ವೃಶ್ಚಿಕ ರಾಶಿಯವರ ಹೆಗಲೇರಿರುವ ಪರಾಕ್ರಮಿ ಶನೈಶ್ಚರ
ಮೊದಲ ಬಾರಿಗೆ ಈ ಲೇಖನ ಓದುತ್ತಿರುವವರಿಗೆ ಸಾಡೇಸಾತಿ ಬಗ್ಗೆ ಗೊಂದಲ ಇರಬಹುದು. ಆದ್ದರಿಂದ ಸಾಡೇಸಾತಿ ಹಿಂದಿನ ಸರಣಿ, ಮತ್ತು ಈ ಹಿಂದಿನ ಲೇಖನಗಳನ್ನೊಮ್ಮೆ ಓದಿಕೊಳ್ಳಿ.
ಅಂದಂಗೆ, ವೃಶ್ಚಿಕ ರಾಶಿಯವರಿಗೆ ಸಾಡೇಸಾತಿಯ ಮೊದಲ ಹಂತದಲ್ಲಿ ಮಹಾತ್ಮನು ಕಾಲಿಟ್ಟಿದ್ದಾನೆ. ಅಂದರೆ ವೃಶ್ಚಿಕ ರಾಶಿಯವರಿಗೆ ಮಹಾತ್ಮನು ಹೆಗಲೇರಿದ್ದಾನೆ. ಈಗಾಗಲೇ ಈ ರಾಶಿಯವರು ಸಾಡೇಸಾತಿಯ ಚಕ್ರವ್ಯೂಹದಲ್ಲಿ ಸಿಕ್ಕಿಕೊಂಡು ಪರದಾಡುತ್ತಿದ್ದಾರೆ.
ಈ ಮೊದಲ ಹಂತದ ಸಾಡೇಸಾತಿಯಲ್ಲಿ ಎಲ್ಲ ವೃಶ್ಚಿಕ ರಾಶಿಯವರು ಜಾಗೃತೆ ವಹಿಸಿಕೊಳ್ಳಬೇಕು. ಅಲ್ಲದೆ ನಿಮ್ಮ ಕುಟುಂಬದಲ್ಲಿ ಯಾರಾದರೂ ವೃಶ್ಚಿಕ ರಾಶಿಯವರಿದ್ದರೆ ನಿಮ್ಮ ಸಂಪೂರ್ಣ ಕಾಳಜಿ ಅವರ ಮೇಲಿರಲಿ. ಈ ರಾಶಿಯವರು ದುಶ್ಚಟಗಳ ದಾಸರಾಗುವುದು ಈ ಸಾಡೇಸಾತಿ ಸಮಯದಲ್ಲೇ. ಆದ್ದರಿಂದ ದುಷ್ಟರ ಸಹವಾಸ ಬಿಟ್ಟುಬಿಡಿ. ಅಷ್ಟೇ ಅಲ್ಲ, ಕೆಲ ದುಷ್ಟ ಕೆಲಸಗಳಿಗೆ ನೀವೆ ಮುಂದಾಗಬಹುದು. ಏಕೆಂದರೆ ಸಮಯ ಆ ರೀತಿ ಮಾಡಿಸುತ್ತದೆ. ಆದ್ದರಿಂದ ನಿಮ್ಮ ಮನದಲ್ಲಿರಲಿ ಶನಿದೇವನ ಬಳಿ ನಿಮ್ಮ ಜೀವನದ ರಿಮೋಟ್ ಇದೆ ಎಂದು.

ವೃಶ್ಚಿಕ ರಾಶಿಯವರಿಗೆ ಏನಾಗಲಿದೆ : ಶನಿಮಹಾತ್ಮನು ವೃಶ್ಚಿಕ ರಾಶಿಗೆ ವ್ಯಯದಲ್ಲಿದ್ದಾನೆ. ಈ ಸಮಯದಲ್ಲಿ ನಿಮಗೆ ಆಸ್ಪತ್ರೆಗೆ ಪದೇ ಪದೇ ಭೇಟಿ ಕೊಡುವುದು, ಏಕಾಂತದಲ್ಲಿಯೇ ಇರಬೇಕು ಎನ್ನಿಸುವುದು ಅಥವಾ ಯಾರೂ ಜೊತೆಗಿಲ್ಲದೇ ಒಬ್ಬಂಟಿಗಳಾಗುವ ಪರಿಸ್ಥಿತಿ ಬಂದಿರುತ್ತದೆ. ಹಿಂದೆಂದೂ ಇಲ್ಲದಷ್ಟು ವಿಪರೀತ ಶತ್ರುಗಳು ಹುಟ್ಟಿಕೊಳ್ಳುವುದು ಈ ಸಮಯದಲ್ಲೇ. ಇದರಿಂದ ಮಾನಸಿಕ ಚಿಂತೆ ವಿಪರೀತ ಹೆಚ್ಚುತ್ತದೆ. ಎಷ್ಟೊಂದು ಮಾನಸಿಕ ಒತ್ತಡವಿದ್ದರೂ, ಎಷ್ಟೇ ಅಚ್ಚುಕಟ್ಟಾಗಿ ಶ್ರಮವಹಿಸಿ ಕೆಲಸ ಮಾಡಿದರೂ ಪ್ರತಿಫಲ ಮಾತ್ರ ಶೂನ್ಯವೇ ಸಿಗುತ್ತದೆ. ಏನು ಮಾಡಿದರೂ ಎಲ್ಲರೂ ನಿಮ್ಮಲ್ಲಿ ತಪ್ಪನ್ನೇ ಹುಡುಕುತ್ತಾರೆ.
ನಿಮ್ಮ ಕುಟುಂಬದಲ್ಲಿ ಎಲ್ಲರೊಂದಿಗೆ ನೀವು ಅಥವಾ ನಿಮ್ಮೊಂದಿಗೆ ಎಲ್ಲರ ಜಗಳ ನಡೆಯುತ್ತಿರುತ್ತದೆ. ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮೇಲೆ ಅಪವಾದ ಹುಟ್ಟಿಕೊಳ್ಳುತ್ತವೆ. ಕೌಟುಂಬಿಕ ಜೀವನದಲ್ಲಿನ ಅಶಾಂತಿಯಿಂದಾಗಿ ಮನೆ ಬಿಟ್ಟು ಎಲ್ಲೆಲ್ಲೋ ಶಾಂತಿ ಅರಸಿ ತಿರುಗಾಡುವಂತಾಗುತ್ತದೆ. ಇನ್ನು ಎಲ್ಲ ರೀತಿಯಿಂದ ಹಣ ಉಳಿಸುತ್ತ ಎಷ್ಟೇ ಕಟ್ಟುನಿಟ್ಟಾಗಿ ಜೀವನ ಮಾಡುತ್ತಿದ್ದರೂ ಖರ್ಚುಗಳು ಹೆಚ್ಚುತ್ತಲೇ ಇರುತ್ತವೆ.
ಕೆಲವರಿಗಂತೂ ಕೆಲಸವಿಲ್ಲದೇ ಪಿರಿಪಿರಿ ತಿರುಗಾಡುವಂತಾಗಿರುತ್ತದೆ. ಹಲವಾರು ವರ್ಷಗಳಿಂದ ನಂಬಿಕೊಂಡು ಹಣದ ಸಹಾಯ ಮಾಡುತ್ತ ಬಂದವರು ಕೂಡ ನಿಮ್ಮ ಈ ಕಷ್ಟ ಕಾಲದಲ್ಲಿ ಕೈ ಕೊಡುತ್ತಾರೆ. ಅಲ್ಲದೇ ನಂಬಿದವರೆ ನಿಮಗೆ ಮೋಸ ಮಾಡುತ್ತಾರೆ. ಸಂಬಂಧಿಕರಂತೂ ನಿಮ್ಮ ಕುರಿತು ಇಲ್ಲಸಲ್ಲದ ಅಪವಾದ, ಆರೋಪಗಳನ್ನು ಮಾಡುತ್ತಿರುತ್ತಾರೆ. ನಿಮಗಿಂತ ವಯಸ್ಸಿನಲ್ಲಿ ಚಿಕ್ಕವರು ಕೂಡ ನಿಮ್ಮನ್ನು ಅವಮಾನ ಮಾಡಲಾರಂಭಿಸುತ್ತಾರೆ ಎಂದರೆ ಶನಿದೇವನ ಮೊದಲ ಹಂತದಲ್ಲಿನ ಕಾಡಾಟದ ಪರಿ ಹೇಗಿರುತ್ತದೆ ಎನ್ನುವುದನ್ನು ಅನುಭವಿಸುತ್ತಿರುವ ವೃಶ್ಚಿಕ ರಾಶಿಯವರೇ ಹೇಳಬೇಕು.
ಊಟ ಬಲ್ಲವನಿಗೆ ರೋಗವಿಲ್ಲ : ಇನ್ನು ವೃಶ್ಚಿಕ ರಾಶಿಯವರು ನೆನಪಿನಲ್ಲಿಡಬೇಕಾದ ಮುಖ್ಯವಾದ ವಿಷಯವೆಂದರೆ ಸಮಯಕ್ಕನುಸಾರವಾಗಿ ಊಟ ಮಾಡಬೇಕು. ನಿಮಗೆ ಗೊತ್ತಿರಬಹುದು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಮಾತು. ಈ ಗಾದೆಮಾತನ್ನು ನಿಮ್ಮ ಜೀವನದಲ್ಲಿ ಅಚ್ಚುಕಟ್ಟಾಗಿ ಅಳವಡಿಸಿಕೊಳ್ಳಿ.
ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಎಲ್ಲ ದೇವರು ಒಲಿದಿದ್ದರೂ ಶನಿದೇವನ ಕೃಪಾಕಟಾಕ್ಷ ಮಾತ್ರ ಬೇಕೆಬೇಕು. ಇಲ್ಲವಾದರೆ ಎಂತಹ ಶಕ್ತಿವಂತ ದೇವರ ಆಶೀರ್ವಾದ ಇದ್ದರೂ ಶನಿದೇವನ ಅನುಮತಿಯಿಲ್ಲದೆ ಯಾರೂ ಗೆಲುವಿನ ಮೆಟ್ಟಿಲು ಹತ್ತಲಾಗುವುದಿಲ್ಲ ಎಂಬುದು ಶನಿಮಹಾತ್ಮೆಗೆ ಸಾಕ್ಷಿ. ಮಹಾತ್ಮನಿಗೆ ಗೆಲ್ಲಿಸಿ ಸಿಂಹಾಸನದ ಮೇಲೆ ಕುಳ್ಳಿರಿಸುವುದೂ ಗೊತ್ತು, ಸಿಂಹಾಸನದ ತುತ್ತ ತುದಿಯಿಂದ ಬೀಳಿಸಿ ಮೇಲೇಳದಂತೆ ಮಾಡುವುದು ಗೊತ್ತು. ಪ್ರಜಾತಂತ್ರವನ್ನು ನೋಡಿಕೊಳ್ಳುವವನು ಶನಿದೇವನೇ. ಆದ್ದರಿಂದ ರಾಜಕಾರಣಿಗಳು ಶನಿದೇವನ ಕೃಪಾಕಟಾಕ್ಷ ಪಡೆದರೆ ಗೆಲುವಿನ ಮೆಟ್ಟಿಲುಗಳನ್ನು ಸುಲಭವಾಗಿ ಹತ್ತಬಹುದು. ಶನಿದೇವನ ಕೃಪಾಕಟಾಕ್ಷ ಬೇಕೆಂದರೆ ಹೇಗಿರಬೇಕು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಇನ್ನು ಸಿನಿಮಾ ರಂಗದವರಿಗೆ ಶುಕ್ರನ ಕೃಪೆ ಇದ್ದರಷ್ಟೇ ಅಲ್ಲ, ಶನಿದೇವನ ಕೃಪೆಯೂ ಇರಲೇಬೇಕು. ಶುಕ್ರನೊಂದಿಗೆ ಶನಿದೇವನ ಕೃಪೆ ಸಿಕ್ಕರಂತೂ ತಮ್ಮ ಕ್ಷೇತ್ರದಲ್ಲೇ ಜೀವನ ಪರ್ಯಂತ ರಾಜರಂತೆ ಮೆರೆದು ತಮ್ಮ ಹೆಸರನ್ನು ಅಜರಾಮರವಾಗಿಸಿಕೊಳ್ಳಬಹುದು. ಏಕೆಂದರೆ ಶುಕ್ರನು ಶನಿದೇವನ ಪರಮಮಿತ್ರ ಎಂಬುದು ನಿಮಗೆ ಗೊತ್ತಿರಲಿ.
