ಯಾವ ರಾಶಿಯವರು ವಜ್ರ ಧರಿಸಬಹುದು..? ತಪ್ಪಿಯೂ ಈ ರಾಶಿಯವರು ಖರೀದಿಸಬೇಡಿ..!
ವಜ್ರ ಹರಳುಗಳ ಸಾಮ್ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ದುಬಾರಿ. ಬೇರೆ ಎಲ್ಲಾ ಲೋಹ ಹಾಗೂ ಹರಳುಗಳ ಪೈಕಿ ವಜ್ರ ವಿಶಿಷ್ಠವಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಮ್ ಯಾವುದೇ ಲೋಹದ ಜೊತೆ ವಜ್ರ ಸೇರಿದರೆ, ಆ ಆಭರಣದ ಮೌಲ್ಯವೇ ಬೇರೆಯಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರಿಗೆ ಆಭರಣಗಳ ಮೇಲೆ ಮೋಹ ಇದ್ದೇ ಇರುತ್ತದೆ. ಅದರಲ್ಲೂ ಡೈಮಂಡ್ ತುಂಬಾ ಇಷ್ಟವಿರುತ್ತದೆ.
ಜೀವನದಲ್ಲಿ ಒಮ್ಮೆಯಾದರೂ ವಜ್ರ ಧರಿಸಬೇಕು ಎನ್ನುವ ಬಯಕೆ ಬಹುತೇಕ ಮಹಿಳೆಯರಲ್ಲಿದ್ದರೆ, ಡೈಮಂಡ್ ರಿಂಗ್, ಡೈಮಂಡ್ ನೆಕ್ಲೇಸ್ ಕೊಡಿಸಿ ಹೆಂಡತಿ, ಪ್ರಿಯತಮೆಯನ್ನು ಮೆಚ್ಚಿಸಬೇಕು ಎನ್ನುವ ಆಸೆ ಪುರುಷರಲ್ಲೂ ಇರುತ್ತದೆ. ಆದರೆ ಸಾಮಾನ್ಯವಾಗಿ ವಜ್ರ ಖರೀದಿಸುವವರ ಸಂಖ್ಯೆ ಕಡಿಮೆ. ಬೆಲೆ ದುಬಾರಿ ಎನ್ನುವುದು ಮಾತ್ರವಲ್ಲ ಜೋತಿಷ್ಯದ ವಿಚಾರಕ್ಕೂ ವಜ್ರ ಖರೀದಿಸುವವರ ಸಂಖ್ಯೆ ಕಡಿಮೆ ಇರುತ್ತದೆ.

ಜ್ಯೋತಿಷ್ಯದ ಪ್ರಕಾರದ ವಜ್ರವು ಒಂದಿಷ್ಟು ರಾಶಿಗಳಿಗೆ ಸುಖ, ಶಾಂತಿ, ಸಂಪತ್ತು ಹಾಗೂ ಸಮೃದ್ಧಿಯ ಸಂಕೇತ. ರತ್ನಗಳ ರಾಜ ಎಂದು ಕರೆಸಿಕೊಳ್ಳವ ವಜ್ರವು ಒಂದಿಷ್ಟು ರಾಶಿಗಳಿಗೆ ಬಹು ಅಪಾಯಕಾರಿ. ಕೆಲವೊಂದು ರಾಶಿಚಕ್ರದ ಜನರು ವಜ್ರವನ್ನು ಖರೀಸುವುದು ಅಥವಾ ಧರಿಸುವುದನ್ನು ಮಾಡಿದರೆ ಜೊತೆಗೆ ಸೋಲನ್ನು ಕೊಂಡಂತೆ ಅರ್ಥ ಎಂದು ಹೇಳುತ್ತಾರೆ.
ಜ್ಯೋತಿಷ್ಯದ ಪ್ರಕಾರದ ವಜ್ರವು ಶುಕ್ರ ಗ್ರಹದ ಹರಳಾಗಿದೆ. ಜಾತಕದಲ್ಲಿ ಶುಕ್ರಗ್ರಹವು ದುರ್ಬಲಗೊಂಡರೆ ಅಂತವರಿಗೆ ವಜ್ರವು ಪ್ರಯೋಜನಕಾರಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಯಾರು ವಜ್ರವನ್ನು ಖರೀಸಬೇಕು..? ಯಾರು ಧರಿಸಬೇಕು..? ಯಾವ ರಾಶಿಗೆ ವಜ್ರ ಧರಿಸಿದರೆ ಅದೃಷ್ಟ..? ಯಾವ ರಾಶಿಗೆ ವಜ್ರ ಧರಿಸಿದರೆ ದುರಾದೃಷ್ಟ ಎನ್ನುವ ಮಾಹಿತಿ ಇಲ್ಲಿದೆ.
ಯಾವ ರಾಶಿಯವರು ವಜ್ರ ಧರಿಸಬಹುದು..? ಸಿಗುವ ಲಾಭವೇನು..?
ಶುಕ್ರನ ಹರಳಾದ ವಜ್ರವನ್ನು ಪ್ರಮುಖವಾಗಿ ಕನ್ಯಾ ರಾಶಿ ಹಾಗೂ ತುಲಾ ರಾಶಿಯವರು ಧರಿಸಬಹುದು. ಕನ್ಯಾ ಹಾಗೂ ತುಲಾ ರಾಶಿಗೆ ವಜ್ರವು ಅದೃಷ್ಟದ ಹರಳಾಗಿದೆ. ಈ ರಾಶಿಯವರು ವಜ್ರ ಧರಿಸಿದರೆ ಅದೃಷ್ಟ ಮತ್ತು ಸಮೃದ್ಧಿ ಅವರನ್ನು ಅರಸಿ ಬರುತ್ತದೆ. ಅಂದುಕೊಂಡ ಕಾರ್ಯಗಳು ನೆರವೇರುತ್ತದೆ ಜೊತೆಗೆ ಕೌಟುಂಬಿಕವಾಗಿಯೂ ನೆಮ್ಮದಿ ನೆಲೆಸಿರುತ್ತದೆ. ಹೀಗಾಗಿ ಕನ್ಯಾ ಹಾಗೂ ತುಲಾ ರಾಶಿಯವರು ವಜ್ರವನ್ನು ಧರಿಸಬಹುದು.
ಯಾವ ರಾಶಿಯವರು ವಜ್ರ ಧರಿಸಬಾರದು..?
ಜ್ಯೋತಿಷ್ಯದ ಪ್ರಕಾರದ ವೃಷಭ, ಮಿಥುನ, ಮಕರ ಹಾಗೂ ಕುಂಭ ರಾಶಿಯವರು ವಜ್ರವನ್ನು ಧರಿಸಬಹುದು. ಆದರೆ ಮೇಷ, ಕಟಕ, ಸಿಂಹ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರು ವಜ್ರದ ಹರಳನ್ನು ಧರಸಲೇಬಾರದು ಎನ್ನುವ ನಂಬಿಕೆ ಇದೆ. ಆದರೆ ಮಹಿಳೆಯರು ರಾಶಿಯನ್ನು ಆಧರಿಸಿ ಎಂದೂ ಆಭರಣಗಳನ್ನು ಧರಿಸಬಾರದು ಎನ್ನುವ ಮಾತು ಸಹ ಇದೆ.
ಇನ್ನು ವಜ್ರವನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ. ವಜ್ರ ಧರಿಸುವುದಿಂದ ದೇಹಕ್ಕೆ ತಂಪು ನೀಡಲಿದ್ದು, ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡುತ್ತದೆ. ಜೊತೆಗೆ ಆತಂಕದಂತ ಮಾನಸಿಕ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಆಸ್ತಮಾ, ಮೂತ್ರನಾಳದ ಸಮಸ್ಯೆ, ತುಟಿಗಳು, ಚರ್ಮ, ಗಂಟಲು ಮತ್ತು ದವಡೆಗೆ ಬರುವ ಆರೋಗ್ಯ ಸಮಸ್ಯೆಗಳನ್ನು ವಜ್ರ ತಡೆಯುತ್ತದೆ. ಜೊತೆಗೆ ಕಣ್ಣುಗಳು, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಹಾಗೂ ಲೈಂಗಿಕ ಸಮಸ್ಯೆ ಕೂಡ ವಜ್ರ ಧರಿಸುವುದರಿಂದ ಕಡಿಮೆಯಾಗುತ್ತದೆ.












Click it and Unblock the Notifications