ತಾವರೆಯಿಂದ ತುಲಾಭಾರ ಮಾಡುವುದರ ಹಿಂದಿರುವ ಉದ್ದೇಶವೇನು?
ಕೇರಳದ ತ್ರಿಶೂರ್ ನ ಗುರುವಾಯೂರ್ ದೇವಾಲಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತುಲಾಭಾರ ಮಾಡಿಸಿದ್ದು ಇಂದಿನ ವಿಶೇಷ ಸುದ್ದಿ.
ಸಾಮಾನ್ಯವಾಗಿ ತುಲಾಭಾರವನ್ನು ಸಕ್ಕರೆ, ಬೆಲ್ಲ ಮುಂತಾದವುಗಳಿಂದ ಮಾಡುವುದು ವಾಡಿಕೆ. ಆದರೆ ಪ್ರಧಾನಿ ಮೋದಿ ಅವರು 'ತಾವರೆ'ಯಿಂದ ತುಲಾಭಾರ ಮಾಡಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರಧಾನಿಯಾಗಿ ಆಯ್ಕೆಯಾದ ನಂತರ ಮೊದಲಬಾರಿಗೆ ಕೇರಳಕ್ಕೆ ಆಗಮಿಸಿದ್ದ ಮೋದಿ, 'ತಾವರೆ'ಯಲ್ಲಿ ತುಲಾಭಾರ ಮಾಡಿಸಿದ್ದು, ಬಿಜೆಪಿ ಪಕ್ಷದ ಚಿನ್ಹೆಯೂ ತಾವರೆ ಎಂಬ ಕಾರಣಕ್ಕೇ ಎಂಬ ಸಂದೇಹಕ್ಕೆ ಉತ್ತರವನ್ನು ಪ್ರಸಿದ್ಧ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ನೀಡಿದ್ದಾರೆ.
ಬಿಜೆಪಿ ಚಿನ್ಹೆಯೂ ಕಮಲ ಎಂಬುದು ಕಾಕತಾಳೀಯ ಇರಬಹುದು. ಆದರೆ ತಾವರೆಯ ತುಲಾಭಾರಕ್ಕೆ ಬೇರೆಯದೇ ಕಾರಣವಿದೆ ಎಂದು ಅವರು ಹೇಳಿದ್ದಾರೆ. ಅವರು ನೀಡಿದ ವಿವರಣೆ ಹೀಗಿದೆ:

"ತುಲಾಭಾರದಲ್ಲಿ ಹಲವು ವಿಧಾನಗಳಿವೆ ಸಕ್ಕರೆಯಲ್ಲೂ ಮಾಡಬಹುದು, ಬೆಲ್ಲದಲ್ಲೂ ಮಾಡಬಹುದು... ಆದರೆ ನರೇಂದ್ರ ಮೋದಿ ಅವರು ತಾವರೆಯಲ್ಲಿ ಮಾಡಿದಿದ್ದಾರೆ. ಅವರ ಪಕ್ಷದ ಚಿನ್ಹೆಯೂ ಅದೇ ಆಗಿರುವುದರಿಂದ ಅವರು ಅದೇ ಕಾರಣಕ್ಕೆ ತಾವರೆಯಿಂದ ತುಲಾಭಾರ ಮಾಡಿಸಿಕೊಂದಿದ್ದಾರೆ ಅನ್ನಿಸಬಹುದು. ಆದರೆ ತಾವರೆಯಿಂದ ತುಲಾಭಾರ ಮಾಡಿಸಿಕೊಳ್ಳುವುದಕ್ಕೆ ಕಾರಣವಿದೆ."
"ತಾವರೆಯನ್ನು ಸಹಸ್ರಾರು ದಳದ ಪುಷ್ಪ ಎನ್ನಲಾಗುತ್ತದೆ. ಈ ಸಹಸ್ರಾರು ದಳಗಳ ಮೂಲಕ ದೇವರ ಸಾನ್ನಿಧ್ಯ ಪಡೆವ ಉದ್ದೇಶ ಇದರಲ್ಲಿದೆ. ಅದರಲ್ಲೂ ಗುರುವಾಯೂರ್ ವಿಷ್ಣು ಸಂಬಂಧವಾದ ದೇವಸ್ಥಾನವಾದ್ದರಿಂದ ಈ ತುಲಾಭಾರ ಮತ್ತಷ್ಟು ಶ್ರೇಷ್ಠ."
"ಭೂಮಿಗೆ ಆಪತ್ತು ಬಂದಾಗ ಭೂ ವರಾಹ ದೇವರು ಭೂಮಿಯನ್ನು ರಕ್ಷಸುತ್ತಾರೆ. ಯಜ್ಞ ಯಾಗಗಳಲ್ಲೂ ಸಾವಿರ ದಳದ ಆಹುತಿ ಕೊಡಲಾಗುತ್ತದೆ. ಇದರಿಂದ ಭೂವರಾಹ ದೇವರು ಸಂತ್ರಪ್ತರಾದರೆ ಭೂಪತಿತ್ವವನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇದೆ. ಭೂಪತಿತ್ವ ಎಂದರೆ ವ್ಯಕ್ತಿಗಲ್ಲ, ಬದಲಾಗಿ ಈ ದೇಶಕ್ಕೆ. ದೇಶ ಬೇರೆ ಬೇರೆ ಭಾಗಗಳಾಗಿ ಹರಿದುಹೋಗದಂತೆ ಕಾಪಾಡುವುದು ಭೂಪತಿತ್ವ. ಆದ್ದರಿಂದ ತಾವರೆಯ ತುಲಾಭಾರಕ್ಕೆ ಸಾಕಷ್ಟು ಅರ್ಥವಿದೆ. ಅದನ್ನು ಇದನ್ನು ತಪ್ಪಾಗಿ ಅರ್ಥ್ಯಸಬೇಕಿಲ್ಲ. "












Click it and Unblock the Notifications