ಮಕರ ಸಂಕ್ರಾಂತಿ 2026: ಮೇಷ ರಾಶಿಗೆ ರವಿ ಸಂಚಾರದಿಂದ ಬಡ್ತಿ ಸೇರಿ ಹಲವು ಉತ್ತಮ ಫಲ
ಜನವರಿ 14ರಂದು ಮಕರ ಸಂಕ್ರಾಂತಿ. ಈ ದಿನ ರವಿ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರವಿ ಸಂಚಾರವು ಅತ್ಯಂತ ಮಹತ್ವ ಪಡೆದಿದೆ. ರಾಜಕಾರಕನಾದ ಸೂರ್ಯನ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಜೀವನದ ಮೇಲೆ ನೇರ ಪ್ರಭಾವ ಬೀರುತ್ತದೆ. ವಿಶೇಷವಾಗಿ ಮೇಷ ರಾಶಿಗೆ ಈ ಸಂಚಾರ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಮೇಷ ರಾಶಿಗೆ ರವಿ ಪಂಚಮಾಧಿಪತಿ. ಈ ಬಾರಿ ದಶಮ ಭಾವದಲ್ಲಿ ಸ್ಥಿತನಾಗುತ್ತಾನೆ. ಪಂಚಮ ಮತ್ತು ದಶಮ ಭಾವಗಳ ಪರಸ್ಪರ ಸಂಬಂಧವು ಕರ್ಮ, ಬುದ್ಧಿ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಮಹತ್ವದ ಫಲಗಳನ್ನು ನೀಡುತ್ತದೆ. (ಬರಹ: ಪಂಡಿತ್ ವಿಠ್ಠಲ್ ಭಟ್)
ಜ್ಯೋತಿಷ್ಯ ಗ್ರಂಥಗಳ ಪ್ರಕಾರ ಪಂಚಮಾಧಿಪತಿಯು ದಶಮದಲ್ಲಿ ಸ್ಥಿತನಾಗಿರುವುದು ರಾಜಯೋಗದ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮೇಷ ರಾಶಿಯವರಿಗೆ ಉದ್ಯೋಗ, ಸ್ಥಾನಮಾನ, ನಾಯಕತ್ವ ಮತ್ತು ಬುದ್ಧಿಬಲದ ದೃಷ್ಟಿಯಿಂದ ಈ ವರ್ಷದ ಮಕರ ಸಂಕ್ರಾಂತಿಯು ಬಹಳ ಮಹತ್ವ ಪಡೆಯುತ್ತದೆ.

ಉದ್ಯೋಗ ಮತ್ತು ಸ್ಥಾನಮಾನದಲ್ಲಿ ಏರಿಕೆ
ಪಂಚಮಾಧಿಪತಿ ರವಿಯು ದಶಮ ಭಾವದಲ್ಲಿ ಸ್ಥಿತನಾಗಿರುವುದರಿಂದ ಮೇಷ ರಾಶಿಯವರ ಉದ್ಯೋಗ ಕ್ಷೇತ್ರದಲ್ಲಿ ಗೌರವ, ಅಧಿಕಾರ ಮತ್ತು ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗದಲ್ಲಿರುವವರು, ಆಡಳಿತ, ಪೊಲೀಸ್, ಮ್ಯಾನೇಜ್‌ಮೆಂಟ್, ರಾಜಕೀಯ ಅಥವಾ ಅಧಿಕಾರ ಸಂಬಂಧಿತ ಕ್ಷೇತ್ರದಲ್ಲಿರುವವರು ವಿಶೇಷ ಲಾಭವನ್ನು ಪಡೆಯಬಹುದು. ಈಗಾಗಲೇ ಕೆಲಸದಲ್ಲಿರುವವರಿಗೆ ಜವಾಬ್ದಾರಿಯುತ ಹುದ್ದೆ, ಪ್ರಮೊಷನ್ ಅಥವಾ ಮಾನ್ಯತೆ ದೊರೆಯುವ ಸೂಚನೆಗಳು ಕಾಣಿಸುತ್ತವೆ.
