Weekly Horoscope: ಈ ರಾಶಿಗಳಿಗೆ ಗಂಭೀರದ ಸಮಯ: ಮಾತು..ಹೆಜ್ಜೆಯಲ್ಲಿ ಅತೀ ಎಚ್ಚರ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಜ್ಯೇಷ್ಠ ಶುದ್ಧ ತದಿಗೆಯಿಂದ ದಶಮಿಯವರೆಗೆ.

ಈ ವಾರದ ಚಂದ್ರನ ಸಂಚಾರ ಪುನರ್ವಸು ನಕ್ಷತ್ರದಿಂದ ಹಸ್ತಾದವರೆಗೆ.

09/06/2024-15/06/2024ರ ವಾರ ಭವಿಷ್ಯ

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಕುತೂಹಲವಿರುತ್ತದೆ. ಜೂನ್‌ 09 ರಿಂದ ಜೂನ್‌ 15ರವರೆಗೆ ಹೊಸ ಯೋಜನೆಗಳು, ಶಿಕ್ಷಣ, ವಿದೇಶ ಪ್ರವಾಸ, ಹಣಕಾಸು, ಆಸ್ತಿ-ಅಂತಸ್ತು ವಿಚಾರದಲ್ಲಿ ಎಲ್ಲಾ 12 ರಾಶಿಗಳ ಭವಿಷ್ಯ ಹೇಗಿದೆ ಎನ್ನುವುದರ ಬಗ್ಗೆ ವಿಸ್ತಾರವಾಗಿ ತಿಳಿಯೋಣ.

ಮೇಷ ರಾಶಿಯ ವಾರ ಭವಿಷ್ಯ

ಮೇಷ ರಾಶಿಯ ವಾರ ಭವಿಷ್ಯ

ವಾರದ ಮೊದಲಲ್ಲಿ ಎರಡನೇ ಮನೆಯಲ್ಲಿ ಮೂರು ಗ್ರಹಗಳು ವಾರದ ಕೊನೆಯಲ್ಲಿ ಮೂರನೇ ಮನೆಯಲ್ಲಿ ಮೂರು ಗ್ರಹಗಳು ಎರಡೂ ನಿಮಗೆ ಶುಭಯೋಗ ತರುತ್ತದೆ.‌ ಧನಲಾಭ ಇದೆ. ಅಧಿಕಾರ ಲಾಭ ಯಶಸ್ಸು ಇದೆ. ಸೂರ್ಯ ಮೂರನೇ ಮನೆಗೆ ಪ್ರವೇಶವಾದನಂತರ ಇನ್ನೂ ಹೆಚ್ಚಿನ ಶುಭಫಲಗಳನ್ನು ಪಡೆಯುತ್ತೀರಿ.‌ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ.

 ವೃಷಭ ರಾಶಿಯ ವಾರ ಭವಿಷ್ಯ

ವೃಷಭ ರಾಶಿಯ ವಾರ ಭವಿಷ್ಯ

ವಾರದ ಕೊನೆಯಲ್ಲಿ ಎರಡನೇ ಮನೆಯಲ್ಲಿ ಮೂರು ಗ್ರಹಗಳು ಸೇರಿ ನಿಮ್ಮ ಹಣದ ಹರಿವನ್ನು ಉತ್ತಮಪಡಿಸುತ್ತದೆ. ಹನ್ನೊಂದನೆಯ ಮನೆಯಲ್ಲಿ ಇರುವ ರಾಹು ಕೂಡಾ ನಿಮ್ಮ ಧನಾಗಮನವನ್ನು ಹೆಚ್ಚಿಸುತ್ತಾನೆ. ಶುಭ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಗೃಹೋಪಯೋಗಿ ಉಪಕರಣಗಳಿಗಾಗಿ ಖರ್ಚು ಮಾಡುತ್ತೀರಿ.

 ಮಿಥುನ ರಾಶಿಯ ವಾರ ಭವಿಷ್ಯ

ಮಿಥುನ ರಾಶಿಯ ವಾರ ಭವಿಷ್ಯ

ಖರ್ಚು ವೆಚ್ಚಗಳು ಹೆಚ್ಚಾಗುವ ಸಂಭವ. ಗಂಡ ಹೆಂಡತಿ ಯರಲ್ಲಿ ಮೂಡುವ ವಿರಸ ವಿಕೋಪಕ್ಕೆ ಹೋಗಬಹುದು.‌ ಕೆಲವೊಮ್ಮೆ ವಿಚ್ಛೆದನದ ಹಾದಿ ಹಿಡಿಯಬಹುದು. ಪತಿ ಪತ್ನಿಯರಲ್ಲಿ ಜಗಳ ಕದನ ಇದ್ದರೆ ಜಾಗ್ರತೆಯಿಂದ ಇರಿ. ಭೂಮಿಯಿಂದ ಅಲ್ಪಮಟ್ಟದ ಲಾಭ ಇದೆ. ಜಾಗ ಬದಲಾವಣೆ ಸಂಭವ ಇದೆ.

 ಕಟಕ ರಾಶಿಯ ವಾರ ಭವಿಷ್ಯ

ಕಟಕ ರಾಶಿಯ ವಾರ ಭವಿಷ್ಯ

ಈಗ ಗುರುಬಲ ಇದ್ದರೂ ಅಷ್ಠಮ ಶನಿಯ ಪ್ರಭಾವದಿಂದ ಕಿರಿಕಿರಿ ಅನುಭವಿಸುತ್ತೀರಿ. ಗುರುಬಲ ಇರುವುದರಿಂದ ಸಂಕಟಗಳ ಪರಿಹಾರಕ್ಕೆ ದಾರಿ ಕಾಣುತ್ತದೆ. ಹಣದ ಹರಿವೂ ಉತ್ತಮವಾಗಿದೆ. ಬಡ್ತಿ, ವಿವಾಹಯೋಗ, ಉನ್ನತ ವ್ಯಾಸಂಗ ಎಲ್ಲಕ್ಕೂ ಅವಕಾಶ ಇದೆ. ಉನ್ನತ ಅಧಿಕಾರ ಪ್ರಾಪ್ತಿ‌ಇದೆ.

ಸಿಂಹ ರಾಶಿಯ ವಾರ ಭವಿಷ್ಯ

ಸಿಂಹ ರಾಶಿಯ ವಾರ ಭವಿಷ್ಯ

ಗುರು ಹತ್ತನೇ ಮನೆಯಲ್ಲಿ ಇರುವುದು ಕೊಂಚ ನಷ್ಟಕ್ಕೆ ಕಾರಣವಾದರೂ ವಾರದ ಕೊನೆಗೆ ಲಾಭಸ್ಥಾನಕ್ಕೆ ಬರುವ ಮೂರು ಗ್ರಹಗಳಿಂದ ಲಾಭ ಇದೆ. ಶನಿ ಏಳನೇ ಮನೆಯಲ್ಲಿ ಅಷ್ಡು ಶುಭಕಾರಕನಲ್ಲ. ನಿಮಗೆ ಕೋಪ ಸಿಡುಕು ಮೊದಲಾದ ನೆಗೆಟಿವ್ ಗುಣಗಳನ್ನು ಉದ್ದೀಪಿಸುತ್ತಾನೆ. ಅದಕ್ಕೆ ಬಲಿಯಾಗಬೇಡಿ. ವಿವೇಚನೆಯಿಂದ ಮುಂದುವರೆಯಿರಿ

 ಕನ್ಯಾ ರಾಶಿಯ ವಾರ ಭವಿಷ್ಯ

ಕನ್ಯಾ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಶನಿಯ ಬಲ ಗುರುವಿನ ಬಲ‌ ಎರಡೂ ಇದೆ. ರಾಜಕೀಯದವರಿಗೆ ದೊಡ್ಡ ಅಧಿಕಾರ ಸಿಗಬಹುದು.‌ ಧನಲಾಭ ಇದೆ. ಬಡ್ತಿ ಇದೆ. ವಿದೇಶ ಪ್ರಯಾಣ ಇದೆ. ಜೀವನದ ಸುಖ ಸಂತೋಷಗಳೆಲ್ಲ ಈಗ ಅನುಭವಿಸುವಿರಿ. ಆಸ್ತಿ ಪಾಸ್ತಿ ಖರೀದಿಸುವಿರಿ. ಕೋರ್ಟ್ ಕೇಸುಗಳಲ್ಲಿ ಜಯ ಲಭಿಸುತ್ತದೆ. ವಿಹಾರ ಯಾತ್ರೆಗಳನ್ನು ಮಾಡುವಿರಿ.

 ತುಲಾ ರಾಶಿಯ ವಾರ ಭವಿಷ್ಯ

ತುಲಾ ರಾಶಿಯ ವಾರ ಭವಿಷ್ಯ

ವಾರದ ಮೊದಲಲ್ಲಿ ಮೂರು ಗ್ರಹಗಳು ಎಂಟನೇ ಮನೆಯಲ್ಲಿ ಇದ್ದರೂ ವಾರದ ಕೊನೆಯಲ್ಲಿ ಒಂಬತ್ತನೇ ಮನೆಗೆ ಬಂದಾಗ ನಿಮಗೆ ಲಾಭ ಇದೆ. ಆರನೇ ಮನೆ ರಾಹು ಕೂಡ ಪರಾಕ್ರಮದಿಂದ ಯಶಸ್ಸು ಕೊಡುತ್ತಾನೆ. ‌ಧನಲಾಭ ಅಧಿಕಾರ ಲಾಭ ಇದೆ.‌ ರಾಜಕೀಯ ನಾಯಕರಿಗೆ ಈಗ ಪರ್ವಕಾಲ. ಒಳ್ಳೆಯ ಅವಕಾಶಗಳು ಈಗ ಒದಗಿ ಬರುತ್ತದೆ. ವಿದೇಶ ಪ್ರಯಾಣ ಯೋಗ ಇದೆ.

 ವೃಶ್ಚಿಕ ರಾಶಿಯ ವಾರ ಭವಿಷ್ಯ

ವೃಶ್ಚಿಕ ರಾಶಿಯ ವಾರ ಭವಿಷ್ಯ

ಎಲ್ಲಿ ನೋಡಿದರೂ ವಿಜಯವೇ ನಿಮಗೆ. ಎತ್ತ ತಿರುಗಿದರೂ ಗೆಲುವು. ರಾಜಕೀಯದವರಿಗೆ ಈಗ ಬಹಳ ಯೋಗ್ಯ ಸಮಯ. ಗುರು ಏಳನೇ ಮನೆಯಲ್ಲಿ ಇರುವುದು ನಿಮ್ಮ ಮರ್ಯಾದೆ ಗೌರವಗಳನ್ನು ಹೆಚ್ಚಿಸುತ್ತದೆ. ಜನ ನಿಮ್ಮ ಬಳಿ ಆಕರ್ಷಿತರಾಗಿ ಬರುತ್ತಾರೆ. ನಿಮ್ಮ‌ ಮಾತಿಗೆ ಬೆಲೆ ಇರುತ್ತದೆ. ಆಸ್ತಿ ಪಾಸ್ತಿ ಕೊಳ್ಳುವ ಮಾರುವ ಯೋಗ ಇದೆ. ಈ ವ್ಯವಹಾರದಲ್ಲಿ ಲಾಭವೂ‌ಇದೆ. ಕೋರ್ಟ್ ಕೇಸುಗಳಿದ್ದರೆ ನಿಮಗೆ ಜಯ ಸಿಗುತ್ತದೆ.‌

 ಧನಸ್ಸು ರಾಶಿಯ ವಾರ ಭವಿಷ್ಯ

ಧನಸ್ಸು ರಾಶಿಯ ವಾರ ಭವಿಷ್ಯ

ಶನಿ ಮೂರರಲ್ಲಿ ಗುರು ಆರರಲ್ಲಿ ಇದ್ದಾರೆ. ಶನಿ ಲಾಭ ಕೊಟ್ಟರೂ ಗುರು ಸ್ವಲ್ಪ ನೆಗೆಟಿವ್ ಎಫೆಕ್ಟ್ ಕೊಡುತ್ತಾನೆ. ಅಧಿಕಾರದ ಖುರ್ಚಿ ಅಲ್ಲಾಡಬಹುದು. ಬಹಳ ಶ್ರಮದಿಂದ ಅಧಿಕಾರ ಉಳಿಯುತ್ತದೆ. ಕೋರ್ಟ್‌ ಕೇಸುಗಳು ವಾಯಿದೆ ತೆಗೆದುಕೊಳ್ಳುತ್ತದೆ. ಬೇಗ ಬಗೆ ಹರಿಯುವುದಿಲ್ಲ. ಕೆಲಸಗಳು ಕೊಂಚ ನಿಧಾನವಾಗಿ ಸಾಗುತ್ತದೆ.

 ಮಕರ ರಾಶಿಯ ವಾರ ಭವಿಷ್ಯ

ಮಕರ ರಾಶಿಯ ವಾರ ಭವಿಷ್ಯ

ಗುರು ಪೂರ್ವ ಪುಣ್ಯಸ್ಥಾನದಲ್ಲಿ ಇದ್ದಾನೆ ಭಾಗ್ಯೋದಯವಾಗುವ ಸಮಯ.‌ ರಾಹು ಮೂರರಲ್ಲಿ ಗುರು ಐದನೇ ಮನೆಯಲ್ಲಿ ಬಹಳ ಶುಭ ಫಲಗಳನ್ನು ಕೊಡುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು, ಹೊಸ ನೌಕರಿ, ನೌಕರಿಯಲ್ಲಿ ಬಡ್ತಿ, ಮೇಲಾಧಿಕಾರಿಗಳ ಪ್ರಶಂಸೆ, ಧನಲಾಭ ಎಲ್ಲವೂ ಇದೆ. ನೀವು ಮಾಡಬೇಕೆಂದುಕೊಂಡ ಕೆಲಸಗಳು ಈಗ ಸರಾಗವಾಗಿ ಆಗುತ್ತದೆ. ಅಡೆತಡೆಗಳು ದೂರವಾಗುತ್ತದೆ. ಅರ್ಹರಿಗೆ ವಿವಾಹಯೋಗ ಇದೆ.

 ಕುಂಭ ರಾಶಿಯ ವಾರ ಭವಿಷ್ಯ

ಕುಂಭ ರಾಶಿಯ ವಾರ ಭವಿಷ್ಯ

ಈಗ ನಿಮಗೆ ಗಂಭೀರ ಸಮಯ. ಯಾವುದೋ ಆಪಾದನೆ ನಿಮ್ಮ ಮೇಲೆ ಬರುವುದು ಯಾರದೋ ತಪ್ಪಿಗೆ ನೀವು ತಲೆದಂಡ ಕೊಡಬೇಕಾಗುವುದು ನಡೆಯುತ್ತದೆ. ಜಾಗ್ರತೆಯಿಂದ ಇರಿ. ರಾಜಕೀಯ ನಾಯಕರಿಗೆ ಮುಜಗರ ಪಡುವಂಥ ಸನ್ನಿವೇಶಗಳು ಎದುರಾಗಬಹುದು. ಹಣದ ಮುಗ್ಗಟ್ಟು ಇದೆ. ನಿಮ್ಮ ರಾಶಿಯಲ್ಲೇ ಶನಿ ಹಾಗೂ ಚತುರ್ಥ ಗುರು ನಿಮಗೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತಾರೆ. ಈ ವಾರದ ಕೊನೆಯಲ್ಲಿ ಬುಧ ಶುಕ್ರರು ಐದನೇ ಮನೆಗೆ ಪ್ರವೇಶವಾದಾಗ ಕೊಂಚ ನಿರಾಳತೆ ಅನುಭವಿಸುತ್ತೀರಿ.

 ಮೀನ ರಾಶಿಯ ವಾರ ಭವಿಷ್ಯ

ಮೀನ ರಾಶಿಯ ವಾರ ಭವಿಷ್ಯ

ನಿಮಗೂ ಸಹ ಹಣದ ಅಡಚಣೆ, ಸಾಂಸಾರಿಕ ಬಿಕ್ಕಟ್ಟು, ಗಂಡಹೆಂಡಿರ ನಡುವೆ ವೈಮನಸ್ಯ ಅಧಿಕಾರ ನಷ್ಟ, ಯಾರೋ ಮಾಡಿದ ತಪ್ಪು ನಿಮ್ಮ ಮೇಲೆ ಬರುವುದು ಹೀಗೆ ವ್ಯತಿರಿಕ್ತ ಸಂಗತಿಗಳು ನಡೆಯುತ್ತದೆ. ಆದಷ್ಟು ಪ್ರಾಮಾಣಿಕವಾಗಿ ನಡೆಯಿರಿ ಮತ್ತು ದೇವರ ಧ್ಯಾನ ಮಾಡಿ.‌ ಎರಡನೇ ಮನೆಯಲ್ಲಿ ಕುಜ ಇರುವುದರಿಂದ ಭೂಮಿಯಿಂದ ಲಾಭ ಇದೆ ಆದರೆ ಕುಟುಂಬದಲ್ಲಿ ಕೊಂಚ ಅಸಹನೆ ಇರುತ್ತದೆ. ಖರ್ಚುಗಳು ವಿಪರೀತ ನೀವು ಜಾಗರೂಕತೆಯಿಂದ ನಿಭಾಯಿಸಬೇಕು. ನಿಮ್ಮ ತಲೆಗೆ ಕೆಟ್ಟ ಹೆಸರು ಕಟ್ಟಬಹುದು ಜಾಗ್ರತೆ ಇರಲಿ. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಇರಲಿ.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+