Weekly Horoscope: ನಾಳೆಯಿಂದ ಈ ರಾಶಿಗಳ ಅವಿವಾಹಿತರಿಗೆ ಕೂಡಿ ಬರಲಿದೆ ಕಂಕಣ ಭಾಗ್ಯ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವರ್ಷ ಋತು ಭಾದ್ರಪದ ಮಾಸದ ಬಹುಳ ಪಂಚಮಿಯಿಂದ ದ್ವಾದಶಿಯವರೆಗೆ

ಈ ವಾರದ ಚಂದ್ರನ ಸಂಚಾರ ಕೃತ್ತಿಕಾ ನಕ್ಷತ್ರದಿಂದ ಮಖಾದ ವರೆಗೆ

22/09/2024-28/09/2024ರ ವಾರ ಭವಿಷ್ಯ

Weekly Horoscope In Kannada From September 22 To September 28 2024

ಮೇಷ ರಾಶಿಯ ವಾರ ಭವಿಷ್ಯ

ಎರಡನೇ ಮನೆಯಲ್ಲಿ ಗುರು, ಹನ್ನೊಂದನೇ ಮನೆಯಲ್ಲಿ ಶನಿ, ಏಳನೇ ಮನೆಯಲ್ಲಿ ಶುಕ್ರ ಆರನೇ ಮನೆಯಲ್ಲಿ ಸೂರ್ಯ ಕೇತು ಬುಧ. ಸಮಯ ತುಂಬಾ ಚೆನ್ನಾಗಿದೆ.‌ ಹೊಸ ನೌಕರಿ‌ಸಿಗುವ ಸಮಯ. ನೌಕರಿಯಲ್ಲಿ ಬಡ್ತಿ ಉನ್ನತ ಸ್ಥಾನಮಾನ ಸಿಗುವ ಸಮಯ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.‌ ವ್ಯಯಸ್ಥಾನದಲ್ಲಿ ರಾಹು‌ ಇರುವುದು ಕೊಂಚ ಖರ್ಚು ಮಾಡಿಸುತ್ತದೆ.‌ ಆದರೆ ಕೇತು ಹಾಗೂ ಶನಿ ‌ನಿಮಗೆ ಧನಲಾಭವನ್ನು ಹೆಚ್ಚು ಮಾಡುತ್ತಾರೆ.

Weekly Horoscope In Kannada From September 22 To September 28 2024

ವೃಷಭ ರಾಶಿಯ ವಾರ ಭವಿಷ್ಯ

ನೀವು ಇದ್ದಿದರಲ್ಲೇ ತೃಪ್ತಿ ಪಡುವಂಥವರು. ಹಾಗಾಗಿ ಯಾವುದೇ ಅತಿಯಾಸೆಗೆ ಹೋಗುವವರಲ್ಲ. ಲಾಭ ಸ್ಥಾನದ ರಾಹು ಹಣದ ಹರಿವನ್ನು ಸರಾಗ ಮಾಡುತ್ತಾನೆ. ಐದನೇ ಮನೆಯಲ್ಲಿ ಬುಧ ಸೂರ್ಯ ಇರುವುದು ವಿದ್ಯಾರ್ಥಿಗಳಿಗೆ ಶುಭ. ಮನೆಯಲ್ಲಿ ಮಂಗಳಕಾರ್ಯಗಳು ನಡೆಯುವ ಸಮಯ. ಒತ್ತಡಗಳಿದ್ದರೂ ನಿಭಾಯಿಸಿ ಕೊಳ್ಳಬಲ್ಲಿರಿ.

Weekly Horoscope In Kannada From September 22 To September 28 2024

ಮಿಥುನ ರಾಶಿಯ ವಾರ ಭವಿಷ್ಯ

ನಿಮ್ಮ ರಾಶಿಯಲ್ಲೇ ಮಂಗಳ‌ ಇದ್ದಾನೆ. ಉಷ್ಣ ಸಂಬಂಧಿ ತೊಂದರೆಗಳು ಆಗಬಹುದು. ಐದನೇ ಮನೆಯಲ್ಲಿ ಶುಕ್ರ ನಾಲ್ಕನೇ ಮನೆಯಲ್ಲಿ ಬುಧ ಇಬ್ಬರೂ ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾರೆ. ವಾಹನದಿಂದ ಲಾಭ ಇದೆ. ಅಲಂಕಾರದ ವಸ್ತುಗಳಿಂದ ಲಾಭ ಇದೆ. ಆದರೂ ಕುಟುಂಬ ಸೌಖ್ಯದಲ್ಲಿ ಅಡಚಣೆ ಇದೆ. ಮನೆಯಲ್ಲಿ ನಾನಾ ಕಾರಣಗಳಿಂದ ವಾದಗಳು ವಾಗ್ಯುದ್ಧಗಳು ನಡೆದು ಮನಸ್ಸಿನ ಶಾಂತಿ ಹಾರಿಹೋಗುತ್ತದೆ.

Weekly Horoscope In Kannada From September 22 To September 28 2024

ಕಟಕ ರಾಶಿಯ ವಾರ ಭವಿಷ್ಯ

ಗುರು ಲಾಭಸ್ಥಾನದಲ್ಲಿ, ಕೇತು ಸೂರ್ಯ ಬುಧ ಮೂರನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳಿ. ಅಷ್ಟಮಶನಿಯ ಪ್ರಭಾವದಿಂದ ಸ್ವಲ್ಪ ಕಹಿ ಅನುಭವಗಳಾದರೂ ಗುರುಬಲದಿಂದ ಅವುಗಳನ್ನು ದಾಟಿ ಮುಂದುವರೆಯಿವಿರಿ. ಹಣದ ಹರಿವು ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ.

Weekly Horoscope In Kannada From September 22 To September 28 2024

ಸಿಂಹ ರಾಶಿಯ ವಾರ ಭವಿಷ್ಯ

ಒತ್ತಡಗಳು ಇರುತ್ತವೆ. ಸಮಾಧಾನದಿಂದ ಎದುರಿಸಿ. ಹಣಕಾಸಿಗೆ ಅಡಚಣೆಗಳಾಗುತ್ತದೆ. ಹಣದ ಹರಿವು ಉತ್ತಮವಾಗಿದ್ದರೂ ಎಷ್ಟು ಬಂದರೂ ಸಾಲದು ಎಂಬ ಪರಿಸ್ಥಿತಿ. ಕೋಪತಾಪಗಳು ಹೆಚ್ಚು ಇರುತ್ತದೆ. ಸಹನೆ ಶಾಂತಿ‌ ಬಹಳ‌ ಮುಖ್ಯ. ಬೇರೆಯವರ ಭಾವನೆಗಳಿಗೂ ಬೆಲೆ ಕೊಡಿ. ನಿಮ್ಮ ಅಭಿಪ್ರಾಯವನ್ನು ಹೇರಬೇಡಿ.‌ ಎರಡನೇ ಮನೆಯಲ್ಲಿ ಬುಧ ಉಚ್ಚನಾಗಿ ಇರುವುದರಿಂದ ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

Weekly Horoscope In Kannada From September 22 To September 28 2024

ಕನ್ಯಾ ರಾಶಿಯ ವಾರ ಭವಿಷ್ಯ

ಈಗ ನಿಮ್ಮ ಸಮಯ ಬಹಳ ಅನುಕೂಲವಾಗಿದೆ. ಹಣದ ಹರಿವು ಉತ್ತಮವಾಗಿದೆ. ವ್ಯಾಪಾರ ವ್ಯವಹಾರದ ಸಿಕ್ಕುಗಳು ಬಿಡಿಸಿಕೊಂಡು ಸರಾಗವಾಗುತ್ತದೆ. ನಿಮ್ಮ ರಾಶಿಯಲ್ಲೇ ಬುಧ ಇದ್ದಾನೆ ಇದು ನಿಮಗೆ ಅಪರಿಮಿತ ಬಲ ಕೊಡುತ್ತದೆ. ಆರನೇ ಮನೆಯಲ್ಲಿ ಶನಿ ಹಾಗೂ ಒಂಬತ್ತನೇ ಮನೆಯಲ್ಲಿ ಗುರು ನಿಮಗೆ ಯಶಸ್ಸನ್ನು ಅಭಿವೃದ್ಧಿಯನ್ನು ಸಹ ಕೊಡುತ್ತಾರೆ.

Weekly Horoscope In Kannada From September 22 To September 28 2024

ತುಲಾ ರಾಶಿಯ ವಾರ ಭವಿಷ್ಯ

ಸ್ವಲ್ಪ ಕಷ್ಟಕಾಲ. ಎಲ್ಲಾ ಕಡೆ ವಿರೋಧ.‌ ನಿಮ್ಮ ನಡವಳಿಕೆ ಸರಿಯಿಲ್ಲವೋ ಅಥವಾ ನಿಮ್ಮ ಅಕ್ಕಪಕ್ಕದವರ ನಡವಳಿಕೆ ಸರಿ‌ ಇಲ್ಲವೋ, ಒಟ್ಟಾರೆ ನಿಮಗೆ ವಿರೋಧ ಭರ್ತ್ಸನೆ ಎದುರಿಸಬೇಕಾಗುತ್ತದೆ. ತಂದೆ-ತಾಯಿಯರಿಗೆ ಸಂಕಟಗಳು ಎದುರಾಗುತ್ತದೆ. ರಾಹು ಬಲ‌ ಇರುವುದರಿಂದ ಎದುರಿಸುವ ಶಕ್ತಿ‌ ಇದೆ. ಆದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ತಾಳ್ಮೆ ಸಹನೆ ಈಗ ನಿಮ್ಮ ಮಂತ್ರ ಆಗಬೇಕು. ದೇವರ ಧ್ಯಾನ ಎಷ್ಟು ಮಾಡಿದರೂ ಒಳ್ಳೆಯದು. ಶುಕ್ರ ನಿಮ್ಮ ರಾಶಿಯಲ್ಲೇ ಇರುವುದರಿಂದ ಕೊಂಚ ಕಾಪಾಡುತ್ತಾನೆ.

Weekly Horoscope In Kannada From September 22 To September 28 2024

ವೃಶ್ಚಿಕ ರಾಶಿಯ ವಾರ ಭವಿಷ್ಯ

ಗುರುಬಲ ಇದೆ ಆದರೂ ಎಲ್ಲವೂ ಸರಿಯಿದೆ ಎನ್ನಲು ಬರುವುದಿಲ್ಲ. ಸವಾಲುಗಳು ಇರುತ್ತದೆ. ನಾಲ್ಕನೇ ಮನೆಯ ಶನಿ ಹಾಗೂ ಐದನೇ ಮನೆಯ ರಾಹು ಕೊಂಚ ಹಿನ್ನಡೆಯನ್ನು ಕೊಡುತ್ತಾರೆ. ಮಕ್ಕಳಿಂದ ವಿರೋಧ ಮಕ್ಕಳಿಂದ ದೂರ ಇರುವುದು ಇಂಥ ಮನಸ್ಸಿಗೆ ಬೇಸರದ ಸಂಗತಿಗಳು‌ ನಡೆಯುತ್ತದೆ.‌ ತಾಳ್ಮೆ ಇರಲಿ. ಮುಂದಿನ ದಿನಗಳಲ್ಲಿ ಎಲ್ಲವೂ ತಂತಾನೇ ಸರಿಯಾಗುತ್ತದೆ. ಹನ್ನೊಂದನೇ ಮನೆಯಲ್ಲಿ ಸೂರ್ಯ ಕೇತು ಬುಧ ಇರುವು ಅಧಿಕ‌ಧನಲಾಭ ಸೂಚಿಸುತ್ತದೆ. ಸಂಗಾತಿಯೊಡನೆ ಸಂತಸದಿಂದ ಇರುತ್ತೀರಿ.

Weekly Horoscope In Kannada From September 22 To September 28 2024

ಧನಸ್ಸು ರಾಶಿಯ ವಾರ ಭವಿಷ್ಯ

ಈಗ ನಿಮಗೆ ಮಾನಸಿಕ ತಲ್ಲಣಗಳು ಎದುರಾಗುತ್ತದೆ. ನಿಮ್ಮ ಹತ್ತಿರದವರೇ ನಿಮ್ಮ ಮನಸ್ಸು ನೋಯಿಸಬಹುದು. ಆರೋಗ್ಯದಲ್ಲಿ ಎಚ್ಚರ ವಹಿಸಿ.‌ ಹಣಕಾಸಿಗೆ ತೊಂದರೆ ಇಲ್ಲವಾದರೂ ನೆಮ್ಮದಿಗೆ ಭಂಗ ಇದೆ. ತಾಯಿ ಅಥವಾ ತಾಯಿ ಸಮಾನರಿಂದ ವಿರೋಧ ಎದುರಿಸುವಿರಿ. ಯಾವುದನ್ನೂ ಸಹನೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಿ. ಬುಧ ಶುಕ್ರರ ಅನುಗ್ರಹ ಇದೆ.

Weekly Horoscope In Kannada From September 22 To September 28 2024

ಮಕರ ರಾಶಿಯ ವಾರ ಭವಿಷ್ಯ

ಬುಧ ಸೂರ್ಯ ಒಂಬತ್ತನೇ ಮನೆಯಲ್ಲಿ ಶುಕ್ರ ಹತ್ತನೇ ಮನೆಯಲ್ಲಿ, ಗುರು ಐದನೇ ಮನೆಯಲ್ಲಿ ರಾಹು ಮೂರನೇ ಮನೆಯಲ್ಲಿ ಸಮಯ ಬಹಳ ಚೆನ್ನಾಗಿದೆ. ನೀವು ಅಂದುಕೊಂಡದ್ದು ಸಾಧಿಸುವ ಸಮಯ. ಅರ್ಹರಿಗೆ ವಿವಾಹ ಪ್ರಾಪ್ತಿ ಇದೆ. ಹೊಸ ಯೋಜನೆಗಳು ಫಲ ಕೊಡುತ್ತದೆ. ಹೂಡಿಕೆಗಳಲ್ಲಿ ನಾಭ ಇದೆ. ಹೊಸ ನೌಕರಿ, ಅಧಿಕಾರ ಪದವಿ ಸಿಗುವ ಯೋಗ ಇದೆ.

Weekly Horoscope In Kannada From September 22 To September 28 2024

ಕುಂಭ ರಾಶಿಯ ವಾರ ಭವಿಷ್ಯ

ಎಂಟನೇ ಮನೆಯಲ್ಲಿ ಸೂರ್ಯ ಕೇತು ಇರುವುದು, ರಾಶಿಯಲ್ಲೇ ಶನಿ ಇರುವುದು, ನಾಲ್ಕನೇ ಮನೆಯಲ್ಲಿ ಗುರು ಇರುವುದು ಎರಡನೇ ಮನೆಯಲ್ಲಿ ರಾಹು ಇರುವುದು ಅಷ್ಟೇನೂ ಶುಭವಲ್ಲ. ಈಗ ನಿಮ್ಮ ಸಮಯ ಗಂಭೀರವಾಗಿಯೇ ಇದೆ. ಅಪವಾದಗಳು ಅವಮಾನಗಳು ಎದುರಿಸಬೇಕಾಗುತ್ತದೆ. ಹಣದ ಖರ್ಚು ಬಹಳ ಇರುತ್ತದೆ. ಸಹನೆಯಿಂದ ತಾಳ್ಮೆಯಿಂದ‌ ಇರಿ. ಧೈರ್ಯಗೆಡದೇ ವಿವೆಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.

Weekly Horoscope In Kannada From September 22 To September 28 2024

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ರಾಶಿಯಲ್ಲೇ ರಾಹು, ವ್ಯಯಸ್ಥಾನದಲ್ಲಿ ಶನಿ ಇರುವುದು ಅಷ್ಟೇನೂ ಶುಭಕರವಲ್ಲ. ಏಳನೇ ಮನೆಯಲ್ಲಿ ಬುಧ ಹಾಗೂ ಎಂಟನೇ ಮನೆಯಲ್ಲಿ ಶುಕ್ರ ಇರುವುದು ಕೊಂಚಮಟ್ಟಿಗೆ ರಿಲೀಫ್ ಕೊಡುತ್ತದೆ. ಆದರೂ ಯಾವುದಕ್ಕೂ ನೀವು ದುಡುಕಬೇಡಿ. ತಾಳ್ಮೆಯಿಂದ ವ್ಯವಹರಿಸಿ. ನಿಮ್ಮವರೇ ನಿಮಗೆ‌ ದ್ರೋಹ ಮಾಡುತ್ತಾರೆ ತಂದೆ ತಾಯಿಯ ಆರೋಗ್ಯದಲ್ಲಿ ಕಾಳಜಿ ವಹಿಸಿ.‌ ಮನೆ ದೇವರ ಧ್ಯಾನ‌ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+