ರಾಜಸಮಾನ ಗೌರವ ಮತ್ತು ಸುಖ
'ಪಂಚಮೇಶೇ ದಶಮೇ ಸ್ಥಿತೇ ರಾಜಮಾನ ಸುಖ ಪ್ರಾಪ್ತಿಃ' ಎನ್ನುವುದು ಶಾಸ್ತ್ರದ ಮಾತು.
ಅಂದರೆ ಪಂಚಮಾಧಿಪತಿ ದಶಮದಲ್ಲಿ ಇದ್ದರೆ ರಾಜಸಮಾನ ಗೌರವ ಮತ್ತು ಸುಖ ದೊರೆಯುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಬುದ್ಧಿ ಮತ್ತು ಕಾರ್ಯಸಾಧನೆಯ ಸಮನ್ವಯ
ಪಂಚಮ ಭಾವವು ಬುದ್ಧಿ, ಯುಕ್ತಿ, ತಂತ್ರಜ್ಞಾನ ಹಾಗೂ ಚಿಂತನಾ ಶಕ್ತಿಯನ್ನು ಸೂಚಿಸುತ್ತದೆ. ದಶಮ ಭಾವವು ಕರ್ಮ, ಉದ್ಯೋಗ ಮತ್ತು ಸಾಮಾಜಿಕ ಸ್ಥಾನವನ್ನು ಸೂಚಿಸುತ್ತದೆ. ಈ ಎರಡರ ಸಂಯೋಗದಿಂದ ಮೇಷ ರಾಶಿಯವರಿಗೆ ತಮ್ಮ ಬುದ್ಧಿಯ ಸಹಾಯದಿಂದ ದೊಡ್ಡ ಕಾರ್ಯಸಾಧನೆ ಮಾಡುವ ಅವಕಾಶ ಲಭಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ, ಬಡ್ತಿ ಪರೀಕ್ಷೆ ಮತ್ತು ವೃತ್ತಿಪರ ನಿರ್ಣಯಗಳಿಗೆ ಇದು ಉತ್ತಮ ಕಾಲವಾಗಿದೆ. 'ಪಂಚಮಾತು ಬುದ್ಧಿವೃದ್ಧಿಃ, ದಶಮಾತು ಕರ್ಮಸಿದ್ಧಿಃ' ಎನ್ನುವುದು ಶಾಸ್ತ್ರದ ಮಾತು. ಅದರಂತೆ. ಪಂಚಮದಿಂದ ಬುದ್ಧಿವೃದ್ಧಿ ಮತ್ತು ದಶಮದಿಂದ ಕಾರ್ಯಸಿದ್ಧಿ ಸಿಗುತ್ತದೆ.
ನಾಯಕತ್ವ ಮತ್ತು ಪಿತೃಬಲ
ರವಿಯು ನಾಯಕತ್ವದ ಪ್ರತೀಕ ಮತ್ತು ಪಿತೃಕಾರಕನಾಗಿದ್ದಾನೆ. ಈ ಸಂಚಾರದ ನಂತರ ಮೇಷ ರಾಶಿಯವರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಮತ್ತು ನಿರ್ಧಾರ ಶಕ್ತಿ ಹೆಚ್ಚಾಗುತ್ತದೆ. ಪಿತೃಕೃಪೆಯಿಂದ ಅಡಚಣೆಗಳು ದೂರವಾಗುವ ಸಾಧ್ಯತೆ ಇದೆ. ಕೆಲವರಿಗೆ ಕುಟುಂಬದ ಹಿರಿಯರ ಆಶೀರ್ವಾದದಿಂದ ಹೊಸ ಅವಕಾಶಗಳು ಲಭಿಸಬಹುದು. ರವಿಯು ರಾಜತ್ವ ಮತ್ತು ಆಡಳಿತದ ಕಾರಕನಾಗಿದ್ದಾನೆ ಎಂಬುದು ಶಾಸ್ತ್ರದ ಹೇಳಿಕೆ.
ಸೃಜನಶೀಲತೆಗೆ ಸಂಬಂಧಿಸಿದ ವೃತ್ತಿಯಿಂದ ಲಾಭ
ಪಂಚಮ ಭಾವವು ಕಲೆ, ಸೃಜನಶೀಲತೆ, ಮಂತ್ರ ಮತ್ತು ವಿದ್ಯೆಯ ಪ್ರತೀಕ. ಈ ಸಂಚಾರದಲ್ಲಿ ಮೇಷ ರಾಶಿಯವರ ಟ್ಯಾಲೆಂಟ್ ವೃತ್ತಿಯಲ್ಲಿ ಹಣ ಮತ್ತು ಹೆಸರು ತರುವ ಸಾಧ್ಯತೆ ಇದೆ. ಶಿಕ್ಷಕರು, ಜ್ಯೋತಿಷ್ಯರು, ಕಲಾವಿದರು, ಬರಹಗಾರರು, ಸಲಹೆಗಾರರು ಮತ್ತು ತರಬೇತಿ ಕ್ಷೇತ್ರದಲ್ಲಿರುವವರಿಗೆ ಇದು ವಿಶೇಷ ಲಾಭದ ಕಾಲವಾಗುತ್ತದೆ. ಪಂಚಮ ಭಾವವು ಮಂತ್ರ ಮತ್ತು ವಿದ್ಯೆಗೆ ಸಂಬಂಧಿಸಿದೆ ಎಂಬುದನ್ನು ಶಾಸ್ತ್ರಗ್ರಂಥಗಳು ಸೂಚಿಸುತ್ತವೆ.
ರಾಜಯೋಗದ ಸೂಚನೆ
ಪಂಚಮ ಮತ್ತು ದಶಮ ಭಾವಗಳ ಸಂಬಂಧವು ಸಂಪೂರ್ಣ ರಾಜಯೋಗವಲ್ಲದಿದ್ದರೂ, ಅದರ ಸ್ಪಷ್ಟ ಅಂಶವನ್ನು ನೀಡುತ್ತದೆ. ಈ ಸಂಚಾರದ ನಂತರ ಮೇಷ ರಾಶಿಯವರು ತಮ್ಮ ವೃತ್ತಿಯಲ್ಲಿ ಮೇಲ್ದರ್ಜೆಗೆ ಏರುವ ಸಾಧ್ಯತೆ ಇದೆ. ಶ್ರಮ ಮತ್ತು ವಿವೇಕದಿಂದ ಕೆಲಸ ಮಾಡಿದರೆ ಮಹತ್ವದ ಪ್ರಗತಿ ಕಾಣಬಹುದು.
ಮೇಷ ರಾಶಿಗೆ ಪರಿಹಾರ ಮಂತ್ರ ಮತ್ತು ಸೂರ್ಯೋಪಾಸನೆ ವಿಧಾನ
ಈ ಸಂಚಾರದ ಫಲವನ್ನು ಪೂರ್ಣವಾಗಿ ಪಡೆಯಲು ಸೂರ್ಯೋಪಾಸನೆ ಅತ್ಯಂತ ಉಪಯುಕ್ತ.
ಪ್ರತಿ ದಿನ ಬೆಳಿಗ್ಗೆ ಸ್ನಾನ ನಂತರ ಪೂರ್ವಮುಖವಾಗಿ ಕುಳಿತು 'ಓಂ ಸೂರ್ಯ ನಾರಾಯಣಣಾಯ ನಮಃ' ಮಂತ್ರವನ್ನು 11 ಅಥವಾ 21 ಬಾರಿ ಜಪಿಸಬೇಕು. ಪ್ರತಿದಿನ ಸೂರ್ಯೋದಯದ ವೇಳೆಗೆ ತಾಮ್ರ ಪಾತ್ರೆಯಲ್ಲಿ ನೀರು, ಕುಂಕುಮ ಮತ್ತು ಅಕ್ಕಿ ಹಾಕಿ ಅರ್ಘ್ಯ ನೀಡಬೇಕು. ಭಾನುವಾರ ಸೂರ್ಯನಿಗೆ ಕೆಂಪು ಹೂವು ಅರ್ಪಿಸುವುದು ಶುಭ. ಆದಿತ್ಯ ಹೃದಯ ಸ್ತೋತ್ರ ಪಠಣ ಬಹಳ ಫಲಕಾರಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications