ಯೋಚಿಸಿದಷ್ಟು ಸಾಗರವಾಗುತ್ತದೆ ನೀರಿನ ಪ್ರಭಾವಲಯ
ಈವರೆಗಿನ ವಿವರಣೆಯ ಹಿನ್ನೆಲೆಯಲ್ಲಿ ‘ಮಂತ್ರಪುಷ್ಪ’ದ ನನ್ನ ಭಾವಾನುವಾದವನ್ನು ಕನ್ನಡದಲ್ಲಿ ನೋಡಿ :
ನೀರ ಹೂವೇನೆಂದು ಯಾರು ಬಲ್ಲರೋ ಅವರು...
(‘ಯೋ ಅಪಾಂ ಪುಷ್ಮಂ ವೇದ.. ..’ ದ ಭಾವಾನುವಾದ)
ನೀರ ಹೂವೇನೆಂದು ನೀ ಬಲ್ಲೆಯೇನು?
ಅದನರಿಯೆ ಹೂವಿನೊಲು ರಸದ ಸೆಲೆ ನಲಿವಿನೆಡೆ
ಪಶು-ಪುತ್ರ ಸಂಪದವ ಪಡೆವೆ ನೀನೆಲ್ಲವನು ;
ತಂಗದಿರ ಚಂದಿರನೆ ನಭದ ನೀರಿನ ಹೂವು
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ, ಇಂಬು ನಿನ್ನಲ್ಲೆ !
ನೀರೂ ಬೆಂಕಿಯ ನೆಲೆಯೇ ;
ವಹ್ನಿ ಜಲಗಳ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಗಾಳಿ ನೀರಿನ ನೆಲೆಯು ;
ನೀರು ಅನಿಲದ ನೆಲೆಯೇ ;
ವಾಯು ವಾರಿಗಳ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಸೂರ್ಯ ನೀರಿನ ನೆಲೆಯು ;
ನೀರೂ ತಪನನ ನೆಲೆಯೇ ;
ಭಾನು ಸಲಿಲಗಳ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಚಂದ್ರ ನೀರಿನ ನೆಲೆಯು ;
ನೀರೂ ತಿಂಗಳ ನೆಲೆಯೇ ;
ಇಂದು ಉದಕಗಳ ನೆಲೆಗಳೇನೆಂದು ನೀ ಬಲ್ಲೆಯೇನು ?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಚುಕ್ಕೆ ನೀರಿನ ನೆಲೆಯು;
ನೀರೂ ತಾರೆಯ ನೆಲೆಯೇ ;
ನಕ್ಷತ್ರ ತೋಯಗಳ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಮುಗಿಲು ನೀರಿನ ನೆಲೆಯು ;
ನೀರೂ ಮೋಡದ ನೆಲೆಯೇ ;
ಮೇಘ ಘನರಸದ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಕಾಲಗಣನೆಗೂ ನೀರೆ ನೆಲೆ ;
ನೀರಿಗೂ ಅದೆ ಕಾಲ ನೆಲೆ ;
ಕಾಲ ನೀರುಗಳ ನೆಲೆಗಳೇನೆಂದು ನೀ ಬಲ್ಲೆಯೇನು?
- ಇದ ಕಾಣು, ತಳವೂರಿ ದೋಣಿಯಾಗಿದೆ ಲೋಕ
ನೀರಿನಾಶ್ರಯದಲ್ಲಿ, ತಿಳಿದು ನೀನು!!
।। ಮಂತ್ರ-ಪುಷ್ಪಮ್ ।।
ಯೋಪಾಂ ಪುಷ್ಪಂ ವೇದ ।
ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ।।
ಚಂದ್ರಮಾ ವಾ ಅಪಾಂ ಪುಷ್ಪಮ್ ।
ಪುಷ್ಪವಾನ್ ಪ್ರಜಾವಾನ್ ಪಶುಮಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।। 1 ।।
ಅಗ್ನಿರ್ ವಾ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯೋ ಅಗ್ನೇರ್ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವಾ ಅಗ್ನೇರ್ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।।2।।
ವಾಯುರ್ ವಾ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯೋ ವಾಯೋರ್ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವೈ ವಾಯೋರ್ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।।3।।
ಅಸೌ ವೈ ತಪನ್ನ್ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯೋ ಅಮುಷ್ಯ ತಪತ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವಾ ಅಮುಷ್ಯ ತಪತ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।। 4।।
ಚಂದ್ರಮಾ ವಾ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯಶ್ ಚಂದ್ರಮಸ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವೈ ಚಂದ್ರಮಸ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।।5।।
ನಕ್ಷತ್ರಾಣಿ ವಾ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯೋ ನಕ್ಷತ್ರಾಣಾಂ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವೈ ನಕ್ಷತ್ರಾಣಾಂ ಆಯತನಂ ।
ಆಯತನವಾನ್ ಭವತಿ ।।
ಯ ಏವಂ ವೇದ । ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।।6।।
ಪರ್ಜನ್ಯೋ ವಾ ಅಪಾಂ ಆಯತನಮ್ ।
ಆಯತನವಾನ್ ಭವತಿ ।।
ಯಃ ಪರ್ಜನ್ಯಸ್ಯ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವೈ ಪರ್ಜನ್ಯಸ್ಯ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪಾಂ ಆಯತನಂ ವೇದ ।
ಆಯತನವಾನ್ ಭವತಿ ।। 7।।
ಸಂವಥ್ಸರೋ ವಾ ಅಪಾಂ ಆಯತನಮ್।
ಆಯತನವಾನ್ ಭವತಿ ।।
ಯಸ್ ಸಂವಥ್ಸರಸ್ಯ ಆಯತನಂ ವೇದ ।
ಆಯತನವಾನ್ ಭವತಿ ।।
ಆಪೋ ವೈ ಸಂವಥ್ಸರಸ್ಯ ಆಯತನಮ್ ।
ಆಯತನವಾನ್ ಭವತಿ ।।
ಯ ಏವಂ ವೇದ ।
ಯೋಪ್ಸು ನಾವಂ ಪ್ರತಿಷ್ಠಿತಾಂ ವೇದ
ಪ್ರತ್ಯೇವ ತಿಷ್ಠತಿ ।।8।।
-(ಸಂಸ್ಕೃತ ಮೂಲಮ್) ಕೃಷ್ಣ ಯಜುರ್ವೇದ,
ತೈತ್ತೀರಿಯ ಅರಣ್ಯಕ 1.12












Click it and Unblock the Notifications