• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೀಪಿಕಾ ಕಳೆದುಕೊಂಡ ಐಶ್ವರ್ಯ!

By Super
|

ತನ್ನ ಮೊದಲ ಚಿತ್ರ ಇತ್ತೀಚೆಗೆ ಬಂದ ಯಾವುದೋ ಹಿಂದಿ ಚಿತ್ರ ಅಂತ ಸುಳ್ಳು ಹೇಳಿಕೊಂಡು ದೀಪಿಕಾ ಪಡುಕೋಣೆ ತಿರುಗ್ತಿದಾಳೆ ಅಂತ ಎಲ್ಲೆಲ್ಲೂ ಸುದ್ದಿ.ಅಲ್ಲ - ಇದೆಂಥಾ ರೋಗ? ಉಪ್ಪಿ ಜೊತೆಗೆ "ಐಶ್ವರ್ಯ" ಅನ್ನೋ ಕನ್ನಡ ಚಿತ್ರದಿಂದ ತೆರೆಗೆ ಬಂದೋಳಿಗೆ ತನ್ನ ಅಭಿನಯದ ಮೊದಲ ಚಿತ್ರ ಕನ್ನಡದ್ದು ಅಂತ ಹೇಳೋಕ್ಕೆ ಕೀಳರಿಮೆ ಯಾಕಿರಬೇಕು? ತಾನು ಮೇಲೆ ಹತ್ತಕ್ಕೆ ನೆರವಾದ ಕನ್ನಡದ ಏಣಿಗೆ ಗೌರವದಿಂದ ನಮಸ್ಕರಿಸೋ ಬದಲು ಕಾಲಿನಿಂದ ದಬ್ಬಿದಾಳಲ್ಲ ಗುರು? ಕನ್ನಡದ ಹುಡುಗೀರು ಹೀಗೂ ಇರ್ತಾರಾ ?

ತಾನು ಯಾರು, ತನ್ನ ನಾಡು ಯಾವುದು, ತನ್ನ ನುಡಿ ಯಾವುದು ಅನ್ನೋದರ ಬಗ್ಗೇನೇ ಕೀಳರಿಮೆ ಇಟ್ಟುಕೊಂಡು ಅದನ್ನೆಲ್ಲ ಮುಚ್ಚಿಹಾಕೋಂಥೋರು ನಾಡಿನ ಮಟ್ಟಿಗೆ ಇದ್ದರೂ ಸತ್ತ ಲೆಕ್ಕವೇ. "ಐಶ್ವರ್ಯ" ಚಿತ್ರದಲ್ಲಿ ಏನಾದರೂ ಈ ಉಂಡಮನೆಗೆ ಎರಡು ಬಗೆಯೋಳ್ನ ನೋಡಿ ನೀವು ಖುಷಿ ಪಟ್ಟಿದ್ದರೆ ಇವತ್ತಿಗೆ ಆ ಖುಷೀನೆಲ್ಲ ಸೇರಿಸಿ ಸುಟ್ಟಾಕಬೇಕು ಗುರು! ಕೋಪಬರತ್ತೆ.

ದೀಪಿಕಾ ಪಡುಕೋಣೆ, ನೀನೇ ನಿನ್ನ ತಪ್ಪು ತಿದ್ದುಕೊಳ್ಳೋ ದಿನ ಹೆಚ್ಚು ದೂರ ಇಲ್ಲ! ಒಂದು ದಿನ ಬರತ್ತೆ, ಆಗ ನಿನಗೆ "ಐಶ್ವರ್ಯ"ವೂ ನೆನಪಾಗತ್ತೆ, ನಿನ್ನ ನುಡೀನೂ ನೆನಪಾಗತ್ತೆ, ನಿನ್ನ ನಾಡೂ ನೆನಪಾಗತ್ತೆ. ನಿನ್ನ ಐಶ್ವರ್ಯವೆಲ್ಲವೂ ಗಾಳಿಪಟಕ್ಕೆ ಸಿಕ್ಕಮೇಲೆ ನೀನು ಕನ್ನಡಾಂಬೆಯ ಕಾಲಿಗೆ ಬಿದ್ದು ಕಣ್ಣೀರಿಡುವ ದಿನ ಬರತ್ತೆ, ಕಾದು ನೋಡು! ಆಗ, ನೀನು ಮತ್ತೊಮ್ಮೆ ಐಶ್ವರ್ಯವಂತಳಾಗುತ್ತೀಯ,ಭಾಗ್ಯವಂತಳಾಗುತ್ತೀಯ. ಇದು ಖಂಡಿತ ಮಾರಾಯಗಿತ್ತೀ.

***

ಇಲ್ಲಿ ಯಾರು ಕುಂಬ್ಳೆ ಅಂದ್ರೆ? ಕೈ ಎತ್ತಿ!

