ರಾಜಕಾರಣಿಗಳ ಬೊಜ್ಜಿಗೆ ಭ್ರಷ್ಟಾಚಾರ ನಿಲ್ಲಿಸೋದೇ ಡಯೆಟ್!
ರಾಜಕಾರಣಿಗಳಿಗೂ ಬೊಜ್ಜಿಗೂ ಅವಿನಾಭಾವ ಸಂಬಂಧ. ಎಷ್ಟೇ ಸ್ಲಿಮ್ಮು, ಹ್ಯಾಂಡ್ಸಮ್ ಇರುವವರಾದರೂ ಆ ರಾಜಕೀಯದ ಅಂಗಳಕ್ಕೆ ಇಳಿದರೆ ಸಾಕು ತಾನೇ ತಾನಾಗಿ ಬೊಜ್ಜು ಆವರಿಸುತ್ತದೆ.
ಹಣವನ್ನು ಕೊಳ್ಳೆ ಹೊಡೆದು, ತಿಂದು ತಿಂದು ಬೊಜ್ಜು ಬೆಳಸಿಕೊಳ್ಳುವ ರಾಜಕಾರಣಿಗಳಿಗೆ ಬೊಜ್ಜು ಕರಗಿಸಿಕೊಳ್ಳುವ ಸಲಹೆ ಅಪಥ್ಯವೇ. ಆದರೂ ಈ ಕಾರ್ಟೂನ್ ಮೂಲಕ ಅಂಥದೊಂದು ಸಲಹೆ ನೀಡಿದ್ದಾರೆ ಕಾರ್ಟೂನಿಸ್ಟ್ ಶಂಕರ್.
In Pics: ಕಚಗುಳಿ ಇಡುವ ಚುನಾವಣಾ ಕಾರ್ಟೂನ್: ನಕ್ಕು ಹಗುರಾಗಿ
ರಾಜಕಾರಣಿಗಳು ಬೊಜ್ಜು ಕರಗಿಸಿಕೊಂಡರೆ ನಮಗೂ ಮಾರುದ್ದ ಬಟ್ಟೆ ಕಟ್ ಮಾಡೋ ತಾಪತ್ರಯವಿಲ್ಲ ಎನ್ನುತ್ತಿದ್ದಾರೆ ಟೈಲರ್ ಗಳು! ರಾಜಕಾರಣಿಗಳ ಬೊಜ್ಜಿನ ಪರಿಹಾರಕ್ಕಿರುವ ಡಯಟ್ ಎಂದರೆ ಭ್ರಷ್ಟಾಚಾರ ಬಿಡುವುದು!
ಕರ್ನಾಟಕ ವಿಧಾನಸಭೆ ಚುನಾವಣೆ ಮೇ 12 ರಂದು ನಡೆಯಲಿದ್ದು ಮೇ 15 ಕ್ಕೆ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಕುರಿತು, ರಾಜಕಾರಣಿಗಳನ್ನು ಕುರಿತು ಹುಟ್ಟಿಕೊಳ್ಳುತ್ತಿರುವ ತರಹೇವಾರಿ ಜೋಕುಗಳು ಚುನಾವಣಾ ರಂಗಕ್ಕೆ ಮೊನಚಿನ ಪರಿಭಾಷೆ ಬರೆದಿವೆ. ಕಾರ್ಟೂನಿಸ್ಟ್ ಶಂಕರ್ ಅವೆರ ಅಂಥದೊಂದು ಮೊನಚು ಕಾರ್ಟೂನ್ ಇಲ್ಲಿದೆ.













Click it and Unblock the Notifications