ಇನ್ನು ಜೀವನದಲ್ಲಿ ಎಲ್ಲರಿಗೂ ಕಂಕಣಭಾಗ್ಯ ಬೇಕು. ಕಂಕಣಭಾಗ್ಯದ ನಂತರ ಸಂತಾನ ಭಾಗ್ಯ ಬೇಕು. ಸಂತಾನ ಭಾಗ್ಯಕ್ಕೆ ದಾಂಪತ್ಯ ಸುಖ ಯೋಗ ಇರಬೇಕು. ಇದಕ್ಕೆಲ್ಲಾ ಶನಿದೇವನ ಸ್ಥಿತಿ ಯಾವ ರೀತಿಯಲ್ಲಿದೆ ಜಾತಕದಲ್ಲಿ ಎಂಬುದರ ಮೂಲಕ ಕಂಡುಕೊಳ್ಳಬಹುದು. ಅಲ್ಲದೇ ಶನಿದೇವನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಲು ನವರತ್ನಗಳನ್ನೂ ಧರಿಸಬಹುದು. ಆದರೆ ಸಂಪೂರ್ಣ ಜಾತಕ ನೋಡಿದರೆ ಗೊತ್ತಾಗುತ್ತದೆ ಯಾವ ರತ್ನ ಧರಿಸಬೇಕು ಎಂಬುದು.
ಕುರಿ ನಂಬೋದೇ ಕಟುಕರ ಮಾತನ್ನ : ನಿಮಗೆ ಗೊತ್ತಿರಬಹುದು ಕೆಲವೊಬ್ಬರು ಬರೀ ದುಶ್ಚಟಗಳಿದ್ದರೇನೆ ಮನುಷ್ಯ ಕೆಟ್ಟವನು ಎಂದುಕೊಂಡಿರುತ್ತಾರೆ. ಆದರೆ ಕೆಲವರಲ್ಲಿ ಯಾವುದೇ ದುಶ್ಚಟಗಳಿಲ್ಲದಿದ್ದರೂ ದುರ್ಬುದ್ಧಿ ವಿಪರೀತ ಇರುತ್ತದೆ. ಮತ್ತೊಬ್ಬರ ರಕ್ತ ಹೀರುವಂಥ ಕೆಟ್ಟ ಕೆಲಸ ಮಾಡುತ್ತ ಒಂಥರಾ ಸಂತಸ ಪಡುತ್ತಿರುತ್ತಾರೆ. ಮತ್ತೊಬ್ಬರ ಹೊಟ್ಟೆ ಮೇಲೆ ಹೊಡೆದು ಅವರು ಸಂಕಷ್ಟ ಪಡುವುದನ್ನು ನೋಡುತ್ತ ಕ್ರೂರ ನಗೆ ನಗುತ್ತಿರುತ್ತಾರೆ. ಇಷ್ಟೆಲ್ಲಾ ಕ್ರೂರ ಗುಣ ಹೊಂದಿರುವ ಇಂಥವರು ಅಪ್ಪಟ ಸಸ್ಯಾಹಾರಿಯ ಜಾತಿಯವರೇ ಆಗಿರುತ್ತಾರೆ! ಯಾವುದೇ ಮಾಂಸಾಹಾರ ಸೇವಿಸದಿರುವುದರಿಂದ ತಾವೇ ಉಚ್ಚರು ಎಂದು ಹೇಳಿಕೊಳ್ಳುತ್ತ ಒಂಥರಾ ನರಭಕ್ಷಕರಿಗಿಂತ ಕೆಟ್ಟ ಬುದ್ಧಿ ತುಂಬಿ ತುಳುಕುತ್ತಿರುತ್ತದೆ ಇವರಲ್ಲಿ. ಆದರೆ ಅನಿವಾರ್ಯ ಕೆಲವೊಮ್ಮೆ ಎಷ್ಟೋ ಜನರು ಇಂಥವರನ್ನೇ ನಂಬಿಕೊಂಡಿರುತ್ತಾರೆ. ಒಂಥರಾ ಕುರಿ ನಂಬೋದೇ ಕಟುಕರನ್ನು ಎಂಬ ಮಾತಿನಂತೆ.
ಇಂಥವರನ್ನು ನೀವು ನಿಮ್ಮ ನಿತ್ಯ ಬದುಕಿನಲ್ಲಿ ನೋಡಿರುತ್ತೀರಿ. ಇದು ಕಲಿಯುಗ, ಇಲ್ಲಿ ಮಾಡಿದ್ದನ್ನು ಇಲ್ಲೇ ಅನುಭವಿಸಿಕೊಂಡು ಹೋಗಬೇಕು. ದೇವದೋಷದಂಥ ಸ್ವರೂಪದ ಅಪರಾಧ ಮಾಡುತ್ತಿರುವ ಇಂಥ ವೈಟ್ ಕಾಲರ್ ಕ್ರಿಮಿನಲ್‌ಗಳನ್ನು ಕ್ರಿಮಿಗಳನ್ನಾಗಿ ಮಾಡಿಬಿಡುತ್ತಾನೆ ಶನಿದೇವ. ನಿಮ್ಮ ಕಣ್ಣಾರೆ ನೋಡುತ್ತೀರಿ. ಇಂಥವರು ಹಾಗೂ ಇವರ ಕುಟುಂಬದ ಸದಸ್ಯರು ಅಧೋಗತಿ ಕಾಣುವುದನ್ನು ಹಾಗೂ ಶನಿದೇವನ ಪ್ರಭಾವವನ್ನು. ನಿಮಗೆ ಅನ್ನಿಸಬಹುದು ಇವರ ಕುಟುಂಬ ಸದಸ್ಯರಿಗೇಕೆ ಶನಿದೇವ ಕಾಡುತ್ತಾನೆ ಎಂದು. ಹೌದು ಮತ್ತೆ, ಕೆಟ್ಟ ಕೆಲಸ ಮಾಡುತ್ತಿರುವವರನ್ನು ಪ್ರೋತ್ಸಾಹಿಸುತ್ತ ಮನೆಮಂದಿಯೆಲ್ಲ ವಿಕೃತ ನಗೆ ಬೀರುತ್ತಿರುತ್ತಾರೆ. ಇಷ್ಟೇ ಸಾಕು ಮಹಾತ್ಮನಿಗೆ ಬಿಡುತ್ತಾನಾ ಅವನು?
ಆದ್ದರಿಂದ ನಿಮ್ಮ ಕುಟುಂಬದಲ್ಲಿ ಯಾರೇಷ್ಟೆ ದೊಡ್ಡವರಿರಲಿ ದೊಡ್ಡ ಹುದ್ದೆಯಲ್ಲಿರಲಿ ಅನ್ಯಾಯ, ಅನೀತಿಯ ಹಾದಿ ತುಳಿಯುತ್ತಿದ್ದರೆ ತಿಳಿ ಹೇಳಿ. ಇಲ್ಲವಾದರೆ ನೀವು ಅವರೊಂದಿಗೆ ನರಕಯಾತನೆ ಅನುಭವಿಸಲು ಸಿದ್ಧರಾಗಿಸಿಕೊಳ್ಳಿ ನಿಮ್ಮ ಮನಸ್ಸ ಮತ್ತು ದೇಹವನ್ನು! ಇನ್ನು ಪರರ ಸಂಕಷ್ಟ ನೋಡಿಯೂ ನೋಡದಂತೆ ಇದ್ದು ಅವರನ್ನು ಗೇಲಿ ಮಾಡುವ ನೀಚ ಬುದ್ಧಿ ನಿಮ್ಮಲ್ಲಿದ್ದರೆ ಬಿಡಿ. ಸಂಕಷ್ಟಗಳಲ್ಲಿದ್ದವರಿಗೆ ಸಾಡೇಸಾತಿಯ ಬಗ್ಗೆ ಮಾಹಿತಿ ನೀಡಿ.
ತುಲಾ ರಾಶಿಗೆ ಸಾಡೇಸಾತಿ ಎರಡನೇ ಹಂತ ಹೇಗಿರುತ್ತೆ ಎಂಬುದು ಮುಂದಿನ ಲೇಖನದಲ್ಲಿ. (ಒನ್‌ಇಂಡಿಯಾ ಕನ್ನಡ)
ಶನಿದೇವನ ಕೃಪೆಗೆ : ಶನೈಶ್ಚರ ಧ್ಯಾನ ಮಂತ್ರ ಪಠಿಸಿ.
ಅಹೋ ಸೌರಾಷ್ಟ್ರ ಸಂಜಾತ ಛಾಯಾ ಪುತ್ರ ಚತುರ್ಭುಜ|
ಕೃಷ್ಣವರ್ಣಾರ್ಕ ಗೋತ್ರೀಯ ಬಾಣಹಸ್ತ ಧನುರ್ಧರ ||
ತ್ರಿಶೂಲಶ್ಚ ಸಮಾಗಚ್ಛ ವರದೋ ಗೃಧ್ರವಾಹನ|
ಪ್ರಜಾಪತೇತು ಸಂಪೂಜ್ಯಃ ಸರೋಜೀ ಪಶ್ಚಿಮೇ ದಲೇ || [ಸಾಡೇಸಾತಿ ಎಂದರೇನು, ಏನಿದರ ಮರ್ಮ?]
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications