• search

ವೃಶ್ಚಿಕ ವರ್ಷ ಭವಿಷ್ಯ: ಕಂಡ ಕನಸುಗಳೆಲ್ಲ ಕೈಗೂಡಿ, ಸಂಭ್ರಮ

By ಪಂಡಿತ್ ವಿಠ್ಠಲ ಭಟ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವೃಶ್ಚಿಕ ರಾಶಿಯವರಿಗೆ ಇದು ಉತ್ತಮ ವರ್ಷವಾಗಿ ಪರಿವರ್ತನೆ ಆಗುವುದರಲ್ಲಿ ಸಂಶಯವಿಲ್ಲ. ಬಹಳ ದಿನದ ಅವರ ಕನಸುಗಳು ಈ ವರ್ಷ ಈಡೇರುವ ಸಾಧ್ಯತೆಗಳು ಹೆಚ್ಚು ಕಾಣುತ್ತಿವೆ. ಮನೆಯಲ್ಲಿ ಬಹಳ ಕಾಲದಿಂದ ನಡೆಯದೇ ನಿಂತು ಹೋಗಿದ್ದ ಶುಭಕಾರ್ಯಗಳು ನೆರವೇರುತ್ತವೆ. ವಾಹನ ಖರೀದಿ, ಭೂಮಿ ಖರೀದಿ ನೂತನ ಗೃಹ ನಿರ್ಮಾಣ ಇತ್ಯಾದಿ ನಿಮ್ಮ ಕನಸುಗಳನ್ನು ನೀವೇ ಪ್ರಯತ್ನಿಸಿ ಸಾಕಾರಗೊಳಿಸಲು ಅತ್ಯಂತ ಶುಭ ಸಮಯ ಈ ವರ್ಷ.

  ಆದರೆ, ಜಾಗ್ರತೆ ವಹಿಸ ಬೇಕಾಗಿರುವುದು ಏನೆಂದರೆ ಗೃಹ ನಿರ್ಮಾಣಾದಿಗಳು ಮುಗಿಯಲು ತಡವಾಗುವುದರಿಂದ ಯಾವುದೇ ಕೆಲಸಗಳನ್ನು ವರ್ಷಾಂತ್ಯಕ್ಕೆ ಮುಂದೂಡದಿರಿ. ವ್ಯಾಪಾರ ಮಾಡುತ್ತಿರುವವರಿಗೆ ಉತ್ತಮ ಲಾಭ ಇದೆ. ಅದರಲ್ಲಿಯೂ ಬಟ್ಟೆ ವ್ಯಾಪಾರ ಹಾಗೂ ಹೋಟೆಲ್ ಉದ್ಯಮದವರಿಗೆ ಉತ್ತಮ ವರ್ಷವಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ. ಅವಿವಾಹಿತರಿಗೆ ಉತ್ತಮ ಸಂಬಂಧಗಳು ಪ್ರಾಪ್ತವಾಗಿ ವಿವಾಹ ಭಾಗ್ಯವಿದೆ.[ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು]

  ಸಂತಾನ ಭಾಗ್ಯವಿಲ್ಲದೆ ಬೇಸರದಲ್ಲಿ ಇರುವ ದಂಪತಿಗೆ ಸಂತಾನ ಭಾಗ್ಯದ ಯೋಗವಿದೆ. ಇನ್ನು ನಿಮ್ಮ ಮಕ್ಕಳಿಂದ ಈ ವರ್ಷ ಸಂತಸ ಸಿಗುವ ಯೋಗಫಲವಿದೆ. ವಿದೇಶ ಪ್ರಯಾಣದ ಯೋಗ ಸಹ ಚೆನ್ನಾಗಿದೆ. ಆದರೆ ವರ್ಷಾಂತ್ಯದೊಳಗೆ ಹೋದರೆ ಉತ್ತಮ. ವಿದೇಶದಲ್ಲಿ ದೀರ್ಘ ಕಾಲ ಉಳಿಯುವ ಅಪೇಕ್ಷೆ ಇಲ್ಲದಿದ್ದರೆ ಈ ವರ್ಷಾಂತ್ಯದೊಳಗೆ ಹಿಂತಿರುಗಿ ಬರುವುದು ಅತ್ಯುತ್ತಮ.

  ಇನ್ನು ನ್ಯಾಯಾಲಯದಲ್ಲಿ ನಿಮಗೆ ಜಯ ಸಿಗುತ್ತದೆ. ಒಂದು ಪಕ್ಷ ಜಯ ಸಿಗದೆ ವಾದಗಳೇ ಮುಂದುವರಿದರೂ ನಿಮಗೆ ಅನುಕೂಲ ಆಗುವಂತೆ ಯೋಗ್ಯ ವಿಧದಲ್ಲಿ ಸಂಧಾನ ಆಗಬಹುದು. ಇನ್ನು ಸರಕಾರಿ ನೌಕರಿ ಆಸೆ ಇರುವವರು ಖಂಡಿತ ಪ್ರಯತ್ನಿಸಿ, ಸಿಗುವ ಸಾಧ್ಯತೆಗಳು ಹೆಚ್ಚಿವೆ.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

  ಅದರಲ್ಲಿಯೂ ಸೇನೆ, ಪೋಲೀಸ್ ಹಾಗೂ ಅಧ್ಯಾಪಕ ವೃತ್ತಿಯಲ್ಲಿ ಸರಕಾರಿ ಕೆಲಸಕ್ಕೆ ಪ್ರಯತ್ನಿಸುವವರಿಗೆ ಫಲ ಸಿಗುತ್ತದೆ. ನಿಮಗೆ ಮೋಸ ಮಾಡಲು ಬಂದವರು ಕಾರ್ಯ ಸಾಧನೆ ಆಗದೇ ಸೋಲುತ್ತಾರೆ. ಇನ್ನು ಈ ಎಲ್ಲ ಶುಭಗಳ ನಡುವೆ ಅಧಿಕ ಖರ್ಚು ಎಂಬ ದುಃಖದ ವಿಚಾರ ಒಂದಿದೆ. ಅನಿರೀಕ್ಷಿತ ಖರ್ಚು ಹೆಚ್ಚಾಗುತ್ತದೆ. ಶುಭ ಸಮಾಚಾರಗಳು ಹಾಗೂ ಕಾರ್ಯಗಳು ತನ್ನೊಟ್ಟಿಗೆ ಖರ್ಚನ್ನು ಸಹ ಸ್ವಲ್ಪ ಅಧಿಕ ಪ್ರಮಾಣದಲ್ಲಿಯೇ ತರುವುದರಲ್ಲಿ ಸಂಶಯವಿಲ್ಲ.
  ಒಟ್ಟಾರೆ ವರ್ಷ ಫಲ 4/5

  ಜನವರಿಯಿಂದ ಏಪ್ರಿಲ್ ವರೆಗೆ

  ಜನವರಿಯಿಂದ ಏಪ್ರಿಲ್ ವರೆಗೆ

  ಈಗ ತಾನೆ ಸಂತೋಷದ ಕ್ಷಣಗಳು ಬರುತ್ತಿವೆ ಎಂದು ಅನಿಸುತ್ತದೆ. ಬಹಳ ವರ್ಷಗಳಿಂದ ನೀವು ಆಸೆ ಪಟ್ಟಿದ್ದ ವಾಹನ ಅನಿರೀಕ್ಷಿತವಾಗಿ ನೀವು ಆಲೋಚಿಸುವ ಮೊದಲೇ ನಿಮ್ಮ ಮನೆ ಸೇರುತ್ತದೆ. ಇನ್ನು ಹಿರಿಯರು ಮನೆಯಲ್ಲಿ ಶುಭ ಕಾರ್ಯ ಮಾಡಲು ಈ ಹಿಂದಿನಿಂದಲೂ ಹುಡುಕುತ್ತಲಿದ್ದಲ್ಲಿ ಈಗ ಸರಿಯಾದ ವರ ಅಥವಾ ವಧು ಪ್ರಾಪ್ತವಾಗಿ ಮುಂದಿನ ಕೆಲಸಗಳತ್ತ ಗಮನ ಹರಿಸಬೇಕಾಗುತ್ತದೆ. ಇಲ್ಲಿ ಗಮನಿಸ ಬೇಕಾದ ಅಂಶ ಎಂದರೆ ನಿಮಗೆ ಸಮಯ ಬಹಳ ಕಡಿಮೆ ಸಿಗುತ್ತದೆ. ನಿಗದಿ ಮಾಡಲು ಎಲ್ಲರನ್ನು ಆಹ್ವಾನಿಸಲು ನೀವು ಅಂದಾಜು ಮಾಡಿದಷ್ಟು ಸಮಯ ನಿಮಗೆ ಸಿಗದಿರಬಹುದು. ಆದರೆ ಕಾರ್ಯಕ್ರಮ ಮಾತ್ರ ಸಾಂಗೋಪಾಂಗವಾಗಿ ನೆರವೇರುವುದರಲ್ಲಿ ಸಂಶಯ ಬೇಡ. ವಿಚ್ಛೇದನ ಬಯಸಿ ದೂರಾಗಿರುವ ದಂಪತಿ ಮನ ಪರಿವರ್ತನೆಗೊಂಡು ಪುನಃ ಕೂಡಿ ಬಾಳುವ ನಿರ್ಧಾರ ಮಾಡಿದರೆ ವಿಷಯ ಪ್ರಸ್ತಾವ ಮಾಡಲು ಇದು ಸುಸಮಯ. ಸ್ವಲ್ಪ ನಾನು ಅನ್ನುವುದನ್ನು ಬಿಟ್ಟು ನಾವು ಅನ್ನುವ ಮನೋಭಾವದೊಂದಿಗೆ ಅನುಸರಿಕೊಂಡು ಹೋಗೋಣವೆಂದು ನೀವು ಮುಂದೆ ಬಂದರೆ ಹಿಂದೆ ಏನೂ ನಡೆದೇ ಇಲ್ಲವೇನೋ ಎನ್ನುವಂತೆ ಸುಂದರವಾಗಿ ಸಂಸಾರ ಮಾಡಬಹುದು.

  ಮೇನಿಂದ ಆಗಸ್ಟ್ ವರೆಗೆ

  ಮೇನಿಂದ ಆಗಸ್ಟ್ ವರೆಗೆ

  ಈ ನಾಲ್ಕು ತಿಂಗಳು ಬಹಳವಾಗಿ ಕಾಡುವುದು ನೀವು ಮಾಡಿದ ಖರ್ಚುಗಳು. ಸಂತೋಷದ ಸಮಯದಲ್ಲಿ ಮುಂದಿನ ದಿನಗಳ ಚಿಂತೆ ಮಾಡದೇ ಕೇವಲ ತತ್ಕಾಲದ ಬಗ್ಗೆ ಯೋಚಿಸಿ ಮಾಡಿದ ಅಧಿಕವಾದ ಖರ್ಚಿನ ಲೆಕ್ಕಗಳು, ಮಾಡಿದ ಸಾಲಗಳನ್ನು ನೋಡಿ ಹೌಹಾರ ಬಹುದು. ಆದರೂ ಹೇಳಿಕೊಳ್ಳುವಷ್ಟು ಸಮಸ್ಯೆಗಳೇನೂ ಬರುವುದಿಲ್ಲ. ಎಲ್ಲೋ ಒಂದು ಕಡೆ ಶುಭ ಕಾರ್ಯಗಳು ಮಾಡಿ, ಮುಗಿಸಿದ ಸಂತೃಪ್ತಿ ಮನದಲ್ಲಿ ಇರುತ್ತದೆ. ಭೂಮಿ ಖರೀದಿಯನ್ನು ಮಾಡುವ ಉತ್ತಮ ಯೋಗ ಈ ನಾಲ್ಕು ತಿಂಗಳಲ್ಲಿ ಬರುತ್ತದೆ. ಅದನ್ನು ಸದುಪಯೋಗ ಪಡಿಸಿಕೊಂಡವರು ಅದೃಷ್ಟವಂತರು. ಆದರೆ ಯಾವುದೇ ಕಾರಣಕ್ಕೂ ಖರೀದಿಯ ಪ್ರಕ್ರಿಯೆಗಳು ಮುಗಿಯುವುದಿಲ್ಲ ಎಂದು ಅನಿಸಿದರೆ ತಕ್ಷಣ ನಿಲ್ಲಿಸಿ, ನಿಮ್ಮ ಹಣವನ್ನು ಮರಳಿ ಪಡೆದು ಬಿಡಿ. ವಿದೇಶ ಪ್ರವಾಸ ಹೋಗಬಯಸುವವರು ಅಲ್ಲಿ ಉದ್ಯೋಗಾವಕಾಶಕ್ಕಾಗಿ ಕಾಯುತ್ತಿರುವವರಿಗೆ ಈ ನಾಲ್ಕು ತಿಂಗಳಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಇದೇ ಸಮಯದಲ್ಲಿಯೇ ನಿಮ್ಮ ಗೆಳೆಯರು ಸಾಕಷ್ಟು ಸಹಾಯವನ್ನು ಪಡೆಯುತ್ತಾರೆ. ಅದರೆ ಅವರಿಗೆ ಮಾಡಿದ ಸಹಾಯಕ್ಕೆ ನೀವು ಮುಂದೊಂದು ದಿನ ಪ್ರತಿಫಲಾಪೇಕ್ಷೆ ಮನಸಿನಲ್ಲಿ ಇಟ್ಟುಕೊಂಡು ಸಹಾಯ ಮಾಡಿದ್ದರೆ ಮಾತ್ರ ಅದು ಸಾಧ್ಯವಾಗದ ಸಂಗತಿ.

  ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

  ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ

  ವರ್ಷದ ಮೂರು ಭಾಗಗಳಲ್ಲಿ ಅತ್ಯಂತ ಶುಭವನ್ನೇ ಕಂಡ ನಿಮಗೆ ವರ್ಷದ ಕೊನೆ ನಾಲ್ಕು ತಿಂಗಳು ಸ್ವಲ್ಪ ಮಟ್ಟಿಗೆ ಸಮಸ್ಯೆಗಳು ಚಿಂತೆ ಕೊಡಲಿವೆ. ಅದರಲ್ಲಿಯೂ ಆರೋಗ್ಯ ಬಾಧೆ ಹೆಚ್ಚು ಕಾಡಲಿದೆ. ನೀವು ನಂಬಿದವರು ನಿಧಾನವಾಗಿ ಮೋಸ ಅಲ್ಲದಿದ್ದರೂ ಸಹಾಯ ಮಾತ್ರ ಮಾಡುತ್ತಿಲ್ಲ ಅನಿಸುತ್ತದೆ. ಬಹಳ ಮುಖ್ಯವಾಗಿ ಸ್ವಲ್ಪ ದಿನ ವಿಶ್ರಾಂತಿ ಬೇಕು ಅನಿಸುತ್ತದೆ. ಆದರೆ ಈ ಸಮಯದಲ್ಲಿ ಉದ್ಯೋಗ ಮಾತ್ರ ಬಿಡಬೇಡಿ ಏನೇ ಕಷ್ಟ ಆಗಲಿ, ಎಷ್ಟೇ ಒತ್ತಡ ಬೀಳಲಿ ಧೈರ್ಯ ಮಾಡಿ ನಿಭಾಯಿಸಲು ಪ್ರಯತ್ನಿಸಿ. ನನ್ನಿಂದ ಆಗೋದಿಲ್ಲ, ನಾನು ಸೋತೆ ಎಂಬ ಪಲಾಯನವಾದ ಬೇಡ. ನಿಮಗೆ ಅತ್ಯಂತ ಆಪ್ತರಿಗೆ ನಿಮಗಾಗದವರು ಚಾಡಿಗಳನ್ನು ಹೇಳಿ ಕ್ರಮೇಣ ನಿಮ್ಮ ಮೇಲೆ ಮನಸ್ಸು ಬಾರದಂತೆ ತಡೆಯುವರು. ಇನ್ನೂ ಬಹಳ ವರ್ಷ ಉದ್ಯೋಗ ಇದ್ದರೂ ಈಗಲೇ ನಿವೃತ್ತಿ ಘೋಷಿಸಲು ಮನಸು ಬರಬಹುದು. ಆದರೂ ಅಂಥ ಕೆಲಸ ಮಾಡುವುದು ಸದ್ಯ ಬೇಡ. ಇನ್ನು ಮಾಡಲೇ ಬೇಕೆಂದು ಅನಿಸಿದಲ್ಲಿ ಒಮ್ಮೆ ನಿಮ್ಮ ಜಾತಕ ಪರೀಕ್ಷಿಸಿಕೊಳ್ಳಿ. ಆದರೆ ತಾಳ್ಮೆ ಹಾಗೂ ಸಂಯಮ ನಿಮಗೆ ಉತ್ತಮ ಭವಿಷ್ಯ ನೀಡುವುದರಲ್ಲಿ ಸಂಶಯ ಬೇಡ.

   ಪರಿಹಾರ

  ಪರಿಹಾರ

  ವೈದಿಕ: ಈ ವರ್ಷ ಸುಬ್ರಹ್ಮಣ್ಯ ಹವನ ಹಾಗೂ ಸರ್ಪ ಶಾಂತಿ ಹವನ ಮಾಡಿಸುವುದರಿಂದ ಉತ್ತಮ ಫಲವಿದೆ
  ಕ್ಷೇತ್ರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಬರುವ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಹೋಗಿ ಅಲ್ಲಿ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ ಹಾಗೂ ಅರ್ಚನೆ ಮಾಡಿಸಿ. ದೇಗುಲಕ್ಕೆ 28 ಪ್ರದಕ್ಷಿಣೆ ಮಾಡಿ ಬನ್ನಿ. ಕಚೇರಿ ಸಂಪರ್ಕ ಸಂಖ್ಯೆ: 08387279572
  ರತ್ನ: ಉತ್ತಮ ಗುಣಮಟ್ಟದ ಕನಕ ಪುಷ್ಯರಾಗ ರತ್ನವನ್ನು ಬೆಳ್ಳಿಯಲ್ಲಿ ಉಂಗುರ ಮಾಡಿಸಿ, ತ್ರಿದಿನ ಪೂಜಿಸಿ, ಗುರುವಾರದಂದು ಧರಿಸಿ
  ಸ್ತೋತ್ರ: ಪ್ರತಿ ದಿನ ವಿಷ್ಣು ಸಹಸ್ರನಾಮ ಅಥವಾ ವಿಷ್ಣು ಅಷ್ಟೋತ್ತರವನ್ನು ತಪ್ಪದೇ ಪಠಿಸಿ ಅಥವಾ ಶ್ರವಣ ಮಾಡಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Scorpio yearly horoscope 2017: It will be a wonderful year Scorpio zodiac sign. Your deams come true- Predictions by Pandit Vittal Bhat.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more