• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ವಿಜಯದ ಮಾಲೆ ಯಾರ ಕೊರಳಿಗೆ: ಖ್ಯಾತ ಜ್ಯೋತಿಷಿಯ ಭವಿಷ್ಯ

|

ಮುಂದಿನ ವರ್ಷ ನಡೆಯಲಿರುವ ಹೈವೋಲ್ಟೇಜ್ ಅಸೆಂಬ್ಲಿ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯವೂ ಒಂದು. ಕಳೆದ ಲೋಕಸಭಾ ಚುನಾವಣೆಯ ನಂತರ ಇಲ್ಲಿನ ರಾಜಕೀಯ ಚಿತ್ರಣವೇ ಬದಲಾಗಿರುವುದರಿಂದ, ಈ ರಾಜ್ಯದ ಚುನಾವಣಾ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.

ದಶಕಗಳ ಕಾಲ ರಾಜ್ಯವನ್ನು ಆಳಿದ್ದ ಎಡಪಕ್ಷಗಳು, ಕಳೆದ ಎರಡು ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೇ ಸೈಡಿಗೆ ಹೋಗಿವೆ. ನೆಲೆಯೇ ಇಲ್ಲದಂತಹ ಸ್ಥಿತಿಯಲ್ಲಿದ್ದ ಬಿಜೆಪಿ ಈಗ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

ನಿಗೂಢ ಮಹಿಳೆ ಬಾಬಾ ವಂಗಾ 2021ರ ಭವಿಷ್ಯ: ಇನ್ನಷ್ಟು ಭಯಾನಕ, ವಿನಾಶ

ಲೋಕಸಭಾ ಚುನಾವಣೆಯಲ್ಲಿ ಹದಿನೆಂಟು ಕ್ಷೇತ್ರವನ್ನು ಬಿಜೆಪಿ ಗೆದ್ದ ನಂತರ, ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ತನ್ನ ಎಲ್ಲಾ ತಂತ್ರಗಾರಿಕೆಯನ್ನು ಅಲ್ಲಿ ಈಗಾಗಲೇ ಪ್ರಯೋಗಿಸಲಾರಂಭಿಸಿದೆ.

ಮಲೆ ಮಹದೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದರೆ ವಿಶ್ವಕ್ಕೆ ವಿನಾಶದ ಮುನ್ಸೂಚನೆ!

ಮುಂದಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಗೆಲುವು ಸಿಗಲಿದೆ ಎನ್ನುವುದರ ಬಗ್ಗೆ ಉತ್ತರ ಭಾರತ ಮೂಲದ ಖ್ಯಾತ ಜ್ಯೋತಿಷಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದಿರುವ ಆಚಾರ್ಯ ಸಲೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಆಚಾರ್ಯ ಸಲೀಲ್ ಕುಮಾರ್

ಆಚಾರ್ಯ ಸಲೀಲ್ ಕುಮಾರ್

ಲೋಕಸಭಾ ಚುನಾವಣೆಗೂ ಮುನ್ನ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಲಿದೆ ಎಂದು ಹೇಳಿದ್ದೆ, ಹದಿನೆಂಟರಿಂದ ಇಪ್ಪತ್ತು ಕ್ಷೇತ್ರದಲ್ಲಿ ಬಿಜೆಪಿ ಜಯಿಸಲಿದೆ ಎಂದು ನಾನು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಈಗ, ಅಸೆಂಬ್ಲಿ ಚುನಾವಣೆಯ ಬಗ್ಗೆ ನಾನು ಹೇಳುವ ಭವಿಷ್ಯ ಅದು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆದರೆ ಮಾತ್ರ. ಬೇರೆ ತಿಂಗಳಲ್ಲಾದರೆ ಅದು ಬೇರೆ ಇರುತ್ತದೆ ಎಂದು ಆಚಾರ್ಯ ಸಲೀಲ್ ಹೇಳಿದ್ದಾರೆ.

ಶುಕ್ರನ ರಾಹುಮಹಾದಶ ಇರುವ ಸಮಯವದು

ಶುಕ್ರನ ರಾಹುಮಹಾದಶ ಇರುವ ಸಮಯವದು

ಏಪ್ರಿಲ್ ತಿಂಗಳಲ್ಲಿ ಇಡೀ ದೇಶದ ಪರಿಸ್ಥಿತಿ ಚೆನ್ನಾಗಿ ಇರುವುದಿಲ್ಲ, ಯುದ್ದದ ಕಾರ್ಮೋಡ ಇರುವ ಸಾಧ್ಯತೆಯಿದೆ. ಈ ವೇಳೆ, ಚುನಾವಣೆ ನಡೆಯುತ್ತದೆಯೇ ಎನ್ನುವುದಿಲ್ಲಿ ಪ್ರಶ್ನೆ. ಮಮತಾ ಬ್ಯಾನರ್ಜಿಯವರ ಕರಾರುವಕ್ಕಾದ ಜಾತಕ ನನ್ನ ಬಳಿಯಿಲ್ಲ. 01.01.1998ರಲ್ಲಿ ಟಿಎಂಸಿ ಪಕ್ಷ ಜನ್ಮತಾಳಿತು. ಏಪ್ರಿಲ್ ಅಥವಾ ಮೇ 2021ರಲ್ಲಿ ಚುನಾವಣೆ ನಡೆದರೆ ಆ ವೇಳೆ, ಶುಕ್ರನ ರಾಹುಮಹಾದಶ ಇರುವ ಸಮಯವದು - ಆಚಾರ್ಯ ಸಲೀಲ್.

ಕಳೆದ ಬಾರಿ ಮಮತಾ ಪ್ರಮಾಣವಚನ ಸ್ವೀಕರಿಸಿದಾಗ

ಕಳೆದ ಬಾರಿ ಮಮತಾ ಪ್ರಮಾಣವಚನ ಸ್ವೀಕರಿಸಿದಾಗ

ಮಮತಾ ಕಳೆದ ಬಾರಿ ಪ್ರಮಾಣವಚನ ಸ್ವೀಕರಿಸಿದಾಗ ಅವರಿಗೆ ಪ್ರಬಲ ರಾಜಯೋಗವಿತ್ತು. ಅಸೆಂಬ್ಲಿ ಚುನಾವಣೆ ನಡೆಯುವ ವೇಳೆ (ಏಪ್ರಿಲ್/ಮೇ) ಗುರುವು ಕುಂಭ ರಾಶಿಯಲ್ಲಿರುತ್ತಾನೆ, ಶನಿ ಆರನೇ ಮನೆ ಪ್ರವೇಶಿಸುತ್ತಾನೆ. ಹಾಗಾಗಿ, ಆ ವೇಳೆ ಅವರ ಕುಂಡಲಿಯಲ್ಲಿ ಸಾಡೇ ಸಾತಿ ಸ್ಥಿತಿ ಇರಲಿದೆ. ಹಾಗಾಗಿ, ಚುನಾವಣೆಯಲ್ಲಿ ಬಿಜೆಪಿಯ ಸ್ಥಿತಿ ಉತ್ತಮವಾಗಿರಲಿದೆ. ಆದರೂ, ಒಬ್ಬರೇ ಸರಕಾರ ರಚಿಸುವಷ್ಟು ಸೀಟು ಸಿಗುವ ಸಾಧ್ಯತೆ ಕಮ್ಮಿ - ಆಚಾರ್ಯ ಸಲೀಲ್.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆದರೆ ಬಿಜೆಪಿ ಡ್ರೈವರ್ ಸೀಟ್ ನಲ್ಲಿ

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆದರೆ ಬಿಜೆಪಿ ಡ್ರೈವರ್ ಸೀಟ್ ನಲ್ಲಿ

ಟಿಎಂಸಿ ಮತ್ತು ಮಮತಾ ಕುಂಡಲಿಯನ್ನು ನೋಡಿದಾಗ, ಆ ಪಕ್ಷಕ್ಕೆ ಮತ್ತೆ ಅಧಿಕಾರ ಸಿಗುವ ಸಾಧ್ಯತೆ ಕಮ್ಮಿ. ಮಮತಾ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಜೊತೆಗೆ, ಪಾರ್ಟಿಯಿಂದ ಸದಸ್ಯರು ಹೊರ ಹೋಗದಂತೆ ನೋಡಿಕೊಳ್ಳಬೇಕು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣೆ ನಡೆದರೆ ಬಿಜೆಪಿ ಡ್ರೈವರ್ ಸೀಟ್ ನಲ್ಲಿ ಇರಲಿದೆ - ಆಚಾರ್ಯ ಸಲೀಲ್

English summary
Which Party Having Advante In West Bengal Assembly Election 2021: Prediction By Acharya Salil Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X