನಾತಿ ಟೈಲಾಗ್‌ಗಳಿವೆ/column/humor/2009/0402-political-satire-by-natesh-babu.htmlಮೇ ಮುಗ್ಯೋ ತನ್ಕ ನಮ್ ರಾಜ್‌ಕಾರುಣಿಗುಳ್ಗೆ ನಿದ್ದಿಲ್ಲ. ನಮುಗಿಲ್ಲದ್ ನಿದ್ದಿ ನಿಮಗ್ಯಾಕೆ ಅಂಥ, ಮತುದಾರುರ ನಿದ್ದಿಗೂ ಭಂಗ ತಂದವ್ರೆ. ಮತುದಾರ್ರಿಗೆ ಮೊಂಕುಬೂದಿ ಎರಚೋದು ಹೆಂಗೆ ಅಂಬೋ ಸಂಶೋದ್ನೆಗೆ ಇರೋಬರೊ ರಾಜ್ಕೀಯ ಪಕ್ಸುಗುಳು ಕಾಸು ಸುರಿದಿವ್ಯಂತೆ. ಚುನಾವಣೆ ಟೇಮಲ್ಲಿ ಬಿಸಿಬಿಸಿ ಸುದ್ದಿ ಮಧ್ಯೆ ಲೋಡುಗಟ್ಟಲೇ ಜಾಹೀರಾತು(ಥೂ) ಮಾರಿ ಜೇಬು ತುಂಬ್ಸಿಕೊಳ್ಳೋಕೆ ಪೇಪರ್‌ನೋರು, ಟೀವಿನೋರು ಐನಾತಿ ಪಿಲಾನು ಮಾಡವ್ರೆ ಅಂಬುತಾ 35674http://kannada.oneindia.com/img/2009/04/02-varun-gandhi1.jpg153697political satireಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg83806humorಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg83806humorಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg83806humorಪ್ರಮಿಳಾ ನೇಸರ್ಗಿಯೂ ಮಂತ್ರಿಸಿದ ನಿಂಬೆಹಣ್ಣೂ/column/humor/2008/0422-subbu-and-magical-lemon.htmlರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಗಲ್ಲಿಗಲ್ಲಿಗಳಲ್ಲಿ ಜ್ಯೋತಿಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಚುನಾವಣೆ ಇಲ್ಲದಿದ್ದರೂ ಅವರು ಇದ್ದೇ ಇರುತ್ತಾರೆ. ಯಾವ ಪಕ್ಷ ಗೆಲ್ಲುತ್ತೆ? ಮುಮಂ ಯಾರು? ಮೊದಲು ಎಡಗಾಲಿಡಬೇಕೋ, ಬಲಗಾಲಿಡಬೇಕೋ ಅವರೇ ಹೇಳುತ್ತಾರೆ. ಅರಳುತ್ತಿರುವ ಜ್ಯೋತಿಷಿಗಳು ಮರುಳಾಗುತ್ತಿರುವ ರಾಜಕಾರಣಿಗಳ ಕುರಿತು ಒಂದು ವಿಡಂಬನೆ. * ಪ್ರಸಾದ ನಾಯಿಕ ಪಕ್ಕದ ಓಣಿಯಲ್ಲಿದ್ದ ಗೆಳೆಯ ಡಿಬ್ಬಿ ಹಳೆಯ ಕಾಲದ ಚಿತ್ರದಲ್ಲಿ ತಾಯ್ ನಾಗೇಶ್ 2738http://kannada.oneindia.com/img/2009/11/14-pramila-nesargi1e.jpg83806humorಶರಶೈಯೆಯಲ್ಲಿ ಪವಡಿಸಿದ ಭೀಷ್ಮ ಪ್ರತಿಜ್ಞೆ/column/humor/2009/0102-i-just-broke-my-new-year-resolution-2009.htmlಹೊಸವರ್ಷ ಉದಯವಾಗುವ ವೇಳೆ ಅನೇಕ ಜನ, ಥರಹೇವಾರಿ ಪ್ರತಿಜ್ಞೆಗಳನ್ನು ಮಾಡುವುದು ರೂಢಿ. ತಪ್ಪೇನಿಲ್ಲ ಬಿಡಿ. ಎಷ್ಟೋ ಜನ 2009ಕ್ಕೆ ಹೊಸ ರೆಸಲ್ಯೂಷನ್ ಗಳನ್ನು ಕೈಗೊಂಡಿದ್ದನ್ನು ನೀವು ಕೇಳಿರಬಹುದು. ಆ ಭೀಷ್ಮ ಪ್ರತಿಜ್ಞೆಗಳು ಇಷ್ಟುಹೊತ್ತಿಗಾಗಲೇ ಶರಶೈಯೆಯಲ್ಲಿ ಅಂಗಾತ ಮಲಗಿದ್ದರೆ ಖಂಡಿತ ಆಶ್ಚರ್ಯವಿಲ್ಲ * ರೇಖಾ ಹೆಗಡೆ ಬಾಳೇಸರ, ಓಲ್ಡ್‌ಸ್ಮಾರ್; ಫ್ಲಾರಿಡಾನೋಡನೋಡುತ್ತ ನೂತನ ವರ್ಷ ಬಂದಿದೆ. ನಿನ್ನಿನ ದಿನಕ್ಕೂ, ಇಂದಿನದಕ್ಕೂ 33835http://kannada.oneindia.com/img/2009/01/02-new-year-resolutions1e.jpg83806humorತಿರುಪತಿ ತಿಮ್ಮಪ್ಪನೂ, ಉಡುಪಿಯ ಹೋಟೆಲೂ/column/humor/2009/0130-tirupathi-timmappa-and-udupi-hotel.htmlಶಂಕರಪುರಂನಲ್ಲಿರುವ ಬ್ರಾಹ್ಮಣರ ಕಾಫಿ ಬಾರ್ ಯಡಿಯೂರಪ್ಪನವರ ಭೇಟಿಯಿಂದಾಗಿ ಇವತ್ತು ಸುದ್ದಿ ಕೇಂದ್ರಕ್ಕೆ ಬಂದಿರಬಹುದು, ವಿಶ್ವೇಶ್ವರ ಭಟ್ ಅವರು ಬರೆದ ಎಂಟಿಆರ್ ಹೋಟೆಲಿನ ಇತಿಹಾಸ ಮತ್ತು ಪರಂಪರೆಯ ಬಗೆಗೆ ಕನ್ನಡಿಗರು ಬೆನ್ನು ತಟ್ಟಿಕೊಳ್ಳುತ್ತಿರಬಹುದು, ತಟ್ಟಿಕೊಳ್ಳಿರಿ ತಟ್ಟಿಕೊಳ್ಳಿರಿ. ಆದರೆ ಕನ್ನಡಿಗರೇ ಒಂದು ವಿಷಯ ತಿಳಿಯಿರಿ. ಐದಾರು ಶತಮಾನಗಳ ಹಿಂದೆಯೇ ನಮ್ಮಲ್ಲಿ ಉಡುಪಿ ಹೋಟೆಲುಗಳಿದ್ದವು, ಅಲ್ಲಿ ರುಚಿರುಚಿಯಾದ ಇಡ್ಲಿ ದೋಸೆಗಳು ಬಿಕರಿಯಾಗುತ್ತಿದ್ದವು. 34371http://kannada.oneindia.com/img/2009/01/30-balaji3.jpg158046venkatesh dodmaneಜಿಪಿಎಸ್ ಎನ್ನುವ ರಸ್ತೆಮಾತುಗಾರ!/nri/article/2009/0117-global-positioning-system-navigation-device.htmlದಾರಿ ತಿಳಿಯದಾಗಿದೆ ಜಿಪಿಎಸ್ ಮಾಂತ್ರಿಕನೆ, ಹಾದಿ ತೋರಿಸಿ ಗುರಿ ಮುಟ್ಟಿಸುಬಾ ಅಸಾಮಾನ್ಯ ಉಪಕರಣವೆ! ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 'ರಸ್ತೆಮಾತಾಗಿರುವ' ಈ ಮಾಂತ್ರಿಕ ಉಪಕರಣವಾದರೂ ಎಂತಹುದು? ಅದರ ಉಪಯೋಗವಾದರೂ ಏನು? ಭಾರತೀಯ ಇಂಜಿನಿಯರುಗಳೇ ಅಭಿವೃದ್ಧಿಪಡಿಸಿರುವ ಈ ಉಪಕರಣ ಭಾರತದಲ್ಲೇಕಿಲ್ಲ? ಉತ್ತರಗಳನ್ನು ಕಂಡುಕೊಳ್ಳೋಣ ಬನ್ನಿ.* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ 34122http://kannada.oneindia.com/img/2009/01/17-gps1.jpg158046venkatesh dodmaneಜಿಪಿಎಸ್ ಉಪಕರಣದಲ್ಲಿ ಇನ್ನೂ ಏನೇನಿದೆ?/nri/article/2009/0117-global-positioning-system-navigation-device2.html* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕ   ಇನ್ನೂ ಎನೇನು ಇದೆ ಇದರಲ್ಲಿ?ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ "Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ 34123http://kannada.oneindia.com/img/2009/01/17-gps2e.jpg158046venkatesh dodmaneದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg158046venkatesh dodmaneಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?/column/humor/2009/0408-bangarappa-political-satire-by-venkatesh.htmlಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.* 35823http://kannada.oneindia.com/img/2009/04/08-bangarappa2.jpg158046venkatesh dodmaneಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpgnews"> ದೇವೇಗೌಡರ ಹೊಸಾ ಡೀಲು | HD Deve Gowda | April 1 | humor festival | Dodmane - ದೇವೇಗೌಡರ ಹೊಸಾ ಡೀಲು - Kannada Oneindia

ದೇವೇಗೌಡರ ಹೊಸಾ ಡೀಲು

Venkatesh Dodmane
* ವೆಂಕಟೇಶ್ ದೊಡ್ಡಮನೆ

ಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. ಮಸೀದಿ ಕಮಿಟಿಯವರು ಬಂದವ್ರೆ ಅಂದಮೇಲಂತೂ ಗೌಡರ ಮುಖ ಹುಣ್ಣಿಮೆ ಚಂದ್ರನಂತಾಯಿತು.

'ಎಲ್ಲಾ ಕಾಲ ಕೂಡಿ ಬರ್ತಾ ಐತೆ,... ಇನ್ನು ತಿರುಗಾ ಎಲ್ರೂ ಈ ಗೌಡನ್ನ ಆಶೀರ್ವಾದ ತಗಳಕ್ಕೆ ಎಲ್ಲಾ ಬತ್ತವ್ರೆ ನೋಡು....' ಮನಸ್ಸಿನಲ್ಲೇ ಅಂದ್ಕಳ್ತಾ ಮುದ್ದೆಯನ್ನು ಅರ್ಧಕ್ಕೇ ಬಿಟ್ಟು ಕೈಯನ್ನು ನೀರಿಗೆ ಮುಟ್ಟಿಸಿ ಹೆಗಲಮೇಲಿದ್ದ ಟವಲ್ಲಿಗೆ ಒರೆಸಿಕೊಂಡು ಮನೆಯ ಮುಂದಿನ ಮೀಟಿಂಗ್ ಹಾಲಿಗೆ ದಡಬಡಿಸಿಕೊಂಡು ಓಡಿದರು. ಹೋಗುವಾಗ ಅಲ್ಲೇ ಗೂಟದ ಮೇಲೆ ಇಟ್ಟಿದ್ದ ಬಿಳಿಯ (ಮಸೀದಿ) ಟೊಪ್ಪಿ ಹಾಕ್ಕೊಂಡು ಹೋಗಲು ಮರೆಯಲಿಲ್ಲ. ಚೆನ್ನಮ್ಮ ಅಡುಗೆ ಮನೆಯಿಂದಲೆ ತಾನು ಕೈಯ್ಯಾರೆ ಮಾಡಿದ ಮುದ್ದೆ-ಬಸ್ಸಾರು ಉಣ್ಣಲಿಲ್ಲವಲ್ಲ ಅಂತ ಮುನಿಸಿಕೊಂಡು ನೋಡ್ತಲೇ ಇದ್ದರು.

"ಸಲಾಂ ಗೌಡ ಸಾಬ್" ಮುಲ್ಲಾ ಸಾಬರು ಕೈ ಎದೆ ಹತ್ರ ಅಡ್ಡಾ ಇಟ್ಟು , ಗೌಡರೂ ಅದೇ ಸ್ಟೈಲಲ್ಲೇ ಕೈ ಅಡ್ಡ ಇಡ್ತಾ,"ಇದೇನ್ ಮುಲ್ಲಾ ಸಾಬರೇ, ಫೋನ್ ಮಾಡಿದ್ದರೆ ನಮ್ಮ ಸಿಸ್ಯನ್ನ ಕಳುಸ್ತಿದ್ನಲ?" ಸಿಸ್ಯ ಅಂದರೆ 'ಡ್ರೈವರ್ರು' ಅಂತ ಆ ಸಾಬರಿಗೇನು ಗೊತ್ತು. "ನೀವು ರೆಸ್ಟ್ ತೊಗೊಳ್ತಾ ಇದ್ರಿ ಅಂತ ಕಾಣುಸ್ತೈತೆ, ತೊಂದ್ರೆ ಕೊಟ್ಟೆ ಗೌಡ ಸಾಬ್" ಪಾಪ ಬೆಳಿಗ್ಗೆಯಿಂದ ಉಪಾಸ ಮಾಡಿದ್ದ ಅವ್ರಿಗೇನು ಗೊತ್ತು ಗೌಡರು ಏನ್ಮಾಡ್ತಿದ್ರು ಅಂತ.

"ಏ ಇಲ್ ಬುಡಿ, ರಂಜಾನ್ ಮಂತ್ ಅಲ್ವರಾ, ಅದಿಕ್ಕೆ ಬೆಳಿಗ್ಗಿಂದ ಉಪಾಸ ಇದ್ಕ್ಕೊಂಡು ಅಲ್ಲಾನ ಪ್ರೇಯರ್ ಮಾಡ್ತಿದ್ವಿ" ...YSV ದತ್ತುಗೆ ಒಳಗೊಳಗೇ ನಗು ಬಂದರೂ ತಡೆದುಕೊಂಡ್ರು. ಸರೋಯ್ತು,.... ಅವರ್ಗೆಲ್ಲ ನಿಜ ಹೇಳಕ್ಕಾಯ್ತದ? ಮುಲ್ಲಾ, ಗೌಡರ ತಲೆ ಮೇಲಿದ್ದ ಟೊಪ್ಪಿ ನೋಡಿ ಬಹಳ ಇಂಪ್ರೆಸ್ಸ್ ಆಗೋದ್ರು. ಏನು ತಲೆ, ಏನು ಬಾಡಿ, ಏನು ಲುಕ್ಕೂ...ಎಲ್ಲಾ ಅಲ್ಲಾನ ಮಹಿಮೆ.. ಆದರೆ ಟವಲ್ಲು ಇಷ್ಟ ಆಗಲಿಲ್ಲ! ಗೌಡರು ಸುಮ್ಮನೆ ನಿಂತೇ ಇದ್ದಿದ್ದು ನೋಡಿ, ಸಾಬರೇ ಅಪ್ಪಿಕೊಳ್ಳೋಕೆ ಕೈ ಚಾಚಿದರು. ಗೌಡ ಲಗುಬಗೆಯಿಂದ "ರಂಜಾನ್ ಮುಬಾರಕ್ ಸಾಬರೆ" ಅಂತ ನಿಂತಿದ್ದ ನಾಲ್ಕೂ ಜನ ಸಾಬರಿಗೆ ಎರೆಡೆರಡು ಕಡೆ ಅಪ್ಪಿ, ಅಪ್ಪಿ, ಮುದ್ದಾಡಿಬಿಟ್ಟರು. ಅವರಿಗಂತೂ ಬೆಳಿಗ್ಗೆಯಿಂದ ಕಂಡ ಕಂಡವರಿಗೆ ತಬ್ಬಿಕೊಂಡು ಸಾಕ್ ಸಾಕಾಗಿತ್ತು, ಆದರೂ ಗೌಡರು ಅಲ್ವಾ....ಹೆಂಗೂ ಮುಂದಿನ ಜನ್ಮದಲ್ಲಿ ನಮ್ಮೊಳಗೆ ಹುಟ್ತೀನಿ ಅಂತ ಹೇಳವ್ರೆ....

ಅಷ್ಟೊತ್ತಿಗೆ ಆ ಜಾಗವೆಲ್ಲಾ ಸೆಂಟ್ ನಿಂದ ಘಂಗುಡುತ್ತಿತ್ತು. ಈ ಸಾಬರುಗುಳು ಎಲ್ಲಿಂದ ಈಪಾಟಿ ಒಳ್ಳೆ ಸೆಂಟ್ ತತ್ತಾವ್ರೆ, ಹಿಂದಿನ ಸಲ ಅವರ್ಕೊಟ್ಟಿದ್ದು ಇಷ್ಟು ಘಮ್ ಗುಡ್ತಿರ್ಲಿಲ್ವಲ..... ಇರ್ಲಿ ಬುಡು..... ಈ ಸಲ ಸಿಸ್ಯನಿಗೆ ಹೇಳಿ ದುಬಾಯಿ ಸೆಂಟ್ ತರ್ಸಣ ...ಎಲ್ಲರೂ ಸುಮ್ನಿದ್ದಿದ್ದು ನೋಡಿ ದತ್ತು, "ಎಲ್ಲ ಕುಂತ್ಗಳಿ ಯಾಕೆ ನಿಂತೇ ಇದೀರಲ"... ಏನರ ಯವಾರ ಇದ್ರೆ ಕುದುರ್ಸನ ಅಂತ ಅವರೂ ಹೊಂಚ್ ಹಾಕ್ತಾ ಇದ್ರು. ಗೌಡರಿಗೂ ಸೆಂಟ್ ನಿಂದಾಗಿ ಒಂದಪ ಎಲ್ಲ ಮರ್ತೇ ಹೋಗಿತ್ತು. ಅವರೂ "ಕುಂತ್ಗಳಿ , ಕುಂತ್ಗಳಿ" ಅನ್ನುತ್ತಾ ಕೈಸನ್ನೆ ಮಾಡಿದರು. ಗೌಡರು ಸೋಫಾದಲ್ಲಿ ಕುಳಿತು, ದೆಹಲಿಯ ಸಿಂಹಾಸನ ದಿನಗಳ ಸ್ಟೈಲಿನಲ್ಲೇ ತಲೆಗೆ ಕೈ ಊರಲು ಹೊರಟರು. ಇದನ್ನು ನೋಡಿದ ಮುಲ್ಲಾ, ಡೆಲ್ಲಿ ದರ್ಬಾರ್ ತರ ಎಲ್ಲಾದ್ರೂ ನಿದ್ದೆ ಹೋಗ್ಬಿಟ್ರೆ ಮುಶ್ಕಿಲ್ ಆಗುತ್ತೆ ಅಂತ, "ಗೌಡ ಸಾಬ್, ನಾಳೆಗೆ ರಾತ್ರೀಗೆ ಇಫ್ತಾರ್ ಕೂಟ ಮಡಿಕ್ಕೊಂಡಿದೀವಿ, ನೀವು ಬರ್ಬೇಕು"

'ಛೆ, ಛೆ..ಎಲ್ಲಾದರೂ ತಪ್ಸೋದು ಉಂಟೆ ಬತ್ತೀವ್ ಬುಡಿ' ಅಂತ ಹೇಳಣಾಂತ ಬಾಯಿ ತೆಗದವ್ರು...ಏನೋ ನೆನಪು ಮಾಡ್ಕೊಂಡು, ಟವಲ್ ಸರಿಸಿ ಜೇಬಿಂದ ಡೈರಿ ತೆಗೆದರು. ಏನು, ಒಂದು ಸೆಕೆಂಡೂ ಪುರುಸೊತ್ತು ಇಲ್ಲ ಅನ್ನೋ ಹಾಗೆ, "ಪ್ರೋಗ್ರಾಮು ಭಾಳ ಟೈಟ್ ಆಗ್ ಬುಟೈತೆ ಇಮಾಂ ಸಾಬ್ರೇ" ಎನ್ನುತ್ತಾ ದತ್ತೂನ ಕಡೆ ನೋಡಿದ್ರು. ದತ್ತು ಅರ್ಥವಾಯಿತು ಬುಡಿ ಅಂದುಕೊಂಡು,"ನಾಳೆ ಸಾಯಂಕಾಲ ಭೈರವನ್ ಗುಡಿಲಿ ಪೂಜೆ ಇತ್ತಲ ಕ್ಯಾನ್ಸಲ್ ಮಾಡಿಬುಡಾಣ ಬಿಡಿ" ಗೌಡರೂ ಸುಸ್ತಾಗೋ ಹಾಗೆ ಪಟ್ಟಂತ ಬಿಟ್ರು!

'ಆಹಾ ಎಂಥ ಮುತ್ತಿನಂಥ ಮಾತಡಿದ್ಯೋ ಪಟ್ಟ ಸಿಸ್ಯ' ಅಂತ ಅನ್ನೋಣ ಅಂದ್ರೆ ಎದ್ರಿಗೆ ಸಾಬರು ಅವ್ರೆ, ಗೊತ್ತಾಗ್ಬುಡುತ್ತೆ...ತಡೆದುಕೊಂಡರು. ಟವಲ್ ಸರಿ ಮಾಡಿಕೊಂಡು,"ಯಾವ ಯಾವ ಮುಖಂಡರು ಬತ್ತವ್ರೆ ಇಮಾಂ ಸಾಬ್ರೆ?" ರಾಜಕೀಯದಲ್ಲಿ ಗೌಡರನ್ನ ಮೀರ್ಸಕ್ಕೆ ಆಗುತ್ಯೇ? ಒಳಅರ್ಥ ಆಗದ ಮುಲ್ಲಾ ಸಾಬರು ಖುಷಿಯಿಂದ "ಗೌಡ ಸಾಬ್, ನಮ್ ದೊಡ್ ಮಸೀದಿ ಕಮಿಟಿಯಿಂದ ಬುಡಾನ್ ಸಾಬ್, ಡೆಲ್ಲಿ ಲಾಲ್ ಮಸ್ಜಿದ್ ನಿಂದ ಮಸ್ತಾನ್ ಸಾಬ್, ಭಟ್ಕಳದ ಮೀರ್ ಸಾಬ್, ಗುಂಟೂರಿನ ಹಮೀದ್ ಸಾಬ್, ಕೊಚ್ಚಿ ಬಡಾ ಮಸ್ಜಿದ್ ನಿಂದ ಇಬ್ರಾಹಿಮ್ ಸಾಬ್....." ಬೆರಳು ಮಡಿಸುತ್ತಾ ಮುಲ್ಲಾ ಸಾಬರ ಪಟ್ಟಿ ಬೆಳೆಯುತ್ತಲೇ ಇತ್ತು, ಗೌಡರು ದತ್ತೂ ಮುಖ ನೋಡಿದರು.

ದತ್ತು ಚಕ್ಕನೆ ಅರ್ಥ ಮಾಡಿಕೊಂಡು,"ಅಲ್ಲ ಇಮಾಂ ಸಾಬ್ರೆ, ನಿಮ್ಮೊರು, ನಮ್ಮ್ ಪಕ್ಷ ಆಯ್ತಲ್ಲ, ಆ ಕಡೆಯಿಂದ ಯಾರೂ ಬರಾಕಿಲ್ವಾ.." ಮುಲ್ಲಾಗೆ ಈಗ ಅರ್ಥ ಆಯಿತು, "ಓ ಅವರಾ, ಅವ್ರುನ್ನ ಬುಟ್ಬುಡಕೆ ಆಯ್ತದ... ಖರ್ಗೆ ಸಾಬ್, ಧರಮ್ ಸಿಂಗ್ ಸಾಬ್, ಸಿದ್ರಾಮಯ್ಯ ಸಾಬ್...." ನೆನಪು ಮಾಡ್ ಮಾಡ್ಕೊಂಡು ಬೆಟ್ಟು ಮಾಡಿಸ್ತಾನೆ ಇದ್ರು. ಗೌಡ್ರ ಮುಖ ಸಣ್ಣಕಾಕ್ತ ಇದ್ದಿದ್ದನು ನೋಡಿದ ಜೋತೆಯಲ್ಲಿದ್ದವರೊಬ್ರು "ಸಿದ್ರಾಮಯ್ಯ ಸಾಬ್ ನಹಿ...ಆತಾ" ಅಂದ್ರು. ಸದ್ಯ...! ಗೌಡರು ಒಳಗಾದ ಆನಂದ ತೋರ್ಸ್ಲಿಲ್ಲ, ಔರದ್ದು ಒಳರೂಟು ಬೇರೆದೇ ಇತ್ತು,

"ದೇಶಪಾಂಡೆ ಬರಾಕಿಲ್ವಾ?" ಮುಲ್ಲಾ ಕಡೆ ನೋಡಿ. ಮರಿ ಮುಲ್ಲಾ ತಾವೇನು ಕಮ್ಮಿ ಅಂತ ಬಾಯಿ ಹಾಕಿದರು, "ಔರದ್ದು ಹೊಸ ಅಪಾಯಿಂಟು ಅಲ್ವ, ಅವ್ರನ್ನ ಕರೆಯಕ್ಕೆ, ಗಂದದ ಮರದ ಹಾರ ಜತೆಗೆ ಇಬ್ರನ್ನ ಕಳ್ಸಿ ಕೊಟ್ಟಿದೀವಿ" ಜುಬ್ಬದ ಕಾಲರ್ ಸರಿ ಮಾಡ್ಕಂಡ್ರು. "ಜೀ.. ಗಂದದ್ ಮರ ನಹೀಜಿ, ಗಂದದ್ ಪೂಲ್ ಹಾರ" ಬಡಾ ಇಮಾಂ ಸಾಬ್ ವಾಕ್ಯ ಸರಿ ಮಾಡಿದರು."ಹೂಂ ಹೂಂ ಅದೇ ಅದೆ... ಪೂಲ್ ಹಾರ." ಮರಿ ತಿದ್ದಿ ಕೊಂಡರು! ದೇಶಪಾಂಡೆ ಬಂದೇಬರ್ತಾರೆ ಅಂತ ಗೌಡರಿಗೆ ಕರಾರುವಾಕ್ಕಾಗಿ ಗೊತ್ತಿತ್ತು. ಹಾಗಾಗಿ ಇನ್ನೇನು ಕೆಲಸ ಆಯ್ತಲ ಅಂತ ಗೌಡರು ಆಕಳಿಸುತ್ತಾ ಗಡಿಯಾರದ ಕಡೆ ನೋಡಿದರು. ಇಮಾಂ ಸಾಬರಿಗೆ ಅರ್ಥವಾಯಿತು.

"ಹಂಗಾದ್ರೆ ನೀವು ಹಾಜುರ್ ಇರ್ತೀರಲ್ಲ ಗೌಡಸಾಬ್" ಮುಲ್ಲಾ ಎದ್ದು ನಿಂತರು. ಗೌಡರು ದತ್ತೂನ ಕಡೆ ನೋಡಿದ್ರು. ಮುಲ್ಲಾಗೆ ಗೌಡರ ಒಳ ಮನಸ್ಸು ಗೊತ್ತಾಗ್ಬುಡ್ತು. ಒಹ್ ಬೀಗದ ಕೈ ಇಲ್ಲೈತಾ, "ದತ್ತ ಸಾಬ್ ಆಪ್ ಭೀ ಹಾಜುರ್ ಹೋ ಸ್ಸಾಬ್" ಅವ್ರು ಕರಿದೆಇದ್ರು ಗೌಡರಿಗೆ ಅಸಿಸ್ತೆಂಟು ಒಬ್ರು ಬೇಕೆ ಬೇಕಲ್ಲ...ಅನಾಯಾಸವಾಗಿ "ಆಗ್ಲಿ ಬಿಡಿ ಹಂ ಆಯೇಂಗೆ" ತಪ್ಪೋ ಸರಿಯೋ ಆ ಟೈಮಿಗೆ ಅವರಾ ಭಾಷೇಲೆ ಉತ್ರ ಕೊಟ್ರು. ಎಲ್ರುನ್ನು ಮತ್ತೊಮ್ಮೆ ಎರೆಡೆರಡು ಕಡೆ ತಬ್ಬಿ ತಬ್ಬಿ "ಬರ್ತೀವಿ ಬುಡಿ" ಅಂತ ಕಳಿಸಿ ಕೊಟ್ರು.ಗೌಡರ ಟವಲ್ಲು ಈಗ ಸುಮಾರು ಸೆಂಟ್ ಅಂಟ್ಕಂಡು 'ಘಮ್' ಅಂತಿತ್ತು. ಕಾರು ಹತ್ತುವುದನ್ನೇ ನೋಡುತ್ತಾ ಟಾಟಾ ಮಾಡಿದರು ನಮ್ಮ 'ಮಾಜಿ'. ದತ್ತು ಕಾರು ಹತ್ತಿರಾನೆ ಹೋಗಿ ಮುಲ್ಲಾ ಸಾಬರ ಹತ್ತಿರ ಏನೋ ಪಿಸುಗುಟ್ಟಿ ವಾಪಾಸ್ ಬಂದರು.

ಮುಂದೆ ಓದಿ : ಗೌಡರ ಡ್ಯಾನ್ಸು ನೋಡಿ ಅದೆಷ್ಟು ದಿನವಾಗಿತ್ತು? »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+