2018ರ ಮೇಷ ವರ್ಷ ಭವಿಷ್ಯ: ಹಳಿಗೆ ಬಂದ ರೈಲಿನ ಚೈನ್ ಎಳೀಬೇಡಿ
Recommended Video

12 ರಾಶಿಗಳ 2018ರ ವರ್ಷ ಭವಿಷ್ಯ ಸರಣಿಯನ್ನು ಒನ್ಇಂಡಿಯಾ ಕನ್ನಡದಲ್ಲಿ ಆರಂಭಿಸಲಾಗಿದೆ. ಮೇಷ ರಾಶಿಯಿಂದ ಶುರುವಾಗಿರುವ ಈ ಸರಣಿ ಮೀನ ರಾಶಿಯಲ್ಲಿ ಪೂರ್ಣಗೊಳ್ಳುತ್ತದೆ. ಉಳಿದ ರಾಶಿಯವರು ಕಾಯುತ್ತಿದ್ದೀರಿ, ನಮಗೆ ಗೊತ್ತು. ಬೇಗ ಬರುತ್ತೇವೆ.
ಹೊಸ ವರ್ಷ, ಹೊಸ ಭವಿಷ್ಯ ಎಲ್ಲರಿಗೂ ಒಳ್ಳೆಯದೇ ಆಗಲಿ ಎಂಬುದು ನಮ್ಮ ಆಶಯ. ಆದರೆ ಅಶುಭ ಫಲಗಳಿದ್ದರೆ ಸ್ವಲ್ಪ ಎಚ್ಚರದಿಂದ ಇರಿ. ನಿಮ್ಮ ಸ್ನೇಹ ವಲಯದಲ್ಲೂ ಈ ಸರಣಿ ಆರಂಭದ ಬಗ್ಗೆ ತಿಳಿಸಿ. ನಮ್ಮ ಮಧ್ಯದ ಸಂವಹನ ಹೀಗೇ ಮುಂದುವರಿಯಲಿ. ಎಲ್ಲವೂ ಶುಭವಾಗಲಿ. -ಸಂಪಾದಕ
****
ಗಡಪಾರೆಯಿಂದ ತಿವಿಸಿಕೊಂಡವರಿಗೆ ಸೂಜಿಯಲ್ಲಿ ಚುಚ್ಚಿದರೆ ಯಾವ ಲೆಕ್ಕ ಹೇಳಿ? ಮೇಷ ರಾಶಿಯವರ ಸ್ಥಿತಿ ಹಾಗೆ. ಶನೈಶ್ಚರ ಈಗಿನ್ನೂ ನಿಮ್ಮ ರಾಶಿಯಿಂದ ಒಂಬತ್ತನೇ ಮನೆಗೆ ಹೋಗಿದ್ದಾನೆ. ಅಂದರೆ ಎರಡೂವರೆ- ಮೂರು ವರ್ಷಗಳ ಕಾಲ ಅನುಭವಿಸಿದ ಅನಾರೋಗ್ಯ, ಅವಮಾನ, ಸಾಲ ಬಾಧೆ ಎಲ್ಲವೂ ಕಡಿಮೆ ಆಗುತ್ತಿರುವ ಅನುಭವ ಆಗುತ್ತದೆ. ಪೆಟ್ಟು ಕೊಟ್ಟು ಬೆನ್ನು ನೆಟ್ಟಗೆ ಮಾಡಿರುವ ಶನಿಯು ಕಲಿಸಿದ ಪಾಠ ಮರೆಯಬೇಡಿ.
ಈ ವರ್ಷದ ಅಕ್ಟೋಬರ್ ವರೆಗೆ ಏಳರಲ್ಲಿ ಸಂಚರಿಸುವ ಗುರು ಒಳ್ಳೆಯದನ್ನೇ ಮಾಡಲಿದ್ದಾನೆ. ಸಾಂಸಾರಿಕವಾಗಿ ಇದ್ದ ಭಿನ್ನಾಭಿಪ್ರಾಯಗಳು ನಿವಾರಣೆ ಆಗುತ್ತವೆ. ಸಂಗಾತಿ ಮಧ್ಯೆ ಇದ್ದ ಸಣ್ಣ ಪುಟ್ಟ ಅಸಮಾಧಾನ ಕರಗಿ, ಅನ್ಯೋನ್ಯತೆ ಸಾಧ್ಯವಿದೆ. ಶನಿಯ ದುಷ್ಪ್ರಭಾವದಿಂದ ಆಚೆ ಬಂದು ಚೇತರಿಸಿಕೊಳ್ಳುತ್ತಿರುವ ನಿಮಗೆ ವರ್ಷವಿಡೀ ನಿರಾಳ ಇರುತ್ತದೆ.
ಆದರೆ, ಆರೋಗ್ಯ ಸುಧಾರಿಸಿತು ಎಂಬ ಕಾರಣಕ್ಕೆ ಮದ್ಯ ಮತ್ತಿತರ ಚಟಕ್ಕೆ ಆಕರ್ಷಿತರಾಗಬೇಡಿ. ಮಧುಮೇಹ- ರಕ್ತದೊತ್ತಡ ನಿಯಂತ್ರಣಕ್ಕೆ ಬಂತು ಎಂದು ಮನಸೋ ಇಚ್ಛೆ ಜೀವನ ಶೈಲಿ ಬದಲಾಯಿಸಿಕೊಂಡರೆ ಮಾತ್ರ ಕಷ್ಟ ಕಷ್ಟ. ಈ ವರ್ಷದ ಅಕ್ಟೋಬರ್ ನಂತರ ಆರೋಗ್ಯದ ಬಗ್ಗೆ ಸ್ವಲ್ಪ ಹುಷಾರಾಗಿರಿ.

ಕೆಲಸ ಬದಲಿಸುವುದಿದ್ದರೆ ಸೂಕ್ತ ಸಮಯ
ಇನ್ನು ಈಗಿರುವ ಕೆಲಸ ಬದಲಿಸುವ ಯೋಚನೆ ಇದ್ದರೆ ಅಥವಾ ಹೊಸ ವ್ಯಾಪಾರ ಆರಂಭಿಸುವುದಿದ್ದರೆ ಈ ವರ್ಷದ ಆರಂಭದಲ್ಲೇ ಮಾಡಿದರೆ ಉತ್ತಮ. ಏಕೆಂದರೆ ಗುರುಬಲ ಇರುವಾಗ ಅಂದುಕೊಂಡ ಕೆಲಸಗಳು ಸುಲಭಕ್ಕೆ ಆಗುತ್ತವೆ. ಅಕ್ಟೋಬರ್ ನಂತರ ಎಂಟನೇ ಮನೆಗೆ ಬರುವ ಗುರುವಿನಿಂದ ಅಡೆ-ತಡೆಗಳು ಎದುರಾಗುತ್ತವೆ. ಅಥವಾ ನಿಮಗೇ ಆಸಕ್ತಿಯ ಕೊರತೆ ಆಗುತ್ತದೆ.

ಸಿಟ್ಟು ಹತೋಟಿಯಲ್ಲಿರಲಿ
ಕುಜ ಅಧಿಪತಿಯಾದ ಮೇಷ ರಾಶಿಯವರಿಗೆ ಸ್ವಭಾವತಃ ಸ್ವಲ್ಪ ಸಿಟ್ಟು ಹೆಚ್ಚು. ಆ ಕಾರಣದಿಂದ ಕೆಲ ಬಾರಿ ಅನಗತ್ಯವಾಗಿ ಸಿಟ್ಟು ತೋರುತ್ತಾರೆ. ಎಲ್ಲಿ ಕೋಪ ಮಾಡಬಾರದೋ ಅಲ್ಲೇ ತೋರಿದರೆ ಅದರಿಂದ ಭವಿಷ್ಯದಲ್ಲಿ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇವೆ. ಈ ವರ್ಷ ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲೇ ಬೇಕು.

ಮನೆಯಲ್ಲಿ ಪ್ರೀತಿ-ಪ್ರೇಮದ ವಿಚಾರ ತಿಳಿಸಬಹುದು
ಇನ್ನು ವಿವಾಹಕ್ಕೆ ಪ್ರಯತ್ನಿಸುತ್ತಿರುವವರು ಇನ್ನಷ್ಟು ಗಟ್ಟಿಯಾಗಿ ಪ್ರಯತ್ನಿಸಿ. ಪ್ರೀತಿ-ಪ್ರೇಮದಲ್ಲಿ ಇರುವವರು ತಮ್ಮ ಮನೆಯಲ್ಲಿ ಮದುವೆ ಪ್ರಸ್ತಾವ ಮಾಡಬೇಕು ಅಂತಿದ್ದರೆ ಇದು ಸರಿಯಾದ ಅವಕಾಶ ಹಾಗೂ ಸಮಯ. ಒಂದಿಷ್ಟು ವಿರೋಧ ತೋರಿದರೂ ಅವರನ್ನು ಮನ ಒಲಿಸುವುದು ನಿಮಗೆ ಕಷ್ಟ ಆಗುವುದಿಲ್ಲ.

ವಿದೇಶ ಪ್ರಯಾಣ ಯೋಗ ಇದೆ
ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳ ಕೃಪಾ ದೃಷ್ಟಿ ಬಿದ್ದು ವಿದೇಶದ ಪ್ರಾಜೆಕ್ಟ್ ವೊಂದು ಸಿಗುವ ಅವಕಾಶ ಇದೆ. ಆದರೆ ಯಾವುದೇ ಯಶಸ್ಸನ್ನು ತಲೆಗೆ ತೆಗೆದುಕೊಳ್ಳಬೇಡಿ. ಹಿತ ಶತ್ರುಗಳಿಂದ ಎಚ್ಚರವಿರಲಿ. ಕೆಲ ಬಾರಿ ತಮಾಷೆಗೆ ಆಡಿದ ಮಾತನ್ನು ಸ್ನೇಹಿತರೇ ಮನಸ್ಸಿಗೆ ತೆಗೆದುಕೊಂಡು ನಿಮ್ಮ ವಿರುದ್ಧವೇ ಮಸಲತ್ತು ಮಾಡಬಹುದು. ಅಥವಾ ಸಣ್ಣ-ಪುಟ್ಟ ವಿಚಾರವನ್ನು ನೀವೇ ಗಂಭೀರವಾಗಿ ತೆಗೆದುಕೊಂಡು ಜಗಳ ತೆಗೆಯಬಹುದು. ನಿಮ್ಮ ಭ್ರಮೆಯಿಂದ ಸಂಬಂಧ-ಸ್ನೇಹ ಹಾಳು ಮಾಡಿಕೊಳ್ಳಬೇಡಿ.

ಸಾಂಸಾರಿಕ ನೆಮ್ಮದಿ
ಮೇಷ ರಾಶಿಯ ಹೆಣ್ಣುಮಕ್ಕಳು ಅದರಲ್ಲೂ ವಿವಾಹಿತೆಯರಿಗೆ ಸಾಂಸಾರಿಕ ವಿಚಾರದಲ್ಲಿ ನೆಮ್ಮದಿ, ಸಂತೋಷ ಇದೆ. ಪ್ರೀತಿಯಲ್ಲಿದ್ದು, ಮದುವೆ ಆಲೋಚನೆಯಲ್ಲಿರುವವರಿಗೆ ಶುಭ ಸಮಯ. ಆದರೆ ಜಾತಕ ಪರಿಶೀಲಿಸಿ, ನಿರ್ಧರಿಸುವುದು ಉತ್ತಮ. ಏಕೆಂದರೆ ಭಾವನಾತ್ಮಕವಾಗಿ ತೆಗೆದುಕೊಂಡ ನಿರ್ಧಾರ ಒಂದಿಡೀ ಜೀವನದ ಕಂದಾಯ ಬೇಡುತ್ತದೆ. ಅಥವಾ ಜೀವಾವಧಿ ಶಿಕ್ಷೆಯಂತಾಗುತ್ತದೆ.

ಲ್ಯಾಪ್ ಟಾಪ್, ಟ್ಯಾಬ್ಲೆಟ್ ಖರೀದಿಸಬಹುದು
ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಅಧ್ಯಯನಕ್ಕೆ ತೆರಳಲು ಪ್ರಶಸ್ತ ಕಾಲ. ದುಬಾರಿ ವಸ್ತುಗಳಾದ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಅಥವಾ ಬೈಕ್- ಸ್ಕೂಟರ್ ಖರೀದಿ ಮಾಡುವ ಸಾಧ್ಯತೆ ಗೋಚರಿಸುತ್ತಿದೆ. ಪೋಷಕರು ನಿಮ್ಮ ಸಲುವಾಗಿಯೇ ಆಸ್ತಿ ಖರೀದಿ ಮಾಡುವ ಅಥವಾ ಬ್ಯಾಂಕ್ ನಲ್ಲಿ ಎಫ್ ಡಿ ಇಡುತ್ತಾರೆ. ಆದರೆ ಅದರ ದುರುಪಯೋಗ ಮಾಡಿಕೊಳ್ಳಬೇಡಿ.

ಕೋರ್ಟ್ ತೀರ್ಪು ಪರವಾಗಿ ಬರಬಹುದು
ಇನ್ನು ಮನೆ ಕಟ್ಟಿಸುವ ಯೋಚನೆಯಿದ್ದರೆ ವರ್ಷದ ಆರಂಭದಲ್ಲೇ ಶೀಘ್ರವಾಗಿ ಆರಂಭಿಸಿ. ಕೋರ್ಟ್-ವ್ಯಾಜ್ಯಗಳ ಇರುವಂಥವರಿಗೆ ನಿಮ್ಮ ಪರವಾಗಿ ತೀರ್ಪು ಅಥವಾ ಸಂಧಾನ ಆಗಬಹುದು.

ರಾಹು-ಕೇತು ಶಾಂತಿ ಮಾಡಿಸಿ
ಕೈಗೆ ಸಿಕ್ಕಂತೆ ಇರುತ್ತದೆ ಆದರೆ ಕೆಲಸ ಆಗುತ್ತಿಲ್ಲ. ಉದ್ಯೋಗದಲ್ಲಿ ನನ್ನನ್ನೇ ಗುರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂಬ ಅನುಭವ ಆಗುತ್ತಿದೆ ಅಂದರೆ ಅಥವಾ ಆಗದಿದ್ದರೂ ರಾಹು-ಕೇತು ಶಾಂತಿ ಮಾಡಿಸಿಕೊಳ್ಳಿ, ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ. ಎಲ್ಲವೂ ಶುಭವಾಗಲಿ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications