ಲೊಕಾಂಟೋ ಕಾಲ್ ಗರ್ಲ್ ಸರ್ವೀಸ್ ಹೆಸರಿನಲ್ಲಿ ಹನಿಟ್ರ್ಯಾಪ್ !
ಬೆಂಗಳೂರು, ಫೆಬ್ರವರಿ 04: ಕಾಲ್ ಗರ್ಲ್ ಎಸ್ಕಾರ್ಟ್ ಸರ್ವೀಸ್ ಪೂರೈಕೆ ಮಾಡುವ locanto.com ಜಾಹೀರಾತು ಜಾಲ ತಾಣದ ಮೂಲಕ ಕಾಲ್ ಗರ್ಲ್ ಸರ್ವೀಸ್ ಗೆ ಜೊಲ್ಲು ಸುರಿಸಿ ಹೋದ್ರೆ ಬೆತ್ತಲೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಾರೆ ಹುಷಾರ್ ! ಲೊಕಾಂಟೋ ವೆಬ್ ತಾಣದಲ್ಲಿ ಕಾಲ್ ಗರ್ಲ್ ಸರ್ವೀಸ್ ಮೊರೆ ಹೋದವರ ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುವ ಗ್ಯಾಂಗ್ ಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ದೇಹ ಬಾಧೆ ತೀರಿಸಿಕೊಳ್ಳಲು ದೇಹದ ಮೊರೆ ಹೋಗಿ ಜಾಲಕ್ಕೆ ಬಿದ್ರೆ ದೇವರೂ ಕಾಪಾಡಲ್ಲ !

ಹನಿಟ್ರ್ಯಾಪ್ ಜಾಲ:
ಎಷ್ಟೋ ಮಂದಿ ಲೋಕಾಂಟೋ ಕಾಲ್ ಗರ್ಲ್ ಸರ್ವೀಸ್ ನ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದು ಲಕ್ಷ ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕಾಲ್ ಗರ್ಲ್ ಸರ್ವೀಸ್ ಪೂರೈಸಿ, ಬೆತ್ತಲೆ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಗ್ಯಾಂಗ್ ನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರದ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿ ಭಾಸ್ವತಿ ದತ್ತಾ ಹಾಗೂ ಕಿರಣ್ ರಾಜ್ ಬಂಧಿತ ಆರೋಪಿಗಳು. ಇವರು ಕಾಲ್ ಗರ್ಲ್ ಗಳ ಜತೆ ಸಂಪರ್ಕ ಹೊಂದಿದ್ದು, ಯಾರಾದರೂ ಕಾಲ್ ಗರ್ಲ್ ಸರ್ವೀಸ್ ಪಡೆದರೆ ಅಂತಹವರ ಬೆತ್ತಲೆ ವಿ ಡಿಯೋ ಮಾಡಿಸಿ ನಂತರ ಕರೆ ಮಾಡಿ ಸುಲಿಗೆ ಮಾಡುತ್ತಿದ್ದರು. ಹಣ ಕೊಡದಿದ್ದರೆ ಸಾಮಾಜಿಕ ಜಾಲ ತಾಣದಲ್ಲಿ ಬಿಡುವುದಾಗಿ ಹೆದರಿಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಈ ದಂಪತಿ ಈ ಜಾಲದಲ್ಲಿ ಸಕ್ರಿಯವಾಗಿದ್ದು ನೂರಾರು ಮಂದಿಗೆ ಮೋಸ ಮಾಡಿದ್ದಾರೆ.

ಸುಂದರ ಹುಡುಗಿಯರ ಜಾಲ ತಾಣ:
ಪತ್ತೆ ಹೇಗೆ ?: ಲೊಕಾಂಟೋ ಜಾಲ ತಾಣದಲ್ಲಿ ಸುಂದರ ಹುಡುಗಿಯರ ಚಿತ್ರ ಹಾಕಿದ್ದ ಭಾಸ್ವತಿ ದತ್ತಾ, ತನ್ನ ಮೊಬೈಲ್ ನಂಬರ್ ದಾಖಲಿಸಿದ್ದಳು. ಕಾಲ್ ಗರ್ಲ್ ಸರ್ವೀಸ್ ಪಡೆಯಲು ವ್ಯಕ್ತಿಯೊಬ್ಬ ಈ ಜಾಲ ತಾಣದಲ್ಲಿ ನೋಡಿದಾಗ ಈ ನಂಬರ್ ಸಿಕ್ಕಿದೆ. ಜಾಹೀರಾತು ನೋಡಿ ಕರೆ ಮಾಡಿದ ವ್ಯಕ್ತಿಯ ಮನೆಗೆ ಕಾಲ್ ಗರ್ಲ್ ಕಳಿಸಿದ್ದಾರೆ. ವ್ಯಕ್ತಿಯ ಜತೆ ಕಾಲ್ ಗರ್ಲ್ ಇರುವ ಬೆತ್ತಲೆ ಚಿತ್ರಗಳನ್ನು ಆತನಿಗೆ ಗೊತ್ತಿಲ್ಲದೇ ತೆಗೆದುಕೊಂಡು ಹೋಗಿದ್ದಾರೆ. ಆನಂತರ ಮೊಬೈಲ್ ಗೆ ಕರೆ ಮಾಡಿ, ಹೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ಪೊಲೀಸರಿಗೆ ರೇಪ್ ಕೇಸ್ ನೀಡಿ ಮಾನ ಮರ್ಯಾದೆ ತೆಗೆಯುವುದಾಗಿ ಹೆದರಿಸಿದ್ದಾರೆ. ಅಲ್ಲದೇ ಈ ವ್ಯಕ್ತಿಯ ಮನೆಯಲ್ಲಿ 94 ಸಾವಿರ ರೂಪಾಯಿ ನಗದು ಮತ್ತು 150 ಗ್ರಾಂ ಚಿನ್ನಾಭರಣಗಳನ್ನು ದೋಚಿಕೊಂಡು ಭಾಸ್ವತಿ ದತ್ತಾ ಗ್ಯಾಂಗ್ ಪರಾರಿಯಾಗಿತ್ತು. ಸಂತ್ರಸ್ತ ವ್ಯಕ್ತಿ ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬ್ಲಾಕ್ ಮೇಲ್ ದಂಪತಿ ಬಂಧನ:
ಈ ಕುರಿತು ಕೇಸು ದಾಖಲಿಸಿಕೊಂಡ ವೈಟ್ ಫೀಲ್ಡ್ ಪೊಲೀಸರು, ಮೊಬೈಲ್ ಕರೆ ಮಾಹಿತಿ ಆಧರಿಸಿ ಭಾಸ್ವತಿ ದತ್ತಾ ಮತ್ತು ಆಕೆಯ ಪತಿ ಕಿರಣ್ ರಾಜ್ ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸಿದಾಗ ಕಳೆದ ಮೂರು ವರ್ಷದಿಂದಲೂ ಈ ಕೃತ್ಯ ಎಸಗುತ್ತಿದ್ದು, ನೂರಾರು ಮಂದಿಗೆ ಬ್ಲಾಕ್ ಮೇಲ್ ಮಾಡಿರುವ ಸಂಗತಿಯನ್ನು ಬಾಯಿಬಿಟ್ಟಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರಲಿವೆ.

2020 ರಲ್ಲೂ ಮೋಸ :
ಕಳೆದ ವರ್ಷ ವೈಟ್ ಫೀಲ್ಡ್ ನ ನೆಲ್ಲೂರಹಳ್ಳಿಯ ದಿನೇಶ್ ಎಂಬಾತ ಕೂಡ ಇದೇ ರೀತಿ ಮೋಸ ಹೋಗಿ ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದ. ಈ ಕುರಿತು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದಿನೇಶ್ ದೂರು ನೀಡಿದ್ದರು. ಲೊಕಾಂಟೋ ಮೂಲಕ ಅಪ್ಸಾನಾ ಹೆಸರಿನ ಕಾಲ್ ಗರ್ಲ್ ನ್ನು ಬುಕ್ ಮಾಡಿದ್ದ. ಮನೆಗೆ ಬಂದಿದ್ದ ಕಾಲ್ ಗರ್ಲ್ ಗೆ ಹತ್ತು ಸಾವಿರ ರೂಪಾಯಿ ನೀಡಿದ್ದ. ಈ ವೇಳೆ ಈತನ ಜತೆ ಮಲಗಿದ್ದ ವಿಡಿಯೋಗಳನ್ನು ಕಾಲ್ ಗರ್ಲ್ ತೆಗೆದುಕೊಂಡಿದ್ದಳು. ಮರು ದಿನ ಬೆಳಗ್ಗೆ ಎನ್‌ಜಿಓ ಆಫೀಸರ್ ಹೆಸರಿನಲ್ಲಿ ಕರೆ ಮಾಡಿ, ನೀನು ಕಾಲ್ ಗರ್ಲ್ ಮೇಲೆ ಅತ್ಯಾಚಾರ ಮಾಡಿದ್ದೀಯ. ನಿನ್ನ ಮೇಲೆ ರೇಪ್ ಕೇಸು ಹಾಕಿಸುತ್ತೇವೆ. ಪೊಲೀಸ್ ಠಾಣೆಗೆ ಹೋದರೆ ಐದು ಲಕ್ಷ ರೂಪಾಯಿ ಆಗುತ್ತದೆ. ಮನೆಯಲ್ಲಿಯೇ ಸೆಟ್ಲ್ ಮಾಡಿಕೊಂಡರೆ ಎರಡು ಲಕ್ಷ ರೂಪಾಯಿಗೆ ಒಪ್ಪುವುದಾಗಿ ಹೆದರಿಸಿದ್ದರು. ಇದಕ್ಕೆ ಹೆದರಿದ್ದ ದಿನೇಶ್ ಕಾಲ್ ಗರ್ಲ್ ಮ್ಯಾನೇಜರ್ ಎಂದು ಹೇಳಿ ಕೊಟ್ಟಿದ್ದ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮೂಲಕ ಎರಡು ಲಕ್ಷ ರೂಪಾಯಿ ಪಾವತಿ ಮಾಡಿದ್ದ. ಇದು ಕೂಡ ಭಾಸ್ವತಿ ದತ್ತಾ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications