ಕಳೆದ ವರ್ಷದ (2020) ಕೋಡಿಶ್ರೀಗಳ 'ಯುಗಾದಿ ಭವಿಷ್ಯ'ದ ಸತ್ಯಾಸತ್ಯತೆ
ಯುಗಾದಿ ಭವಿಷ್ಯ, ದಸರಾ ಭವಿಷ್ಯ ಎಂದಾಗ ಆಸ್ತಿಕ ಜನರು ಕುತೂಹಲದಿಂದ ಕಾಯುವುದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿಯುವ ಭವಿಷ್ಯದ ಕಡೆಗೆ.
ಕೋಡಿಶ್ರೀಗಳ ಭವಿಷ್ಯ ಎಷ್ಟು ಜನಪ್ರಿಯ ಎಂದರೆ, ಒಮ್ಮೆ ಚುನಾವಣೆಯ ಸಂದರ್ಭದಲ್ಲಿ ಭವಿಷ್ಯ ನುಡಿದರು ಎನ್ನುವ ಕಾರಣಕ್ಕಾಗಿ ಚುನಾವಣಾ ಆಯೋಗ ಇವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು.
ಕಳೆದ ಯುಗಾದಿಯ ಅಂದರೆ ಶಾರ್ವರಿ ನಾಮ ಸಂವತ್ಸರದ ಭವಿಷ್ಯವನ್ನು ಕೋಡಿಶ್ರೀಗಳು ನುಡಿದಿದ್ದರು. ಶಾರ್ವರಿ ಯಿಂದ ಪ್ಲವನಾಮ ಸಂವತ್ಸರದ ವರೆಗಿನ ಭವಿಷ್ಯ ಅದಾಗಿತ್ತು. ಕೊರೊನಾ ಹಾವಳಿಯ ನಡುವೆ ಕೋಡಿಶ್ರೀಗಳು ನುಡಿದಿದ್ದ ಭವಿಷ್ಯದಲ್ಲಿ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಶ್ರೀಗಳು ನುಡಿದಿದ್ದರು.
ಹಾಗಾದರೆ, ಕಳೆದ ಯುಗಾದಿಯ ವೇಳೆ, ಕೊರೊನಾ, ಪಾಕೃತಿಕ ವಿಕೋಪ ಮುಂತಾದ ವಿಚಾರಗಳಲ್ಲಿ ಕೋಡಿಶ್ರೀಗಳು ನುಡಿದಿದ್ದ ಭವಿಷ್ಯವಾದರೂ ಏನು ಎನ್ನುವುದನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ
''ಜಗತ್ತಿನಾದ್ಯಂತ ಕೊರೊನಾ ವ್ಯಾಧಿ ಇನ್ನೂ ಉಲ್ಬಣವಾಗುವ ಲಕ್ಷಣವಿದೆ. ಈ ವ್ಯಾಧಿ ದಿನೇ ದಿನೇ ಹೆಚ್ಚುತ್ತಾ ಮನುಷ್ಯರ ಪ್ರಾಣದ ಜೊತೆ ತಾಂಡವವಾಡುತ್ತೆ. ಗಿಡ, ಮರ, ಪ್ರಾಣಿಗಳಿಗೂ ಈ ವ್ಯಾಧಿ ಘೋರವಾಗಿ ಅಪ್ಪಳಿಸಲಿದೆ. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಆದರೆ, ಕೊರೊನಾ ತೀವ್ರವಾಗಿ ಹರಿದಾಡುತ್ತಿದ್ದರೂ, ಒಂದು ದೇಶ ನಾಶವಾದ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಭಾರತ ಧರ್ಮ ಭೂಮಿಯಾಗಿದ್ದು, ದೇಶಕ್ಕೆ ಅಪಾಯವಿಲ್ಲ
''ಭಾರತ ಧರ್ಮ ಭೂಮಿಯಾಗಿದ್ದು, ಈ ವ್ಯಾಧಿ ಜಗತ್ತಿಗೆ ಮುತ್ತಿಗೆ ಹಾಕಿ ಕೊಲ್ಲುತ್ತಾ ಹೋದರೂ, ಭಾರತ ದೇಶಕ್ಕೆ ಅಪಾಯವಿಲ್ಲ. ಭಾರತೀಯರು ಹೆದರಬೇಕಾಗಿಲ್ಲ. ಅವರವರ ಇಷ್ಟ ದೇವರ ಪ್ರಾರ್ಥನೆ ಸಲ್ಲಿಸಬೇಕು. ಭಾರತದಲ್ಲಿ ಈ ವೈರಾಣು ಎಷ್ಟೇ ಎತ್ತರಕ್ಕೆ ಹೋದರೂ, ಈ ಭೂಮಿಯ ಪುಣ್ಯ ಫಲದಿಂದ ತನ್ನನ್ನು ತಾನೇ ಕಳೆದುಕೊಳ್ಳುತ್ತೆ'' ಅಂತ ಕೋಡಿಶ್ರೀಗಳು ಹೇಳಿದ್ದರು. ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರವಾಗಿ ಹರಿದಾಡುತ್ತಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಿನವೊಂದಕ್ಕೆ ವರದಿಯಾಗುತ್ತಿದೆ. ಇದುವರೆಗೆ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 1,73,123ಕ್ಕೇರಿದೆ.

ಹೊಸ ಶಾಸನ ಬರುವ ನಿರೀಕ್ಷೆಯಿದೆ, ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು
''ಹೊಸ ಶಾಸನ ಬರುವ ನಿರೀಕ್ಷೆಯಿದೆ. ಬರುವ ಶಾಸನಗಳನ್ನು ಅರಸ ಅರಿತು ಮಾಡಿದರೆ ಒಳಿತು. ಅತೃಪ್ತ ಪ್ರಜೆಗಳು ಅರಸನ ವಿರುದ್ಧ ದಂಗೆ ಏಳಬಹುದು. ಅರಸು ಪಟ್ಟಕ್ಕೂ ಭಂಗವಾಗುವ ಲಕ್ಷಣವಿದೆ. ಶಾಸನಗಳು ಮಾರಕ, ಪೂರಕವಾಗಲಿವೆ'' ಎನ್ನುವ ಭವಿಷ್ಯ ಶ್ರೀಗಳಿಂದ ಬಂದಿತ್ತು. ಆದರೆ, ಅಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ
''ಈ ಸಂವತ್ಸರ ಪರ್ಯಂತ ರೋಗ ಇರಲಿದ್ದು, ಜಗತ್ತಿಗೆ ಪೀಡೆಯಾಗಲಿದೆ. ಈ ರೋಗದಿಂದ ಅನೇಕ ಅರಸರು ನಿಯಂತ್ರಣ ಮಾಡಲಾಗದೆ, ಪ್ರಜೆಗಳ ನಿಯಂತ್ರಣ ಮಾಡಲಾಗದೆ ಪಟ್ಟ ಕಳೆದುಕೊಳ್ಳುವ ಲಕ್ಷಣವಿದೆ. ಈ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರಜೆಗಳು ಅವಶ್ಯಕವಾಗಿ ಹೊಂದಿಕೊಂಡು, ಸರ್ಕಾರದ ಜೊತೆ ಕೈಜೋಡಿಸಬೇಕು. ಇಲ್ಲವಾದರೆ ಸಾವಿಗೆ ತಾವೇ ಆಹ್ವಾನ ಕೊಟ್ಟಂತೆ ಆಗುತ್ತದೆ''ಎನ್ನುವ ಕೋಡಿಶ್ರೀಗಳ ಭವಿಷ್ಯ ನಿಜವಾಗಿದೆ (ಪಟ್ಟ ಕಳೆದುಕೊಳ್ಳುವ ವಿಚಾರ ಹೊರತು ಪಡಿಸಿ).
Recommended Video

ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು
''ಮಳೆ ವಿಚಾರದಲ್ಲಿ ಭೂಮಿಯೆಲ್ಲ ಒದ್ದೆಯಾದೀತು. ಕೆಲವೆಡೆ ವೃಷ್ಟಿ ಅನಾವೃಷ್ಟಿ ಆಗಲಿದೆ. ಪಂಚಭೂತಗಳಿಂದಲೂ ಈ ಬಾರಿ ತೊಂದರೆಯಾಗಲಿದೆ. ಭೂಮಿ ಕಂಪನವಾಗಿ ಇಬ್ಭಾಗವಾಗಲಿದೆ. ಮಳೆ ಬೆಳೆ ಬಂದು ಹೆಚ್ಚು ಫಸಲು ಬಂದರೂ, ಅದಕ್ಕೆ ರೋಗ ಕಾಡಲಿದೆ. ಕೆಲವು ನದಿಗಳು ಉಕ್ಕಿ ಹರಿದರೆ ಕೆಲವು ನದಿಗಳು ಬರಡಾಗುತ್ತವೆ. ಬಹುಪಾಲು ಜಲಪ್ರಳಯವಾಗುವ ಲಕ್ಷಣವಿದೆ'' ಎನ್ನುವ ಶ್ರೀಗಳ ಭವಿಷ್ಯವೂ ನಿಜವಾಗಿತ್ತು. ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿ ಅಪಾರ ಪ್ರಮಾಣದ ಹಾನಿಯಾಗಿತ್ತು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications