Weekly Horoscope: ಮುಂದಿನ ವಾರ ಮಕರ ಸೇರಿದಂತೆ ಈ ರಾಶಿಗೆ ತುಂಬಲಿದೆ ಸಂಪತ್ತಿನ ಕಣಜ
ಕ್ರೋಧಿ ನಾಮ ಸಂವತ್ಸರ ದಕ್ಚಿಣಾಯನ ಶರದ್ ಋತು ಆಶ್ವಯುಜ ಮಾಸದ ಶುಕ್ಲ ಚೌತಿಯಿಂದ ದಶಮಿಯವರೆಗೆ.
ಅಂದರೆ 06.10.24 ರಿಂದ 13.10.24 ವರೆಗೆ
ಈ ವಾರದ ಚಂದ್ರನ ಸಂಚಾರ ವಿಶಾಖ ನಕ್ಷತ್ರದಿಂದ ಧನಿಷ್ಟವರೆಗೆ

ಮೇಷರಾಶಿ:
ಲಾಭಸ್ಥಾನದಲ್ಲಿ ಶನಿ ಇದ್ದಾನೆ, ಎರಡನೇ ಮನೆಯಲ್ಲಿ ಗುರು ಇದ್ದಾನೆ. ಏಳನೇ ಮನೆಯಲ್ಲಿ ಬುಧ ಶುಕ್ರ ಇದ್ದಾರೆ ಆರನೇ ಮನೆಯಲ್ಲಿ ಸೂರ್ಯ ಬುಧ ಇದ್ದಾನೆ. ಎಲ್ಲ ಗ್ರಹಗಳೂ ಅಚ್ಚುಕಟ್ಟಾದ ಜಾಗದಲ್ಲಿದೆ. ಏನಾದರೂ ಮಹತ್ತರ ಬದಲಾವಣೆ ಆಗುವ ಸಮಯ. ಈ ಬದಲಾವಣೆ ನಿಮಗೆ ಬಹಳ ಒಳ್ಳೆಯ ಫಲಗಳನ್ನು ಕೊಡುತ್ತದೆ.

ವೃಷಭರಾಶಿ:
ಐದನೇ ಮನೆಯಲ್ಲಿ ಸೂರ್ಯ ಕೇತು, ಆರನೇ ಮನೆಯಲ್ಲಿ ಶುಕ್ರ ಬುಧ ಎರಡನೇ ಮನೆಯಲ್ಕಿ ಕುಜ ಸಮಯ ಮಧ್ಯಮ ಆದರೆ ಆರನೇ ಮನೆಯಲ್ಲಿ ರಾಹು ಇರುವುದೇ ನಿಮಗೆ ಬಲ. ರಾಹುವಿನ ಬಲದಿಂದ ನೀವು ಏನೇ ಸಮಸ್ಯೆಗಳನ್ನು ಎದುರಿಸಲು ಬಹಳ ಶಕ್ತಿ ಕೊಡುತ್ತದೆ. ಮಾನಸಿಕ ಶಕ್ತಿ ವೃದ್ಧಿಯಾಗುತ್ತದೆ.

ಮಿಥುನರಾಶಿ:
ನಾಲ್ಕನೇ ಮನೆಯಲ್ಲಿ ಕೇತು ಸೂರ್ಯ ಒತ್ತಡಗಳನ್ನು ಕೊಡುತ್ತಾರೆ. ಒತ್ತಡ ಮಾಡಿಕೊಳ್ಳಬೇಡಿ. ಎಲ್ಲ ಸಮಸ್ಯೆಗಳಿಗೂಪರಿಹಾರ ಇರುತ್ತದೆ. ನಿಧಾನವಾಗಿ ಯೋಚಿಸಿ ಮುಂದುವರೆಯಿರಿ. ಐದನೇ ಮನೆಯಲ್ಲಿ ಬುಧ ಹಾಗೂ ಶುಕ್ರ ಲಾಭವನ್ನು ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ಶುಭವಿದೆ. ವೃತ್ತಿಯಲ್ಲಿ ಅಲೆದಾಟ ಟಾರ್ಗೆಟ್ ರೀಚ್ ಮಾಡುವ ಒತ್ತಡ ಇರುತ್ತದೆ. ಸಹನೆಯಿಂದ ನಿಭಾಯಿಸಿ.

ಕಟಕರಾಶಿ:
ಮೂರನೇ ಮನೆಯಲ್ಲಿ ಸೂರ್ಯ ಹಾಗೂ ಕೇತು ಅಪಾರ ಧೈರ್ಯವನ್ನೂ ಶಕ್ತಿಯನ್ನೂ ಕೊಡುತ್ತಾರೆ. ಮುನ್ನುಗ್ಗುವ. ಛಾತಿ ಹೆಚ್ಚಿಸುತ್ತಾರೆ. ಧನಲಾಭವನ್ನೂ ಕೊಡುತ್ತಾರೆ. ಒಂಬತ್ತನೇ ಮನೆಯ ಗುರು ಜೀವನ ಮಂಗಳಮಯವಾಗುವಂತೆ ಮಾಡುತ್ತಾನೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಕಾರ್ಯಕ್ಷೇತ್ರದಲ್ಲಿ ಇರುವ ಅಡೆತಡೆಗಳು ದೂರವಾಗುತ್ತದೆ.

ಸಿಂಹರಾಶಿ:
ಮೂರನೇ ಮನೆಯಲ್ಲಿ ಶುಕ್ರ ಹಾಗೂ ಬುಧ ಅತ್ಯಂತ ಶುಭಫಲಗಳನ್ನು ಕೊಡುತ್ತಾರೆ. ಎರಡನೇ ಮನೆಯಲ್ಲಿ ಸೂರ್ಯ ಕೇತು ಗೃಹಶಾಂತಿಗೆ ಭಂಗ ತರುತ್ತಾರೆ. ಏಳನೇ ಮನೆಯ ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುವುದರಿಂದ ಆರೋಗ್ಯ ಕೈಕೊಡಬಹುದು. ಜಾಗ್ರತೆಯಾಗಿ ಇರಿ. ಹಣಕಾಸಿನ ಖರ್ಚು ಬಹಳವಾಗಿ ಇರುತ್ತದೆ. ವೃತ್ತಿಯಲ್ಲಿ ಏರಿಳಿತ ಒತ್ತಡ ಇರುತ್ತದೆ. ಈಗ ನೀವು ಬಹಳ ಕಾಳಜಿಯಿಂದ ಮುನ್ನಡೆಯ ಬೇಕು. ಎಲ್ಲಕಡೆಯೂ ವಿರೋಧಗಳೇ ತುಂಬಿದೆ. ಗುರುಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ.

ಕನ್ಯಾರಾಶಿ:
ಶನಿ ಆರನೇ ಮನೆಯಲ್ಲಿ ಅಧಿಕಧನಲಾಭ ಕೊಡುತ್ತಾನೆ. ಒಂಬತ್ತನೇ ಮನೆಯ ಗುರುವಿನಿಂದ ಮನೆಯಲ್ಲಿ ಮಂಗಳಕಾರ್ಯಗಳು ನಡೆಯುತ್ತದೆ. ಮನಸ್ಸಿಗೆ ಉಲ್ಲಾಸ ಸಂತೋಷ ಕೊಡುವಂಥ ಘಟನೆಗಳು ನಡೆಯುತ್ತದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಅವಿವಾಹಿತರಿಗೆ ವಿವಾಹ ವಾಗುತ್ತದೆ. ಎರಡನೇ ಮನೆಯಲ್ಲಿ ಬುಧ ಶುಕ್ರ ಇದ್ದು ಕುಟುಂಬ ಸೌಖ್ಯ ಹೆಚ್ಚಿಸುತ್ತಾನೆ.

ತುಲಾರಾಶಿ:
ಈಗ ಗುರುಬಲ ಇಲ್ಲ. ಒಳ್ಳೆಯ ದಿನಗಳಿಗೆ ಕೆಲವುಕಾಲ ಕಾಯಬೇಕು. ಆದರೂ ನಿಮ್ಮ ರಾಶಿಯಲ್ಲೇ ಶುಕ್ರ ಮತ್ತು ಬುಧ ಇರುವುದರಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ. ಶುಭಸಂಗತಿಗಳನ್ನು ಅನುಭವಿಸುವ ಯೋಗ ಇದೆ. ಆರನೇ ಮನೆಯಲ್ಲಿ ರಾಹು ಇರುವುದು ಧನಲಾಭ ಹಾಗೂ ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಶುಭಸಮಯ ಹತ್ತಿರದಲ್ಲೇ ಇದೆ.

ವೃಶ್ಚಿಕ ರಾಶಿ:
ನಾಲ್ಕನೇ ಮನೆಯಲ್ಲಿ ಶನಿ ಕೊಂಚ ಒತ್ತಡಗಳನ್ನು ಕೊಡುತ್ತಾನೆ. ಆದರೆ ಏಳರಲ್ಲಿ ಗುರು ಇದ್ದು ನಿಮ್ಮ ಕೆಲಸಗಳನ್ನು ಸುಲಭವಾಗಿಸುತ್ತಾನೆ. ಹನ್ನೊಂದನೇ ಮನೆಯಲ್ಲಿ ಸೂರ್ಯ ಕೇತು ಸಹ ಧನಲಾಭ ಕೊಡುತ್ತಾರೆ. ಹನ್ನೆರಡನೆಯ ಮನೆಯಲ್ಲಿ ಶುಕ್ರ ಬುಧರು ಸುಖನಿದ್ರೆಯನ್ನೂ ನೆಮ್ಮದಿಯನ್ನೂ ಕೊಡುತ್ತಾರೆ.

ಧನಸ್ಸುರಾಶಿ:
ಆರನೇ ಮನೆಯ ಗುರು ನಿಮಗೆ ಹಿನ್ನಡೆ ಕೊಡುತ್ತಾನೆ ಮಾನಸಿಕ ವ್ಯಥೆ ಕಳವಳ ಇರುತ್ತದೆ. ಯಾವುದೋ ಭಯ ನಿಮ್ಮನ್ನು ಕಾಡಿಸುತ್ತದೆ. ಆದರೂ ಮೂರರ ಶನಿ, ಲಾಭಸ್ಥಾನದಲ್ಲಿ ಬುಧ ಶುಕ್ರರಿಂದ ಬಹಳ ಒಳ್ಳೆಯ ಫಲಗಳನ್ನು ಪಡೆಯುತ್ತೀರಿ. ಗೃಹಿಣಿ ಯರಿಗೆ ಶುಭಫಲಗಳಿವೆ. ವೃತ್ತಿಯಲ್ಲಿ ಏರಪೇರು ಇದೆ. ನಿಮ್ಮ ಟೀಂ ಲೀಡರ್ ಅಥವಾ ಮೇಲಧಿಕಾರಿಯನ್ನು ಎದುರು ಹಾಕಿಕೊಳ್ಳಬೇಡಿ.

ಮಕರರಾಶಿ:
ಹತ್ತನೇ ಮನೆಯಲ್ಲಿ ಬುಧ ಶುಕ್ರ ಇರುವುದು ಹಾಗೂ ಒಂಬತ್ತನೇ ಮನೆಯಲ್ಲಿ ಸೂರ್ಯ ಕೇತು ಇರುವುದು ಕೊಂಚ ಶುಭಫಲಗಳನ್ನು ಕೊಡುತ್ತಾರೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ನಿಮಗೆ ಐದನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ರಾಹು ಇರುವುದು ಬಹು ದೊಡ್ಡ ಶಕ್ತಿಯಾಗಿದೆ.ಹೊಸ ನೌಕರಿ ಸಿಗುವುದು, ಧನಲಾಭ, ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಎಲ್ಲವೂ ಇದೆ. ಸಾಡೆಸಾತಿ ಶನಿ ಯ ಕಡೆಯ ಹಂತದಲ್ಲಿ ಇದ್ದೀರಿ ಇನ್ನೆಲ್ಲ ನಿಮಗೆ ಒಳ್ಳೆಯ ಫಲಗಳೇ ಸಿಗುತ್ರದೆ.

ಕುಂಭರಾಶಿ:
ಈಗ ನಿಮಗೆ ಯಾವ ಗ್ರಹಗಳೂ ಬೆಂಬಲ ಕೊಡುತ್ತಿಲ್ಲ. ಅಧಿಕ ಹಣದ ಖರ್ಚು, ಅಪವಾದಗಳು, ಒತ್ತಡಗಳು ಇರುತ್ತದೆ. ವೃತ್ತಿಯಲ್ಲೂ ಟಾರ್ಗೆಟ್ ಮುಟ್ಟಲು ಪರದಾಟ ಇದೆ. ಹಣದ ಅಡಚಣೆ ಹಾಗೂ ಕುಟುಂಬದಲ್ಲಿ ಅಶಾಂತಿ ಇರುತ್ತದೆ. ನೀವು ಈಗ ಆದಷ್ಡು ಸಹನೆ ವಹಿಸಬೇಕು ಯಾರೊಂದಿಗೂ ಗೆರೆ ದಾಟಿ ಮಾತನಾಡಬಾರದು. ದತ್ತಾತ್ರೇಯ ಸ್ತೋತ್ರ ಪಠಿಸಿ. ಸುಬ್ರಹ್ಮಣ್ಯ ನಿಗೆ ಅಭಿಷೇಕ ಮಾಡಿಸಿ.

ಮೀನರಾಶಿ:
ಈಗ ನಿಮಗೆ ಸಾಡೆಸಾತಿ ಶನಿ ಯ ಒಂದನೇ ಪ್ರಭಾವದಲ್ಲಿ ಇದ್ದೀರಿ. ಖರ್ಚು ಬಹಳಇದೆ. ಇನ್ನೂ ಎರಡು ಹಂತಗಳನ್ನು ದಾಟಬೇಕು. ಸಂಯಮ ಬಹಳಮುಖ್ಯ. ಆರೋಗ್ಯ ಜೋಪಾನ. ನಿಮಗೆ ಎಲ್ಲ ವಿಷಯಗಳಲ್ಲೂ ವ್ಯತಿರಿಕ್ತ ಪರಿಣಾಮಗಳೇ ಆಗುತ್ತದೆ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಹನುಮಾನ್ ಚಾಲೀಸಾ ಪಠಿಸಿ.












Click it and Unblock the Notifications