ಕನ್ನಡಿಗ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ನಾಯಕನಾಗಿ ತಡವಾಗಾದ್ರೂ ಆಯ್ಕೆಯಾಗಿರೋದು ಹೆಮ್ಮೆ ತಂದಿದೆ ಗುರು! ಕುಂಬ್ಳೆಗೆ ಈ ಹೊಸ ಜವಾಬ್ದಾರಿಯಲ್ಲೂ ಯಶಸ್ಸು ಸಿಗಲಿ! ಅಂದಹಾಗೆ, ಅನಿಲ್ ಕುಂಬ್ಳೆಗೆ ಈ ಸ್ಥಾನ ಅಷ್ಟು ಸಲೀಸಾಗೇನು ದಕ್ಕಿಲ್ಲ. ನಾಯಕನ ಸ್ಥಾನಕ್ಕೆ ಏರಿದ ಕುಂಬ್ಳೆ ಸಾಗಿದ ದೂರ ಬಹಳ, ಸವೆಸಿದ ದಾರಿನೂ ದೂರದ್ದು. ಈ ಹಾದೀಲಿ ಸಾಗ್ತಾ ಸಾಗ್ತಾ ಕುಂಬ್ಳೆ 118 ಟೆಸ್ಟ್ ಪಂದ್ಯಗಳ್ನ ಆಡಿದಾರೆ, 566 ವಿಕೆಟ್ ಉರುಳಿಸಿ ಭಾರತದ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಕೂಡಾ ಆಗಿದಾರೆ, ಉಪನಾಯಕನಾಗಿ ಆಡಿ ಅನುಭವಾನೂ ಪಡೆದಿದಾರೆ.

ವೆಸ್ಟ್ ಇಂಡೀಸ್ ಎದುರು ಒಂದು ಪಂದ್ಯದಲ್ಲಿ ಚೆಂಡೇಟು ಬಿದ್ದು ದವಡೆ-ಮೂಳೆ ಚದರಿ ಹೋದಾಗ್ಲೂ ಬೌಲ್ ಮಾಡಿದ ಅನಿಲ್ ಕುಂಬ್ಳೆ, ಬದ್ಧತೆಗೊಂದು ಹೊಸ ಭಾಷ್ಯ ಬರೆದದ್ದು ಕ್ರಿಕೆಟ್ ಇರೋವರೆಗೂ ಮರೆಯಕ್ಕಾಗದೇ ಇರೋ ವಿಷ್ಯ! 1999ರಲ್ಲಿ ಪಾಕಿಸ್ತಾನದ ಜೊತೆ ಆಡಿದ ಪಂದ್ಯದ ಒಂದು ಇನ್ನಿಂಗ್ಸ್ ನಲ್ಲಿ ಹತ್ತೂ ವಿಕೆಟ್ ಗಳನ್ನು ಕಬಳಿಸಿದ ಆ ಆಟ ಅನಿಲ್ ಕುಂಬ್ಳೆಯ ದೈತ್ಯ ಪ್ರತಿಭೆಗೆ ಹಿಡಿದ ಕನ್ನಡಿ ಗುರು! ಕುಂಬ್ಳೆ ತಂಡದ ನಾಯಕನಾಗಕ್ಕೆ ಕಾರಣ ಬರೀ ಆತನ ಪ್ರತಿಭೆಯೊಂದೇ ಕಾರಣ ಅಲ್ಲ; ಅದರ ಜೊತೆ ಜೊತೆಗೇ ಸಕ್ಕತ್ ಪರಿಶ್ರಮ, ಬಿಡುವಿಲ್ದಿರೋ ಪ್ರಯತ್ನ, ಛಲ ಮತ್ತು ಆಟಕ್ಕೆ ಬದ್ಧತೆಗಳು ಬಹಳ ಪಾತ್ರ ವಹಿಸಿವೆ.

ಕನ್ನಡ ನಾಡು ಏಳಿಗೆ ಹೊಂದಕ್ಕೆ ಇವತ್ತು ನಮ್ಗೆ ಜ್ಞಾನ, ವಿಜ್ಞಾನ, ಸಮಾಜವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಉದ್ದಿಮೆ, ಮನರಂಜನೆ, ಶಿಕ್ಷಣ, ರಾಜಕಾರಣ,... ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕುಂಬ್ಳೆಗಳು ಬೇಕು. ಆ ಛಲವಂತ ಬೇರೆಲ್ಲೂ ಇಲ್ಲ, ಕನ್ನಡಿಗ ಕನ್ನಡಿ ಮುಂದೆ ನಿಂತ್ರೆ ತಾನೇ ಕಾಣ್ಸ್ತಾನೆ! ಏನ್ ಗುರು?

(ಸ್ನೇಹ ಸೇತು : ಏನ್ ಗುರು?)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unbecoming of a good kannada girl : Deepika Padukone has disowned her Kannada movie identity in an interview given to rediff.com. Never say die Anil kumble is embodiment of committment to the game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more